“ಮಾಲ್ಗುಡಿಗೆ ಬಳಸಿದ ಕ್ಯಾಮೆರಾ ಎಷ್ಟು ಗೊತ್ತಾ?”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 5


(ಶಂಕರ್ ನಾಗ್ ಆತ್ಮೀಯ ಗೆಳೆಯ ಜಗದೀಶ್ ಮಲ್ನಾಡ್ ಅವರ ನೆನಪುಗಳು)


ಅವಾಗ ಏನೂಂತಂದ್ರೆ ಮುಬೈಲ್ ಇರ್ಲಿಲ್ಲ. ಎಲ್ಲಾ ಲ್ಯಾಂಡ್ ಲೈನ್ ನಲ್ಲೇ ಕನ್ಫರ್ಮೇಷನ್. ಎಸ್.ಟಿ.ಡಿ. ಇಲ್ಲ. ಎಸ್.ಟಿ.ಡಿ. ಅವಾಗ ತಾನೆ ಇಂಟ್ರಡಕ್ಷನ್ ಆಗಿತ್ತು, ಅದೂ ಎಸ್.ಟಿ.ಡಿ. ಭೂತ್ ಗೆ ಹೋಗಿ ನಾವು ಕಾಯ್ಕೊಂಡು ಕೂರ್ಬೇಕಾಗಿತ್ತು. ಈ ತರ ಎಲ್ಲಾ ಇತ್ತು. ಅಂತದ್ರಲ್ಲಿ ಎಲ್ಲರನ್ನು ಮಾತನಾಡ್ಸಿ, ಎಲ್ಲರಿಗೂ ಪ್ಲಾನಿಂಗ್, ಪ್ರೊಗ್ರಾಮಿಂಗ್ ಕೊಡ್ಬೇಕಾಗಿತ್ತು. ಯಾಕಂದ್ರೆ ಬೆಂಗಳೂರಿನವರೆಗೂ ಫ್ಲೈಟ್ಸ್ ಇತ್ತು. ಅಲ್ಲಿಂದ ಬಸ್ ನಲ್ಲೇ ಟ್ರಾವಲ್ ಮಾಡ್ಬೇಕಾಗಿತ್ತು ಬಾಂಬೆ ಆರ್ಟಿಸ್ಟ್ ಗಳಿಗೆ. ಆಗುಂಬೆಗೆ ರಾತ್ರಿ ಒಂದು ಬಸ್ ಇತ್ತು. ಲೆಕ್ಷುರಿ ಬಸ್ ಇರ್ಲಿಲ್ಲ. ತೀರ್ಥಹಳ್ಳಿ ವರೆಗೂ ಬರೊದು, ಇಲ್ಲಾ ಆಗುಂಬೆಗೆ ಬರೋದು. ಬಿಗಿನಿಂಗ್ ಅಲ್ಲಿ ನಮ್ಮಲ್ಲಿ ಕೆಲವರು ಹೋಗಿ ಕರ್ಕೊಂಡು ಬರ್ತಾ ಇದ್ರು. ಆರ್ಟಿಸ್ಟ್ ಗಳು ಹೇಳ್ತಿದ್ರು “ನೀವು ಯಾಕೆ ಬರಕ್ಕೋದ್ರಿ ಅಡ್ರಸ್ ಹೇಳಿದ್ರೆ ಅಥವಾ ಬಸ್ ನಂಬರ್ ಹೇಳಿದ್ರೆ ನಾವೇ ಬರ್ತಾ ಇದ್ವಿ.” ಈ ರಂಗಭೂಮಿಯವರಿಗೆ ಶ್ರೀಮಂತಿಕೆ ಅಥವಾ ಲೆಕ್ಷುರಿ ಬೇಕು ಅಂತೇನು ಇರ್ಲಿಲ್ಲ. ಅವ್ರು ತುಂಬಾ ಸಿಂಪಲ್ ಆಗಿರ್ತಿದ್ರು. ನಾವೇ ಬರ್ತೀವಿ ಅಂತಿದ್ರು. ಕೆಲವೊಮ್ಮೆ ಗುರುತು, ಪರಿಚಯ ಇರಲ್ಲ ಭಾಷೆ ಬರಲ್ಲ ಅಂತವರಿಗಾಗಿ ಇಲ್ಲಿಂದ ಕಳ್ಸೋದಿಕ್ಕೆ ಒಬ್ಬನ್ನ ಇಟ್ಕೊಂಡಿದ್ವಿ. ಅವ್ನು ಹೋಗಿ ಅವ್ರನ್ನ ಪಿಕ್ ಅಪ್ ಮಾಡಿ ಬಸ್ಸಲ್ಲಿ ಕೂರಿಸ್ತಾ ಇದ್ದ ಬೆಂಗ್ಳೂರಲ್ಲಿ. ಹಾಗೆ ಅಲ್ಲಿ ರಿಸೀವ್ ಮಾಡ್ತಾ ಇದ್ರು.
ಕೆಲವೊಂದು ಸಲ ಮಾತ್ರ ಕೆಲವೊಬ್ರು ಕಾರಲ್ಲೇ ಬರ್ತಾ ಇದ್ರು. ಮೂರು ದಿನ ಒಂದು ಎಪಿಸೋಡ್ ಶೂಟಿಂಗ್ ಆಗೊದು, ಶೂಟಿಂಗ್ ಮುಗಿಸ್ಕೊಂಡು ಕಾರಲ್ಲೇ ಹೋಗ್ತಾ ಇದ್ರು. ಈ ತರ ಅರೇಂಜ್ ಮಾಡ್ಕೊಂಡು 39 ಎಪಿಸೋಡ್ ಶಂಕರ್ ನಾಗ್ ಆಗುಂಬೆಯಲ್ಲಿ ಶೂಟ್ ಮಾಡಿದ್ರು. ಇನ್ನು 15 ಎಪಿಸೋಡ್ ಕವಿತಾ ಲಂಕೇಶ್ ಶೂಟ್ ಮಾಡಿದ್ರು. 39 ಎಪಿಸೋಡಲ್ಲಿ ನನಗೆ ನೆನಪಿರೋ ಹಾಗೆ 20-22 ಎಪಿಸೋಡ್ ಆಗುಂಬೆಯಲ್ಲೇ ಶೂಟ್ ಮಾಡಿದ್ವಿ. ನಾವು ಮೂರು ವರ್ಷ ಶೂಟ್ ಮಾಡಿದ್ವಿ, ಅಂದ್ರೆ ಕಂಟಿನ್ಯೂಸಾಗಿ ಅಲ್ಲ. ಸೀಸನ್ ನೋಡ್ಕೊಂಡು ಮಳೆಗಾಲದಲ್ಲಿ ಹೋಗಕ್ಕಾಗಲ್ಲ ಏನೂ ಮಾಡಕ್ಕೆ ಆಗಲ್ಲ. ವಿಪರೀತ ಮಳೆ. ಆಗುಂಬೆಯನ್ನ ಕರ್ನಾಟಕದ ಚಿರಾಪುಂಜಿ ಅಂತನೇ ಕರಿತಾರೆ. ವರ್ಷಕ್ಕೊಂದು ಮೂರು, ನಾಲ್ಕು ತಿಂಗಳು ಬ್ರೇಕ್ ಮಾಡ್ಕೊಂಡು ಶಿಫ್ಟ್ ಆಗೊದು. ವಿಪರೀತ ಚಳಿ, ಮಳೆ ಅಲ್ಲಿ, ಬೇಸಿಗೆಯಲ್ಲು ಅಷ್ಟೆ ತುಂಬಾ ಶಕೆ. ನಮ್ದೇ ಮೆಸ್ ಇತ್ತು ಎಲ್ಲರೂ ಒಂಥರಾ ಫ್ಯಾಮಿಲಿ ತರ, ನಮಿಗೆ ಒಂದು ಔಟಿಂಗ್ ತರನೇ ಇತ್ತು.


