ಮಂಡ್ಯ ರಮೇಶಗಿದ್ದ ದ್ರೋಣಾಚಾರ್ಯ ನಂತಹ ಗುರು ಯಾರು…

ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಲೈಫ್ ಸ್ಟೋರಿ - ಭಾಗ 4ನಂಗೆ ಆ ಕಾಲಕ್ಕೆ ಕಾಣದ ಗುರು ಒಬ್ಬ ದ್ರೋಣ ರಾಜ್‍ಕುಮಾರ್ ಸರ್. ಅವರ ಮಯ್ಯೂರ ಪಿಚ್ಚರಲ್ಲಿ ಅವರ ಪ್ರತಿಜ್ಞೆ ನೋಡಿ ನಾನೂ ಪ್ರತಿಜ್ಞೆ ಮಾಡ್ತಾ ಇದ್ದೆ. ಬಬ್ರುವಾಹನ ನೋಡ್ಬಿಟ್ಟು ಅದೂ ಮಾಡ್ತಿದ್ದೆ. ಅದೆಲ್ಲಾ ಮಾಡಕ್ಕೆ ಸಾಧ್ಯ ಆಗಿದ್ದು ರಾಜ್ ಕುಮಾರ್ ಅವರಿಂದ.


ರಾಜ್ ಕುಮಾರ್ ಅವರು ನಂಗೆ ಆತರದೊಂದು ಇನ್ಸಪಿರೇಶನ್ ಆಗಿದ್ರು. ಆಮೇಲೆ ಅವರು ತಮ್ಮನಾಗಿ ಎದ್ದಾಗ, ಬಾಮೈದನಾಗಿ ದುಖಃ ಪಟ್ಟಾಗ, ಅವರ ಹಳ್ಳಿಯ ಪಾತ್ರಗಳು, ಅವರ ಸಿಟಿಯ ಪಾತ್ರಗಳು, ಅವರ ನಂದಿ ಪಿಚ್ಚರ್ ನೋಡಿ ಅದೆಷ್ಟು ಸಲ ದುಖಿಸಿದ್ದೀನೋ, ಕಸ್ತೂರಿ ನಿವಾಸದಲ್ಲಿ ಅವರಿಗೆ ಅನ್ಯಾಯ ಆದಾಗ ನನಗೇ ಅನ್ಯಾಯ ಆಗೋಯ್ತು, ನಮ್ಮ ಮನೆನೇ ಹೊರ್ಟೋಯ್ತು ಅನಿಸ್ತಿತ್ತು. ಬಂಗಾದ ಮನುಷ್ಯದಲ್ಲಿ ಅವರೊಬ್ಬರೇ ಹೋಗ್ತಿದ್ದಾಗ ಬಾಯಿಗೆ ಬಂದ ಹಾಗೆ ಬೈಕೊತಾ ಇದ್ದೆ. ಅಂದ್ರೆ ರಾಜ್‍ಕುಮಾರ್ ಅವರಿಗೆ ಸಿನಿಮಾಗಳಲ್ಲಿ ಆದ ಎಲ್ಲಾ ಅನ್ಯಾಯಗಳು ನನ್ನ ಜೀವನದಲ್ಲಿ ನನಗೂ ಅನುಭವ ಆಗ್ತಾ ಇದೆ ಅಂತ ನಾನು ಫೀಲ್ ಮಾಡ್ತಾ ಇದ್ದೆ.ಮುಂದುವರೆಯುವುದು…

15 views