ಮಾಲ್ಗುಡಿ ಆದಮೇಲೆ ನಾವು ಮಾಡಿದ ಪ್ರೊಜೆಕ್ಟ್…

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 105

( ಶಂಕರ್‌ನಾಗ್‌ ಕುರಿತಂತೆ ಮಾಲ್ಗುಡಿ ಡೇಸ್‌ ನಿರ್ಮಾಪಕರ ನೆನಪುಗಳು)ಪರಮ್: ಆರ್. ಕೆ. ನಾರಾಯಣ್ ನಿಮ್ಗೆ ಕೊಟ್ಟಿದ್ದೇ 32 ಎಪಿಸೋಡಾ? ಅಥವಾ ಜಾಸ್ತಿ ಇತ್ತಾ?

ಬದರಿನಾಥ್: ಹಾಗೇನಿಲ್ಲ ಅದು ನಮ್ಗೆ ಬಿಟ್ಟಿದ್ದು ನಾವು ಎಷ್ಟು ಬೇಕಾದ್ರೂ ಆಯ್ಕೆ ಮಾಡ್ಬಹುದಿತ್ತು. ಆಗಿನ ಸಿಚ್ಯುವೇಶನಲ್ಲಿ ತುಂಬಾ ಇಂಟ್ರಸ್ಟಿಂಗ್ ಎಪಿಸೋಡ್ ಗಳನ್ನ ಶಂಕರ್ ಸೆಲೆಕ್ಟ್ ಮಾಡ್ಕೊಂಡ್ರು.

ಪರಮ್: ಸೊ ಅದನ್ನ ಸೆಲೆಕ್ಟ್ ಮಾಡಿದ್ದು ಶಂಕರ್ ಆಂಡ್ ಟೀಮಾ?


ಬದರಿನಾಥ್: ಹೌದು, ಆಸ್ ಅ ಕ್ರಿಯೇಟಿವ್ ಡೈರೆಕ್ಟರ್ ಇಟ್ ವಾಸ್ ಹಿಸ್ ಚಾಯ್ಸ್. ಯಾವ್ಯಾವ ಸ್ಟೋರಿ ಮಾಡ್ಬೇಕು ಅಂತ. ಅದು ಅಪ್ಪನ ಜೊತೆಯಲ್ಲೇ ಡಿಸ್ಕಸ್ ಮಾಡಿ ಮಾಡ್ತಿದ್ರು. ಅದು ಕಾಮನ್ ಡಿಸ್ಕಷನ್ ಇದ್ದೇ ಇರೋದು.


ಪರಮ್: ಮಾಲ್ಗುಡಿ ಡೇಸ್ ಶೂಟಿಂಗ್ ಆದ್ಮೇಲೆ ನಿಮ್ಮ ಹಾಗೂ ಶಂಕರ್ ರಿಲೇಷನ್‌ ಶಿಪ್ ಹೇಗಿತ್ತು?

ಬದರಿನಾಥ್: ಇಟ್ ವಾಸ್ ಗುಡ್, ಬಟ್ ಈಚ್ ಆಫ್ ಅಸ್ ಬ್ಯುಸೀ ವಿತ್ ದೇರ್ ಓನ್ ವಲ್ಡ್. ಆಪ್ಟರ್ ಪೋಸ್ಟ್ ಮಾಲ್ಗುಡಿ ಪ್ರೊಡಕ್ಷನ್, ಐ ವಾಸ್ ಆಲ್ವೇಸ್ ಬ್ಯುಸಿ ಇನ್ ಅದರ್ ಬ್ಯುಸ್ನೆಸ್ ಆಲ್ಸೋ. ನಮ್ಮ ದೊಡ್ಡಪ್ಪನ್ದು ಫ್ಯಾಮಿಲೀ ಬ್ಯುಸ್ನೆಸ್ ನೋಡ್ಕೋಬೇಕಾಗಿತ್ತು. ಅದು ತ್ರೀ ಫೋರ್ ಯಿಯರ್ಸ್ ನೆಗ್ಲೆಕ್ಟ್ ಮಾಡಿದ್ದೆ. ಅದು ಸ್ವಲ್ಪ ಪ್ರಾಬ್ಲಮಲ್ಲಿ ಇತ್ತು. ಅದನ್ನ ಸಾರ್ಟೌಟ್ ಮಾಡ್ಬೇಕಾಗಿತ್ತು. ಮಾಡ್ತಿರ್ಬೇಕಾದ್ರೆನೇ, ದ ಕಾಲ್ ಕೇಮ್ ಫಾರ್ ‘ತೆನಾಲಿರಾಮ’ ನಾಗಾಭರಣ ಮಾಡಿದ್ದು.


ಪರಮ್: ಅದು ಸೀರಿಯಲಾ? ನೀವೇ ಪ್ರೊಡ್ಯೂಸರಾ?


ಬದರಿನಾಥ್: ಹೌದು, ಹದಿಮೂರು ಎಪಿಸೋಡ್, ಸೋ ಆ ಕಾಲ್ ಬಂತು.


ಪರಮ್: ನೀವು ಹುಡುಕ್ಕಿದ್ದಲ್ಲ, ಅದೇ ಬಂತಾ?


