ಮಿಮಿಕ್ರಿ ದಯಾನಂದ್‌ ಅವರ ಡಬ್ಬಿಂಗ್‌ ಅನುಭವಗಳು‌

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 25
ಡಬ್ಬಿಂಗ್ ಕಲಾವಿದನಾಗಿಯೂ ನಾನು ಕೆಲಸ ಮಾಡಿದ್ದೇನೆ. ಪ್ರೇಮರಾಜ್ಯ ಸಿನಿಮಾದಲ್ಲಿ ಅಂಬರೀಷ್‌ಗೆ ಪೂರ್ತಿ ಸಿನಿಮಾ ಡಬ್‌ ಮಾಡಿದ್ದೇನೆ. ‘ಆಪರೇಷನ್‌ ಅಂತ’ದಲ್ಲಿ ಎರಡು ರೀಲ್ ಅಳಿಸಿ ಹೋಗಿತ್ತು. ಉಪೇಂದ್ರ ಅವರು ಅರ್ಜೆಂಟಾಗಿ ಸೆನ್ಸಾರ್‌ಗೆ ಕೊಡಬೇಕು ಎಂದು ನನ್ನ ಬಳಿ ಅದನ್ನು ಮಾಡಿಸಿದ್ರು. ಅಂಬರೀಷ್‌ ಅವರು ಬಂದ ಮೇಲೆ ಅದನ್ನು ನೋಡಿದ್ರು. ಎರಡು ಸಲ ಸಿನಿಮಾ ನೋಡಿ ಅವರು ಏನು ಹೇಳಿಲ್ಲ. ನಂತರ ಉಪೇಂದ್ರ ಅವರೇ ಹೋಗಿ ಆ ರೀಲ್‌ನಲ್ಲಿ ಇರುವುದು ನಿಮ್ಮ ಧ್ವನಿಯಲ್ಲ ಎಂದು ಹೇಳಿದ್ರು. ಅದಕ್ಕವರು ನನಗೆ ಗೊತ್ತಾಗಿಲ್ಲ ಯಾವನಿಗೆ ಗೊತ್ತಾಗುತ್ತದೆ ಇರಲಿ ಬಿಡು ಎಂದ್ರು.


ಜೈ ಕರ್ನಾಟಕ ಸಿನಿಮಾದಲ್ಲಿ ವಿಲನ್‌ ಪಾತ್ರಕ್ಕೆ ನನದೇ ಧ್ವನಿ. ಕ್ಯಾಪ್ಟನ್‌ ರಾಜು ಅವರ ಧ್ವನಿಯನ್ನು ಕೇಳಿ ಡಬ್‌ ಮಾಡಿದ್ದು ಅದು. ನನ್ನ ಪ್ರೀತಿಯ ಹುಡುಗಿ ಸಿನಿಮಾದಲ್ಲಿ ಪೂಜಾರಿ ಪಾತ್ರಕ್ಕೆ ನನ್ನದೇ ಧ್ವನಿಯಿದೆ. ಅದರಲ್ಲಿ ದತ್ತಣ್ಣ ಅವರ ಧ್ವನಿಯನ್ನು ಬೇಸ್‌ ಆಗಿ ಬಳಸಿದ್ದೇನೆ. ನಾಗತಿಹಳ್ಳಿಯವರು ಬಹಳ ನೆರವಾಗಿದ್ರು.


ಮಿಮಿಕ್ರಿ ಗೋಪಿ ಅವರು ನನ್ನ ತಂಡದವರೇ. ಎರಡೆರಡು ಡಿಗ್ರಿ ಮಾಡಿಕೊಂಡಿದ್ದಾರೆ. ಅದ್ಭುತ ಕಲಾವಿದ, ಒಳ್ಳೆಯ ವ್ಯಕ್ತಿ. ಪ್ರಾಂಶುಪಾಲ ಆಗಿದ್ದವರು ಕೆಲಸಬಿಟ್ಟು ಮಿಮಿಕ್ರಿಯಲ್ಲೇ ಪೂರ್ಣ ತೊಡಗಿಸಿಕೊಂಡಿದ್ದಾರೆ. ಒಟ್ಟಿಗೆ ರಿಹರ್ಸಲ್‌ ಮಾಡುತ್ತಿದ್ದೆವು. ಮಿಮಿಕ್ರಿ ಮಹೇಶ್‌ ಅವರು ಗೋಲ್ಡನ್‌ ವಾಯ್ಸ್ ಎಂಬ ಕ್ಲಾಸ್‌ ನಡೆಸುತ್ತಾರೆ. ಅವರೆಲ್ಲ ನಮ್ಮವರು. ಮಿಮಿಕ್ರಿಯಲ್ಲಿ ಶಿಷ್ಯಕೋಟಿ ಎಂಬುದಿಲ್ಲ. ಅವರಲ್ಲಿನ ಕಲೆಯಲ್ಲಿಯೇ ಅವರು ಬೆಳೆಯುತ್ತಾರೆ. ಹಾಗಾಗಿ ಇದು ಬಾಂಧವ್ಯಕೋಟಿ.ಮುಂದುವರಿಯುವುದು...

87 views