ಮಗು ಬೇಕು ಅಂದ್ರು ಹಾಸ್ಪಿಟಲ್ ಇಂದ ಬಾಣಂತಿನೇ ಬಂದ್ಬಿಟ್ಟಿದ್ರು

Updated: Jan 10

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 110

(ಮಾಲ್ಗುಡಿ ಡೇಸ್‌ ಆಡಿಟರ್‌ ವೆಂಕಟೇಶ್ ನೆನಪುಗಳು)ಸ್ಲೋಲಿ ಹೀ ಬಿಕಮ್ ವೆರಿ ಫ್ರೆಂಡ್ಲಿ. ಆ ಮನುಷ್ಯ ಹೇಗೆ ಅಂದ್ರೆ? ನಾನು ಪ್ರೊಡಕ್ಷನಲ್ಲಿ ಎಂಟ್ರಿ ಆಗಿದ್ದು, ನರಸಿಂಹನ್ ಹೇಳಿದ್ದು, ಫೈನಾನ್ಸ್ ಆಂಡ್ ಅಕೌಂಟ್ಸ್ ಅಷ್ಟೇ ನಿನ್ನ ಕೆಲ್ಸ ಅಂತ. ಅವ್ರಿಗೆ ಲೆಕ್ಕ ಸರಿಯಾಗಿರ್ಬೇಕು ಅಂತ. ಅವ್ರು ಬೇರೆ ಪ್ರೊಡ್ಯೂಸರ್ ತರ ಅಲ್ಲ, 90 ಪರ್ಸೆಂಟ್ ಚಕ್ ನಲ್ಲೇ ಪೇಮೆಂಟ್ ಮಾಡ್ತಿದ್ರು. ಅವ್ರಿಗೆ ಕ್ಯಾಶ್ ಟ್ರಾನ್ಸಾಕ್ಷನ್ ಇಷ್ಟ ಆಗ್ತಿರ್ಲಿಲ್ಲ. ಸಣ್ಣ ಪುಟ್ಟ ಸಾಮಾನುಗಳಿಗೆ ಮಾತ್ರ ಕ್ಯಾಶ್ ಕೊಡ್ಲೇ ಬೇಕಾಗಿತ್ತು. ಅದಕ್ಕೆಲ್ಲಾ ಒಪ್ತಾ ಇದ್ರು. ಅವ್ರು ಕಮ್ಮಿ ಪೇಮೆಂಟ್ ಮಾತಾಡಿದ್ದಾರೆ ಅಂತ ಇರಬಹುದು ಜನರಿಗೆ, ಆದ್ರೆ ಅವ್ರು ಏನು ಮಾತಾಡಿರ್ತಾರೋ ಅದನ್ನ ಮಾತ್ರ ಪಕ್ಕಾ ಕೊಡ್ತಾ ಇದ್ರು. ಯಾವುದೂ ಬೇರೆಯವ್ರ ತರ ಬಾಕಿ ಇಡ್ತಿರ್ಲಿಲ್ಲ, ಹುಡುಕ್ಕೊಂಡು ಬಂದು ಚೆಕ್ ಕೊಡ್ತಿದ್ರು. ಒಪ್ಕೊಂಡಿದ್ದು ಹತ್ತು ಸಾವಿರ ಅಂದ್ರೆ, ಹತ್ತು ಸಾವಿರ ನೀವು ಬರದೇ ಇದ್ರೂ ನಿಮ್ಗೆ ಬರ್ತಿತ್ತು.


ಆಗುಂಬೆ ಲೋಕಲಲ್ಲಿ ಏನೂ ಸಿಗ್ತಾ ಇರ್ಲಿಲ್ಲ. ಸೋ ವಿ ಹ್ಯಾವ್ ಟು ಎಂಪ್ಲಾಯ್ ಸಮ್ ಪೀಪಲ್. ಈಗ ಹಾಲು ಅಲ್ಲೇ ಕೆಳಗಡೆ ‘ಹೆಬ್ರಿ’ಅಂತಒಂದು ಪ್ಲೇಸ್ ಇತ್ತು ಅಲ್ಲಿಂದ ತರಿಸ್ತಾ ಇದ್ವಿ. ಅಲ್ಲಿಗೆ ಒಬ್ಬ ಹುಡುಗನ ಬಸ್ಸಲ್ಲಿ ಕಳಿಸ್ತಾ ಇದ್ವಿ ತರ್ಕಾರಿಡೈಲಿ ಬೇಸಿಸಲ್ಲಿ ಬೇಕು ಅಂದ್ರೆ ತೀರ್ಥಳ್ಳಿಗೆ ಒಬ್ಬ ಹುಡುಗನ ಕಳ್ಸಿ ತರಿಸ್ತಾ ಇದ್ವಿ. ಸೋ ಈತರ ಒಂದು ಹತ್ತು ಹನ್ನೆರಡು ಹುಡುಗ್ರಿಗೆ ಎಂಪ್ಲಾಯ್ಮೆಂಟ್ ಕೊಟ್ಟಿದ್ವಿ. ಅವ್ರು ನಮ್ಮ ಜೊತೆನೇ ಇರ್ತಿದ್ರು, ಯಾಕಂದ್ರೆ ಬ್ಯಾಕ್ ಗ್ರೌಂಡ್ ಗೆ ಎಲ್ಲಾ ಬೇಕಾಗ್ತಿದ್ರು.