ಬದರಿನಾಥ್: ಬಂತು ಅಂದ್ರೆ, ಅಗೇನ್ ದೂರದರ್ಶನಲ್ಲೇ. ಆರ್.ಕೆ.ಲಕ್ಷ್ಮಣ್ ಅವ್ರ ಮಿಸ್ಸಸ್, ಕಮಲಾ ಲಕ್ಷ್ಮಣ್ ಬರ್ದಿದ್ದು. ಸ್ಟೋರಿ ಅಡಾಪ್ಟೇಶನಲ್ಲಿ ತೆನಾಲಿರಾಮ ಮಾಡಿದ್ದು. ಸೋ ಆ ಪ್ರಾಜೆಕ್ಟ್ ಶುರು ಆಯ್ತು.


ಪರಮ್: ಅದೂ ಚೆನ್ನಾಗಾಯ್ತಾ?


ಬದರಿನಾಥ್: ಚೆನ್ನಾಗಾಯ್ತು, ಫಸ್ಟ್ ಕ್ಲಾಸಾಗಾಯ್ತು. ಅದು ರೈಟ್ಸ್ ದೂರರ್ಶನ್ ಹತ್ರ ಇತ್ತು. ಬಟ್ ಅವ್ರು ನಮಿಗೆ ಸ್ಪಾನ್ಸರ್ ಪ್ರೋಗ್ರಾಮ್ ಅಂತ ವಾಪಸ್ ಕೊಟ್ಟು, ನಾವು ಅದನ್ನ ಮತ್ತೆ ಅವ್ರಿಗೇ ಕೊಟ್ವಿ. ಅದಾದ್ಮೇಲೆ ಅಪ್ಪನಿಗೆ ಮತ್ತೆ ಗೌರ್ಮೆಂಟ್ ಆಫ್ ಮೌರೀಟಶಿಯಸ್ ಗೂ ಒಳ್ಳೆ ಕಾಂಟಾಕ್ಟ್ ಇತ್ತು. ತುಂಬಾ ಡಾಕ್ಯುಮೆಂಟ್ರೀಸ್ ಮಾಡಿದ್ರು ಅಲ್ಲಿ. ಸೋ ಒಂದು ಜಾಯಿಂಟ್ ವೆನ್ಚರ್ ಮಾಡುವ ಪ್ಲಾನ್ ಮಾಡಿದ್ರು. ಇಂಡೋ – ಮೌರೀಟಶಿಯಸ್ ಜಾಯಿಂಟ್ ವೆನ್ಚರ್ ‘ಸ್ಟೋನ್ ಬಾಯ್’ ನಾಗಾಭರಣ ಅವ್ರು ಡೈರೆಕ್ಷನ್ ಮಾಡಿದ್ದು. ಮಾಸ್ಟರ್ ಮಂಜುನಾಥ್ ಅದ್ರಲ್ಲಿ ಹೀರೋ.


ಪರಮ್: ಸಿನಿಮಾ ಅದು?


ಬದರಿನಾಥ್: ಇಲ್ಲ ಅದು ಹತ್ತು ಎಪಿಸೋಡ್ ಸೀರಿಯಲ್. ಲೋಕಲ್ ಕತೆ. ಹಾಗೆ ಮೌರೀಶಿಯಸ್ ಹೊರ್ಟೋದ್ವಿ. ಮೌರೀಶಿಯಸ್ ಗೆ ಹೋಗಿ ನಾನು ಇಲ್ಲಿಗೆ ಬಂದಾಗ ತಾನೆ ಶಂಕರ್ ದು ಡೆತ್ ಆಯ್ತು. ನಾನು ಪ್ರಸಾದ್ ಲ್ಯಾಬ್ ಕೆಲ್ಸಕ್ಕೆ ಬಂದಿದ್ದೆ, ನಮ್ಮಪ್ಪ ಅಲ್ಲೇ ಇದ್ರು. ಅದಿಕ್ಕೆ ಹಿಂದಿನ ದಿವ್ಸ ಸಾಯಂಕಾಲ ನಾನು, ಶಂಕರ್ ಮೀಟ್ ಆಗಿದ್ವಿ ಕಂಟ್ರೀ ಕ್ಲಬ್ ಅಲ್ಲಿ. ಅವ್ರು ಕಾರ್ಪೊರೇಟ್ಸ್ ಗೆ ಪಾರ್ಟಿ ಅರೇಂಜ್ ಮಾಡಿದ್ರು. ನಾವು ಮೀಟ್ ಮಾಡಿ ಅವ್ರ ಮನೆಯಲ್ಲೇ ಇದ್ವಿ.


ಸಡನ್ಲೀ ದಿಸ್ ನ್ಯೂಸ್ ಕೇಮ್, ಆಂಡ್ ಐ ವಾಸ್ ಶಾಕ್ಡ್. ಅಲ್ಲಿ ನಮ್ಮ ತಂದೆಗೂ ಬಿಗ್ ಶಾಕ್. ಮೈ ಫಾದರ್ ವಾಸ್ ಲುಕ್ಡ್ ಎಟ್ ಹಿಮ್ ಆಸ್ ಎಲ್ಡರ್ ಸನ್. ನಮ್ಮ ತಂದೆ, ತಾಯಿ ಯವ್ರಿಗೆ ಶಂಕರ್ ಅಂದ್ರೆ ಬಹಳ ಪ್ರೀತಿ.ಮುಂದುವರೆಯುವುದು…

14 views