ಮಾಲ್ಗುಡಿ ಕ್ಯಾಮೆರಾಮನ್‌ ರಾಮಚಂದ್ರ ಅವರಲ್ಲೊಂದು ಸ್ಪೆಷಾಲಿಟಿ ಇತ್ತು

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 118

(ಮಾಲ್ಗುಡಿ ಡೇಸ್‌ ಕ್ಯಾಮರಾ ಅಸಿಸ್ಟೆಂಟ್‌ ನಾಗರಾಜ ಆದವಾನಿ ಅವರ ನೆನಪುಗಳು)ಪರಮ್: ನಿಮ್ಮ ಬಾಸ್ ರಾಮಚಂದ್ರ ಅವ್ರ ಬಗ್ಗೆ ಹೇಳಿ ಸಾರ್.


ನಾಗರಾಜ್: ನನ್ನ ಬಾಸ್ ರಾಮಚಂದ್ರ ಅವ್ರು ಒಬ್ಬ ಇಲೈಟಿಕ್ ಕ್ಯಾಮರಾ ಮ್ಯಾನ್, ನನ್ನ ತಿಳಿದ ಮಟ್ಟಿಗೆ ಇಲ್ಲಿ ಯಾರೂ ಮಾಡ್ತಿಲ್ಲ. ಸೋರ್ಸ್ ಆಫ್ ಲೈಟ್ ಯೂಸ್ ಮಾಡಿ ಮಾಡೊದು ಅಂದ್ರೆ ಅವ್ರು ಒಬ್ಬರೇ. ಬೇರೆ ಎಲ್ಲರೂ ಮಾಡ್ತಾರೆ. ಬಟ್ ಅವ್ರು ಮೂಡ್ ಆಫ್ ಲೈಟ್ ಮಾಡ್ತಾರೆ. ಇವ್ರು ಸೋರ್ಸ್ ಆಫ್ ಲೈಟ್. ಮಾಲ್ಗುಡಿಗೆ ಅವ್ರ ಶ್ರಮ ತುಂಬಾ ಜಾಸ್ತಿ ಇದೆ. ಶಂಕರ್ ನಾಗ್ ಮತ್ತೆ ಅವ್ರ ಕೆಮೆಸ್ಟ್ರೀ ತುಂಬಾ ಮ್ಯಾಚ್ ಆಗಿತ್ತು. ಸೋ ಏನೇ ಮಾಡ್ಬೇಕಂದ್ರೂ ಒಬ್ಬರಿಗೊಬ್ಬರು ಡಿಸ್ಕಷನ್ ಮಾಡ್ಕೊಂಡು ಮಾಡ್ತಿದ್ರು.


ಪರಮ್: ಈ ಶಂಕರ್ ನಾಗ್ ಜೊತೆ ಕೆಲ್ಸ ಮಾಡೋದು ಕಷ್ಟ ಅಂತ ಹೇಳ್ತಾರೆ, ನಿಜನಾ?


ನಾಗರಾಜ್: ತುಂಬಾ ಈಸಿ. ನಾನು ಮಾಲ್ಗುಡಿ ಡೇಸಿಂದ ಕೆಲ್ಸ ಮಾಡಿರೋದ್ರಿಂದ ನನಿಗೆ ತುಂಬಾ ಅನುಭವ ಆಗಿದೆ. ನಾನು ಮಾಡಿದ ಕೆಲಸಗಳಲ್ಲಿ ತುಂಬಾ ಸಿನಿಮಾಗಳು ಆವರಿಸಿಕೊಂಡಿದೆ. ಅವ್ರು ಯಾರ ಮೇಲೂ ರೇಗ್ತಾ ಇರ್ಲಿಲ್ಲ, ತುಂಬಾ ಕೂಲ್ ಆಗೇ ಇರ್ತಿದ್ರು. ಆದ್ರೆ ತುಂಬಾ ಫಾಸ್ಟ್. ಸ್ಪಿರಿಟ್ ಅಂದ್ರೆ ಏನು ಬೇಕಾದ್ರೂ ಮಾಡಕ್ಕೆ ರೆಡಿ ಅವ್ರು. ರಾತ್ರಿ ಮೂರು ಗಂಟೆಯವರೆಗೆ ಶೂಟ್ ಮಾಡಿದ್ರೂ, ಬೆಳಗ್ಗೆ ಎದ್ದು , ವಾಕಿಂಗ್ ಮಾಡಿ ರೆಡಿಯಾಗ್ತಾ ಇದ್ರು. ಜೊತೆಗೆ ಹುಡುಗ್ರನ್ನ ಕೂಡ ಅವ್ರೇ ಹೋಗಿ ಎಬ್ಸಿ ರೆಡಿ ಮಾಡಿಸ್ತಾ ಇದ್ರು. ಅಕಸ್ಮಾತ್ ನಾಲ್ಕು ಗಂಟೆಗೆ ಶೂಟಿಂಗ್ ಮುಗಿತು ಅಂದ್ರೆ, ಎಲ್ಲರೂ ಸೇರಿ ಕ್ರಿಕೆಟ್ ಆಡ್ತಿದ್ರು. ಈವನ್ ಶಂಕರ್ ನಾಗ್ ಕೂಡ. ಆತರ ಎಂಜಾಯ್ ಕೂಡ ಮಾಡ್ತಾ ಇದ್ರು. ಅವ್ರು ಸ್ಟಾರ್ ಅಂತನೇ ಯಾರಿಗೂ ಗೊತ್ತಾಗ್ತನೇ ಇರ್ತಿರ್ಲಿಲ್ಲ. ಸೆಟ್ ಅಲ್ಲಿ 60-70 ಜನ ಜ್ಯೂನಿಯರ್ ಆರ್ಟಿಸ್ಟ್ ಗಳು ಇರ್ತಿದ್ರು ಸಡನ್ನಾಗಿ ಯಾವುದೋ ಶಾಟ್ ಗೆ ಜ್ಯೂನಿಯರ್ಸ್ ಪಕ್ಕದಲ್ಲಿ ಇರ್ಲಿಲ್ಲ ಅಂದ್ರೆ, ಒಂದು ಗೋಣಿ ಚೀಲ ಹಾಕೊಂಡು ಶಂಕರ್ ನಾಗ್ ಅವ್ರೇ ಹೋಗ್ತಿದ್ರು. ಅವ್ರು ಎಷ್ಟೋ ಸಲ ಹಾಗೆ ಮಾಡಿದಾರೆ. ಆಮೇಲೆ ಸೋಮು, ಸಾವಂತ್, ರಮೇಶ್ ಭಟ್ ಅವ್ರೆಲ್ಲಾ ಒಂದೇ ಸಲ ಮೂರು ನಾಲ್ಕು ಸಲ, ಬಟ್ಟೆ ಚೇಂಜ್ ಮಾಡ್ಕೊಂಡು ಅಥವಾ ಗೋಣಿ ಚೀಲ ಹಾಕೊಂಡು ಬಂದು ಬಿಡ್ತಿದ್ರು. ಈತರ ವರ್ಕೋಹಾಲಿಕ್ ಆಗಿ ಎಲ್ರೂ ಕೆಲ್ಸ ಮಾಡಿದಾರೆ.
ಮುಂದುವರೆಯುವುದು…

9 views