ಮಿಮಿಕ್ರಿ ಕಲಾವಿದರಿಗೇ ಹೆಚ್ಚಿನ ಚಪ್ಪಾಳೆ ಬರುವುದು ಯಾಕೆ?

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 63ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಕುಳಿತಿದ್ದಾಗ ಒಬ್ಬರು, ‘ಆರ್ಕೆಸ್ಟ್ರಾಗಳಲ್ಲಿ ಮಿಮಿಕ್ರಿ ಕಲಾವಿದರಿಗೇ ಪ್ರೇಕ್ಷಕರಿಂದ ಹೆಚ್ಚಿನ ಚಪ್ಪಾಳೆ ಬರುವುದು’ ಎಂದು ಹೇಳಿದ್ರು. ಆಗ ನಾನು ಹೇಳಿದೆ. ನೂರಾರು ವರ್ಷ, ಹಾರ್ಮೋನಿಯಂ, ತಬಲ, ವೀಣೆ, ಹಾಡು... ಹೀಗೆ ಕಲೆಯನ್ನು ಒಲಿಸಿಕೊಳ್ಳಲು ಎಲ್ಲರೂ ತಯಾರಿ ನಡೆಸಿರುತ್ತಾರೆ. ಅವರೆಲ್ಲ ಕಾಫಿ ಕುಡಿಯಲೋ, ಅಥವಾ ಇನ್ಯಾವುದೋ ಕೆಲಸಕ್ಕೆ ಹೋಗುವ ವೇಳೆ ಪ್ರೇಕ್ಷಕರನ್ನು ಸೆಳೆಯಲು ಮಿಮಿಕ್ರಿ ಕಲಾವಿದರನ್ನು ವೇದಿಕೆಗೆ ಕಳುಹಿಸುತ್ತಾರೆ.


ಅವರೆಲ್ಲ ಬರುವವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದರೆ ನಾನ್ನೊಬ್ಬ ಕಲಾವಿದ. ಇನ್ನೂ ಹೆಚ್ಚಿನ ಪ್ರೇಕ್ಷಕರು ಬರುವಂತೆ ಮಾಡಿದ್ರೆ, ಉತ್ತಮ ಕಲಾವಿದ ಎನ್ನಿಸಿಕೊಳ್ಳುತ್ತೇವೆ. ಇರುವ ಪ್ರೇಕ್ಷಕರನ್ನು ಬೋರ್‌ ಹೊಡೆಸಿ ಕಳುಹಿಸಿಬಿಟ್ರೆ, ನಾನ್ನೊಬ್ಬ ಅಯೋಗ್ಯ. ಇನ್ನು ಕಲಿಯುವುದು ಬಹಳಷ್ಟಿರುತ್ತದೆ. ವೇದಿಕೆಯಲ್ಲಿ ಕೆಟ್ಟ ಮಾತು ಹೇಳಿ ಅವರ ಮನಸ್ಸಿಗೆ ಬೇಜಾರು ಮಾಡಿದ್ರೆ, ಈ ಕ್ಷೇತ್ರವನ್ನೇ ಬಿಟ್ಟು ಬಿಡಬೇಕು. ಆರ್ಕೆಸ್ಟ್ರಾದಲ್ಲಿನ ಸಂಗೀತಗಾರರು ಅವರ ಆಸ್ತಿಯನ್ನು ಐದು ನಿಮಿಷ ನನ್ನ ಕೈಗೆ ಕೊಟ್ಟು ಹೋಗಿರುತ್ತಾರೆ. ಅದನ್ನು ಜೋಪಾನವಾಗಿ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಅಷ್ಟೇ ನನ್ನ ಕೆಲಸ. ನಾನ್ನೊಬ್ಬನೇ ನಿಂತರೆ ಜನ ಬರುವುದಿಲ್ಲ ಎಂದು ಹೇಳಿದೆ.ಮುಂದುವರೆಯುವುದು...

14 views