ಮಂಡ್ಯ ರಮೇಶ ಅವರ ಶಾಲೆ ಯಾವುದು ಮತ್ತೆ ಹೇಗಿತ್ತು ಅವರ ಮಾತಲ್ಲೇ ಕೇಳಿ

ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಲೈಫ್ ಸ್ಟೋರಿ - ಭಾಗ 3ಎರಡನೇ ಮೂರನೇ ಕ್ಲಾಸಲ್ಲಿ “ಇವನು ಮಂಡ್ಯ ಟೌನಲ್ಲಿ ಇರೋದಕ್ಕೆ ನಾಲಾಯಕ್” ಅಂತ ಅಜ್ಜಿ ಮನೆಯಿಂದ ಮತ್ತೆ ನಮ್ಮೂರು ನಾಗಮಂಗಲಕ್ಕೆ ಕರೆಸ್ಕೊಂಡ್ರು. ನಾಗಮಂಗಲದಲ್ಲಿ ಮಾದರಿ ಉನ್ನತ ಪ್ರಾಥಮಿಕ ಪಾಟಶಾಲೆ ಇತ್ತು.


ಪರಮ್: ಸರ್ಕಾರಿ ಶಾಲೆ?


ಮಂಡ್ಯ ರಮೇಶ್: ಸರ್ಕಾರಿ ಶಾಲೆ ಅಲ್ಲ ಪ್ರೈವೇಟ್ ಸ್ಕೂಲ್ ಅದು. ಆದರೆ ಸರ್ಕಾರೀ ಶಾಲೆಗಳಿಗಿಂತಲೂ ದುಸ್ಥರವಾದ ಪರಿಸ್ಥಿತಿಯಲ್ಲಿತ್ತು. ಅಂದ್ರೆ ಮಕ್ಕಳನ್ನೆಲ್ಲಾ ನೆಲದ ಮೇಲೆ ಕೂರಿಸ್ತಾ ಇದ್ರು ಸಾರ್. ಅದು ಪ್ರೈವೇಟ್ ಸ್ಕೂಲ್ ಅಲ್ಲೇ ನೆಲದ ಮೇಲೆ ಕೂರಿಸ್ತಿದ್ರು ಅಂದ್ರೆ ಇನ್ನು ಸರ್ಕಾರಿ ಶಾಲೆ ಹೇಗಿರ್ಬೋದು ಅಂತ ಯೋಚನೆ ಮಾಡಿ. ಅಂದ್ರೆ ಒಂದು ಬೆಂಚ್, ಮಣೆ ಕೂಡ ಇರ್ಲಿಲ್ಲ. ಮೂರನೇ ಕ್ಲಾಸಲ್ಲಿ ನನ್ನ ಅಲ್ಲಿಗೆ ಸೇರ್ಸಿದ್ರು. ಐದನೇ ಕ್ಲಾಸಲ್ಲಿ ಅಲ್ಲಿಗೆ ಮಣೆ ಬಂತು. ಮೊದಲು ಮಣೆನೂ ಇರ್ಲಿಲ್ಲ. ನೆಲದಲ್ಲೇ ಕೂರ್ತಿದ್ವಿ. ನೆಲ ಎಲ್ಲಾ ಕಿತ್ತೋಗಿ ಒಂದು ಪಾಳು ಬಿದ್ದ ಸ್ಕೂಲ್ ತರ ಇತ್ತು. ಆದರೆ ಅಂತಹ ಒಂದು ಸ್ಕೂಲಲ್ಲಿ ಚನ್ನಾಗಿ ಪಾಟ ಹೇಳ್ಕೊಡೋವಂತಹ ಟೀಚರ್‍ಗಳು ಇದ್ರು ಸಾರ್.


ಅವರು ಪ್ರತೀ ಶನಿವಾರ ಕಾರ್ಯಕ್ರಮಗಳು ಮಾಡೋರು. ಪ್ರತೀ ಶನಿವಾರ ಮಧ್ಯಾಹ್ನದ ಮೇಲೆ ಒಂದು ಸಾಂಸ್ಕøತಿಕ ಕಾರ್ಯಕ್ರಮ. ಏನೋ ಒಂದು ಒಳ್ಳೆ ಮೋನೋ ಆಕ್ಟಿಂಗ್. ಎಚ್.ಎಮ್ ನಾಯಕ್ ಅವರ ಮೋನೋ ಆಕ್ಟಿಂಗ್ ಹೇಳ್ಕೊಡ್ತಿದ್ರು. “ಭರತನಾಟ್ಯ ಯಾರಿಗಾದ್ರೂ ಗೊತ್ತಿದ್ರೆ ಮಾಡಿ” ಅಂತ ಹೇಳ್ತಿದ್ರು. “ಮಿಮಿಕ್ರಿ ಗೊತ್ತಿದ್ರೆ ಮಾಡಿ” ಅನ್ನೋರು. ಹಾಗೆ ಪ್ರತೀ ಶನಿವಾರ ಸಾಂಸ್ಕøತಿಕವಾಗಿ ಒಂದು ಪಿರಿಯೆಡ್ ಮಾಡ್ಬಿಟ್ಟಿದ್ರು. ನಾನು ಅಲ್ಲಿ ಯಾವುದೋ ಸಿನಿಮಾ ನೋಡ್ಕೋ ಬಂದು, ಸಂಪತ್ತಿಗೆ ಸವಾಲ್ ಸಿನಿಮಾ ನೋಡ್ಕೋ ಬಂದು ಆಕ್ಟ್ ಮಾಡ್ತಿದ್ದೆ.ಮುಂದುವರೆಯುವುದು…

23 views