ಮದ್ರಾಸ್ ನಲ್ಲಿ ಅಶ್ವಥ್ಥ ಅವರ ಜೀವನ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 71


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಈ ಪಾತ್ರಕ್ಕೆ ಅಶ್ವತ್ಥ್‌ ಅವರನ್ನು ಹಾಕಿ, ಜೀವ ತುಂಬುತ್ತಾರೆ ಎಂದು ರಾಜ್‌ಕುಮಾರ್‌ ಅವರೇ ಹೇಳುತ್ತಿದ್ದರು. ನನ್ನ ಜೊತೆಗೆ ಪಾತ್ರಕ್ಕೆ ಜೀವ ತುಂಬಲು ಅವರೇ ಸರಿ ಎನ್ನುತ್ತಿದ್ರು. ಕಸ್ತೂರಿ ನಿವಾಸದ ರಾಮಯ್ಯ ಮತ್ತು ನಾಗರಹಾವಿನ ಚಾಮಯ್ಯ ಪಾತ್ರವನ್ನು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಕಸ್ತೂರಿ ನಿವಾಸದಲ್ಲಿ ಅವರ ಪಾತ್ರದ ಪ್ರತಿ ಸನ್ನಿವೇಶಗಳು ಅದ್ಭುತವಾಗಿವೆ. ಅದನ್ನು ಬೇರೆ ಯಾರೂ ಮಾಡಲು ಸಾಧ್ಯ?. ರಾಜ್‌ಕುಮಾರ್‌ ಅವರು ತಂದೆಯ ಪಾತ್ರಕ್ಕೆ ಅಶ್ವತ್ಥ್‌ ಅವರನ್ನೇ ಹಾಕಿಕೊಳ್ಳಲು ಹೇಳುತ್ತಿದ್ರು. ಪ್ರೀತಿಯ ಜೊತೆಗೆ ಕಟುವಾಗಿರುವ ಸನ್ನಿವೇಶಗಳಲ್ಲಿ ಸಹಜ ನಟನೆಯನ್ನು ಅಶ್ವತ್ಥ್‌ ಪ್ರದರ್ಶಿಸುತ್ತಿದ್ರು.


ಮದ್ರಾಸ್‌ನಲ್ಲಿ ಪುಟ್ಟದೊಂದು ಮನೆಯಲ್ಲಿ ಅಶ್ವತ್ಥ್‌ ಇದ್ದರು. ಅದಕ್ಕೆ 30 ಬಾಡಿಗೆ ಇತ್ತು. ಶಿವರಾಂ ಎಂಬ ಅಸಿಸ್ಟೆಂಟ್‌ ಡೈರೆಕ್ಟರ್‌ ಅವರ ಜೊತೆಗಿದ್ದರು. ಶಿವರಾಂ ಕನ್ನಡ ಕಲಾವಿದರ ಸಂಘದಲ್ಲಿ ಕ್ಯಾಷಿಯರ್‌ ಕೂಡ ಆಗಿದ್ರು. ಆ ಮನೆಯಲ್ಲಿ ಎರಡು ಚಾಪೆ, ಹಾಸಿಗೆ ಇತ್ತು. ಅವರೇ ಅಡುಗೆ ಮಾಡಿ ಊಟ ಮಾಡುತ್ತಿದ್ರು. ಬರುವ ಅಲ್ಪ ಆದಾಯದಲ್ಲಿ ಅಶ್ವತ್ಥ್ ಮನೆಗೂ ಕಳುಹಿಸುತ್ತಿದ್ರು. ಬಹಳ ಶಿಸ್ತಿನ ಮನುಷ್ಯ ಅವರು.

ಮುಂದುವರೆಯುವುದು...

18 views