ಮೂಡಲ ಮನೆ ಧಾರವಾಹಿ ಆಗಿದ್ದು ಹೇಗೆ…

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 122

(ಮಾಲ್ಗುಡಿ ಡೇಸ್‌ ಕ್ಯಾಮರಾ ಅಸಿಸ್ಟೆಂಟ್‌ ನಾಗರಾಜ ಆದವಾನಿ ಅವರ ನೆನಪುಗಳು)ಪರಮ್: ಅಂದ್ರೆ ನಿಮ್ಗೆ ಮಾಲ್ಗುಡಿ ಕೊಟ್ಟಿದ್ದ ಎಕ್ಸಪೀರಿಯನ್ಸನ್ನ ಇಟ್ಕೊಂಡು ಮುಂದೆ ಕೆಲ್ಸ ಮಾಡಕ್ಕಾಯ್ತ?

ನಾಗರಾಜ್: ಖಂಡಿತ ಆಯ್ತು. ನಾನು ಡಿ.ಒ.ಪಿ ಆಗಕ್ಕೆ ನನಗೆ ಅಲ್ಲಿ ಆಗಿದ್ದ ಸಾಕಷ್ಟು ಎಕ್ಸಪೀರಿಯನ್ಸೇ ಕಾರಣ. ಮೂಡಲ ಮನೆ ಮಾಡ್ದಾಗ, ಮಾಲ್ಗುಡಿಯ ಸನ್ನಿವೇಶಗಳನ್ನ ಸಾಕಷ್ಡು ಬಳಸ್ಕೊಂಡಿದ್ದೀನಿ. ಉದಾಹರಣೆಗೆ, ಸ್ವಾಮಿ ಆಂಡ್ ಫ್ರೆಂಡ್ಸಲ್ಲಿ ಸ್ವಾಮಿ ಅಟ್ಟದ್ಮೇಲೆ ಹೋಗ್ತಾನೆ. ಅದ್ರಲ್ಲಿ ಇರುವ ಲೈಟ್ ಸೋರ್ಸನ್ನ ಇಟ್ಕೊಂಡು ನಾವು ಮೂಡಲ ಮನೆ ಯಲ್ಲಿ ಸಾಕಷ್ಟು ಸೀನ್ ಗಳನ್ನ ಮಾಡಿದ್ದೀವಿ. ಮೂಡಲ ಮನೆಯಲ್ಲಿ ಬಾತ್ರೂಮಲ್ಲಿ ಬೆಳಕಿನ ಕಿಂಡಿ ಇತ್ತು. ಅದ್ರಲ್ಲಿ ಲೈಟ್ ಬಿಡೋದು ಹೀಗೆ ವರ್ಕ್ ಮಾಡಿದ್ವಿ. ಮೂಡಲ ಮನೆಯ ಬಾತ್ರೂಮಲ್ಲಿ ಸ್ನಾನ ಮಾಡುವಂತಹ ಒಂದು ಸೀನ್. ಆ ಸೀನಲ್ಲಿ ಬಾತ್ರೂಮಲ್ಲಿ ಒಂದು ಬೆಳಕಿನ ಕಿಂಡಿ ಇತ್ತು. ಆ ಕಿಂಡಿ ಮೂಲಕ ಗ್ರೇನ್ಸ್ ಬರ್ತತ್ತು. ಆ ಸನ್ರೈಸ್ ಅಲ್ಲಿದ್ದ ನೀರಿನ ತೊಟ್ಟಿ ಮೇಲೆ ರಿಫ್ಲೆಕ್ಷನ್ ಆಗ್ತಿತ್ತು. ಮಾಡ್ತಾ ಮಾಡ್ತಾ ನಾರಮಲ್ಲಾಗಿ ಲೈಟ್ ಸೋರ್ಸ್ ಚೇಂಜ್ ಆಗ್ತಾ ಹೋಗುತ್ತೆ, ಲೈಟ್ ಬ್ರೇಕ್ ಆದಾಗ ಆ ಸೋರ್ಸ್ ಆಫ್ ಲೈಟ್ ನ ಕಂಟಿನ್ಯೂ ಮಾಡೊದು ಹೇಗೆ? ಅದಕ್ಕಾಗಿ ದೊಡ್ಡ ಮರ ತಂದು ಬೆಳಕನ್ನ ರಿಫ್ಲೆಕ್ಟ್ ಮಾಡಿ ಅದ್ರಿಂದ ಶೂಟ್ ಮಾಡಿರೋದು. ಈ ತರ ಎಲ್ಲಾ ನನಿಗೆ ಮಾಡಕ್ಕೆ ಆಗಿರೋದು , ಮಾಲ್ಗುಡಿ ಡೇಸ್ ಇಂದನೇ. ಅದರ ಅನುಭವ ನನಿಗೆ ಸಾಕಷ್ಟು ಕಲ್ಸಿದೆ. ಬರ್ಗೂರು ಅವ್ರ ಒಂದು ಸಿನಿಮಾ ಮಾಡ್ದೆ ಅದಕ್ಕೆ ನನಿಗೆ ಸ್ಟೇಟ್ ಅವಾರ್ಡ್ ಕೂಡ ಬಂತು. ಆಮೇಲೆ ಮೆಗಾ ಸೀರಿಯಲ್ ಮೂಡಲ ಮನೆ ಪ್ರೊಡಕ್ಷನ್ ಮತ್ತೆ ಕ್ಯಾಮರಾ ವರ್ಕ್ ಮಾಡ್ದೆ. ಹೀಗೇ ಸಾಗ್ತಾ ಇದೆ.


ಪರಮ್: ಸೋ ಮಾಲ್ಗುಡಿ ಡೇಸ್ ನಿಮ್ಗೆ ಒಂಥರಾ ಯೂನಿವರ್ಸಿಟಿ ಅಂತ ಹೇಳ್ಬಹುದಾ?

ನಾಗರಾಜ್: ನನಿಗೆ ಒಬ್ಬನಿಗೆ ಮಾತ್ರ ಅಲ್ಲ. ಅಲ್ಲಿ ವರ್ಕ್ ಮಾಡಿರೋ ಎಲ್ಲರಿಗೂ ಅದು ಒಂದು ಯೂನಿವರ್ಸಿಟಿ ಆಗುತ್ತೆ. ಅದ್ರಿಂದ ಬಂದವ್ರು ಹೇಗೆ ಬೇಕಾದ್ರೂ ಬೆಳೆದು ಬದುಕಬಹುದು. ಈಸಿಯಾಗಿ ದಾರಿ ತೋರ್ಸುತ್ತೆ.ಮುಂದುವರೆಯುವುದು…

52 views