ಮಿಮಿಕ್ರಿ ದಯಾನಂದ್‌ ಕೆಲಸ ಮಾಡಿದ ಅರ್ಕೆಸ್ಟ್ರಾ ತಂಡಗಳು

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 17
ಇದೆಲ್ಲ ಆದ ಮೇಲೆ ನಾನು ಮಿಮಿಕ್ರಿಯನ್ನೇ ಮುಂದುವರಿಸಿದೆ. ದಿನಕ್ಕೆ ನಾಲ್ಕು ಶೋ ಮಾಡುತ್ತಿದ್ದೆ. ಕಸ್ತೂರಿ ಶಂಕರ್‌, ಗುರು ಸೌಂಡ್ಸ್‌ ಆಫ್‌ ಮ್ಯೂಸಿಕ್‌, ಜಿಮ್‌ಪೆಟ್ಸ್‌ ಆರ್ಕೆಸ್ಟ್ರಾಗಳಿಗೂ ಮಿಮಿಕ್ರಿ ಕಲಾವಿದನಾಗಿ ಹೋಗುತ್ತಿದ್ದೆ. ನನ್ನದೇ ಆದ ಗಾನ ವಿನೋದಿನಿ ಎಂಬ ತಂಡ ಕಟ್ಟಿದೆ. ಕಿರ್ಲೊಸ್ಕರ್‌ ಸತ್ಯ ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತಿದ್ವಿ. ಕಲಾಕ್ಷೇತ್ರದಲ್ಲಿ ಶೋಗಳನ್ನು ನಡೆಸುತ್ತಿದ್ವಿ. ಎಂಟರಿಂದ ಹತ್ತು ಕಲಾವಿದರಿದ್ದೆವು. ಎಲ್ಲರೂ ಬಹಳ ಬ್ಯುಸಿ ಆದೆವು. ಹಾಸ್ಯದ ತಂಡ ಆಗ ಇದ್ದಿದ್ದು ನಮ್ಮದೊಂದೆ. 1985ರಲ್ಲಿ ಅದನ್ನು ಪ್ರಾರಂಭಿಸಿದೆವು. ಈಗಲೂ ಗಾನ ವಿನೋದಿನಿ ಇದೆ. ಆದರೆ, ನಮಗೆ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ಪ್ರದರ್ಶನವೂ ಕಡಿಮೆ ಆಗಿದೆ. 2000ರದವರೆಗೂ ತುಂಬಾ ಬ್ಯುಸಿ ಇದ್ದೆವು. ಹಾಸ್ಯ ಲೋಕ ಎಂಬ ತಂಡವನ್ನು ನಾನು ಸೃಷ್ಟಿಸಿದೆ. ಮಿಮಿಕ್ರಿ ದಯಾನಂದ್‌ ಎಂದೇ ಜನಪ್ರಿಯನಾದೆ. ಒಳ್ಳೆಯ ಕಂಟೆಂಟ್‌ ಇತ್ತು. ಗಾನ ಮತ್ತು ವಿನೋದ ಎರಡೂ ಇರುತ್ತಿತ್ತು.ಮುಂದುವರೆಯುವುದು...

7 views