ಮಾಲ್ಗುಡಿ ಊರು ಕ್ರಿಯೇಟ್‌ ಮಾಡಿದ್ದು ನಾನೇ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 60

(ಮಾಲ್ಗುಡಿ ಡೇಸ್ ಆರ್ಟ್ ಡೈರಕ್ಟರ್, ಜಾನ್ ದೇವರಾಜ್ ಅವರ ನೆನಪುಗಳು.)ಇಟ್ ಈಸ್ ಹೈ ಪ್ರೆಶರ್, ಟು ದ ಆರ್ಟಿಸ್ಟ್, ಟು ವಿಶ್ವಲೈಸ್ ವರ್ಡ್ಸ್. ಹೇಗೆ ನಾವು ವರ್ಡ್ಸ್ ನ ಮಾಡಿದ್ವಿ ಅಂತ? ಹಾಗಾಗಿ ಮೀಟಿಂಗ್ ಮಾಡ್ತಿದ್ವಿ. ಒಂದು ಪೇಜ್ ಕಥೆ ಕೊಟ್ರೆ, ನಾನು ವಿಶ್ವಲೈಸ್ ಮಾಡ್ಬೇಕು. ಒಂದೇ ಪೇಜಲ್ಲಿ ದಟ್ ಈಸ್ ಅನ್ ಎಂಟಾಯರ್ ಎಪಿಸೋಡ್. ಸೋ ಐ ಹ್ಯಾಡ್ ಟು ಕ್ರಿಯೇಟ್ ದಿಸ್ ಎಪಿಸೋಡ್. ಸೋಮಚ್ ಸೋ, ಇಟ್ ಬಿಕೇಮ್ ಅ ಬಿಗ್ ಪ್ರೆಶರ್ ಆನ್ ಮಿ. ಏಳು ಗಂಟೆವರೆಗೂ ಮೀಟಿಂಗ್ ಮಾಡಿ, ನನಗೆ ಆ ಟೆಕ್ಸ್ಟ್ ಕೊಟ್ಟಾಗ ನನ್ನ ಕೆಲಸ ಶುರುವಾಗೋದು.


ಪರಮ್: ಮಾರ್ನಿಂಗಾ? ಇವ್ನಿಂಗಾ?


ಜಾನ್ ದೇವರಾಜ್: ಇವ್ನಿಂಗ್, ಎಂಡ್ ಆಫ್ ದ ಡೇ, ವಿ ಹ್ಯಾಡ್ ಅ ಟೆಕ್ನಿಕಲ್ ಮೀಟಿಂಗ್. ಆ ಮೀಟಿಂಗಲ್ಲಿ ವಿ ಹಾವ್ ಟು ಕ್ರಿಯೇಟ್ ಆಲ್ ದೀಸ್ ಥಿಂಗ್ಸ್. ಔಟ್ ಆಫ್ ನಥ್ಥಿಂಗ್. ಸೋ ನಾನೇನು ಮಾಡ್ದೆ? ಬೇರೆ ಬೇರೆ ಲೊಕೇಶನಲ್ಲಿ ವರ್ಕ್ ಮಾಡಿದ್ದೆ. ಆಗುಂಬೆಯಲ್ಲಿ ಒಂದು ಮ್ಯೂಸಮ್ ಕ್ರಿಯೇಟ್ ಮಾಡ್ಬಿಟ್ಟೆ. ಆಗುಂಬೆಯಲ್ಲಿ ಎಲ್ಲಾ ಮನೆಯವ್ರಿಗೂ ಹೇಳಿ, ಅವರ ವಸ್ತುಗಳನ್ನ ತರಿಸಿ ಕೊಂಡು, ಸಂಗ್ರಹಾಲಯ ಮಾಡ್ದೆ. ನನಗೆ ಗ್ರೇಟ್ ಅಡ್ವಂಟೇಜ್ ಏನಂದ್ರೆ? ನಾನೊಬ್ಬ ಆರ್ಕಿಟೆಕ್ಟ್ ಇಂಜಿನಿಯರ್. ಐ ಆಮ್ ಸ್ಟಿಲ್ ಸ್ಟೂಡೆಂಟ್ ಆಫ್ ಆರ್ಟ್.


