ಮಂಡ್ಯ ರಮೇಶ ಅವರು ಕಲಾವಿದನಾಗಲು ಪ್ರೇರೇಪಿಸಿದ ಆ ಘಟನೆ…

ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಲೈಫ್ ಸ್ಟೋರಿ - ಭಾಗ 2ನಮ್ಮಜ್ಜಿ ಸೋದರ ಮಾವ ಎಲ್ಲಾ ಒಂದು ಸಣ್ಣ ಕೆಲ್ಸದಲ್ಲಿದ್ದಿದ್ರಿಂದ ಕಷ್ಟ ಗೊತ್ತಾಗ್ಲಿ ಅಂತ ನಮ್ಮಜ್ಜಿ ಮನೆಯಲ್ಲಿ ಇರ್ಸಿದ್ರು. ಅಲ್ಲಿ ಒಂದು ಪುಟಾಣಿ ಸ್ಕೂಲಿಗೆ ನನ್ನ ಸೇರ್ಸಿದ್ರು. ಅಲ್ಲಿ ಒಂದು ಟ್ಯಾಬ್ಲೋಗೆ ಗಾಂಧೀ ಪಾತ್ರಕ್ಕೆ ನನ್ನ ರಡಿ ಮಾಡಿ ನಿಲ್ಲಿಸ್ತಾರೆ. ಬೆಳಗ್ಗೆ ಆರು ಗಂಟೆಗೆ ಕರ್ಕೊಂಡೋಗಿ ನಿಲ್ಸಿದ್ದಾರೆ, ಸಂಜೆ ಎಂಟೂವರೆ ಒಂಬತ್ತು ಗಂಟೆಯಾದ್ರೂ ಫ್ಲಾಗ್ ಹೋಸ್ಟಿಂಗ್ ಆಗ್ಲಿಲ್ಲ. ಲಾರಿಯಲ್ಲಿ ಕರ್ಕೊಂಡು ಬರ್ತಾ ಇದ್ದಾರೆ. ನನ್ನ ಪಕ್ಕದಲ್ಲಿ ನೆಹರು, ಬಸವಣ್ಣ, ಅಕ್ಕಮಹಾದೇವಿ ಎಲ್ಲರೂ ನಿಂತಿದ್ದಾರೆ. ನಾನು ನಿತ್ಕೊಂಡು ನೋಡ್ತಾ ಇದ್ದೆ.


ಲಾರಿ ಡ್ರೈವರ್ ಎಲ್ಲೋ ಒಂದು ಕಡೆ ರಪ್ ಅಂತ ಬ್ರೇಕ್ ಹಾಕ್ದ. ನಾನು ಗಾಂಧಿ ಅಕ್ಕಮಹಾದೇವಿ ಮೇಲೆ ಬಿದ್ಬಿಟ್ಟೆ. ಅಲ್ಲಿ ಅಕ್ಕ ಪಕ್ಕ ಸುತ್ತ ಮುತ್ತಲೂ ಇದ್ದವರು “ಹೇ ಅಲ್ಲಿ ನೋಡ್ರೋ ಗಾಂಧಿ ಅಕ್ಕಮಹಾದೇವಿ ಮೇಲೆ ಬಿದ್ಬಿಟ್ರು” ಅಂತ ವಿಶಲ್ ಹೊಡ್ಕೊಂಡು ಚಪ್ಪಾಳೆ ಹೊಡ್ಕೊಂಡು ಖುಷಿಪಟ್ರು. ನನಗೆ ಅವತ್ತು ಚಪ್ಪಾಳೆ ತಟ್ಟಿದ್ದು ನೋಡಿ ನಾನೂ ಖುಷಿಯಿಂದ ಚಪ್ಪಾಳೆ ತಟ್ಬಿಟ್ಟೆ.


ಯಾಕೆ ಏನೂ ಅಂತ ಗೊತ್ತಿಲ್ಲ. ಅವರು ನನ್ನ ನಗ್ಸಕ್ಕೆ ಮಾಡಿದ್ರೋ ಅಥವಾ ನಂಗೆ ಗೊತ್ತಿಲ್ಲದೇ ನಂಗಾದ ಎಡವಟ್ಟಿನಿಂದ ಅವರು ನಕ್ಕಿದ್ರಲ್ಲಾ, ಅವರು ನನ್ನನ್ನ ಅಪಹಾಸ್ಯ ಮಾಡ್ಕೊಂಡು ನಕ್ಕಿದ್ದು ಹಾಗೂ ಹೊಡೆದ ಚಪ್ಪಾಳೆ ನನ್ನ ಜೀವನದಲ್ಲಿ ಇಲ್ಲಿಯವರೆಗೂ ಕರ್ಕೊಂಡು ಬಂದ್ಬಿಡ್ತು ಗೆಳೆಯ. ಅಂದ್ರೆ ಅವತ್ತು ಅವರು ಮಾಡಿದ ಒಂದು ತಮಾಷೆ ನನಗೆ ನನ್ನ ಜೀವನದಲ್ಲಿ ನಾನೊಬ್ಬ ಕಲಾವಿದನಾಗೋದಕ್ಕೆ ಪ್ರೇರಣೆ ಆಯ್ತು. ಈ ತರ ಪಾತ್ರ ಹಾಕೊಂಡು ನಿತ್ಕೊಂಡಾಗ ಏನಾದ್ರೂ ಎಡವಟ್ಟಾದ್ರೆ ಜನ ನಗ್ತಾರೆ ಅನಿಸಿತು.


ಪರಮ್: ಚಪ್ಪಾಳೆಗೆ ಒಂದು ಕಿಕ್ ಇದೆ?


ಮಂಡ್ಯ ರಮೇಶ್: ಚಪ್ಪಾಳೆಗೆ ಒಂದು ಕಿಕ್ ಇದೆ ಅಂತ ಅನಿಸ್ತು. ನಾನು ಕಲಾವಿದ ಆಗಿದ್ದು ಹಾಗೆ.ಮುಂದುವರೆಯುವುದು…

18 views