ಬೆಳಗ್ಗೆಯಿಂದ ಸಾಯಂಕಾಲದ ವರಗೂ ಕೆಲ್ಸ ಆಗ್ತಾ ಇತ್ತು. ಬೆಳಗ್ಗೆ ಐದು ಗಂಟೆಗೆ ಎದ್ರೆ ರಾತ್ರಿ ಹನ್ನೊಂದು ಗಂಟೆವರೆಗೂ ಕೆಲ್ಸನೇ. ಮಧ್ಯದಲ್ಲಿ ಸಂಡೆ ಹಾಲಿಡೆ ಅಂತದ್ದೇನು ಇಲ್ಲ. ಒಂದ್ಸಲ ಹೋದ್ರೆ ಮೂರರಿಂದ ನಾಲ್ಕು ತಿಂಗಳು ಕಂಟಿನ್ಯೂಸ್ ಕೆಲ್ಸ. ಆಮೇಲೆ ರಿಟರ್ನ್ ಬರೋದು, ಮಧ್ಯದಲ್ಲಿ ಪೋಸ್ಟ್ ಪ್ರೊಡಕ್ಷನ್, ಆಮೇಲೆ ಅದು ಸಿನಿಮಾ ಮೀಡಿಯಾ. ಅಂದ್ರೆ ನೆಗೆಟಿವ್ ನಲ್ಲಿ ಶೂಟ್ ಮಾಡಿದ್ದು. ತಾಂತ್ರಿಕ ವಿಷಯ ಅಂದ್ರೆ ಹೈ ಬ್ಯಾಂಡಲ್ಲೂ ಮಾಡ್ತಾ ಇದ್ರು, ಬೀಟದಲ್ಲೂ ಮಾಡ್ತಾ ಇದ್ರು. ದೂರದರ್ಷನ್ ಗೆ ಪ್ರೊಡಕ್ಷನ್ ಅಂದ್ರೆ ಹೈಬ್ಯಾಂಡ್ ಅಂಡ್ ಬೀಟ. ಹೈಬ್ಯಾಂಡಲ್ಲೂ ಆಕ್ಸಪ್ಟ್ ಮಾಡ್ತಿದ್ರು, ದೂರದರ್ಷನ್ ಅವ್ರು. ಅವಾಗ ‘ಬುನಿಯಾದ್’ ಅಂತ ಬಿಗಿನಿಂಗಲ್ಲಿ ಬರ್ತಾ ಇತ್ತು. ಆಮೇಲೆ ಶಂಕರ್ ನಾಗ್ ಟೆಕ್ನಿಕಲ್ಲಿ ವೆರಿ ನೋನ್ ಮ್ಯಾನ್, ಸಿನಿಮಾ ಫಾರ್ಮ್ಯಾಟಲ್ಲೇ ಮಾಡೋಣ, ನೆಗೆಟಿವಲ್ಲೇ ಮಾಡೋಣ ಅಂತಂದ್ರು. ಅಷ್ಟು ಟೆಕ್ನಿಕಲಾಗಿ ಮಾತಾಡಕ್ಕೆ ನನಗೆ ಆಗಲ್ಲ, ಬಟ್ ಅಡ್ವಂಟೇಜ್ ಹೈಬ್ಯಾಂಡಲ್ಲಿ ಮಾಡಿದ್ರೆ ಅದ್ರ ಲಿಮಿಟೇಶನ್, ಮತ್ತೆ ಸಿನಿ ಕ್ಯಾಮರಾದಲ್ಲಿ ಮಾಡಿದ್ರೆ ಅದ್ರಲ್ಲಿ ಅನ್ಲಿಮಿಟಡ್ ಸ್ಕೋಪ್. ಮತ್ತೆ ಜೂಮ್ ಲೆನ್ಸ್ ಯೂಸ್ ಮಾಡೊದು. ಕ್ಲೋಸಪ್ ಶಾಟ್, ಡೆಪ್ಥ್ ಆ ತರದೆಲ್ಲಾ ಯೋಚ್ನೆ ಮಾಡ್ದಾಗ, ಸಿನಿಮಾ ಕ್ಯಾಮರಾ ಬೆಟರ್ ಅಂತ. ಅಂದ್ರೆ ಬ್ಯುಸ್ನೆಸ್ ಪಾಯಿಂಟಾಫ್ ವ್ಯೂನಲ್ಲಿ ಅಲ್ಲ, ಕ್ವಾಲಿಟಿ ಪಾಯಿಂಟಾಫ್ ವ್ಯೂಯಿಂದ. 35ಎಮ್.ಎಮ್ ಅಲ್ಲಿ ಮಾಡೋದು, ಖರ್ಚು ಜಾಸ್ತಿ ಆಗುತ್ತೆ ಅಂತ ಮೊದ್ಲೇ ಗೊತ್ತಿತ್ತು. ಶಂಕರ್ ನಾಗ್ ನರಸಿಂಹನ್ ಅವರನ್ನ ಒಪ್ಸಿದ್ರು. ಸೋ ಎರಡು ಕ್ಯಾಮರಾ ಒಂದು ‘ಆರಿ,’ ಇನ್ನೊಂದು ‘ಮಿಚಲ್’ ಇಟ್ಕೊಂಡಿದ್ವಿ. ಡಿಸಾಲ್ವ್ ಮಾಡೊದಿಕ್ಕೆ ಮಿಚಲ್ ಇಟ್ಕೊಂಡಿದ್ವಿ. ಹಾಗಾಗಿ ನಾವು 35ಎಮ್.ಎಮ್ ನಲ್ಲೇ ಶೂಟ್ ಮಾಡ್ಬೇಕಾಯ್ತು.


