
ಮಜಾಭಾರತದ ಸೃಜನ್ ಒಂದು ಕಾಲದಲ್ಲಿ ಹೇಗಿದ್ದ?
ಮಿಮಿಕ್ರಿ ದಯಾನಂದ ಲೈಫ್ಸ್ಟೋರಿ ಭಾಗ 28

ಒಂದು ಕಾಲದಲ್ಲಿ ನಾನು ರಾಜ್ಕುಮಾರ್ ಜೊತೆ ಶೋ ಗೆ ಹೋಗುತ್ತಿದ್ದೆ. ಬಸ್ನಲ್ಲಿ ಕೂತಿದ್ದೆ. ಒಂದು ಹುಡುಗ ಬಸ್ನಲ್ಲಿ ತೆವಳಿಕೊಂಡು ನನ್ನ ಹತ್ತಿರ ಬಂದ. ಸ್ವಲ್ಪ ಸಮಯದ ನಂತರ ಹಳೇ ಹಿಂದಿ ಹಾಡು ಹೇಳಲು ಪ್ರಾರಂಭಿಸಿದ. ಈ ಹಾಡು ನಿನಗೆ ಹೇಗೆ ಗೊತ್ತು ಎಂದೆ. ನನ್ನ ತಂದೆಯವರು ಹಾಡುತ್ತಾರೆ ಎಂದ. ಯಾರು ನಿನ್ನ ತಂದೆ ಎಂದೆ. ಲೋಕೇಶ್ ಎಂದ. ನಾನು ಲೋಕೇಶ್ ಜೊತೆ ಪಾತ್ರ ಮಾಡಿದ್ದೇನೆ. ಅವರ ಮನೆಗೂ ಹೋಗಿದ್ದೇನೆ. ಆದರೆ, ಅವನೇ ಅವರ ಮಗ ಎಂದು ಗೊತ್ತಿರಲಿಲ್ಲ. ನನ್ನ ಪಕ್ಕದಲ್ಲಿ ಜಾಗ ಖಾಲಿ ಇತ್ತು. ಎಳೆದು ಇಲ್ಲೇ ಕುಳಿತುಕೋ ಎಂದು ಪಕ್ಕದಲ್ಲಿ ಕೂರಿಸಿಕೊಂಡೆ. ನಾನು ನಿಮ್ಮ ಪಕ್ಕದಲ್ಲಿಯೇ ಕೂರಬೇಕೆಂದು ಅಲ್ಲಿಂದ ಬಂದೆ ಎಂದ. ಇವತ್ತು ಅವನು ಸ್ಟಾರ್. ಅವರ ಮನೆಯಲ್ಲಿ ಏನೇ ಕಾರ್ಯಕ್ರಮ ಇದ್ದರೂ, ನನಗೆ ಕರೆಯುತ್ತಾನೆ. ಮಜಾ ಟಾಕೀಸ್ನಲ್ಲಿ ಯುವ ಸಮೂಹವೇ ಹೆಚ್ಚು. ಆದರೆ, ನಾನು ಇರಲೇಬೇಕು ಎಂದವನು ಸೃಜನ್. ನಾನು ಎಷ್ಟೋ ಸಲ ಫಾರಿನ್ ಹೋಗಿದ್ದೇನೆ. ಆದರೆ, ಮಜಾ ಟಾಕೀಸ್ ತಂಡದ ಜೊತೆಗೆ ಹೋಗಿದ್ದ ಅನುಭವವೇ ಬೇರೆ. ಸೃಜನ್ ರಾಜ ನಾವೆಲ್ಲ ಜತೆಗಾರರು ಎಂದುಕೊಂಡಿದ್ದೆ. ಆದರೆ, ಹೋಗುವಾಗ, ಬರುವಾಗ 9 ಜನರೂ ರಾಜರಂತೆ ಇದ್ದೆವು. ಹೊಟ್ಟೆ ತುಂಬ ಊಟದ ಜೊತೆಗೆ ಲಕ್ಸುರಿಯಾಗಿ ನೋಡಿಕೊಂಡ್ರು.
ಮುಂದುವರೆಯುವುದು...