ಮಾಲ್ಗುಡಿ ಕಾಸ್ಟ್ಯೂಮ್‌ ತುಂಬಾ ವಿಶೇಷ ಯಾಕೆ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 51

(ಮಾಲ್ಗುಡಿ ಡೇಸ್ ಕಾಸ್ಟ್ಯೂಮ್ ಮುಖ್ಯಸ್ಥೆ, ಸುಂದರಶ್ರೀ ಅವರ ನೆನಪುಗಳು)ಪರಮ್: ಪ್ರೀ ಪ್ರೊಡಕ್ಷನ್ ವರ್ಕಿಗೆ ಬರೋಣ ಮೇಡಮ್? ಯಾಕಂದ್ರೆ ಕಾಸ್ಟ್ಯೂಮ್ ಅಂದ್ರೆ, ಶೂಟಿಂಗ್ ಮೊದಲೇ ಆಗಿರ್ಬೇಕು. ಇಡೀ ಕಾಸ್ಟ್ಯೂಮೇ ವಿಶೇಷವಾಗಿದೆ…..


ಸುಂದರಶ್ರೀ: ನಾವು ಅದನ್ನ ಪೀರಿಯೆಡ್ ಅನ್ಕೊಂಡೇ ಮಾಡಕ್ಕೆ ಶುರು ಮಾಡಿದ್ದು. 1935 ಪೀರಿಯೆಡ್ ಮಾಡ್ಬೇಕು ಅಂತ ಶಂಕರ್ ಹೊರಟಿದ್ದಿದ್ದು. ಸೋ ಈಚ್ ಆಂಡ್ ಎವ್ರಿ ಸ್ಟೋರೀಸ್ ಗಳನ್ನ ನಾನು ಓದಿ, ಅದಕ್ಕೆ ತಕ್ಕಂತೆ ಪಾತ್ರಗಳಿಗೆ ಕಾಸ್ಟ್ಯೂಮ್ ಮಾಡ್ತಿದ್ದೆ. ಯಾವುದೂ ಹೊಸದು ಇರ್ಬಾರ್ದು ಅಲ್ವಾ? ಎಲ್ಲಾ ಡಲ್ ಇರ್ಬೇಕು. ಆಗಿನ ಕಾಲದಲ್ಲಿ, ನನಗೆ ಅರು ಹೇಳಿದ್ರು “ಜಾಸ್ತಿ ಉಪಯೂಗಿಸ್ತಾ ಇದ್ದಿದ್ದೇ ಬ್ಲಾಕ್ ಆಂಡ್ ವೈಟ್” ಅಂತ. ಬೇರೆ ಕಲರ್ಸ್ ಯಾವುದೂ ಉಪಯೋಗಿಸ್ತಾ ಇರ್ಲಿಲ್ಲ. ಮತ್ತೆ ಲೇಡಿಸ್ ಬ್ಲೌಸ್ ಗಳಿಗೆ ಪಫ್ ಸ್ಲೀವ್ಸ್ ಹಾಕ್ತಿದ್ರು. ಸೊ ಆಗಿನ ಕಾಲದಲ್ಲಿ ಪಫ್ ಸ್ಲೀವ್ಸ್ ಲೇಸ್ ಇರುವ ಬ್ಲೌಸ್ ಗಳು. ಮತ್ತೇನು ಅಂದ್ರೆ, ಯಾರೂ ಸೇಮ್ ಕಾಂಬಿನೇಶನ್ ಸಾರಿ ಬ್ಲೌಸ್ ಹಾಕ್ತಿರ್ಲಿಲ್ಲ.


ಆ ಮೇಲೆ ಶರ್ಟ್ ಗಳು ಅಷ್ಟೇ ಹಾಫ್ ಓಪನ್, ಹಾಫ್ ಸ್ಲೀವ್ಸ್. ಫುಲ್ ಸ್ಲೀವ್ಸ್ ಇದ್ರೂನೂ ಫುಲ್ ಬರ್ತಿರ್ಲಿಲ್ಲ. ಆಮೇಲೆ ಶರ್ಟ್ ಗಳಿಗೆ ಯು ಕಟ್ ಇರ್ತಿತ್ತು. ಪಟಾಪಟಿ ಚಡ್ಡಿಗಳು, ಪಂಚೆಗಳು. ಅವಾಗ ಜಾಸ್ತಿ ಪಂಚೆಗಳೇ ತಾನೆ? ಎಲ್ರೂ ಉಪಯೋಗಿಸ್ತಾ ಇದ್ದಿದ್ದು. ಈವನ್ ಮಕ್ಳೂ ಕೂಡ ಪಂಚೆಗಳೇ ಹಾಕ್ತಿದ್ರು. ‘ಸ್ವಾಮಿ’ಯಲ್ಲಿ ನೋಡಿ ಕಚ್ಚೆ ಪಂಚೆ ಕೊಟ್ಟಿದ್ದೀವಿ. ರಾಜನಿಗೆ ಸಪ್ರೇಟ್ ಯಾಕಂದ್ರೆ ಅವ್ನು ಡಿ.ಎ.ಸಿ. ಮಗ. ಈತರ ಎಲ್ಲ ಯೋಚ್ನೆ ಮಾಡಿ ಮಾಡ್ತಿದ್ವಿ. ‘ರಾಜ’ನ ಅಪ್ಪ ಡಿ.ಸಿ.ಪಿ ಏನೋ ಅಗಿರ್ತಾರೆ. ಅದಕ್ಕೆ ನಾನು ಕಮೀಶ್ನರ್ ಆಫೀಸಿಗೆ ಹೋಗಿ ಹಳೆ ಪೋಟೊ ಎಲ್ಲ ತಗ್ಸಿ, ಅದನ್ನ ನೊಡ್ಕೊಂಡು ಅದಕ್ಕೆ ತಕ್ಕಂತೆ, ನಾವು ಡಿಸೈನ್ ಮಾಡಿರೋದು. ಅಂದ್ರೆ ಮೊದಲಿನಿಂದನೇ ರಿಸರ್ಚ್ ಮಾಡಿರ್ತಿರ್ಲಿಲ್ಲ. ಆ ಸ್ಟೋರಿಗೆ ತಕ್ಕಂತೆ ಮಾಡ್ತಾ ಹೋದ್ವಿ ನಾವು.ಮುಂದುವರೆಯುವುದು…

19 views