ಮಾಲ್ಗುಡಿ ಟೀಂಗೆ ನಾನು ಸೇರಿದ್ದೇ ರೋಚಕ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 59

(ಮಾಲ್ಗುಡಿ ಡೇಸ್ ಆರ್ಟ್ ಡೈರಕ್ಟರ್, ಜಾನ್ ದೇವರಾಜ್ ಅವರ ನೆನಪುಗಳು.)
ಪರಮ್ : ನಮಸ್ಕಾರ ಸರ್ ಈ ಮಾಲ್ಗುಡಿ ಡೇಸ್ ಅನ್ನೋ ಪ್ರಾಜೆಕ್ಟ್ ಗೆ, ನೀವು ಹೇಗೆ ಅಸೋಸಿಯೇಟ್ ಆದ್ರಿ. ಶಂಕರ್ ನಾಗ್ ಗೆ ನೀವು ಹೇಗೆ ಸಿಕ್ಕಿದ್ರಿ?


ಜಾನ್ ದೇವರಾಜ್: ನಾನು ರಂಗಭೂಮಿಯಲ್ಲಿ ಬಹಳಷ್ಟು ಕೆಲ್ಸ ಮಾಡ್ತಿದ್ದೆ. ಅದು ನಮಗೆ ಹುಚ್ಚು. ಕಲಾಕ್ಷೇತ್ರದಲ್ಲಿ ಆಗುವಂತಹ ಎಲ್ಲಾ ಕನ್ನಡ ನಾಟಕಗಳಲ್ಲಿ ಕೆಲ್ಸ ಮಾಡ್ತಿದ್ದೆ. ಅವಾಗ ಟಿ.ವಿ, ಮುಬೈಲ್ ಪೋನ್ಗಳು ಯಾವುದೂ ಇಲ್ಲ. ಅವಾಗ ನಮ್ಮ ಒಳಗೆ ಇರುವಂತಹ ದೊಡ್ಡ ದೊಡ್ಡ ಚಳುವಳಿಗಳು ರೈತ ಚಳುವಳಿಗಳು, ಕನ್ನಡ ಚಳುವಳಿಗಳು, ದಲಿತ ಚಳುವಳಿಗಳು, ಕಾರ್ಮಿಕ ಚಳುವಳಿಗಳಲ್ಲಿ ನಾನು ಹಾಗೂ ಶಂಕರ್ ಜೊತೆ ಜೊತೆಯಲ್ಲೇ ಇದ್ವಿ. ಆ ವಿಷಯಗಳನ್ನ ತೆಗೊಂಡು ಹೋಗಕ್ಕೆ ಅಂದ್ರೆ ಸಮಾಜದ ಪರಿವರ್ತನೆಗೆ ನಮಗೆ ಇದ್ದಂತಹ ವೇದಿಕೆ ನಾಟಕ.


ನಾನು ಬಹಳಷ್ಟು ಹೋರಾಟಗಳಿಂದ ಬಂದು, ಈ ನಾಟಕಗಳಿಗೆ ಇಳಿದೆ. ರೈತರ, ಕಾರ್ಮಿಕರ ವಿಷಯಗಳನ್ನ ನಾಟಕಗಳ ಮೂಲಕ ತಗೊಂಡು ಹೋಗ್ಬೇಕು ಅಂತ. ಉದಾಹರಣೆಗೆ ಬೆಲ್ಚಿ ನಾಟಕ, ಯಯಾತಿ, ಬಸವಣ್ಣಂದು ನಾಟಕ ಇದೆಲ್ಲ ನಾನು ಸೆಟ್ ಮಾಡ್ದವ್ನು. ಹೀಗೆ ಮಾಡ್ತಾ ಮಾಡ್ತಾ ಶಂಕರ್ ನಾಗ್ ಅವರ ನಾಗಮಂಡಲ ನಾಟಕಕ್ಕೆ ಒಂದು ಸೆಟ್ ಮಾಡಿದ್ದೆ. ನಾನು ಬಹಳ ಕಡಿಮೆಯಲ್ಲಿ ಹೆಚ್ಚು ಮಾಡ್ತಿದ್ದೆ. ಲೆಸ್ ಈಸ್ ಮೋರ್. ಸೆಟ್ ಅಂದ್ರೆ, ದೊಡ್ಡದಾಗಿರೋದು ಏನಲ್ಲ. ನನಗೆ ಪರಿಸರವನ್ನ ಕಾಪಾಡ್ಬೇಕು, ಮರಗಳನ್ನ ಕಡಿ ಬಾರ್ದು. ಕ್ರಿಯೇಟಿವಿಟಿ ಈಸ್ ಬೆಸ್ಟ್ ಆನ್ ಸ್ಪೆಂಡಿಂಗ್ ಲೆಸ್, ನಾಟ್ ಮೋರ್. ಇದು ನನ್ನ ಒಂದು ಕಾನ್ಸೆಪ್ಟ್.


