ಮಂಡ್ಯ ರಮೇಶ ಅವರಿಗೆ ಅದ್ಭುತವಾಗಿ ಕಾಣುವ ವಿಷಯ ಇದು…

ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಲೈಫ್ ಸ್ಟೋರಿ - ಭಾಗ 5ಆ ಊರಲ್ಲಿ ಕಲಾ ಸಂಘ ಅಂತ ಒಂದು ಸಂಘ ಇತ್ತು. ಅಲ್ಲಿ ಸಿಕ್ರೇಶ್, ಆದಿಶೇಷ ಅಂತ ಬಹಳ ಒಳ್ಳೊಳ್ಳೆ ನಟರುಗಳು ಇದ್ರು. ಅಲ್ಲಿ ತರಾಸು ನಾಟಕಗಳೆಲ್ಲಾ ಆಗ್ತಿತ್ತು. ತರಾಸು ಅವರ ಕಾದಂಬರಿಗಳು, ದುರ್ಗಾಸ್ಥಮಾನ ಕಾದಂಬರಿನ ಮೃತ್ಯು ಸಿಂಹಾಸನ ಅಂತ ಒಂದು ನಾಟಕ ಮಾಡಿದ್ರು. ಆಮೇಲೆ ನಾಗಮಂಗಲದಲ್ಲಿ ದೊಡ್ಗುಡಿ ಅಂತ ಇದೆ. ಆ ಗುಡಿ ಮುಂದ್ಗಡೆ ದೊಡ್ಡದೊಂದು ಆವರಣ. ಅಲ್ಲಿ ಹಳ್ಳ ತೆಗೆದು ಹಾರ್ಮೋನಿಯಮ್‍ನ ಇಟ್ಬಿಟ್ಟು ಇಡೀ ರಾತ್ರಿ ಕುರುಕ್ಷೇತ್ರ ನಾಟಕ ಮಾಡ್ತಿದ್ರು. “ಕೊಲೆಲೇ ಪಾಂಡು ಸುದನ ಸರ್ವಜನನ ಒಡಂಬಡಿದು ಸುರಾವಳಿಯ ಗೆಲ್ದೆ,” ಅಂತೆಲ್ಲಾ ನಾಟಕಗಳು ಆಗ್ತವೆ ಅಲ್ವಾ? ಈತರದ ಪಾತ್ರಗಳು ಅಂದ್ರೆ ನಂಗೆ ರೋಮಾಂಚನ. ಅವರ ಕಿರೀಟ, ಗಧೆ, ಅವರ ಮೇಕಪ್, ಅವರು ಬಂದು ಡ್ಯಾನ್ಸ್ ಮಾಡ್ತಾ ಇದ್ದದ್ದು, ಮೇಲಿನಿಂದ ನೆರಳು ಪಕ್ಷಿ ಬಂದು ಅವರಿಗೆ ಹಾರ ಹಾಕುತ್ತೆ. ಪರದೆ ತಿರ್ಕೊಂಡು ಮೇಲಕ್ಕೆ ಹೋಗುತ್ತೆ. ಲೈಟ್ ಪಕಪಕ ಅಂತ ಹತ್ಕೊಳುತ್ತೆ. ಈತರ ಅವೆಲ್ಲಾ ಒಂದಕ್ಕಿಂತ ಒಂದು ರೋಮಾಂಚನಕಾರಿ. ಮಧ್ಯಾಹ್ನದ ಮೇಲೆ ಬಂದು ಸ್ಟೇಜ್ ಕಟ್ತಾರೆ, ಬಣ್ಣ ಲಪಲಪ ಅಂತ ಹೊಡ್ಕೋತಾರೆ ಗಧೆ ಹಿಡ್ಕೊಂಡು “ಹಾ” ಅಂದ್ರೆ ನಮಗೆ ಖುಷಿಯೋ ಖುಷಿ. ನಾವು ಇಡೀ ರಾತ್ರಿ ಕಣ್ಣುಗಳಿಗೆ ನೀರು ಬಿಟ್ಕೊಂಡು ನೋಡ್ತಾ ಕೂತಿದ್ರೆ ಆ ಬೀಡಿ ಹೊಗೆಗಳ ಮಧ್ಯೆ ನಮಗೆ ಆ ಕೃಷ್ಣ ಸುಂದರವಾಗಿ ಕಾಣ್ತಾ ಇದ್ದ. ಜನ ಎಲ್ಲಾ “ಹೋ” ಅಂತ ಕಿರಿಚ್ತಿದ್ರು. “ಕೃಪಾಳು ರಾಮ ಚಂದ್ರನೇ” ಅಂತ ಶುರು ಮಾಡಿದ ತಕ್ಷಣನೇ ಯಾರೋ ಬಂದು ಲಾಟ್ರಿ ಟಿಕೇಟ್ ಐದು ರೂಪಾಯಿ, ಎರಡು ರೂಪಾಯಿ ಎಲ್ಲಾ ಜೋಬಿಗೆ ತಲೆಗೆ ಸಿಕ್ಸೋರಲ್ಲಾ ನಂಗೆ ಆಲೋಕ ಅಧ್ಭುತವಾಗಿ ಕಾಣ್ತಿತ್ತು.

ಪರಮ್: ಮಾಯಾ ಲೋಕ?


ಮಂಡ್ಯ ರಮೇಶ್: ಮಾಯಾಲೋಕ ಒಂದು ವಿಸ್ಮಯವಾದ ಲೋಕ ನಂಗೆ. ಆ ವಿಸ್ಮಯ ನನ್ನಲ್ಲಿ ರೋಮಾಂಚನ ಹುಟ್ಟಿಸ್ತಾ ಇತ್ತು.ಮುಂದುವರೆಯುವುದು…

23 views