ಪರಮ್: ಒಟ್ಟಾರೆ ಆಗುಂಬೆ, ಮ್ಯೂಸಿಯಮ್, ಹೇಗಿತ್ತು ಸರ್? ಫುಲ್ ಮೇಕಿಂಗ್ ಪ್ರೋಸೆಸ್?


ಜಾನ್ ದೇವರಾಜ್: ಮಾಲ್ಗುಡಿಯಲ್ಲಿ ನನಿಗೆ ಅನ್ನಿಸ್ತು, ಇಲ್ಲಿ ಎಲ್ಲಾ ರೀತಿಯ ನೋಲೆಡ್ಜ್ ಆಂಡ್ ಇನ್ಫರ್ಮೇಷನ್ ಬೇಕೂಂತ. ಸ್ಕಲ್ಪ್ಟಿಂಗ್, ಆರ್ಕಿಟೆಕ್ಚರ್, ಇಂಜಿನಿಯರಿಂಗ್, ಪೀರಿಯಡ್ಸ್, ಹಿಸ್ಟಾರಿಕಲ್ ಸಾಮಾಗ್ರಿಗಳನ್ನ, ಏನೆಲ್ಲಾ ಬಳ್ಸತಿದ್ದೀವಿ ಅದನ್ನೆಲ್ಲಾ ವಿವರಿಸೋದಕ್ಕೆ ಮೊದಲು ಎಲ್ಲಾ ತಿಳ್ಕೊಬೇಕಾಗಿದೆ.


ಆ ಮೇಲೆ ಮಾಲ್ಗುಡಿಯ ಫ್ಲೇವರ್, ಕ್ಯಾರೆಕ್ಟರ್ ಒಂದು ಸಣ್ಣ ಸೌತ್ ಇಂಡಿಯನ್ ವಿಲೇಜ್. ಇದು ಯಾವುದೇ ಜಾತಿ, ಧರ್ಮ, ಭೇದ, ಭಾವ ಯಾವುದು ಇಲ್ಲದ ಒಂದು ಉರಾಗಿ ಕ್ರಿಯೇಟ್ ಮಾಡ ಬೇಕಾಯ್ತು. ಸೋ ನನಗೆ ಬಹಳ ಫ್ಯಾಸಿನೇಟಿಂಗ್ ಪ್ರಾಸೆಸ್ ಇದು. ಮಾಲ್ಗುಡಿಯಲ್ಲಿ ಎಲ್ಲಾ ಜನ ಇರ್ತಾರೆ. ಅದೇ ಆರ್.ಕೆ ನಾರಾಯಣ್ ಹೇಳ್ತಾರಲ್ವ. ಒಂದು ರೀತಿಯಲ್ಲಿ ಇಟ್ ಈಸ್ ಅ ರೆಪ್ರಸಂಟೇಟಿವ್ ಸ್ಯಾಂಪಲ್ ಆಫ್ ಇಂಡಿಯಾ, ಅಂತನೇ ಹೇಳ್ಬಹುದು. ದೋ ವಿ ಆರ್ ಬೆಸ್ಟ್ ಇನ್ ಸೌತ್ ಇಂಡಿಯಾ, ಇಟ್ ಈಸ್ ಇಂಡಿಯಾ. ಇಟ್ ಹ್ಯಾಸ್ ಡನ್ ಇನ್ ಹಿಂದಿ, ಐ ವುಡ್ ಬೀ ವೆರಿ ಹ್ಯಾಪಿ ಇಫ್ ಇಟ್ ಈಸ್ ಡನ್ ಇನ್ ಕನ್ನಡ, ತಮಿಳ್ ಆರ್ ಎನಿ ಸೌತ್ ಇಂಡಿಯನ್ ಲಾಂಗ್ವೇಜ್.


