ಮಾಲ್ಗುಡಿ ಒಟ್ಟು ಎಪಿಸೋಡ್ಸ್‌ ಮತ್ತು ಅದರ ಖರ್ಚು ಎಷ್ಟು?

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 114

(ಮಾಲ್ಗುಡಿ ಡೇಸ್‌ ಆಡಿಟರ್‌ ವೆಂಕಟೇಶ್ ನೆನಪುಗಳು)ಮಾಲ್ಗುಡಿ ಡೇಸ್ ಬಡ್ಜೆಟ್ ಅಂತ ಹೇಳಿದ್ರಿ, 35 ಎಮ್.ಎಮ್ ಅಲ್ಲಿ ಶೂಟ್ ಮಾಡೊದು ಅಂದ್ರೆ, ಮತ್ತೆ ಡೈಲಿ 60-70 ಜನರನ್ನ ಸಾಕೊದು ಅಂದ್ರೆ ಇಟ್ ಈಸ್ ನಾಟ್ ಈಸಿ, ಟ್ರಾನ್ಸಪೊರ್ಟೇಶನ್ ಬೇಕು, ಊಟ, ತಿಂಡಿ ಬೇಕು, ಅವ್ರೆಲ್ಲಾ ಸಸ್ಟೇನ್ ಮಾಡ್ಬೇಕು, ಪ್ಲಸ್ ಪೇಮೆಂಟ್ ಬೇಕು, ಮತ್ತೆ ಆರ್ಟಿಸ್ಟ್ ಟೆಕ್ನೀಶಿಯನ್ಸ್. ಒಂದು ಎಪಿಸೋಡಿಗೆ ದೇ ಯೂಸ್ ಟು ಸ್ಪೆಂಡ್ ಫೈವ್ ಡು ಸಿಕ್ಸ್ ಲಾಕ್ಸ್. ದಿನಕ್ಕೊಂದು ಲಕ್ಷ ಅಂತ ಇಟ್ಕೊಳಿ. ಒಂದು ವಾರಕ್ಕೆ ಏಳು ಲಕ್ಷ ಖರ್ಚಾಗ್ತಾ ಇತ್ತು. ಆಂಡ್ 39 ಎಪಿಸೋಡ್ ಶಂಕರ್ ನಾಗ್ ಡೈರೆಕ್ಟ್ ಮಾಡಿರೋದು,


ಆಮೇಲೆ ಬಹಳ ವರ್ಷಗಳಾದ್ಮೇಲೆ ಕವಿತಾ ಲಂಕೇಶ್ ಅವ್ರು ಒಂದು ಹದಿನೈದು ಎಪಿಸೋಡ್ ಮಾಡಿದ್ರು. ಒಟ್ಟು ಐವತ್ತನಾಲಕ್ಕು ಎಪಿಸೋಡ್ಸ್ ಇರೋದು. ಇದಕ್ಕೆಲ್ಲಾ ನರಸಿಂಹನ್ ಅವ್ರು ವ್ಯವಸ್ಥೆ ಮಾಡ್ಕೊಂಡಿದ್ರು, ಮೇನ್ಲೀ ಅವ್ರಿಗೆ ಕರ್ನಾಟಕ ಬ್ಯಾಂಕಿಂದ ಸಪೋರ್ಟ್ ಸಿಕ್ತು. ಅವ್ರು ಯಾವಾಗ್ಲೂ ಕರ್ನಾಟಕ ಬ್ಯಾಂಕಲ್ಲೇ ಡೀಲ್ ಮಾಡೋದು, ಇವಾಗ್ಲೂ ಕೂಡ ಅವ್ರು ಕರ್ನಾಟಕ ಬ್ಯಾಂಕಲ್ಲೇ ಡೀಲ್ ಮಾಡೋದು. ಬಹಳ ಧೈರ್ಯ ಮಾಡಿ ದುಡ್ಡು ಹಾಕಿದ್ರು. ಯಾಕಂದ್ರೆ ಅವಾಗ ಇದ್ದಿದ್ದು ಒಂದೇ ಚಾನೆಲ್, ದೂರ್ದರ್ಷನ್, ಬೇರೆ ಯಾವ್ದೂ ಇಲ್ಲ. ಅವ್ರಿಗೆ ಏನೋ ವಿಷನ್ ಇತ್ತು, ಆರ್.ಕೆ.ನಾರಾಯಣ್ ಹೆಸ್ರು ಇದೆ, ನಮ್ಮ ಭಾರತ ದೇಶ ಮಾತ್ರ ಅಲ್ಲ ಇಡೀ ಪ್ರಪಂಚದಲ್ಲೇ ಇಟ್ ಕ್ಯಾನ್ ಬೀ ಎಕ್ಸಪೋರ್ಟ್ ಅಂತ. ಆಮೇಲೆ ಏನೇನೋ ತೊಂದರೆಗಳಾಯ್ತು, ಅದು ಬೇರೆ ವಿಷಯ.ಮುಂದುವರೆಯುವುದು...

20 views