ನಾಟಕದ ಸೆಟ್ ಮಾಡ್ತಿದ್ದಾಗ ಯಾರೋ ಬಂದು “ಶಂಕರ್ ನಾಗ್ ಕರಿತಿದ್ದಾರೆ”ಅಂದ್ರು. ಶಂಕರ್ ನಾಗ್ ಅವಾಗ ನನ್ನ ಥಿಯೇಟರ್ ವರ್ಕ್ಸ್ ನೋಡ್ತಾ ಇದ್ರು. ನನಗೆ “ಸಿನಿಮಾದಲ್ಲಿ ಆರ್ಟ್ ವರ್ಕ್ ಮಾಡ್ಕೊಡ್ಬೇಕು”ಅಂತ ಹೇಳಿದ್ರು. “ಇಲ್ಲ ನನಗೆ ಸಿನಿಮಾ ಬಗ್ಗೆ ಏನೂ ಗೊತ್ತಿಲ್ಲ. ನಾನು ನಾಟಕದಲ್ಲಿ ಸೆಟ್ ಹಾಕುವವನು.” ಅಂದೆ. “ಇಲ್ಲ ಪ್ಲೀಸ್, ಯು ಆರ್ ಅ ವೆರಿ ಗುಡ್ ಸೆಟ್ ವರ್ಕರ್, ಮಾಲ್ಗುಡಿ ಈಸ್ ಬೇಸ್ಡ್ ಆನ್ ಸೆಟ್ ವರ್ಕ್”ಅಂತ ಹೇಳಿದ್ರು. ಹಾಗೆ ಪೈಲೆಟ್ ಎಪಿಸೋಡ್ ಗೆ ಕರ್ಕೊಂಡು ಹೋದ್ರು. ನನಗೇನು ಗೊತ್ತು? ನಾನು ಒಪ್ಕೊಂಡು ಹೋದೆ. “ಒಂದು ಎಪಿಸೋಡ್ ಗೆ 2500 ಕೊಡ್ತೀನಿ” ಅಂತ ಹೇಳ್ತಾ ಇದ್ರು. ನಾನು “ಪರವಾಗಿಲ್ಲಪ್ಪ, ನಮಗೆ ಸೆಟ್ ಮಾಡಿದ್ರೆ ಯಾರೂ ಒಂದು ರೂಪಾಯಿನೂ ಕೊಡಲ್ಲ”ಅನ್ಕೊಂಡೆ. ಬೆನ್ನು ತಟ್ಟಿ ಬಹಳ ಚೆನ್ನಾಗಿ ಮಾಡ್ದೆ ಅಂತ ಹೇಳ್ತಿದ್ರೇ ಹೊರ್ತು, ಯಾರೂ ದುಡ್ಡು ಕೊಡ್ತಿರ್ಲಿಲ್ಲ. ಹಸಿವಿದ್ರೂ ಕೂಡ ಮನಸ್ಸಿಗೆ ತೃಪ್ತಿ ಸಿಗ್ತಾ ಇತ್ತು.