ಬಟ್ ಒ.ಕೆ. ವಿ ಹ್ಯಾಡ್ ಟು ಲರ್ನ್ ಹಿಂದಿ. ಆಂಡ್ ಹಿಂದಿಯಲ್ಲೇ ರೆಸ್ಪಾಂಡ್ ಮಾಡ್ಬೇಕಾಯ್ತು. ಸೋ ಶಂಕರ್ ಏನು ಮಾಡಿದ್ರು, ಹುಡುಗರಿಗೆಲ್ಲಾ ಹಿಂದಿ ಟ್ಯೂಶನ್ ಮಾಡ್ಸಿದ್ರು. ಅದಕ್ಕೆ ಇಷ್ಟು ಚೆನ್ನಾಗಿ ಹಿಂದಿ ಮಾತಾಡಿರೋದು. ಎಸ್ಪೆಷಲ್ಲಿ ಮಂಜು ಮತ್ತೆ ಲಾರ್ಜರ್ ಕ್ಯಾರಕ್ಟರ್ಸ್ ಎಲ್ಲಾ ಪಾರ್ಟ್ ಆಫ್ ದ ಹೋಲ್ ಪ್ಲಾನ್. ನನಗೆ ಇದರ ಬಗ್ಗೆ ಏನೂ ಗೊತ್ತಿರ್ಲಿಲ್ಲ, ಆದ್ರೆ ಒಂದೇ ಒಂದು ಇಂಪಾರ್ಟೆಂಟ್ ಅಂದ್ರೆ, ಪ್ರತಿಯೊಂದು ಫ್ರೇಮಲ್ಲೂ ಕ್ರಿಯೇಟಿವಿಟಿ ಡಿಮಾಂಡ್ ಇತ್ತು ನನ್ಮೇಲೆ.


ಸೋ ಒಬ್ಬ ಕಲಾವಿದನಾಗಿ ನಾನು ಪೇಂಟ್ ಮಾಡ್ಬಹುದು. ಅದನ್ನ ನಾನೊಬ್ಬನೇ ವರ್ಕ್ ಮಾಡ್ತೀನಿ. ಇಲ್ಲಿ ಏನಾಗುತ್ತೆ? ನಾನೊಂದು ಟೀಮ್ ಜೊತೆ ವರ್ಕ್ ಮಾಡ್ಬೇಕು. ಟೀಮಲ್ಲಿ ಏನೇನು ರಿಕ್ವಾಯರ್ಮೆಂಟ್ ಅಂದ್ರೆ, ಮೊದಲ್ನೇದು ಡೈರೆಕ್ಟರ್, ಎರಡ್ನೇದು ಕ್ಯಾಮರಾ ರಿಕ್ವಾಯರ್ಮೆಂಟ್. ಮತ್ತೆ ಆರ್ಟ್ ಡೈರೆಕ್ಟರ್ ಆಗಿ ನಾನೇ ವಿಶ್ವಲೈಸ್ ಮಾಡ್ಬೇಕಾಗುತ್ತೆ. ಇದೆಲ್ಲವನ್ನೂ ಮಾಡ್ಬೇಕು, ಈನಿಟ್ಟಿನಲ್ಲಿ ಶಂಕರ್ ನಾಗ್ ಈಗೋ ಪ್ರಾಬ್ಲಮ್ ಇಟ್ಕೊಂಡು ಡೈರೆಕ್ಟ್ ಮಾಡಿದ್ರೆ, ನಮ್ಮ ಕ್ರಿಯೇಟಿವಿಟಿ ಬರೊದೇ ಇಲ್ಲ. ಬಟ್ ನನಗೆ ಅನ್ಸುತ್ತೆ, ಈ ಫಂಡಮೆಂಟಲ್ ಐಡಿಯಾ ಸಕ್ಸಸ್ ಆಗಿದ್ದು ಶಂಕರ್ ಅವ್ರ ಆಟಿಟ್ಯುಡ್ ಇಂದ. ಹೀ ಈಸ್ ಅ ಫೆಂಟಾಸ್ಟಿಕ್ ಕ್ಯಾಪ್ಟನ್.