ಶಂಕರ್ ನಾಗ್ ಎಲ್ಲಾ ಕೆಲ್ಸಗಳಿಗೂ ಅವ್ರೇ ಕೈ ಹಾಕ್ತಾ ಇದ್ರು. ಸೋ ಅವ್ರು ಹಾಗಿರುವಾಗ ನಾನು ಬ್ಯಾಗ್ ಹಿಡ್ಕೊಂಡು ಅಕೌಂಟ್ಸ್ ಮಾತ್ರ ನೋಡ್ತೀನಿ ಅಂತ ಹೇಳಕ್ಕೆ ಆಗ್ತಿರ್ಲಿಲ್ಲ. ಎಲ್ಲಾದ್ರಲ್ಲೂ ನಾವೂ ಇನ್ವಾಲ್ವ್ ಆಗ್ತಿದ್ವಿ. ಯಾರೇ ಏನೇ ಐಡಿಯಾ ಕೊಟ್ರೂ, ಅದನ್ನ ತಗೊತಾ ಇದ್ರು. ಹೀ ವಾಸ್ ಜಸ್ಟ್ ಲೈಕ್ ದಟ್. ಮೊನ್ನೆ ನಾನು ಟಿ.ವಿ.ನಲ್ಲಿ ನೋಡ್ತಾ ಇದ್ದಾಗ, ಸ್ವಾಮಿಗೆ ತಮ್ಮ ಹುಟ್ತಾನೆ, ಸಡನ್ನಾಗಿ ಬಂದ್ಬಿಟ್ಟು, ನನಿಗೆ ಇವಾಗ ಹುಟ್ಟಿರೋ ಮಗು ಬೇಕು ಅಂದ್ರು. ಆಗುಂಬೆಯಲ್ಲಿ ಐದಾರು ಕಿಲೋಮೀಟರ್ ದೂರದಲ್ಲಿ ಒಂದು ಹಳೇ ಮನೆಯಲ್ಲಿ ಶೂಟ್ ಮಾಡ್ತಾ ಇದ್ವಿ ಡೆಲಿವರಿ ಸೀನ್ಗೆ. ಒಂದು ಸೀನ್ ಗೆ ಬಟ್ ಎಲ್ಲಿ ಹುಡುಕ್ಕೊಂಡು ಹೋಗೊದು?


ಇಮೀಡಿಯಟ್ ಯೋಚ್ನೆ ಮಾಡಿ, ಅಲ್ಲಿ ಆಗುಂಬೆಯಲ್ಲಿ ಒಂದು ಪ್ರೈಮರಿ ಹೆಲ್ಥ್ ಸೆಂಟರ್ ಇದೆ. ಅಲ್ಲಿ ಸರಿಯಾಗಿ ಡಾಕ್ಟರೇ ಇಲ್ಲ, ಬರೀ ನರ್ಸ್ಗಳೇ ಇರೋದು. ಹಳ್ಳಿಗಳಿಂದ ಯಾರ್ಯಾರೋ ಬರ್ತಿದ್ರು ಪಾಪ. ಒಂದು ಗಾಡಿ ತಗೊಂಡು ಸೀದ ತೀರ್ಥಳ್ಳಿ ಗೌರ್ನಮೆಂಟ್ ಹಾಸ್ಪಿಟಲ್ಗೆ ಹೋದೆ, ನಾನೇ ಹೋಗಿದ್ದು ಅವಾಗ. ಯಾಕಂದ್ರೆ ಬದ್ರಿ ಲೊಕೇಶನ್ಗೆ ಹೋಗಿದ್ರು ಅನ್ಸುತ್ತೆ. ಅಲ್ಲಿ ಹೋಗಿ ಡೆಲಿವರಿ ಆಗಿರುವ ಸೆಕ್ಷನ್ ಯಾವುದು ಅಂತ ಕೇಳ್ದೆ. “ಬೇಕಾದಷ್ಟು ಆಗುತ್ತಪ್ಪ ದಿನಾ ಆಗುತ್ತೆ ಬಾ” ಅಂದ್ರು.