ಅದಕ್ಕೆ ನೆಗೆಟಿವ್ಸ್ ಪ್ರಸಾದ್ ಲ್ಯಾಬ್ ಬೆಂಗ್ಳೂರಿಂದ ಬರೋದು. ಪ್ರೊಸೆಸಿಂಗ್ ಗೆ ಅಲ್ಲೇ ಹೋಗೊದು. ಪ್ರಸಾದ್ ಲಾಡ್ಜ್ ಇಂದ ಹೋಗೊದು ಬರೋದು ಫೆಸಿಲಿಟೀಸ್ ಎಲ್ಲಾ ಪ್ರೊಡ್ಯೂಸರ್ ಮಗ ಭದ್ರಿನಾಥ್ ಪ್ರವೈಡ್ ಮಾಡ್ತಿದ್ರು. ವಾರಕ್ಕೊದು ಸಲ ಬಂದು ಹೋಗ್ತಾ ಇದ್ರು.ನಮಿಗೆ ದುಡ್ಡು ಬೇಕಾಗ್ತಿತ್ತು. ನಮಿಗೆ ಕಾರು ಮತ್ತೆ ವೆಹಿಕಲ್ ಗಳಿಗೆ ಡೀಸಲ್, ಪೆಟ್ರೋಲ್ ಎಲ್ಲಾ ತೀರ್ಥಳ್ಳಿಯಿಂದ ತಂದು ಸ್ಟಾಕ್ ಮಾಡಿಟ್ಕೊತಾ ಇದ್ವಿ. ಒಂಥರಾ ಆರ್ಗನೈಸ್ಡ್ ಬಿಗ್ ಕ್ಯಾಂಪ್. ಅಲ್ಲಿ ಒಂದು ನದಿ ಹರಿತಾ ಇತ್ತು. ಅದರ ದಂಡೆಯಲ್ಲೇ ಶೂಟ್ ಮಾಡ್ತಾ ಇದ್ವಿ. ಒಂದು ಹಳೇ ಛತ್ರ ಇತ್ತು ಅದನ್ನ ಬುಕ್ ಮಾಡ್ಕೊಂಡು ಮೆಸ್ ಮಾಡ್ಕೊಂಡ್ವಿ. ಬೆಂಗಳೂರಿಂದ ಅಡುಗೆಯವರನ್ನು ಕರ್ಕೊಂಡು ಹೋಗಿದ್ವಿ. ಏನಿಲ್ಲಾ ಅಂದ್ರೂ ನೂರರಿಂದ ನೂರಿಪ್ಪತ್ತು ಜನರಿಗೆ ಊಟ.


ಅದರಲ್ಲಿ ಇಪ್ಪತ್ತರಿಂದ ಮೂವತ್ತು ಜನ ಕಲಾಕ್ಷೇತ್ರದಲ್ಲಿ ಎಮ್.ಎಸ್.ಉಮೇಶ್ ರವರ ತಮ್ಮ ರಮೇಶ್ ಅವರನ್ನ ಕಾಂಟ್ಯಾಕ್ಟ್ ಮಾಡಿ ಸ್ಥಳೀಯ ಕಲಾವಿದರು ಯಾರಿದ್ದಾರೆ, ಅವರೆಲ್ಲಾ ಬೇಕೂಂತ ಹೇಳಿದ್ವಿ. ಹದಿನೈದರಿಂದ ಇಪ್ಪತ್ತು ಜನ ಯಾವಾಗ್ಲೂ ನಮ್ಮ ಜೊತೆಯಲ್ಲೇ ಇರ್ಬೇಕು. ಅವರನ್ನು ಜೂನಿಯರ್ಸ್ ಅಂತ ಕರಿಯಲ್ಲ ಅವ್ರು ಏನಿದ್ರೂ ರಂಗಭೂಮಿ ಕಲಾವಿದರು, ಸಹ ನಟರು. ಅಂತಹವರು ಬೇಕೂಂತ ಹೇಳಿದ್ವಿ. ಅವರ ಕೆಲ್ಸ ಏನು ಅಂದ್ರೆ ಕರೆದ ತಕ್ಷಣ ಬರ್ಬೇಕು. ಅವ್ರಿಗೆ ಇರೋದಕ್ಕೆ ವ್ಯವಸ್ಥೆ ಮಾಡಿದ್ವಿ. ಬೆಳಗ್ಗೆ ಎದ್ದು ರೆಡಿಯಾಗಿ ಅವ್ರಿಗೆ ಕೊಟ್ಟಿರುವ ಕಾಸ್ಟ್ಯೂಮ್ ಹಾಕಿಕೊಂಡು ಶೂಟಿಂಗ್ ಜಾಗದಲ್ಲಿ ಬಂದು ನಿತ್ಕೊಳೋದು. ಅವ್ರ ಕೆಲ್ಸ ಇದ್ಯೋ ಇಲ್ವೋ ಅವ್ರು ಬರ್ಲೇ ಬೇಕು. ನೀವು ನೋಡಿರ್ಬೋದು, ದ ಬ್ಯೂಟಿ ಆಫ್ ಈಚ್ ಆಂಡ್ ಎವ್ರಿ ಟೇಕ್ ಆಫ್ ಮಾಲ್ಗುಡಿ ಡೇಸ್. ಹಿಂದ್ಗಡೆ ಏನಾದ್ರೊಂದು ಆಕ್ಟಿವಿಟೀಸ್ ನಡೀತಾನೇ ಇರೋದು. ಅವ್ನು ಬರ್ತಾನೆ, ಇವ್ನು ಬರ್ತಾನೆ, ಹುಲ್ಲಿನ ಗಾಡಿ ಬರುತ್ತೆ, ನೇಗಿಲು ಹಿಡ್ಕೊಂಡು ಹೋಗ್ತಿರ್ತಾರೆ. ಬ್ಯಾಕ್ ಗ್ರೌಂಡ್ ಆಕ್ಟಿವಟೀಸೆಲ್ಲಾ ರಮೇಶ್ ಭಟ್ ಮತ್ತು ಕಾಶಿ ಹ್ಯಾಂಡಲ್ ಮಾಡ್ತಿದ್ರು. ಯಾಕಂದ್ರೆ ಅದ್ರಲ್ಲಿ ಇಡೀ ಫ್ರೇಮ್ ಚೆನ್ನಾಗಿ ಕಾಣಿಸ್ಬೇಕು ಅಂತಂದ್ರೆ ಎಲ್ಲಾ ಸೇರ್ಕೊಳುತ್ತೆ.


