"ಮಿಂಚಿನ ಓಟ ಸಿನಿಮಾದ ಅನುಭವ"

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 16

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಒಂದು ಸ್ಕ್ರಿಪ್ಟ್ ಕೊಟ್ರು ‘ಮಿಂಚಿನ ಓಟ’ ದು ಮೈನ್ ಮೈನ್ ಆರ್ಟಿಸ್ಟ್ ಗಳಿಗೆಲ್ಲ ಸ್ಕ್ರಿಪ್ಟ್ ಕೊಟ್ಟು ನನಗೂ ಸ್ಕ್ರಿಪ್ಟ್ ಕೊಟ್ರು. ನಾನೇ ಕೇಳ್ದೆ “ನನಗೂ ಒಂದು ಸ್ಕ್ರಿಪ್ಟ್ ಬೇಕು” ಅಂತ. ಅವ್ರಿಗೆ ಆಶ್ಚರ್ಯ “ನಿನಗೆ ಯಾಕೆ ಸ್ಕ್ರಿಪ್ಟ್?” ಅಂತ. “ವೈ?” ಅಂದ್ರು, “ಇಲ್ಲ ಜಸ್ಟ್ ಐ ವಿಲ್ ಗೋ ಥ್ರೂ” ಅಂದೆ. ಇಸ್ಕೊಂಡು ಓದಿದ್ದೆ. ಓದಿ ಅದಕ್ಕೆ ಏನು ಮಾಡ್ಬೇಕು? ಅಂತ ನನ್ನ ಪಾಡಿಗೆ ನಾನು ಪ್ರಿಪೇರ್ ಮಾಡ್ಕೊತನೇ ಇದ್ದೆ. ಶೂಟಿಂಗ್ ಶುರುವಾಯ್ತು. ಅವ್ರಿಗೆ ನನ್ನ ಕೆಲ್ಸ ಎಲ್ಲ ಇಷ್ಟ ಆಯ್ತು. ಅಂದ್ರೆ ಮಿಂಚಿನ ಓಟ ದಲ್ಲಿ ಗೇಟ್ ನ ಕತ್ತರಿಸುವ ಒಂದು ಸೀನ್ ಇತ್ತು. ಅದು ಬೇರೆ ಕಡೆ ಆರ್ಟ್ ಡೈರೆಕ್ಟರ್ ಆದ್ರೆ ಒಂದು ಪ್ಲಾಸ್ಟಿಕ್ ಪೈಪ್ ಇಟ್ಟು ಮಾಡ್ಬಿಡ್ತಾರೆ. ನಾನು ಹಾಗೆ ಮಾಡ್ಲಿಲ್ಲ. ಅದು ವರ್ಜಿನಲ್ ಆಕ್ಸಲ್ ಫ್ರೇಮಲ್ಲಿ ಕುಯ್ಯೋದು ಅದರ ಸೌಂಡ್ ಎಲ್ಲ ಸಹಜವಾಗಿರುತ್ತೆ. ಮತ್ತೆ ಕುಯ್ಯೊವಾಗ, ಆ ಪೈಪ್ ಗೆ ಸ್ಟ್ರೆಂಥ್ ಹಾಕ್ದಾಗ, ಅದು ಬೆಂಡ್ ಆಗುತ್ತೆ. ಕಂಬಿನೇ ಆದ್ರೆ ಹಂಗೆಲ್ಲಾ ಆಗಕ್ಕೆ ಸಾಧ್ಯನೇ ಇಲ್ಲ. ನರ್ವ್ ರಿಯಾಕ್ಷನ್, ಫೇಸ್ ರಿಯಾಕ್ಷನ್ ಎಲ್ಲಾ ನ್ಯಾಚುರಲ್ ಆಗಿರುತ್ತೆ. ಇಲ್ಲಾಂದ್ರೆ ಪೈಪ್ ಗೆ ಎಷ್ಟು ಪ್ರಶರ್ ಹಾಕ್ಬೇಕು? ಅಂತ ಗೊತ್ತಾಗದೆ ಓವರ್ ಎಕ್ಸಪ್ರೆಶನ್ ಆಗಿ, ಓವರ್ ಆಕ್ಟಿಂಗ್ ಮಾಡಿದ ಹಾಗೆ ಅನ್ಸುತ್ತೆ. ಅನ್ಕೊಂಡು, ನಾನು ಗೇಟ್ ಎಲ್ಲಾ ಮಾಡಿಸಿ ಬಿಟ್ಟಿದ್ದೆ. ನಾನು ಬೆಳಗಾಂಗೆ ಹೋಗಿ ಅಲ್ಲಿ ಜೈಲಲ್ಲಿ ಮೆಶರ್ಮೆಂಟ್ ಎಲ್ಲಾ ತಗೊಂಡು, ಫ್ಯಾಬ್ರಿಕೇಟರ್ ಗೆ ಆರ್ಡರ್ ಕೊಟ್ಟು ಮಾಡ್ಸಿದ್ದೆ. ಇದೆಲ್ಲಾ ಕೆಲ್ಸಗಳು, ಅವ್ರಿಗೆ ತುಂಬಾ ಇಷ್ಟ ಆಗ್ಬಿಡ್ತು.


