ಮಿಮಿಕ್ರಿ ಮಾಡುವಾಗ ಮಾತಾಡುವ ಭರದಲ್ಲಿ ಕೆಟ್ಟ ಪದ ಬಂದ್ರೆ?

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 23
ಬಿಳಿ ಬೋರ್ಡಿನಲ್ಲಿ ಏನಾದ್ರೂ ಬರೆಯಬಹುದು. ಅದೇ ಅದರ ತುಂಬ ಬರೆದಿದ್ದರೆ ಏನಾದರೂ, ಬರೆಯಲು ಸಾಧ್ಯವೇ? ಹಾಗೆಯೇ ಮಿಮಿಕ್ರಿಯೂ ಕೂಡ. ಚಿಕ್ಕ ಮಕ್ಕಳಿಂದ ದೊಡ್ಡವರ ವರೆಗೆ ಎಲ್ಲರಿಂದಲೂ ಸಾಕಷ್ಟು ಕಲಿಯಬಹುದು. ಆದರೆ ಅವರ ಬಗ್ಗೆ ಪೂರ್ವಾಗ್ರಹಗಳನ್ನು ಇಟ್ಟುಕೊಳ್ಳಬಾರದು. ಸಿದ್ಧತೆಗಳನ್ನು ಮಾಡಿಕೊಂಡು ಹೋಗುವುದಕ್ಕಿಂತ ಅನುಭವವೇ ಮುಖ್ಯವಾಗುತ್ತದೆ.


ಮಾತಾಡುವ ಭರದಲ್ಲಿ ಯಾವುದಾದರೂ ಕೆಟ್ಟ ಪದ ಬರೋದಿಲ್ವಾ ನಿಮಗೆ ಎಂದು ಬಹಳಷ್ಟು ಮಂದಿ ಕೇಳ್ತಾರೆ. ನಿಜ ಜೀವನದಲ್ಲಿಯೂ ಕೆಟ್ಟ ಪದಗಳನ್ನು ಬಳಸಬೇಡಿ. ಆ ಚಿಂತೆನೆಯೇ ಇಲ್ಲದಾಗ ಅದು ಬಾಯಿಂದ ಬರುವುದಿಲ್ಲ ಎಂಬ ಉತ್ತರವನ್ನು ಅವರಿಗೆ ಕೊಡುತ್ತೇನೆ. ನಟನೆ ಮಾಡುವಾಗ ಮೊದಲು ಹೃದಯ ನಟಿಸಬೇಕು. ಅದರ ಪ್ರತಿಬಿಂಬ ಬಾಹ್ಯವಾಗಿ ಕಾಣುತ್ತದೆ. ನೃತ್ಯ ಮಾಡುವಾಗಲೂ ಮನಸು ಮೊದಲು ನರ್ತಿಸಬೇಕು.ಮುಂದುವರೆಯುವುದು...

50 views