ಈ ತರ ಸಣ್ಣ ಸಣ್ಣ ವಿಷಯ ಗಳೆಲ್ಲಾ ಸೇರ್ಕೊಂಡೇ ಒಂದು ಅದ್ಭುತ ಅಂತ ಅನ್ಸೋದು. ಕನ್ನಡದ ಕೆಲವು ಪಾಪ್ಯುಲರ್ ಆಕ್ಟರ್ ಗಳು ಕೂಡ ಮಾಡಿದ್ರು. ಅನಂತ್ ನಾಗ್ ಅವಾಗ್ಲೇ ಕನ್ನಡ ಹಿಂದಿ ಎರಡರಲ್ಲೂ ಫೇಮಸ್ ಆಗಿದ್ರು. ಸಿ.ಅರ್. ಸಿಂಹ, ಲೋಕನಾಥ್, ಬಿ ಜಯಶ್ರೀ, ನಾಗೇಶ್ ಕಶ್ಯಪ್, ಟಿ.ವಿ.ಗುರುಮೂರ್ತಿ ಎಲ್ಲಾ ರಂಗಭೂಮಿ ಕಲಾವಿದರು, ಮಾಡಿದ್ರು ವಿಷ್ಣುವರ್ಧನ್ ಅವ್ರು ಮಾಲ್ಗುಡಿ ಡೇಸ್ ಅಂದಾಗ ಖಷಿಯಿಂದ ಒಪ್ಕೊಂಡ್ರು. ಕೆಲವೊಬ್ರು ರಿಪಿಟ್ ಆಗ್ತಿದ್ರು. ಈಗ ಕಾಶಿ ಒಂದು ಎಂಟು-ಹತ್ತು ಎಪಿಸೋಡಲ್ಲಿ ಬೇರೆ ಬೇರೆ ಪಾತ್ರ ಮಾಡಿದ್ದಾನೆ. ‘ಸ್ವಾಮಿ ಅಂಡ್ ಫ್ರೆಂಡ್ಸ’ಲ್ಲಿ ಪೊಲ್ಯೂಟೀಶಿಯನ್ ಗೆ ಅಸಿಸ್ಟೆಂಟಾಗಿ ಕೆಲ್ಸ ಮಾಡ್ದ, ಸಿ.ಆರ್.ಸಿಂಹನಿಗೆ ಚೇಲಗಳ ತರ ಆಕ್ಟ್ ಮಾಡ್ದ. ’ಟ್ರಯಲ್ ಆಫ್ ದ ಗ್ರೀನ್ ಬ್ಲೇಸರ್ ಅಲ್ಲಿ ಅವ್ನೇ ಹೀರೋ. ಆ ತರ ಎಲ್ಲಾ ಮೇಕಪ್ ಶಿಫ್ಟ್. ರಮೇಶ್ ಭಟ್ ಒಂದು ಕ್ಯಾರೆಕ್ಟರ್ ಮಾಡಿದ್ರು. ಬೇರೆ ಬೇರೆ ಕ್ಯಾರೆಕ್ಟರಲ್ಲಿ ಇನ್ವಾಲ್ವ್ ಆಗ್ತಿದ್ರು, ಎಲ್ಲಾ ನಮ್ಮಲ್ಲೇ ಶಫಲ್ ಆಗ್ತಾ ಇದ್ವಿ. ಜಾಣತನದಿಂದ ಬಳಸ್ಕೊತಾ ಇದ್ರು ಕಲಾವಿದರನ್ನ. ಜನರಿಗೆ ಅನಿಸ್ಬಾರ್ದು, ಎಲ್ಲಾ ಸೀನಲ್ಲೂ ಇವನೇ ಇದ್ದಾನಲ್ಲಾಂತ.


