ಮಕ್ಕಳನ್ನ ಸಾಕಲು ನಾನು ಮಾಡಿದ ಕೆಲಸ

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 16

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ನಮ್ಮ ಸುಧೀರ್ ಅವರದ್ದು ದೊಡ್ಡ ಕುಟುಂಬ ಅವರು ಎಂಟು ಜನ ಅಣ್ಣ ತಮ್ಮಂದಿರು ನಮ್ಮ ಅತ್ತೆ ನಮ್ಮ ಮಾವ ಮೂರು ಜನ ಅಕ್ಕ ತಂಗಿಯರು ಅವರು. ಒಬ್ಬರು ಲಾಯರ್ ಇದ್ದಾರೆ, ಒಬ್ಬರು ಡಾಕ್ಟರ್ ಇದ್ದಾರೆ, ಒಬ್ಬರು ಫೈನಾನ್ಸರ್. ಮೂರು ಜನ ಇದ್ರು.


ಪರಮ್: ಯಾವ ಊರು ಸುಧೀರ್ ಸರ್‍ದು?


ಮಾಲತಿ ಸುಧೀರ್: ಶಿವಮುಗ್ಗದ ಹತ್ರ ಸಾಗರ


ಪರಮ್; ಮಲೆನಾಡು?


ಮಾಲತಿ ಸುಧೀರ್: ಮಲೆನಾಡಿನವರು ಅವರು. ನಂತರ ಸುಧೀರ್ ಅವರು ಸತ್ತು ಮೂರು ತಿಂಗಳಾಗಿತ್ತು. ಮತ್ತೆ ನಮ್ಮ ಬದುಕಿಗೆ ಒಂದು ದಾರಿ ಬೇಕಲ್ಲಾ?


ಪರಮ್: ತಿನ್ನಕ್ಕೆ ಬೇಕಲ್ಲಾ?


ಮಾಲತಿ ಸುಧೀರ್: ಊಟಕ್ಕೆ ಬೇಕಲ್ಲಾ? ಮಕ್ಕಳು ಓದ್ತಾ ಇದ್ರು 10 ಸ್ಟಾಂಡರ್ಡ್ ಒಬ್ಬ ಫಸ್ಟ್ ಪಿ.ಯಿ.ಸಿ ಒಬ್ಬ ಓದ್ತಾ ಇದ್ದ. ನಂತರ ನಾನು ನಾಟಕದ ಕಂಪೆನಿಗೆ ಹೋದೆ. ಹೋಗಿ ಪಾತ್ರ ಮಾಡಕ್ಕೆ ಶುರು ಮಾಡ್ದೆ.


ಪರಮ್: ನಿಮ್ದೇ ಕಂಪೆನಿಯಲ್ಲಾ ಅಥವಾ ಬೇರೆ ಕಂಪೆನಿಯಲ್ಲಾ?


ಮಾಲತಿ ಸುಧೀರ್: ಇಲ್ಲ ನಮ್ಮ ಕಂಪೆನಿಯಲ್ಲೇ ಪಾತ್ರ ಮಾಡಕ್ಕೆ ಶುರು ಮಾಡ್ದೆ. ಒಳ್ಳೊಳ್ಳೆ ಪಾತ್ರ ಮಾಡ್ತಾ ಇದ್ದೆ. ನನ್ನ ನಾಟಕಗಳಲ್ಲಿ ಕಿವುಡ ಮಾಡಿದ ಕಿತಾಪತಿ, ಭೂಮಿ ತೂಕದ ಹೆಣ್ಣು, ಎಚ್ಚರ ತಂಗಿ ಎಚ್ಚರ, ನಕ್ಕಿದ್ದು ಅರಮನೆ ಸಿಕ್ಕಿದ್ದು ಸೆರೆಮನೆ, ಚನ್ನಪ್ಪ ಚನ್ನಗೌಡ ಈನಾಟಕಗಳು ನಂಗೆ ಒಳ್ಳೆ ಹೆಸರು ತಂದ್ಕೊಡ್ತು. “ಪಾಪ ಸುಧೀರ್ ಅವರ ಹೆಂಡ್ತಿ ನಾಟಕದ ಕಂಪೆನಿಯಲ್ಲಿದ್ದಾಳೆ, ಪಾತ್ರ ಮಾಡ್ತಾ ಇದ್ದಾಳೆ”ಅಂತ ಹೇಳಿ ಎಲ್ಲರೂ ನನ್ನನ್ನ ಗೌರವಿಸ್ತಾ ಇದ್ರು ಎಷ್ಟೋ ಜನ ನನಗೆ ಸಹಾಯ ಮಾಡಿದ್ದಾರೆ. ನಮ್ಮ ಕಂಪೆನಿಗೆ ನಾನು ಲಾಸಲ್ಲಿ ಇದ್ದಾಗ ದರ್ಶನ್ ಬಂದಿದ್ದಾನೆ. ಪ್ರೇಮ್ ಬಂದಿದ್ದಾನೆ, ನಮ್ಮ ಮಕ್ಕಳೂ ಅವಾಗವಾಗ ಬಂದು ಹೋಗ್ತಾ ಇದ್ರು. ಆಮೇಲೆ ಅಂಬರೀಶಣ್ಣ ಬಂದಿದ್ದಾರೆ, ಸುದೀಪ್ ಸರ್ ಬಂದಿದ್ದಾರೆ, ವಿಷ್ಣು ಸರ್ ಬಂದಿದ್ದಾರೆ. ಇವರೆಲ್ಲರೂ ಬಂದು ನನಗೆ ಸಹಾಯ ಮಾಡಿದ್ರು. ಕಂಪೆನಿ ಇವತ್ತಿನ ವರೆಗೂ ನಡಿತಾ ಇದೆ.