ಸೋ ಸಿಂಗ್ಸಂದ್ರ ದಲ್ಲಿ ಒಂದು ಪೈಲೆಟ್ ಸೆಟ್ ಮಾಡಕ್ಕೆ ಹೋದೆ. ನಾನು ಯಾವತ್ತೂ ಅಸಿಸ್ಟೆಂಟ್ ಗೆ ಹೇಳಿ ಕೆಲ್ಸ ಮಾಡಿಸುವವನಲ್ಲ. ಕೈಯಲ್ಲಿ ಕೆಲ್ಸ ಮಾಡುವವ್ನು. ಅಂದ್ರೆ, ಕೆತ್ತನೆ ಕೆಲ್ಸ ಮಾಡುವವನು. ಐ ಆಮ್ ವರ್ಕಿಂಗ್ ಇನ್ ಮೈ ಹ್ಯಾಂಡ್ಸ್. “ಅದ್ಮಾಡೋ, ಇದ್ಮಾಡೋ” ಅದೆಲ್ಲಾ ಆಗಲ್ಲ. ನಾನೊಬ್ಬ ಇಂಜಿನಿಯರ್. ಸ್ವಯಂ ಕಲ್ತಿದ್ದು ನಾನು. ಸ್ವಯಂ ಎಲ್ಲಾ ಮಾಡ್ಬೇಕು ಅಂತ. ಸಿಂಗ್ಸಂದ್ರದಲ್ಲಿ ಸೆಟ್ ಮಾಡ್ತಿದ್ವಿ ‘ಓಲ್ಡ್ ಮ್ಯಾನ್ ಆಫ್ ದ ಟೆಂಪಲ್’ಅಸಿಸ್ಟೆಂಟ್ ಯಾರೂ ಕಾಣ್ಲಿಲ್ಲ ನನಗೆ, ನಾನು ಶಂಕರ್ ಗೆ ಹೇಳ್ದೆ “ಶಂಕರ್ ಕ್ಯಾನ್ ಯು ಸೆಂಡ್ ಮಿ ಆನ್ ಅಸಿಸ್ಟೆಂಟ್?” ಅಲ್ಲಿ ಒಬ್ರು ನಿಂತಿದ್ರು ಅವ್ರಿಗೆ “ರಮೇಶ್ ಹೆಲ್ಪ್ ಮಾಡು”ಅಂದ್ರು. ನನಗೆ ರಮೇಶ್ ಯಾರೂಂತ ಗೊತ್ತಿಲ್ಲ. “ಅವ್ರು ನಮಸ್ಕಾರ ಸರ್”ಅಂದ್ರು. “ಬಾರಪ್ಪ ಇಲ್ಲಿ ಇದು ಹಿಡ್ಕೊ”ಅಂದೆ. ಅವ್ರು ಮರ ಹಿಡ್ಕೊಂಡ್ರು. ಎಲ್ಲಾ ರಡಿ ಆದ್ಮೇಲೆ ನಾನು ಶಂಕರ್ ಗೆ ಹೇಳ್ದೆ “ಬರ್ತೀನಿ ಶಂಕರ್, ಮೈ ಜಾಬ್ ಈಸ್ ಡನ್”ಅಂತ. ಶಂಕರ್ ನೋಡಿ, ಹೀ ಈಸ್ ಅ ಗ್ರೇಟ್ ಮ್ಯಾನ್. “ ಜಾನ್ ಹೋಗ್ತಾರಂತೆ ಮನೆಗೆ. ಪ್ಲೀಸ್ ಕಾನ್ ಯು ಡ್ರಾಪ್ ಹಿಮ್?” ನನಗೆ ಏನೂ ಗೊತ್ತಿಲ್ಲ, ಟು ಹವರ್ಸ್ ಸೆಟ್ ಮಾಡಿ ಮನೆಗೆ ಹೊರ್ಟು ಬಿಟ್ಟೆ. ಅವಾಗ ಫುಟ್ ಬಾಲ್ ವರ್ಲ್ಡ್ ಕಪ್ ಮ್ಯಾಚ್ ನಡಿತಾ ಇತ್ತು. ಐ ವಾಸ್ ಮೋರ್ ಇಂಟ್ರಸ್ಟಡ್ ಇನ್ ಫುಟ್ ಬಾಲ್ ದೆನ್ ದಿಸ್ ಎಪಿಸೋಡ್. ಸೋ ಮನೆಗೆ ಹೋದೆ.