ಆ ಮೇಲೆ ಭದ್ರಾವತಿಯಿಂದ ಶಿವರಾಮ್ ಅವ್ರು ಆರ್ಟಿಸ್ಟ್ ಗಳನ್ನ ಕರ್ಕೊಂಡು ಬರ್ತಾ ಇದ್ರು. ಎಲ್ಲದಿಕ್ಕೂ ಬೆಂಗ್ಳೂರನ್ನ ನಂಬೊದಿಕ್ಕೆ ಆಗಲ್ಲ. ಶಿವರಾಮ್ ನನ್ನ ಶಿವಮೊಗ್ಗದ ಫ್ರೆಂಡ್ಸ್ ಕಡೆಯಿಂದ. ಅಲ್ಲಿ ‘ಬೇಗಾರ’ಅಂತ ಒಂದೂರಿದೆ ಇಲ್ಲಿ ‘ರಮೇಶ್’ಅಂತ. ಸೀರಿಯಲ್, ನಾಟಕ ಲೇಖಕರು ಅವ್ರಿಗೂ ಇಂಟ್ರಸ್ಟ್ ಇತ್ತು. ಅವ್ರಿಗೂ ರಿಕ್ವೆಸ್ಟ್ ಮಾಡ್ಕೊಂಡ್ವಿ ಅವ್ರು ಸುಮಾರು ಆರ್ಟಿಸ್ಟ್ ಗಳನ್ನ ಕರ್ಕೊಂಡು ಬಂದ್ರು. ಹಾಗಾಗಿ ನಮಿಗೆ ಜನಗಳ ಕೊರತೆ ಆಗ್ಲೇ ಇಲ್ಲ. ಯಾರಿಗಾದ್ರೂ ಹೇಳಿದ್ರೆ ಕೂಡಲೇ ಅರೇಂಜ್ ಮಾಡ್ತಿದ್ರು. ಅವ್ರಿಗೆ ಹೋಗುವ, ಬರುವ, ಊಟ ತಿಂಡಿ ಖರ್ಚು ಅದೆಲ್ಲಾ ಮಾಡ್ಲೇ ಬೇಕು. ಕತೆಗೆ ಪೂರಕವಾಗಿತ್ತು ಬೇಕೇ ಬೇಕು ಅನ್ನೋದನ್ನ ಬಳಸ್ಕೊತಾ ಇದ್ವಿ, ಸುಮ್ಮನೆ ಕರೆಸಿ ಕೂರಿಸಿಕೊಳ್ಳೋದು, ವೇಸ್ಟ್ ಮಾಡೋದು ಆತರ ಏನೂ ಮಾಡ್ತಿರ್ಲಿಲ್ಲ. ಹಾಗೆ ಬೇರೆ ಬೇರೆ ಕತೆಗಳು ಇಪ್ಪತ್ತಾರಾಯ್ತು. ಸ್ವಾಮಿ ಆಂಡ್ ಫ್ರೆಂಡ್ಸ್ ಎಂಟು ಎಪಿಸೋಡ್ ಆಯ್ತು. ಮಿಠಾಯಿವಾಲ ಎರಡು ಎಪಿಸೋಡ್ ಆಯ್ತು, ಒಟ್ಟು ಮೂವತ್ತಾರು ಎಪಿಸೋಡ್ ಶೂಟ್ ಮಾಡಿದ್ವಿ.


ಪರಮ್: ಆಗುಂಬೆ ಎಕ್ಸಪೀರಿಯನ್ಸ್ ಹೇಳಿ


ಜಗದೀಶ್: ಆಗುಂಬೆಯಲ್ಲಿ ಒಬ್ಬರು ವಿಶೇಷವಾದ ವ್ಯಕ್ತಿ ಇದ್ದರು. ‘ಪಡಿಯಾರ್’ಅಂತ. ಅವರು ಆಗುಂಬೆಗೆ ಹೋಗೋರಿಗೆಲ್ಲಾ ಗೊತ್ತಿರುತ್ತೆ. ಅವ್ರು ಘಾಠ್ ಸೆಕ್ಷನ್, ಸನ್ಸೆಟ್ ಪಾಯಿಂಟಲ್ಲಿ ಬಜ್ಜಿ, ಪಕೋಡ ಎಲ್ಲಾ ಮಾರ್ತಿದ್ರು. ಲೋಕಲಲ್ಲಿ ವೆರಿ ವೆಲ್ ನೋನ್ಡ್ ಪರ್ಸನ್ ಅವರು. ನಮಗೆ ಅವ್ರೇ ಕೊಆರ್ಡಿನೇಟ್ ಮಾಡ್ತಿದ್ರು. ಸುತ್ತ ಮುತ್ತಲಿನ ಜಾಗಕ್ಕೆ ಕರ್ಕೊಂಡು ಹೋಗಿ ಜಾಗ ತೋರ್ಸೋದು. ಶೂಟಿಂಗ್ ಗೆ ಅಥವಾ ಉಳ್ಕೊಳೋದಕ್ಕೆ ಯಾರದ್ದಾದ್ರೂ ಮನೆ ಬೇಕಂದ್ರೆ, ನಮ್ಮ ಜೊತೆ ಬಂದು ಅವ್ರ ಜೊತೆ ಮಾತಾಡೋದು ಎಲ್ಲಾ ಮಾಡ್ತಿದ್ರು. ಅವಾಗ ಶೂಟಿಂಗ್ ತುಂಬಾ ಮನೆಗಳಲ್ಲಿ ಮಾಡ್ತಿದ್ವಿ. ಆಮೇಲೆ ಹೊರಗಡೆ ಶೂಟ್ ಮಾಡೂದಕ್ಕೆ ಪರ್ಮಿಷನ್ ಎಲ್ಲಾ ನಾವು ಗವರ್ನಮೆಂಟಿಂದನೇ ತಗೊಂಡಿದ್ವಿ. ಅದೇನು ತೊಂದರೆ ಇರ್ಲಿಲ್ಲ.