ಫುಟ್ ಬಾಲ್ ಮ್ಯಾಚಲ್ಲೂ ಕೂಡ ಯು ಮಸ್ಟ್ ಬೀ ಅ ಗೋಲ್ ಮೇಕರ್, ನೀನೇ ಗೋಲ್ ಹೊಡಿಬೇಕೂಂತೇನಿಲ್ಲ. ಸೊ ಶಂಕರ್ ಹ್ಯಾಡ್ ದಿಸ್ ಆಟಿಟ್ಯೂಡ್. ಹೀ ಲೆಟ್ ಫ್ರೀ ರೈನ್ ಫಾರ್ ಎವ್ರಿಬಡಿ, ಇದನ್ನ ಯಾಕೆ ಹೇಳ್ತಿದ್ದೀನಿ ಅಂದ್ರೆ, ಸಬ್ಸೀಕ್ವೆಂಟ್ಲೀ ನಾನು ಸುಮಾರು ಸಿನಿಮಾದಲ್ಲಿ ವರ್ಕ್ ಮಾಡ್ದೆ. ಬಟ್ ಈ ತರ ಒಂದು ಕಾನ್ಸೆಪ್ಟ್ ಇದ್ಯಲ್ಲ, ವೀ ಹ್ಯಾಡ್ ಅ ಟೀಮ್, ಎಲ್ಲಾ ವರ್ಕರ್ಸ್ ಎಲ್ಲಾ ಒಂದೇ ತರ. ಒಟ್ಟಿಗೇ ಊಟ ಮಾಡ್ಬೇಕು. ನಮ್ಮ ತಟ್ಟೆ ನಾವೇ ತೊಳಿಬೇಕು ಈ ತರದೆಲ್ಲಾ ಸಿಕ್ಕಾಪಟ್ಟೆ ಇತ್ತು. ಸೋ ನನಗೆ ಒಂದು ಒಳ್ಳೆ ವಾತಾವರಣ ಸಿಕ್ತು, ಕ್ರಿಯೇಟ್ ಮಾಡಕ್ಕೆ. ಎವ್ರಿಬಡಿ ಈಸ್ ಪಾರ್ಟಾಫ್ ಇಟ್. ನಾವು ಅಟ್ಮಾಸ್ಫಿಯರ್ಗೆ ಸರಿಯಾಗಿ ಕಾಸ್ಟ್ಯೂಮ್ ಹಾಕೊಂಡು ವರ್ಕ್ ಮಾಡ್ತಿದ್ವಿ, ಆಸ್ ಟೆಕ್ನೀಶಿಯನ್ಸ್. ಪಾಸಿಂಗ್ ಶಾಟ್ ಇದ್ರೆ, “ಪಾಸಿಂಗ್ ಏಣಿ” ಅಂತಿದ್ರು, ನಾವು ಏಣಿ ತಗೊಂಡು ಹೋಗ್ತಿದ್ವಿ. ಆಕಡೆಯಿಂದ ಒಬ್ಬ ಸೈಕಲ್ ತಗೊಂಡು ಬಂದ. ಈ ಕಡೆಯಿಂದ ಒಬ್ಬ ಬಾಸ್ಕೆಟ್ ತಗೊಂಡು ಹೋದ. ಇದು ಫ್ಲೇವರ್ ಆಫ್ ಮಾಲ್ಗುಡಿ. ಎವ್ರಿಥಿಂಗ್, ಎವ್ರಿಬಡಿ ವಾಸ್ ಡೂಯಿಂಗ್ ಇಟ್.


ಪರಮ್: ನೀವು ಕೂಡ ಆಕ್ಟ್ ಮಾಡಿದ್ದೀರ ಪಾಸಿಂಗ್ ಶಾಟಲ್ಲಿ?