ತಿರ್ಗ ನೆಕ್ಸ್ಟ್ ಡೇ ಬಂದು ಕಾರಲ್ಲಿ ಕರ್ಕೊಂಡು ಹೋದ್ರು. ತಿರ್ಗ ರಮೇಶ್ ಅಸಿಸ್ಟಂಟ್ ಬಂದು, “ಸರ್ ನಮಸ್ಕಾರ, ನನ್ನ ಹೆಸರು ‘ರಮೇಶ್ ಭಟ್’ನಾನು ಇಲ್ಲಿ ಅಸಿಸ್ಟಂಟ್ ಡೈರೆಕ್ಟರ್, ಮತ್ತೆ ಆರ್ಟ್ ಡೈರೆಕ್ಟರ್ ಪ್ಯಾಕ್ ಅಪ್ ಅಂತ ಹೇಳೋ ವರ್ಗೂ ಹೋಗುವ ಹಾಗಿಲ್ಲ”ಅಂದ್ರು. “ಏನಪ್ಪ ಇಷ್ಟು ದೊಡ್ಡ ಪ್ರಾಬ್ಲಮಲ್ಲಿ ಸಿಕ್ಹಾಕೊಬಿಟ್ನಲ್ಲ ನಾನು” ಅಂತ ಅನಿಸ್ತು. ಏನು ಕಥೆ? ಏನೇನು? ಅಂತ ನನಗೆ ಮೊದಲು ಎಜ್ಯುಕೇಶನ್ ಕೊಟ್ಟಿದ್ದು ರಮೇಶ್ ಭಟ್. ಯಾರೂ ಬಂದು ಆರ್ಡರ್ ಮಾಡೊದು ಏನಿಲ್ಲ. ವಿ ಆರ್ ಅ ವಂಡರ್ಫುಲ್ ಟೀಮ್, ಕಮ್ಸ್ ಫ್ರಮ್ ಅ ಕ್ರಿಯೇಟಿವ್ ಬ್ಯಾಕ್ ಗ್ರೌಂಡ್. ಒಂದು ಬ್ಯೂರೋಕ್ರೆಟಿಕ್ ಆಗಿ ಯಾರೂ ನಡ್ಕೊಳ್ಳಿಲ್ಲ. ಎರಡುವರೆ ದಿನದಲ್ಲಿ ಪೈಲೆಟ್ ಎಪಿಸೋಡ್ ಶೂಟ್ ಮಾಡ್ಬಿಟ್ರು. ಅಲ್ಲಿ, ಆ ಟೀಮ್ ಜೊತೆ ಕೆಲ್ಸ ಮಾಡಿ ನನಗೆ ಖುಷಿಯಾಯ್ತು. ರಮೇಶ್ ಭಟ್ ಸ್ವಲ್ಪನೂ ಕೂಡ ಈಗೋ ಪ್ರಾಬ್ಲಮ್ ಇಲ್ದೆ, ನಾನೊಬ್ಬ ಅಸಿಸ್ಟೆಂಟ್ ಡೈರೆಕ್ಟರ್ ಆತರದೇನು ಇಲ್ಲದೆ ಕೆಲ್ಸ ಮಾಡ್ತಿದ್ರು.


ಸೋ ವಿ ಸ್ಟಾರ್ಟಡ್ ವಿತ್ ದೆಟ್ ಕೈಂಡ್ ಆಫ್ ಅನ್ ಐಡಿಯಾ. ಅಲ್ಲಿಂದ ಬಂದ್ಮೇಲೆ ಮೀಟಿಂಗ್ಸ್ ಗಳು ಮಾಡ್ತಿದ್ವಿ ನಾವು. ನನಗೆ ಒಂದು ಪೇಪರ್ ಕೊಡ್ತಿದ್ರು, ನನಗೆ ಅಲ್ಲಿ ಯೋಚನೆ ಆಗ್ತಿತ್ತು. “ಏನು ಮಾಡ್ಲಿ ಈ ಪೇಪರ್ನ?” ಅಂತ. ಮಾಲ್ಗುಡಿ, ಇಟ್ ಹ್ಯಾಸ್ ಟು ಬಿ ಮೆಜಿಶಿಯನ್ಸ್ ರೋಲ್. ದೂರದರ್ಶನ್ ನಲ್ಲಿ, ಸೆಟ್ ಡೈರೆಕ್ಟರ್ ಆಗಿದ್ದೆ. “ಪದ್ಮವ್ಯೂಹ” ರಾಮಕೃಷ್ಣ ಹೆಗಡೆಯವರದ್ದು, ಅದ್ರಲ್ಲಿ ವರ್ಕ್ ಮಾಡಿದ್ದೆ. ಅಲ್ಲಿ ಮೆಜಿಶಿಯನ್ ಆಗಿ ವರ್ಕ್ ಮಾಡ್ತದ್ದೆ ಅನ್ಸಿತ್ತು. ಯಾಕಂದ್ರೆ ದುಡ್ಡೇ ಕೊಡ್ತಿರ್ಲಿಲ್ಲ. “ಕ್ರಿಯೇಟ್ ಮಾಡು” ಅಂತಿದ್ರು.‌ ಎಲ್ಲಿಂದ ಕ್ರಿಯೇಟ್ ಮಾಡೊದು ನಾನು? ಸೋ ಈ ರೀತಿಯಲ್ಲಿ ಐ ಕೇಮ್ ಟು ದ ಎಪಿಸೋಡ್ಸ್.ಮುಂದುವರೆಯುವುದು…

34 views