ಕೆಲವೊಂದಕ್ಕೆ ಮಾತ್ರ ಸ್ವಲ್ಪ ಟ್ರಾವಲ್ ಮಾಡ್ತಾ ಇದ್ವಿ. ರೈಲ್ವೇಸ್ಟೇಷನ್ ಬೇಕಾದಾಗ ‘ಅರಸಾಳು’ ಅಂತ, ಆಗುಂಬೆಯಿಂದ ಸುಮಾರು 50 ರಿಂದ 60 ಕಿಲೋ ಮೀಟರ್ಹೋಗ್ಬೇಕಾಗಿತ್ತು. ರೈಲ್ವೇ ಪರ್ಮೀಷನ್ ಚೆನ್ನೈನಲ್ಲಿ ತಗೊಂಡು ಶೂಟ್ ಮಾಡಬೇಕಾಗಿತ್ತು. ಲಕ್ಷಗಟ್ಟಲೆ ಡೆಪಾಸಿಟ್ ಕೊಡ್ಬೇಕು, ಇಷ್ಟು ದಿನದಲ್ಲೇ ಆಗ್ಬೇಕು ಅಂತ ಟೈಮ್ ಕನ್ಸಂಟ್ರೇನ್ ಇದ್ದಿದ್ರಿಂದ, ಎಲ್ಲಾ ಪ್ಲಾನ್ ಮಾಡ್ಕೊಂಡು ಶೂಟ್ ಮಾಡಿರೋದು.


ಆಗುಂಬೆಯ ಬ್ಯೂಟಿ ಏನೂಂತಂದ್ರೆ, ನಾವು ಶೂಟಿಂಗ್ ಮಾಡ್ತಾ ಮಾಡ್ತಾ ಎಲ್ಲರೂ ನಮಿಗೆ ಸ್ನೇಹಿತರಾಗ್ಬಿಟ್ಟಿದ್ರು. ಇಡೀ ಊರೇ ನಮಿಗೆ ಫ್ರೆಂಡ್ಸ್ ತರ, ಎಲ್ಲೋದ್ರೂನು “ಬನ್ನಿ ಬನ್ನಿಂತ” ಕರೀತಿದ್ರು. ನಮಗೆ ಯಾರಿಗೂ ಯಾರ ಮನೆಗೂ ಹೋಗುವ ಪುರುಸೊತ್ತಿರ್ಲಿಲ್ಲ. ಆದ್ರುನೂ ವಿಶ್ವಾಸದಿಂದ “ಬನ್ನಿ, ಕಾಫಿ ಕುಡೀರಿ” ಅಂತೆಲ್ಲಾ ಕರೀತಿದ್ರು. ನಮಗೆ ಶೂಟಿಂಗ್ ಲೊಕೇಶನ್ ಗೆ ಹೋಗ್ಬೇಕು, ಆದ್ರೆ ಮುಲಾಜು ಆದ್ರೂ ಖುಷಿಯಿಂದನೇ ಎಲ್ರನ್ನೂ ಬ್ಯಾಲೆನ್ಸ್ ಮಾಡ್ತಾ ಇದ್ವಿ.


ಆಮೇಲೆ ವಿಷೇಷ ಅಂದ್ರೆ, ಒಂದು ಸೀಸನಲ್ಲಿ ಶೂಟಿಂಗ್ ಆಗೊಯ್ತು. ಯಾವುದೋ ಬಿಲ್ಡಿಂಗ್ ಗಳನ್ನೆಲ್ಲಾ ನೋಟೀಸ್ ಮಾಡ್ಕೊಂಡಿದ್ವಿ, ಅಲ್ಲೆಲ್ಲ ಬೊರ್ಡ್ ಗಳು ಇತ್ತು. ಶಾರದಾ ಭವನ ಆಗುಂಬೆ ಅಂತ ಅವ್ರ ಪರ್ಮಿಶನ್ ತಗೊಂಡು ಅದನ್ನ ತೆಗೆದು ‘ಶಾರದಾ ಭವನ ಮಾಲ್ಗುಡಿ’ಅಂತ, ‘ಆಗುಂಬೆ ಬಸ್ಟಾಂಡ್’ಇದ್ರೆ ‘ಮಾಲ್ಗುಡಿ ಬಸ್ಟಾಂಡ್’ಅಂತೆಲ್ಲಾ ಬದಲಾಯಿಸಿಕೊಂಡಿದ್ವಿ.


ಸೀರಿಯಲ್ ಬರೊಕ್ಕೆ ಶುರುವಾದ್ಮೇಲೆ ಕೆಲವು ಜನಗಳು ಮಾಲ್ಗುಡಿ ಬೋರ್ಡ್ ಗಳನ್ನ ಹಾಗೇ ಇರ್ಲಿ ಅಂತ ಇಟ್ಲೊಂಡಿದ್ರು. ಬಸ್ಸಲ್ಲಿ ಓಡಾಡೋ ಕೆಲವರು “ಮಾಲ್ಗುಡಿ ಅಂದ್ರೆ ಇದೇನಾ”? ಅಂತ ಕೇಳ್ತಿದ್ರು. ನಾವು ವರ್ಷದಲ್ಲಿ ಮೂರು ಅಥವಾ ನಾಲ್ಕು ತಿಂಗಳು ಶೂಟ್ ಮಾಡ್ತಿದ್ವಿ, ಆದ್ರೆ ಮೂರು ವರ್ಷ ಕಂಪ್ಲೀಟ್ ಆ ಬೋರ್ಡ್ ಅಲ್ಲಿರ್ತಿತ್ತು. ಏನಾದ್ರು ಮಾಸಿದ್ರೆ ಚೇಂಜ್ ಮಾಡಿ ಬರಿತಾ ಇದ್ವಿ. ಮೂರು ವರ್ಷ ಬೋರ್ಡ್ ತಗೀಲೇ ಇಲ್ಲ ನಾವು. ಜನಗಳಿಗೆಲ್ಲಾ ಕನ್ಫ್ಯೂಷನ್, ಮಾಲ್ಗುಡಿ ಅಂದ್ರೆ ಇದೇನಾಂತ, ಕೆಲವರು ಫೋಟೋ ತಗೊಂಡು ಹೋಗ್ತಿದ್ರು.


ಅಲ್ಲಿ ಒಂದು ಗಣಪತಿ ಗುಡಿ ಇತ್ತು. ಅಲ್ಲಿ ಸುಮಾರು ಸೀನ್ ಗಳೆಲ್ಲಾ ಶೂಟ್ ಮಾಡಿದ್ವಿ. ಅಲ್ಲೇ ಒಂದು ಸ್ಕೂಲ್ ಇತ್ತು, ಒಂದು ಫೌಂಟೆನ್ ಕ್ರಿಯೇಟ್ ಮಾಡಿದ್ವಿ. ಮತ್ತೆ ಯಾರೋ ಒಬ್ಬ ಇಂಗ್ಲೀಷ್ ವ್ಯಕ್ತಿದು ಒಂದು ದೊಡ್ಡ ಸ್ಟಾಚ್ಯು ಮಾಡಿದ್ವಿ.


