ಬಾಷ ಸಿನಿಮಾ ಡೈರೆಕ್ಟರ್‌ ಮತ್ತು ಮಾಲ್ಗುಡಿ ಡೇಸ್‌ ನ ಅಸೊಸಿಯೇಟ್

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 41

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಸುರೇಶ್ ಕೃಷ್ಣ ಅಂತ ಬಾಷ ಸಿನಿಮಾ ಡೈರೆಕ್ಟ್ ಮಾಡ್ದೋರು ಅವ್ರ ಜೊತೆಯಲ್ಲಿ ನಾವು ಒಂದಷ್ಟು ಸಿನಿಮಾ ಮಾಡಿದ್ವಿ. ಮೂರು ನಾಲ್ಕು ಸಿನಿಮಾ ಮಾಡಿದ್ದೀನಿ. ಅವರಿಗೆ ಗೊತ್ತಿರ್ಲಿಲ್ಲ ನಾನು ಶಂಕರ್ನಾಗ್‌ ಟೀಮ್‌ ಅಲ್ಲೆಲ್ಲಾ ಕೆಲಸ ಮಾಡಿದ್ದೀನಿ ಅಂತ. ಅವ್ರು ಕ್ಯಾಮೆರಾಮ್ಯಾನ್ ಹತ್ರ, “ಅಂದಾಳ್ ಯಾರಪ್ಪಾ ಎಲ್ಲಾತ್ಕ್ ಎದೋ ಒರ್ ಪ್ರಾಫಿಟ್ ಕೇಟ್ ಕಿಟ್ಟಿರಿಕ್ರಾರ್?, ಚುಮ್ಮಾವೇ ಇರಿಕ್ಕಮಾಟಾರ್?” “ಅವರ್ ಥಿಯೇಟರ್ ಲಿಂದ ವಂದವ್ರ್ ಸಾರ್, ಹಿ ಹ್ಯಾಸ್ ವರ್ಕ್ಡ್ ಆಸ್ ಅ ಅಸೋಸಿಯೇಟ್ ಡೈರೆಕ್ಟರ್ ಇನ್ ಮಾಲ್ಗುಡಿ ಡೇಸ್” ಅಂದ್ರು. “ಹಾ ಅಪ್ಪಡಿಯಾ ಒರು ಸೆಕೆಂಡ್” ಅಂದು, ನನ್ಹತ್ರ ಬಂದು “ಸರ್ ಬನ್ನಿ ಸರ್, ಕಾಫಿ ಕುಡಿಯೋಣ” ಅಂದ್ರು. ಅವ್ರ ಕಾಫಿ ಅವ್ರೇ ಮಾಡ್ಕೊತಾರೆ, ಒಂದು ಟ್ರೇನಲ್ಲಿ ಒಂದು ಪ್ಲಾಸ್ಕಲ್ಲಿ ಹಾಟ್ ವಾಟರ್, ಡಿಕಾಕ್ಷನ್, ಶುಗರ್, ಮೂರು ಕಪ್ ಎಲ್ಲಾ ಒಟ್ಟಿಗೆ ತಂದಿಡ್ತಾರೆ. ಅವ್ರು ಹೇಳ್ತಾರೆ “ನನಗೆ ನೊರೆ ಜೊತೆಯಲ್ಲಿ ಕಾಫಿ ಕುಡಿದ್ರೆ ಮಾತ್ರ ಕಾಫಿ ಕುಡಿದ ಹಾಗೆ ಆಗೋದು, ಅದಕ್ಕೆ ನಾನೇ ಕಾಫಿ ಮಾಡ್ಕೊಳೋದು” ಅಂತ ನನಗೆ ಕಾಫಿ ಕೊಟ್ಟು, ನನಗೆ ನಮಸ್ಕಾರ ಹೇಳಿದ್ರು.


ಅಂದ್ರೆ ಹೊರಗಡೆಯವರೂ ಕೂಡ ಈ ಸೀರಿಯಲ್ ನೋಡ್ದವ್ರು ಶಂಕರ್ ನಾಗ್ ಬಗ್ಗೆ ಸೀರಿಯಲ್ ಬಗ್ಗೆ ಅಷ್ಟು ಗೌರವ. ಅದರ ರಿಫ್ಲೆಕ್ಷನ್ ನಮಗೂ ಸಿಕ್ಕಿದೆ.ಮುಂದುವರೆಯುವುದು…

8 views