ಜಾನ್ ದೇವರಾಜ್: ಪಾಸಿಂಗ್ ಶಾಟ್ ಮಾತ್ರ ಅಲ್ಲ, ಪೋಲಿಸ್ ಮ್ಯಾನ್ ಕ್ಯಾರಕ್ಟರ್ ಮಾಡಿದ್ದೆ ಅದ್ರಲ್ಲಿ. ದೊಡ್ಡ ಚಡ್ಡಿ ಹಾಕೊಂಡು, ಸ್ಟಾಂಡರ್ಡ್ ಪೋಲೀಸ್ ಮ್ಯಾನಾಗಿ ಸುಮಾರು ಎಪಿಸೋಡಲ್ಲಿ ಬಂದಿದ್ದೀನಿ. ‘ಸಿದ್ದʼ ಅಲ್ಲಿ ನಾನು ಇದ್ದೀನಿ. ಜಗ್ಗನ ಹಿಡ್ಕೊಂಡು ಬರ್ತೀನಲ್ಲ. ಆ ಮೇಲೆ ರೌಡಿ ಪಾರ್ಟ್ ಮಾಡಿದ್ದೆ ಒಂದ್ರಲ್ಲಿ. ಸೋ ನಾನು ಎಲ್ಲಾ ಪಾರ್ಟೂ ಮಾಡ್ದೆ. ಸೋ ನನಗೆ ಹ್ಯಾಪನಿಂಗ್ ಸಿಚ್ಯುವೇಶನ್ ಆಗ್ಹೋಯ್ತು. ಆಗ ಈ ಅಟ್ಮಾಸ್ಫಿಯರ್ ಹೇಗೆ ಕ್ರಿಯೇಟ್ ಮಾಡೋದು? ಪೀರಿಯೆಡ್ ಬೇಕು ನಮಗೆ, ಆರ್ಕಿಟೆಕ್ಚರ್ ಸ್ಟೈಲ್ಸ್ ಬೇಕು, ಲೈಟ್ ಕಂಬಗಳಿರ್ಬಾರ್ದು. ಅದಕ್ಕೆ ಏನು ಮಾಡಿದ್ದೆ ಅಂದ್ರೆ, ದೊಡ್ಡ ತೆಂಗಿನ ಮರಗಳನ್ನ ಕಟೌಟ್ ಮಾಡಿದ್ದೆ. ಅದನ್ನ ತಂದು ಇಟ್ಬಿಟ್ರೆ, ಕ್ಯಾಮರಾ ಪ್ಯಾನ್ ಮಾಡ್ದಾಗ ಲೈಟ್ ಕಂಬ ಕಾಣ್ತಿರ್ಲಿಲ್ಲ, ತೆಂಗಿನ ಮರಗಳೇ ಕಾಣಿಸ್ತಿತ್ತು.


ಪರಮ್: ಸೋ ಎಲ್ಲಾ ಮಾಡರ್ನಿಟಿ ಮುಚ್ಹಾಕ್ತಿದ್ರಿ?


ಜಾನ್ ದೇವರಾಜ್: ಹೌದು ಇಷ್ಟೆಲ್ಲಾ ಮಾಡಿ, ಅದಕ್ಕೆ ತಕ್ಕಂತಹ ಪೀರಿಯೆಡ್, ಎಸ್ಪೆಷಲ್ಲಿ ನಮಗೆ ಜಾಗಗಳು ಬೇಕಾಗಿತ್ತು. ಸರ್ಚ್ ಮಾಡ್ತಿದ್ವಿ. ಮಲ್ನಾಡ್ ಆರ್ಕಿಟೆಕ್ಚರ್ ಈಸ್ ಗ್ರೇಟ್. ಅಲ್ಲಿಯ ಮಳೆ, ಆ ವಾತಾವರಣ, ಆ ಪರಿಸರ, ನದಿಗಳು, ನೀರು ಬ್ಯೂಟಿಫುಲ್. ಅಲ್ಲಿ ಶೂಟ್ ಮಾಡ್ದಾಗ ಮಾಲ್ಗುಡಿ ಡೇಸ್ ಇದರ ಬಗ್ಗೆನೇ ಬರೆದ್ರೂ ಅನ್ನುವಷ್ಟು ಕನ್ಕ್ಲೂಡ್ ಆಯ್ತು. ಇಷ್ಟೆಲ್ಲಾ ಆದ್ಮೇಲೆ ಆರ್.ಕೆ. ನಾರಾಯಣ್ ಅವರು ಮಾಲ್ಗುಡಿನ ಜಗತ್ತಿಗೆ ಪರಿಚಯ ಮಾಡ್ಕೊಟ್ಟವ್ರು, ನನಗೆ ಹೇಳಿದ್ರು “ಫಾರ್ ಫಿಫ್ಟಿ ಇಯರ್ಸ್ ಐ ರೋಟ್ ಮಾಲ್ಗುಡಿ, ಬಟ್ ಫಾರ್ ದ ಫಸ್ಟ್ ಟೈಮ್ ಐ ಸಾ ಇಟ್” ಅಂತ.


ಪರಮ್: ಎಪಿಸೋಡ್ ನೋಡಾದ್ಮೇಲೆ?


