"ಮ್ಯೂಸಿಯಮ್ ಮಾಲ್ಗುಡಿ" ಎಲ್ಲಿದೆ ಗೊತ್ತಾ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 70

(ಮಾಲ್ಗುಡಿ ಡೇಸ್ ಆರ್ಟ್ ಡೈರಕ್ಟರ್, ಜಾನ್ ದೇವರಾಜ್ ಅವರ ನೆನಪುಗಳು.)ನಾನು ಈಗ ರೀಸೆಂಟಾಗಿ ಅರಸಾಳು ನಲ್ಲಿ ‘ಮ್ಯೂಸಿಯಮ್ ಮಾಲ್ಗುಡಿ’ಮಾಡ್ದೆ. ಅರಸಾಳು ರೈಲ್ವೇ ಸ್ಟೇಷನಲ್ಲೇ ನಮ್ಮ ಎಲ್ಲಾ ಟ್ರೇನ್ ಶಾಟ್ಸ್ ಮಾಡಿರೋದು ನಾವು. ಬ್ಯೂಟಿಫುಲ್ ಆಗಿ ಬಂತು. ಆಮೇಲೆ ಮಾಲ್ಗುಡಿ ಪ್ರೋಸೆಸ್ನ ಅಲ್ಲಿ ಎಸ್ಟಾಬ್ಲಿಷ್ ಮಾಡಿದ್ದೀನಿ. ನೀವು ನೋಡಿದ್ರೆ ಹೇಗಿತ್ತು? ಹೇಗೆ ಮಾಡಿದ್ವಿ? ಅದೆಲ್ಲಾ ಸೆಟ್ ಗಳನ್ನ ಅಲ್ಲಿ ಕ್ರಿಯೇಟ್ ಮಾಡಿದ್ದೀನಿ. ಮಾಲ್ಗುಡಿ ಹೇಗೆ ಮಾಡಿದ್ವಿ? ಅಂತ ಮುಂದಿನ ಪೀಳಿಗೆಯ ಹುಡುಗ್ರು ನೋಡ್ಬೇಕು. ಸೋ ಅದನ್ನ ಒಂದು ಮಾಡಲ್ ಆಗಿ ಕ್ರಿಯೇಟ್ ಮಾಡಿ ಮ್ಯೂಸಿಯಮ್ ಮಾಲ್ಗುಡಿ ಮಾಡಿದೀವಿ. ಅದು ಒಂದು ಕಲ್ಚರಲ್ ಸೆಂಟರ್ ಆಗಿ ಕ್ರಿಯೇಟ್ ಆಗಿದೆ.

ಪರಮ್: ಅಲ್ಲಿ ಮಾಲ್ಗುಡಿ ಸ್ಟೇಷನ್ ಅಂತ ರೀ ನೇಮ್ ಮಾಡಿದಾರೆ ಅಂತ ಕೇಳ್ದೆ ನಿಜನಾ?

ಜಾನ್ ದೇವರಾಜ್: ಸ್ಟೇಷನ್ ಚೇಂಜ್ ಮಾಡಿಲ್ಲ, ಬಟ್ ಅಲ್ಲಿ ಇರುವ ಹಂಡ್ರಡ್ ಯಿಯರ್ಸ್ ಓಲ್ಟ್ ಬಿಲ್ಡಿಂಗ್ ಅಲ್ಲಿ ಮ್ಯೂಸಿಯಮ್ ಮಾಲ್ಗುಡಿ ಅಂತ ಮಾಡಿದ್ದೀವಿ.


ಪರಮ್: ಓ ನೈಸ್, ಈಗ ಓಪನ್ ಇದ್ಯ? ಇನಾಗ್ರೇಟ್ ಆಗಿದ್ಯ?


ಜಾನ್ ದೇವರಾಜ್: ಕೋವಿಡ್ 19 ಇಂದ ಓಪನ್ ಆಗ್ಲಿಲ್ಲ, ಮುಂದಿನ ದಿನಗಳಲ್ಲಿ ಓಪನ್ ಆಗುತ್ತೆ. ಅದು ರೈಲ್ವೇ ಪ್ರಾಜೆಕ್ಟ್. ರೈಲ್ವೆನಲ್ಲಿ ಅಪರ್ಣ ಗಾರ್ಗ್ ಅಂತ ಡಿವಿಶನ್ ರೈಲ್ವೇ ಮ್ಯಾನೇಜರ್ ಇದಾರೆ. ಅವರ ಐಡಿಯಾ ಇದು. ಅವ್ರು ಮಾಲ್ಗುಡಿ ಡೇಸ್ ದು ದೊಡ್ಡ ಫ್ಯಾನ್. ಅದನ್ನ ಅಲ್ಲಿ ಕ್ರಿಯೇಟ್ ಮಾಡ್ಬೇಕೂಂತ ಮಾಡಿದ್ದೀವಿ.ಮುಂದುವರೆಯುವುದು…

10 views