ಮಿಮಿಕ್ರಿ ದಯಾನಂದ್‌ ಹಿನ್ನೆಲೆ

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 3ನಾನು ಹುಟ್ಟಿದ್ದು, ಮೈಸೂರಿನಲ್ಲಿ. ನನ್ನ ತಂದೆ ಆಯುರ್ವೇದ ವೈದ್ಯರು. ತಾಯಿ ಹೋಮಿಯೊಪಥಿ ವೈದ್ಯೆ. ನನ್ನ ಅಣ್ಣ ರವೀಂದ್ರ ಗಂಭೀರವಾಗಿರುತ್ತಿದ್ದ. ಮನೆಯಲ್ಲಿ ನಾನ್ನೊಬ್ಬನೇ ಸಡಿಲವಾಗಿ ಬಿಟ್ಟ ಬುಗುರಿ ತರಹ ಆಡುತ್ತಿದ್ದೆ. ಎಲ್ಲರೂ ಮನೆಯಲ್ಲಿ ಗಂಭೀರ ವಿಷಯನ್ನು ಮಾತನಾಡುತ್ತಿದ್ರು ನಾನು ಹೋಗಿ ತಮಾಷೆ ಮಾಡುತ್ತಿದ್ದೆ. ಯಾಕಾದ್ರೂ ಇವನು ಈ ರೀತಿ ಮಾಡುತ್ತಾನೆ ಎನ್ನುತ್ತಿದ್ರು.


ನಾನೊಬ್ಬನೇ ಮಾತನಾಡುತ್ತಿರಬೇಕು, ಮುಂದೆ ಗಣ್ಯಾತೀಗಣ್ಯರು ಕುಳಿತು ನಗಬೇಕು, ಚಪ್ಪಾಳೆ ಹೊಡಿಯಬೇಕು ಎಂದು ನಾಲ್ಕನೇ ತರಗತಿಯಿಂದಲೇ ಕನಸು ಕಟ್ಟಿಕೊಂಡಿದ್ದೆ. ಈ ಕನಸನ್ನು ಯಾರಿಗೆ ಹೇಳಿದ್ರು ಹುಚ್ಚ ಅನ್ನುತ್ತಿದ್ರು.ಮುಂದುವರೆಯುವುದು...

25 views