ಪರಮ್: ಆಕ್ಚುಲಿ ಮಾಲ್ಗುಡಿ ಡೇಸ್ ಗೆ ಅದೊಂದು ದೊಡ್ಡ ಅಟ್ರಾಕ್ಷನ್…


ಜಗದೀಶ್: ಹೌದು ಸಿಂಬಾಲಿಕ್. ಅಲ್ಲಿ ಒಂದು ಸರ್ಕಲ್ ಮಾಡಿದ್ವಿ, ಅಲ್ಲೇ ಅನಂತ್ ನಾಗ್ ಮತ್ತೆ ಮೇಯ್ನ್ ಕ್ಯಾರೆಕ್ಟರ್ ಗಳದ್ದೆಲ್ಲಾ ಮೀಟಿಂಗ್, ಡಿಸ್ಕಷನ್ ಆಗೊದು. ಅದರ ಹಿಂದೆನೇ ಒಂದು ಪಂಚಾಯ್ತಿ ಕಟ್ಟೆ ಇತ್ತು, ಒಂದು ಫೀಲ್ಡ್ ಇತ್ತು. ಅಲ್ಲೇ ಕ್ರಿಕೆಟ್ ಮ್ಯಾಚ್ ಆಡೊದು. ಮತ್ತೆ ಸರ್ಕಲಲ್ಲಿ ಜನಗಳೆಲ್ಲಾ ಕೂತ್ಕೊಂಡು ಮಾತಾಡೊದಿಕ್ಕೆ ಒಂದು ಜಾಗ. ಹೀಗೆ ಅದೆಲ್ಲಾ ಹೇಗಿತ್ತು ಅಂದ್ರೆ ಇಡೀ ಮಾಲ್ಗುಡಿನೇ ಹಾಗಿತ್ತೇನೋ ಅನ್ಸೋದು. ಅದು ಆಗುಂಬೆ ಅನ್ನೊದು ಮರ್ತೇ ಹೋಗಿತ್ತು. ನಾವೆಲ್ಲಾ ಮಾಲ್ಗುಡಿಯಲ್ಲಿ ಎಷ್ಟು ಇನ್ವಾಲ್ವ್ ಆಗಿದ್ವಿ ಅಂದ್ರೆ, ನಾವು ಮಾಲ್ಗುಡಿಯವರೇ ಅನ್ನೋ ಫೀಲಿಂಗ್ ನಮಿಗೆ ಬಂದಿತ್ತು.


ಪರಮ್: ಇಡೀ ‘ಆಗುಂಬೆʼ ನ ‘ಮಾಲ್ಗುಡಿ’ ಮಾಡಿದ್ರಿ?


ಜಗದೀಶ್: ಹೌದು, ಆತರದೊಂದು ಕ್ರಿಯೇಟ್ ಆಗ್ಬೇಕಾಗಿತ್ತು. ಎಲ್ಲರಿಗೂ ಅನಿಸ್ತಾ ಇತ್ತು, ಮಾಲ್ಗುಡಿನೇ ‘ಆಗುಂಬೆ’ ಇರ್ಬೇಕೂಂತ. ನಮಿಗೂ ಅನಿಸ್ತಾ ಇತ್ತು. ಖುಷಿಯಾಗ್ತಾ ಇತ್ತು. ಒಂದೊಂದು ಎಪಿಸೋಡ್ ಮೂರು ಅಥವಾ ನಾಲ್ಕು ದಿನ ಶೂಟ್ ಮಾಡ್ತಿದ್ವಿ. ಎರಡು ಲಾಂಗ್ವೇಜ್ ಅಲ್ವಾ?


ಪರಮ್: ಸೊ ಒಂದು ಎಪಿಸೋಡ್ ಮೂರ್ನಾಲ್ಕು ದಿನ ಶೂಟ್ ಮಾಡ್ತಿದ್ರಿ. ಹೇಗೆ ಶೂಟ್ ಆಗ್ತಿತ್ತು?


ಜಗದೀಶ್: ಒಂದ್ಸಲ ಹಿಂದಿಯಲ್ಲಿ ಹೇಳೋದು, ಒಂದ್ಸಲ ಇಂಗ್ಕೀಷಲ್ಲಿ ಹೇಳೋದು ಆತರ. ನಂತರ ಹಿಂದಿ ಇಂಗ್ಲೀಷ್ ಎರಡೂ ಬೇಡಾಂತ ಆಯ್ತು. ಕಾರಣ ಎಕನಾಮಿ ಇರಬಹುದು ಅಥವಾ ನಮ್ಮ ಇಂಡಿಯನ್ ಸ್ಲ್ಯಾಂಗ್ ಆಫ್ ಇಂಗ್ಲೀಷ್ ಹೊರಗಡೆಯವರಿಗೆ ಅರ್ಥ ಆಗ್ದೇ ಇರಬಹುದು. ಹಾಗೆ ಇಪ್ಪತ್ತಾರು ಎಪಿಸೋಡ್ ಎರಡು ಲಾಂಗ್ವೇಜಲ್ಲಿ ಶೂಟ್ ಮಾಡಿದ್ವಿ. ಆಮೇಲೆ ಇಂಗ್ಲೀಷ್ ಕ್ಯಾನ್ಸಲ್ ಆಯ್ತು. ಹಿಂದಿಗೆ ಮಾತ್ರ ಸೀಮಿತವಾಗಿ ಇಟ್ಕೊಂಡು, ಇಂಗ್ಲೀಷ್ ಸಬ್ ಟೈಟಲ್ ಮಾತ್ರ ಮಾಡ್ತಿದ್ವಿ.