ಜಾನ್ ದೇವರಾಜ್: ಎಪಿಸೋಡ್ ನೋಡಿದ್ಮೇಲೆ “ಇದರ ಬಗ್ಗೆನೇ ನಾನು ಕಥೆ ಬರ್ದಿದ್ದೆ ಅಂತ. ಇದೇ ರೀತಿಯಲ್ಲಿ ನಾನು ಚಂದ್ರಶೇಖರ್ ಕಂಬಾರ್ ಪಿಚ್ಚರ್ ‘ಹರಿಕೆಯ ಕುರಿ’ಮಾಡ್ದೆ. ಆ ಹರಿಕೆಯ ಕುರಿ ಇಡೀ ಶೂಟಿಂಗನ್ನ ಒಂದೇ ಮನೆಯಲ್ಲಿ ಮಾಡಿದ್ರು. ನನಗೆ ಮೊದ್ಲು ರವಿ ಡೈರೆಕ್ಟರ್ ಸುಮ್ಮನೆ ಕಥೆ ಹೇಳಿದ್ರು. ಹೀಗೆ ಇದೆ ಅಂತ. ಚಂದ್ರಶೇಖರ್ ಕಂಬಾರ್ ಒಂದು ದಿನ ಮನೆಗೆ ಬಂದು ಏನ್ಹೇಳಿದ್ರು ಅಂದ್ರೆ, “ಈ ಮನೆ ಬಗ್ಗೆನೇ ನಾನು ಕಥೆ ಬರ್ದೆ ಅಲ್ವಾ?” ಅಂತ. ನಾನು ಅವರ ಕಥೆ ಓದಿ ಮನೆ ಮಾಡಿರೋದು,


ಸೋ ಯಾಕೆ ಈ ಕಥೆ ಹೇಳ್ದೆ ಅಂದ್ರೆ, ಒಬ್ಬ ಕಲಾ ನಿರ್ದೇಶಕನೇ ಸಿನಿಮಾ ಕ್ರಿಯೇಟ್ ಮಾಡೋದು. ಡೈರೆಕ್ಟರ್ ಎಲ್ಲಾ ಆಕ್ಟರ್ ಜೊತೆ, ಎಲ್ಲ ಟೀಮ್ ಜೊತೆ ವರ್ಕ್ ಮಾಡ್ತಾನೆ, ಅಷ್ಟು ತಲೆಗೆ ಹಚ್ಕೊಳಲ್ಲ, ಹಿ ಹ್ಯಾವ್ ಟು ಕಾನ್ಸಂಟ್ರೇಟ್ ಆನ್ ಸ್ಕ್ರಿಪ್ಟ್, ಡೈರಕ್ಷನ್, ಆಂಡ್ ಹೌ ಟು ಗೋ ಅಬೌಟ್ ಇಟ್. ಬಟ್ ದ ವಿಶ್ವಲೈಸೇಶನ್, ಫ್ಲೇವರ್ ಆರ್ಟ್ ಡೈರಕ್ಟರ್ ದು. ಅದನ್ನ ಯಾರೂ ಹೇಳಲ್ಲ. ನಾವೇನನ್ಕೊತೀವಿ? ನಮ್ಮ ಸೆಟ್ ಮುಂದೆ ಒಂದು ಕತ್ತೆ ನಿಲ್ಸಿದ್ರೂನು ಚೆನ್ನಾಗೇ ಕಾಣ್ಸುತ್ತೆ ಅಂತ. ಬಿಕಾಸ್ ಸೆಟ್ ಈಸ್ ಲೈಕ್ ದಟ್. ಅಷ್ಟು ಅಟ್ಮಾಸ್ಫಿಯರನ್ನ ಕ್ರಿಯೇಟ್ ಮಾಡಿದ್ದೀವಿ. ಆಮೇಲೆ ಇಂಜನ್ಯೂನಿಟಿ ಬೇಕು, ಈ ಒಂದು ಕಥೆನ ಹೇಳಕ್ಕೆ. ನನಗೆ ಈ ರೀತಿಯಲ್ಲಿ ಕ್ರಿಯೇಟಿವ್ ವರ್ಜಸ್ ನ ಮಾಡೂಂತ ಹೇಳಿ, ಸವಾಲು ಇಟ್ಟು ಹೋಗ್ತಾರೆ ಶಂಕರ್, ಹೇಗೆ ಮಾಡ್ಬೇಕುಂತ ಹೇಳ್ತಿರ್ಲಿಲ್ಲ.ಮುಂದುವರೆಯುವುದು…

29 views