ಯಾರದ್ದೋ ನಾರ್ಮಲ್ ಡೆಲಿವರಿ ಆಗಿತ್ತು, ಮೂರನೇ ದಿನ ಅವ್ರು ಹೋಗ್ತಿದ್ರು. ಗಂಡ ಹೆಂಡ್ತಿ ಮತ್ತೆ ಮಗು. ಅವ್ರಿಗೆ ಕೇಳ್ದೆ “ಹೇಗೆ ಹೋಗ್ತೀರಾ?” ಅಂತ. ಅವ್ರು ಬಸ್ಸಲ್ಲಿ ಹೋಗ್ಬಿಟ್ಟು, ಅಲ್ಲಿಂದ ಎತ್ತಿನಗಾಡಿ ಸಿಕ್ಕಿದ್ರೆ ಹೋಗ್ತಾರಂತೆ ಇಲ್ಲಾಂದ್ರೆ ಒಂದಷ್ಟು ದೂರ ನಡಿತಾರಂತೆ. ಅದು ಅವ್ರು ಡೈಲಿ ಮಾಡುವಂತದ್ದು. ನಾನು ಅವ್ರಿಗೆ ಕೈ ಮಗಿದು ಕೇಳ್ದೆ ಈ ತರ “ಶೂಟಿಂಗ್ ನಡಿತಾ ಇದೆ ‘ಮಾಲ್ಗುಡಿ ಡೇಸ್’ಶೂಟಿಂಗಿಗೆನಿಮ್ಮ ಮಗು ಬೇಕಿತ್ತು” ಅಂತ. ಅವ್ರಿಗೆಏನೂ ಅರ್ಥ ಆಗ್ಲಿಲ್ಲ. “ಶಂಕರ್ ನಾಗ್ ಅಲ್ಲಿದ್ದಾರೆ. ನಿಮ್ಮನ್ನ ಗಾಡಿಯಲ್ಲೇ ಕರ್ಕೊಂಡು ಹೋಗ್ತೀನಿ, ಅಲ್ಲಿ ಸ್ವಲ್ಪ ಹೊತ್ತು ನಮ್ಮ ಜೊತೆ ಇರ್ಬೇಕು, ನಿಮ್ಗೆ ಊಟ ತಿಂಡಿ ಎಲ್ಲಾ ಕೊಡ್ತೀವಿ, ಆದ್ಮೇಲಿ ನೀವು ಎಲ್ಲಿ ಹೇಳ್ತೀರೋ ಅಲ್ಲಿಗೆ ಗಾಡಿಯಲ್ಲಿ ಡ್ರಾಪ್ ಮಾಡ್ತೀವಿ”ಅಂತಹೇಳ್ದೆ. ಯಾಕಂದ್ರೆ ನಮ್ಮತ್ರ ಗಾಡಿಗಳು, ಡ್ರೈವರ್ಗಳು ಎಲ್ಲಾ ವ್ಯವಸ್ಥೆ ಇತ್ತು. ಆದ್ರೆ ಅವ್ರು ನಂಬಿಲ್ಲ ನಾನು ಹೇಳಿದನ್ನ.


ಆಮೇಲೆ ಹೇಗೋ ಒಪ್ಕೊಂಡು ಬಂದ್ರು ಜೊತೆಯಲ್ಲಿ, ಮಗು ಬಂತು, ಶೂಟಿಂಗ್ ಆಯ್ತು, ಅವ್ರಿಗೆ ಊಟ ತಿಂಡಿ ಕೊಟ್ವಿ, ಒಂದ್ಚೂರು ಸಂಭಾವನೆ ಕೂಡ ಕೊಟ್ಟಿರ್ಬಹುದು ಅವ್ರಿಗೆ, ಆಮೇಲೆ ಮನೆಗೆ ಕರ್ಕೊಂಡು ಹೋಗಿ ಬಿಟ್ವಿ. ಅಂದ್ರೆ ನಿಮ್ಗೆ ಎಲ್ಲರೂ ಹೇಳಿದ್ದಾರೆ ಆ ಮನುಷ್ಯ ನೋ ಅಂತ ಕೇಳಕ್ಕೇ ರೆಡಿ ಇರ್ಲಿಲ್ಲ ಅಂತ. ಆದ್ರೆ ಹೀ ವಾಸ್ ಎಕ್ಸಲೆಂಟ್ ಪರ್ಸನ್. ಒಂದು ಸೆಕೆಂಡ್ ಸುಮ್ನೆ ಇರ್ತಾ ಇರ್ಲಿಲ್ಲ. ಐ ವಾಸ್ ಇನ್ವಾಲ್ವ್ಡ್ ವಿತ್ ಹಿಮ್ ವೆರಿ ಡೀಪ್ಲಿ. ಮಾಲ್ಗುಡಿ 1985,1986,1987 ನಲ್ಲಿ ಆಗಿದ್ದು.ಮುಂದುವರೆಯುವುದು…

12 views