ಮದ್ರಾಸ್‌ನಲ್ಲಿ ಎಸ್.ಪಿ.ಬಿ ಗೆ ಬಾಡಿಗೆ ಮನೆ ಕೊಡಿಸಿದ್ದೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 127


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ದೊರೆಯವರ ಮನೆಯ ಸಮೀಪವೇ ಎಸ್‌ಪಿಬಿ ಮನೆ ಇತ್ತು. ದೊರೆಯವರದು ಇನ್ನೊಂದು ಚಿಕ್ಕ ಸ್ವಂತ ಮನೆ ಅಲ್ಲಿಯೇ ಸಮೀಪವಿತ್ತು. ಎಸ್‌ಪಿಬಿ ಮ್ಯಾನೇಜರ್‌ ವಿಠಲ್‌ ಎನ್ನುವವರು ಸ್ವಲ್ಪ ದೂರದ ಊರಿನಿಂದ ಬರುತ್ತಿದ್ದರು. ಹಾಗಾಗಿ ಅವರಿಗೆ ಆ ಮನೆಯನ್ನು ಬಾಡಿಗೆಗೆ ಕೊಡಿಸಲು ಸಾಧ್ಯವೇ ಎಂದು ಎಸ್‌ಪಿಬಿ ಅವರು ನನ್ನ ಹತ್ತಿರ ಕೇಳಿಕೊಂಡಿದ್ದರು. ವಿಠಲ್‌ ನನಗೆ ಗೊತ್ತಿತ್ತು. ಮನೆ ನೋಡಿ, ಇಷ್ಟವಾದರೆ ಕೊಡಿಸುವೆ ಎಂದೆ. ಆಮೇಲೆ ದೊರೆಯವರಿಗೆ ಹೇಳಿ, ಬಾಡಿಗೆಯನ್ನೂ ಸ್ವಲ್ಪ ಕಡಿಮೆ ಮಾಡಿಸಿ ವಿಠಲ್‌ಗೆ ಮನೆ ಕೊಡಿಸಿದ್ದೆ. ಎಸ್‌ಪಿಬಿಯವರು ತುಂಬಾ ಸಂತೋಷ ಪಟ್ಟಿದ್ದರು. ವ್ಯವಹಾರಿಕ ಮತ್ತು ವೈಯಕ್ತಿ ಎರಡೂ ಸಂಬಂಧಗಳು ಎಸ್‌ಪಿಬಿ ಅವರ ಜೊತೆ ನನಗೆ ಇತ್ತು.


ಮುಂದುವರೆಯುವುದು...

15 views