ಪರಮ್; ಇವಾಗ್ಲೂ ಇದ್ಯಾ?


ಮಾಲತಿ ಸುಧೀರ್: ಇವಾಗ ಕೊರೋನಾ ಬಂದಿರೋದ್ರಿಂದ ನಿಂತೋಗಿದೆ. ಇಲ್ಲೇ ಗುಬ್ಬಿ ರಂಗಮಂದಿರದಲ್ಲೇ ಮಾಡ್ತಾ ಇದ್ವಿ. ನಮ್ಮ ಪ್ರಾಪರ್ಟೀಸ್ ಎಲ್ಲಾ ಅಲ್ಲೇ ಇದೆ. ಮತ್ತೆ ಕೊರೋನಾ ಮುಗಿದ ಮೇಲೆ ಮತ್ತೆ ಶುರು ಮಾಡ್ಬೇಕು. ನನ್ನ ಮಗ “ಅಮ್ಮಾ ನೀನು ಅರಾಮವಾಗಿ ಮನೆಯಲ್ಲಿರು” ಅಂತಾನೆ. ಮನೆಯಲ್ಲಿ ಎಲ್ಲಿ ಇರ್ತೀವಿ? ನಾವು ಮತ್ತೆ ನಾಟಕ ಶುರುವಾದ್ರೆ ಹೋಗ್ತೀವಿ.


ಪರಮ್: ಅದೊಂತರಾ ನಿಮ್ಮ ರಕ್ತಕ್ಕೆ ಸೇರ್ಕೊಂಡ್ಬಿಟ್ಟಿದೆ?


ಮಾಲತಿ ಸುಧೀರ್: ಅಂದ್ರೆ ಇಪ್ಪತ್ತಮೂರು ವರ್ಷ ಆಯ್ತು ನಮ್ಮ ಕಂಪೆನಿ ಸ್ಟಾರ್ಟ್ ಮಾಡಿ. ಸುಧೀರ್ ಅವರು ಎರಡು ವರ್ಷ ಮಾಡಿದ್ರು ನಾನು ಇಪ್ಪತ್ತು ವರ್ಷ ಮಾಡಿದ್ದೀನಿ. ಇನ್ನೊಂದೆರಡು ವರ್ಷ ಮಾಡಿದ್ರೆ ಇಪ್ಪತ್ತೈದು ವರ್ಷದ ಒಂದು ಇತಿಹಾಸ ಆಗುತ್ತೆ. ಅದನ್ನ ಬಿಡ್ಬಾರ್ದು ಅಂತ ನನ್ನ ಉದ್ದೇಶ. ಹಂಗಾಗಿ ಇನ್ನೊಂದೆರಡು ವರ್ಷ ಕಂಪೆನಿ ಮಾಡಿ ಅದಕ್ಕೊಂದು ನಾಂದಿ ಹಾಡ್ಬೇಕು ಅಂತ ಆಸೆ ಇದೆ.ಮುಂದುವರೆಯುವುದು
27 views