ಇನ್ನು ಎಪಿಸೋಡ್ ಗೆ ಸಂಬಂಧ ಪಟ್ಟಂಗೆ ಆರ್ಟಿಸ್ಟ್ ಗಳು ಯಾರೆಲ್ಲಾ ಬರ್ತಾರೆ, ಅವ್ರಿಗೆ ಏನಾದ್ರೂ ಬೇಕಾದ್ರೆ, ಅಥವಾ ದಿನಸಿ ಸಾಮಾನು, ಎಸ್.ಟಿ.ಡಿ. ಏನೇ ಇದ್ರೂ ತೀರ್ಥಹಳ್ಳಿಗೇ ಹೋಗ್ಬೇಕಾಗಿತ್ತು ನಾನು. ದಿನಕ್ಕೆ ಎರಡು ಸಲನಾದ್ರೂ ತೀರ್ಥಳ್ಳಿಗೆ ಹೋಗಿ ಬರ್ತಾ ಇದ್ದೆ. ಆಗುಂಬೆಯಲ್ಲಿ ಏನೂ ಇಲ್ಲ, ಅದು ಅಂಡರ್ ಡೆವಲಪ್ಡ್. ಬೀಡಿ, ಸಿಗರೇಟ್, ಬಿಸ್ಕಟ್ ಈ ತರ ಸಣ್ಣ ಪುಟ್ಟ ವಸ್ತುಗಳು ಬಿಟ್ರೆ ಬೇರೇನು ಸಿಗ್ತಾ ಇರ್ಲಿಲ್ಲ. ಹಾಗಾಗಿ ತೀರ್ಥಳ್ಳಿಯಿಂದ ತಂದು ಆಗುಂಬೆಯಲ್ಲಿ ಸ್ಟೋರ್ ಮಾಡ್ಕೊಂಡು, ನಮ್ದೇ ಕಿಚನ್ ನಲ್ಲಿಮೇಂಟೈನ್ ಮಾಡ್ತಿದ್ವಿ. ಅದೊಂಥರಾ ವರ್ಷಾನುಗಟ್ಟಲೆ ನಡೆಯೋ ಪ್ರಾಜೆಕ್ಟ್ ಆಗಿದ್ರಿಂದ, ಒಂದು ಮಿಲ್ಟ್ರೀ ಕ್ಯಾಂಪ್ ತರ ಅಂತ ಹೇಳ್ಬೋದು. ನಾವು ಬೇರೆ ಊರಲ್ಲಿ ಶೂಟಿಂಗ್ ಮಾಡ್ತಿದ್ದೀವಿ ಅನ್ನೋದಕ್ಕಿಂತ ನಮ್ದೇ ಆದ ಬೇರೆ ಪ್ರದೇಶದಲ್ಲಿ ಶೂಟಿಂಗ್ ಮಾಡಿದ ಹಾಗೆ.

ಇನ್ನು ಎಪಿಸೋಡ್ ವೈಸ್, ಬಾಂಬೆಯಿಂದ ಆಕ್ಟರ್ ಗಳು ಬೇಕೂಂತಂದ್ರೆ ಕಮ್ಯೂನಿಕೇಟ್ ಮಾಡ್ತಿದ್ವಿ. ಅವ್ರು ಬೆಂಗಳೂರಿನ ವರೆಗೂ ಫ್ಲೈಟಲ್ಲಿ ಬರ್ತಾ ಇದ್ರು. ಅಲ್ಲಿಂದ ಬಸ್ ಅಥವಾ ಕಾರು. ಕೆಲವರು ಬೆಂಗಳೂರಿಂದ ಕಾರಲ್ಲೇ ಬರ್ತಾ ಇದ್ರು. ಶೂಟಿಂಗ್ ಮುಗಿಸ್ಕೊಂಡು ಕಾರಲ್ಲೇ ಹೋಗ್ತಿದ್ರು. ಒಂದ್ಸಲ ‘ವಿಜಯಕಶ್ಯಪ್’ಅನ್ನೋರ ಜೊತೆ ಮಿಸ್ ಕಮ್ಯೂನಿಕೇಶನ್ ಆಗ್ಬಿಟ್ಟಿತ್ತು. ಅವ್ರು ಬರ್ಬೇಕಾಗಿತ್ತು, ಬರ್ಲೇ ಇಲ್ಲ. ರಾತ್ರಿ ಆಗೋಯ್ತು ಬೆಳಗ್ಗೆ ಶೂಟಿಂಗ್. ಆರ್ಟಿಸ್ಟ್ ಇನ್ನೂ ಬರ್ಲಿಲ್ಲ. ಟೆನ್ಶನ್ ಶುರುವಾಗೋಯ್ತು. ಫೋನ್ ಮಾಡಿದ್ರೆ “ಹೊರಟಿದ್ದಾರೆ”ಅಂತಾರೆ. ಕೊನೆಗೆ ನೋಡಿದ್ರೆ ಫಸ್ಟ್ ಬಸ್ಸಲ್ಲೇ ಬಂದು ಇಳ್ದಿದ್ದಾರೆ. ಹೌದು ಕೇಳ್ಕೊಂಡು ಮಾಡ್ಕೊಂಡು ಬಂದ್ಬಿಟ್ಟಿದ್ದಾರೆ ಆಗುಂಬೆಗೆ. ಅವ್ರು ರಂಗಭೂಮಿ ಕಲಾವಿದರು ಅವ್ರಿಗೆಲ್ಲಾ ಕಮಿಟ್ಮೆಂಟ್ ಇರುತ್ತೆ. ಎಲ್ಲೋ ಪ್ರೊಡಕ್ಷನಲ್ಲಿ ಏನೋ ಪ್ರಾಬ್ಲಮ್ ಆಗಿರಬಹುದು, ಆತರದ್ದೇನೋ ಆಗಿರ್ಬೇಕು. ಆಗ ಮೊಬೈಲ್ ಇರ್ಲಿಲ್ಲ ಅಲ್ವಾ? ಆದ್ರೆ ಬಂದ್ಬಿಟ್ಟಿದಾರೆ ನೋಡಿ.


ಮುಂದುವರೆಯುವುದು…

ಸಂದರ್ಶನ-ಕೆ.ಎಸ್ ಪರಮೇಶ್ವರ


13 views