ಅದಕ್ಕಿಂತ ಹೆಚ್ಚು ಅವ್ರು ಇಂಪ್ರೆಸ್ ಆಗಿದ್ದು, ಅದ್ರಲ್ಲಿ ಜೈಲಿಂದ ಎಸ್ಕೇಪ್ ಆಗಕ್ಕೆ ಅವ್ರ ಲವ್ವರ್, ಊಟ ತಿಂಡಿ ಕೊಡೋದಕ್ಕೆ ಅಂತ, ವೀಕ್ಲಿ ಟ್ವಯ್ಸ್ ಬಿಡ್ತಾರಲ್ಲ, ಆಗ ಅವ್ರು ಸೋಪು, ಬಾಚಣಿಗೆ ಎಲ್ಲಾ ಕೊಡ್ತಾರೆ. ಆ ಬಾಚಣಿಗೆ ಒಳಗಡಿ ಆಕ್ಸಲ್ ಫ್ರೇಮ್ ಇಡ್ಬೇಕು. ಅದಕ್ಕೆ ಮಾರ್ಕೆಟ್ ಗೆ ಹೋಗಿ ಒಂದು ಚಿಕ್ಕ ಬಾಚಣಿಗೆ ತಗೊಂಡು, ಅದ್ರ ಮಧ್ಯದಲ್ಲಿ ಗ್ರೂ ಕಟ್ ಮಾಡ್ಸಿ, ಬ್ಲೇಡ್ ಅಗಲ ಜಾಸ್ತಿ ಇದ್ದಿದ್ರಿಂದ ವಿಡ್ತ್ ಕಡಿಮೆ ಮಾಡಿ, ಬಾಚಣಿಗೆ ಒಳಗೆ ಇನ್ಸರ್ಟ್ ಆಗುವ ಹಾಗೆ ಮಾಡಿದ್ದೆ. ಅದನ್ನೆಲ್ಲಾ ನೋಡಿ “ಇವ್ನು ಕಸುಬುಗಾರನಪ್ಪಾ” ಅಂತ ತುಂಬಾ ಇಂಪ್ರೆಸ್ ಆಗಿದ್ರು.


ನನ್ನ ಬ್ಯುಸಿನೆಸ್ ಬಿಡಿಸಿ ಫುಲ್‌ ಟೈಮ್‌ ಸಿನಿಮಾಕ್ಕೆ ಕರೆತಂದದ್ದು

ನನ್ನ ಅಂಗಡಿ ನೋಡಿ ಕೇಳಿದ್ರು “ ಇದರ್ ಕ್ಯಾ ಕರ್ರಹಾ ಹೈ? ಆಜಾ ಮೆರೆ ಸಾಥ್” “ಇಲ್ಲ ಮನೆಯಲ್ಲಿ ಡಿಪೆಂಡೆನ್ಸಿ ಇದೆ. ಕಷ್ಟ” ಅಂದೆ. “ಎಷ್ಟು ಸಂಪಾದನೆ ಮಾಡ್ತೀಯ ಇಲ್ಲಿ?” ಅಂದ್ರು. “ಇಲ್ಲಪ್ಪಾ ಲೆಕ್ಕ ಮಾಡಿಲ್ಲ, ಡೆವಲಪ್ ಆಗಿರೋದನ್ನ ಹೇಗೆ ಬಿಟ್ಟು ಬರೋದು?” “ಇಲ್ಲ ಇಲ್ಲ ಯೂ ಕಮಿಟ್ ಮಿ.” ಅಂತ ಹಠ ಮಾಡಿದ್ರು. ಆ ಮೇಲೆ ನಾನು ಮನೆಯಲ್ಲಿ ಕನ್ವಿನ್ಸ್ ಮಾಡಿ “ನಾನು ಆಲ್ಲಿ ಉದ್ದಾರ ಆದ್ರೆ ಅಲ್ಲೇ ಇರ್ತೀನಿ, ಇಲ್ಲಾಂದ್ರೆ ವಾಪಸ್ ಬರ್ತೀನಿ. ನೀವು ನನಗೆ ಊಟ ಹಾಕ್ಬೇಕು. ಅಂಗಡಿ ಕೊಡ್ತೀನಿ.” ಅಂತ ಹೇಳಿ ಶಂಕರ್ ಜೊತೆ ಹೋದೆ. ಸೊ ಅವಾಗ್ಲಿಂದ ನಾಟಕ ಮಾಡ್ಲಿ, ಸಿನಿಮಾ ಮಾಡ್ಲಿ, ಆರ್ಟ್ ಫಿಲ್ಮ್ ಮಾಡ್ಲಿ, ನಾಟಕ ರೀಡಿಂಗ್ ಮಾಡ್ಲಿ, ಎಲ್ಲಾದಕ್ಕೂ ನಾನು ಇರಲೇ ಬೇಕು. ಅದು ಏನೋ ಒಂದು ರಾಪೋ ಬೆಳೀತು. ಅದು ಯಾಕೆ? ಏನು? ಅಂತೆಲ್ಲ ಗೊತ್ತಿಲ್ಲ.

