ಮಿಮಿಕ್ರಿ ದಯಾನಂದ್‌ ಮೊದಲು ಮಾಡ್ತಿದ್ದ ಕೆಲಸ?

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 6ಕಾವೇರಿ ಎಂಪೋರಿಯಂನಲ್ಲಿ ಸೇಲ್ಸ್‌ಮೆನ್‌ ಆಗಿದ್ದೆ. ಸರ್ಕಾರಿ ಉದ್ಯೋಗವದು. 350 ಸಿನಿಮಾ ಮಾಡಿದ್ದೇನೆ. ಅದರಲ್ಲಿ ಸುಮಾರು 200 ಸಿನಿಮಾ ಅಲ್ಲಿರುವಾಗಲೇ ಮಾಡಿದ್ದೆ. ಅಲ್ಲಿದ್ದ ದೊಡ್ಡ ಅಧಿಕಾರಿಗಳು ನನಗೆ ಶೋ ನಡೆಸಲು ಸಹಕಾರ ನೀಡುತ್ತಿದ್ರು. 25 ವರ್ಷ ಅಲ್ಲಿ ಕೆಲಸ ಮಾಡಿದ್ದೇನೆ. ಸೈಕಲ್‌ನಲ್ಲಿಯೇ ಎಲ್ಲ ಕಡೆ ಹೋಗುತ್ತಿದ್ದೆ.


ಒಂದು ದಿವಸ ಆಫೀಸ್‌ಗೆ ಚಕ್ಕರ್‌ ಹೊಡೆದು ಮಧ್ಯಾಹ್ನವೇ ಕಾರ್ಯಕ್ರಮ ಕೊಡಲು ಹೋಗಿದ್ದೆ. ಆಫೀಸ್‌ನಲ್ಲಿ ಹಾಜರಾತಿ ಬುಕ್‌ನಲ್ಲಿ ಸಂಜೆವರೆಗೂ ಸಹಿ ಹಾಕಿದ್ದೆ. 2 ಕಾರ್ಯಕ್ರಮ ನಡೆಸಿಕೊಟ್ಟಿದ್ದೆ. ನಾಲ್ಕು ಗಂಟೆಗೆ ಇದ್ದ ಕಾರ್ಯಕ್ರಮದಲ್ಲಿ ನನ್ನ ಎಂ.ಡಿ ಮತ್ತು ಇನ್ನೊಬ್ಬ ಅಧಿಕಾರಿ ಮುಖ್ಯ ಅತಿಥಿಯಾಗಿ ಬಂದಿದ್ರು. ಆದರೆ, ಏನು ಬೈಯದೇ ನಗಾಡಿಕೊಂಡು ಸುಮ್ಮನಾಗಿಬಿಟ್ರು.


ನನ್ನ ಬಾಲ್ಯದ ಕನಸನ್ನು ಹೇಳಿದ್ದೇನೆ. ಆದರೆ ನನಗೆ ಮಿಮಿಕ್ರಿ ಬಗ್ಗೆ ಗೊತ್ತಿರಲಿಲ್ಲ. ಹಾವಾಡಿಗ, ಕೇರಳದ ಕಾಕಾ ಅಂಗಡಿ, ನನ್ನ ಮಲಯಾಳಿ ಟೀಚರ್ ಇಂಗ್ಲಿಷ್‌ ಮಾತನಾಡುವ ಶೈಲಿ.. ಹೀಗೆ ಹಲವರನ್ನು ಅನುಕರಿಸುತ್ತಿದ್ದೆ. ಭಾಷೆಗಳ ವಿಭಜನೆಗಳು, ಶೈಲಿಗಳು, ಬೇರೆ ಭಾಷೆಯವರು ಇನ್ನೊಂದು ಭಾಷೆ ಮಾತನಾಡಿದಾಗ ಅವರ ಸ್ವಂತ ಭಾಷೆಯ ಶೈಲಿ ಅದರಲ್ಲಿ ಉಳಿದುಕೊಂಡಿರುತ್ತದೆ. ಅದನ್ನು ನಾನು ಉಪಯೋಗಿಸಿಕೊಂಡೆ.


ಮುಂದುವರಿಯುವುದು...

ಸಂದರ್ಶನ: ಕೆ.ಎಸ್‌.ಪರಮೇಶ್ವರ

27 views