ಮಗ ಅಪ್ಪನನ್ನ ಮೀರಬೇಕು ಅದಕ್ಕೆ ಉದಾಹರಣೆ ಇವರು

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 86ಕನ್ನಡ ಇಂಡಸ್ಟ್ರಿಗೆ ಬಣ್ಣ ಏನು ಎಂಬುದನ್ನು ತೋರಿಸಿಕೊಟ್ಟವರು ರವಿಚಂದ್ರನ್‌. ಶ್ರೀನಾಥ್‌ ಅವರು ಇರುವೆ, ಆನೆ.. ಯಾವುದೇ ಬಂದರೂ ಹೋಗಲು ದಾರಿ ಕೊಡುವಂತಹ ಸ್ವಭಾವದವರು.


ರವಿಚಂದ್ರನ್‌ ಅವರು ಯಾವುದೇ ಘಟನೆಗಳಿಗೆ ಮೊದಲನೇ ಅಧ್ಯಯನ. ಶಿಷ್ಯ ಗುರುವನ್ನು ಮೀರಬೇಕು. ಮಗ ಅಪ್ಪನನ್ನು ಮೀರಬೇಕು ಅಂತಾರೆ. ರವಿ ಸರ್‌ ಇದನ್ನು ಸಾಧಿಸಿ ತೋರಿಸಿದ್ದಾರೆ. ಆದರೆ, ಎಂದಿಗೂ ಅವರಾಗಿಯೇ ಈ ಮಾತನ್ನು ಹೇಳುವುದಿಲ್ಲ. ನನ್ನ ಅಪ್ಪನೇ ನನ್ನ ಕನಸಿನಲ್ಲಿ ಬರುವುದು. ಅವರೇ ನನ್ನ ಬದುಕು ಅಂತಾರೆ. ಅವರ ಅಪ್ಪನ ಬಗ್ಗೆ ಅಪಾರವಾದ ಗೌರವ ಅವರಿಗೆ.

ಕನ್ನಡ ಇಂಡಸ್ಟ್ರಿಯಲ್ಲಿ ಪುಟ್ಟಣ್ಣ ಅವರ ನಂತರ ಹೊಸ ಪ್ರಯೋಗಗಳನ್ನು ಮಾಡಿದವರು ರವಿಚಂದ್ರನ್‌ ಅವರು. ಇತಿಹಾಸವನ್ನು ಸೃಷ್ಟಿಸಿದರು. ನಾನು, ಮಂಡ್ಯ ರಮೇಶ್‌ ಎಲ್ಲ ಇದ್ದಾಗ ಏಕಾಂಗಿ ಸಿನಿಮಾದ ಸ್ಕ್ರಿಪ್ಟ್‌ ಓದಲು ತಂದ್ರು. ಆಗ ನಾನು ನಮ್ಮ ಮುಂದೆ ಓದುವುದು ಸರಿನಾ ಎಂದೆ. ಅದಕ್ಕವರು, ನನ್ನ ಹಣೆ ಬರಹವನ್ನು ಯಾರು ಕಿತ್ತುಕೊಳ್ಳಕ್ಕೆ ಆಗಲ್ಲ. ಇನ್ನು ಸ್ಕ್ರಿಪ್ಟ್‌ ಕಿತ್ಕೊಂಡು ಏನು ಮಾಡ್ತೀರಾ ನೀವು ಎಂದ್ರು.


ಅಕೆಲಾ ಸಿಂಗಲ್‌ ಕ್ರೇನ್‌ ತಂದು ಒಮ್ಮೆ ನಿಲ್ಲಿಸಿದ್ರು. ಸರ್, ಅದಕ್ಕೆ ಒಂದು ಲಕ್ಷ ಬಾಡಿಗೆ ಸರ್‌ ಎಂದೆ. ಅದಕ್ಕಿಂತ ದುಬಾರಿಯಾದ ರಮ್ಯಾ ಕೃಷ್ಣ ಕೂತಿದ್ದಾರೆ ನೋಡಿ ಅಲ್ಲಿ ಅಂದ್ರು. ನಾನು ಹಾ.. ಎಂದು ನೋಡಿದೆ. ಅದಕ್ಕವರು ಅದಕ್ಕಿಂತ ದುಬಾರಿಯಾದ ನಾನು ಕೂತಿಲ್ವಾ ಎಂದ್ರು. ಯಾವ ಕೆಲಸವನ್ನು ಅವರು ಆಗಲ್ಲ ಅಂದಿದ್ದೆ ಇಲ್ಲ. ನಾನು ಮಾಡುತ್ತೇನೆ ಅಂತಾನೇ ಅನ್ನೋದು ಅವರು.ಸಂದರ್ಶನ: ಕೆ.ಎಸ್‌. ಪರಮೇಶ್ವರ

ಮುಂದುವರಿಯುವುದು...

14 views