ಶಂಕರ್‌ ನಿಂದ ಕಲಿತದ್ದು ಮನುಷ್ಯತ್ವ

ಹಿ ಈಸ್ ಸಚ್ ಎ ವಂಡರ್ಫುಲ್ ಹ್ಯೂಮನ್ ಬೀಯಿಂಗ್. ಐ ನೆವರ್ ಸೀನ್ ಸಚ್ ಎ ಮ್ಯಾನ್. ಅಷ್ಟು ಹ್ಯೂಮಾನಿಟಿ ಇರುವಂತಹ ಮನುಷ್ಯ. ಸೊ ನಮಗೆ ಏನೋ ಹೊಂದಾಣಿಕೆ ಆಯ್ತು. ‘ಮಾಲ್ಗುಡಿಯಲ್ಲಿ ಐ ಆಮ್ ನಾಟ್ ವೆಲ್ ವಿತ್ ಹಿಂದಿ, ಆರ್ ಇಂಗ್ಲೀಷ್. ನಾನು ಹೆಚ್ಚು ಓದಿದವನಲ್ಲ. ಎಸ್.ಎಸ್.ಎಲ್.ಸಿ. ಮಾಡಿ ಡಿಪ್ಲೋಮೋ ಮಾಡ್ತೀನಿಂತ ಇದ್ದೆ. ಅದ್ಯಾವುದೂ ಆಗ್ಲಿಲ್ಲ. ಡಿಪ್ಲೋಮೋ ಮಾಡ್ಕೊಂಡು ಕ್ಲಾಸಿಗೆ ಹೋಗದೇ, ಶ್ರೀನಾಥ್ ಅವ್ರ ಜೊತೆ ಸೇರ್ಕೊಂಡು ನಾಟಕ ಮಾಡ್ಕೊಂಡು ಕಾಲ ಕಳೀತಿದ್ದೆ.


ಪರಮ್: ಸರ್ ನೀವು ಹಾಗೂ, ಶ್ರೀನಾಥ್ ಅವ್ರು ಕ್ಲಾಸ್ ಮೇಟ್ಸಾ?


ರಮೇಶ್ ಭಟ್: ಇಲ್ಲ ಅವ್ರು ತುಂಬಾ ಓಲ್ಡ್ ಸ್ಟೂಡೆಂಟ್. ಆದ್ರೆ ಅಲ್ಲೇ ಇರೋರು ಅವ್ರು. ಹಂಗಾಗಿ ಅವರ ಜೊತೆಯಲ್ಲಿ ಸ್ನೇಹ ಆಯ್ತು. ಸೋ ನಮಗೆ ಏನೋ ಈ ಬಣ್ನದ ಗೀಳು ಬಿಡ್ಲಿಲ್ಲ. ಅಷ್ಟರಲ್ಲಿ ಶಂಕರ್ ಸಿಕ್ಕಿ ಕರೆದ್ರು, ಅವ್ರಿಗೆ ಇಷ್ಟ ಆಯ್ತು. ಅವ್ರಿಂದ ತುಂಬಾ ತುಂಬಾ ಕಲ್ತಿದ್ದೀವಿ. ಸಿನಿಮಾ ಬಗ್ಗೆ, ಆಕ್ಟಿಂಗ್ ಬಗ್ಗೆ ಎಲ್ಲದ್ಕಿಂತಲೂ ಹೆಚ್ಚಾಗಿ ಮಾನವೀಯತೆ ಬಗ್ಗೆ. ಬೇರೆಯವರನ್ನ ಪ್ರೀತಿಸುವ ಬಗ್ಗೆ, ಬೇರೆಯವರಿಗೆ ಗೌರವ ಕೊಡುವ ಬಗ್ಗೆ, ಇದೆಲ್ಲಾ ತುಂಬಾ ಕಲ್ತಿದ್ದೀವಿ ಅವ್ರಿಂದ. ಸೋ ಹಾಗಾಗಿ ಅವರ ಕೊನೇ ದಿವಸದ ತನಕ ನಮ್ಮ ಸ್ನೇಹ ಗಟ್ಟಿಯಾಗೇ ಇತ್ತು.ಮುಂದುವರೆಯುವುದು…


23 views