ಮಾಲ್ಗುಡಿ ಟೀಂ ಗೆ ನಾವು ಮಾಡಿದ್ದ ಬಿಸಿನೀರು ವ್ಯವಸ್ಥೆ!!!

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 108

(ಮಾಲ್ಗುಡಿ ಡೇಸ್‌ ಆಡಿಟರ್‌ ವೆಂಕಟೇಶ್ ನೆನಪುಗಳು)ಯಾರ್ಯಾರು ಆರ್ಟಿಸ್ಟ್ ಬರ್ತಾರೆ ಅಂತ ಪ್ರೋಗ್ರಾಮ್ ಮೊದ್ಲೇ ಕೊಟ್ಟಿರ್ತಿದ್ರು. ಯಾಕಂದ್ರೆ ಡೈಲಿ ನಾವು ಮಾತಾಡಕ್ಕಾಗಲ್ಲ. ಜಗ್ಗ ಅವ್ರ ತಮ್ಮ, ಮತ್ತೆ ಸಂಕೇತ್ ಸ್ಟುಡಿಯೋ ಮ್ಯಾನೇಜರ್ ಇದ್ರು, ಅವ್ರೆಲ್ಲಾ ಕಮ್ಯೂನಿಕೇಟ್ ಮಾಡಿ ಕಳಿಸ್ತಿದ್ರು. ಆದ್ರೆ ಆಗುಂಬೆಗೆ ಡೈರಕ್ಟ್ ಬಸ್ ಇರ್ಲಿಲ್ಲ. ಶೃಂಗೇರಿಗೆ ಬರ್ತಿದ್ರು. ಆಗುಂಬೆಯಿಂದ 26 ಕಿಲೋಮೀಟರ್ ಇತ್ತು. ಯಾರು ಬರ್ತಾರೆ ಅವ್ರನ್ನ ಜಗ್ಗ ಹೋಗಿ ಕರ್ಕೊಂಡು ಬರ್ತಿದ್ರು. ಮತ್ತೆ ಆಗುಂಬೆಯಲ್ಲಿ ಉಳ್ಕೊಳಕ್ಕೆ ಯಾವದೇ ಹೋಟೆಲ್ ಇರ್ಲಿಲ್ಗ. ಅಲ್ಲಿರುವವ್ರ ಮನೆಗಳನ್ನ ಮಾತಾಡಿ ಒಂದೊಂದು ಮನೆಯಲ್ಲಿ ಇಬ್ಬಿಬ್ಬರ ತರ ಉಳ್ಕೊತಿದ್ರು. ಆದ್ರೆ ಟಾಯ್ಲೆಟ್ ಇಲ್ಲ, ನೀರಿನ ಫೆಸಿಲಿಟಿ ಇಲ್ಲ. ಅದಕ್ಕೆ ಅಲ್ಲಿಯ ಸ್ಥಳೀಯ ಹುಡುಗ್ರನ್ನ ದಿನಕ್ಕೆ ಇಷ್ಟು ಕೊಡ್ತೀವಿ ಅಂತ ಮಾತಾಡ್ಕೊಂಡು, ಅಲ್ಲಿ ಹಂಡೆಗಳಿಗೆ ನೀರು ತುಂಬ್ಸಿ, ಸೌದೆಗಳನ್ನ ತಂದು, ಬೆಂಕಿ ಕಾಯ್ಸಿ ಎಲ್ಲರಿಗೂ ಕೊಡ್ಬೇಕು. ಟೆಂಪ್ರವರಿ ಟಾಯ್ಲೆಟ್ಸ್ ಕಟ್ಸಿದ್ದು. ಕೆಲವರು ಹೊಳೆಗೆ ಹೋಗ್ತಿದ್ರು, ಆದ್ರೆ ಎಲ್ಲರಿಗೂ ಹೊಳೆಗೆ ಹೋಗಕ್ಕೆ ಆಗ್ತಿರ್ಲಿಲ್ಲ. ಹೀಗೆ ಬಹಳ ಪ್ರಾಬ್ಲಮ್ಸ್ ಇತ್ತು. ಅದನ್ನೆಲ್ಲಾ ಸರಿ ಮಾಡ್ಕೊಂಡ್ವಿ.


ಹೋಗ್ತಾ ಎಲ್ಲರೂ ಅಡ್ಜೆಸ್ಟ್ ಆದ್ರು. ಅರ್ಧ ಕಿಲೋಮೀಟರ್ ದೂರದಲ್ಲಿ ಐ.ಬಿ ಇತ್ತು. ಅಲ್ಲಿ ಎರಡು ರೂಮ್ ಇತ್ತು. ಅದ್ರಲ್ಲಿ ಅನಂತ್ ನಾಗ್ ಅಥವಾ ದೊಡ್ಡ ಆರ್ಟಿಸ್ಟ್ ಗಳು ಬಂದ್ರೆ ಉಳ್ಕೊತಿದ್ರು. ಒಂದೊಂದ್ಸಲ ಅದೂ ಇರ್ತಿರ್ಲಿಲ್ಲ. ಯಾಕಂದ್ರೆ ಅದು ಗವರ್ನಮೆಂಟ್ ಪ್ರಾಪರ್ಟಿ, ಸೋ ಕೆಳಗಡೆ ಒಂದು ಡಾಕ್ಟರ್ ಮನೆ ಖಾಲಿ ಇತ್ತು. ಅಲ್ಲಿ ಇರ್ತಿದ್ರು.


ಶೃಂಗೇರಿಗೆ ಯಾರಾದ್ರು ಬರ್ಬೇಕಾಗಿದ್ದ ಆರ್ಟಿಸ್ಟ್ ಬರ್ಲಿಲ್ಲ ಅಂದ್ರೆ, ಯಾಕೆ ಬರ್ಲಿಲ್ಲ ಅಂತ ಗೊತ್ತಾಗ್ತಿರ್ಲಿಲ್ಲ. ನೋ ಕಮ್ಯೂನಿಕೇಶನ್, ಏನೋ ಮಿಸ್ ಆಗಿರ್ಬಹುದು, ಈಗ ಬಂದಿಲ್ಲ ಅಂದ್ರೆ ಶೂಟಿಂಗ್ ನಿಲ್ಸಕ್ಕೆ ಆಗಲ್ಲ. ಏನಾದ್ರೊಂದು ಮಾಡ್ಲೇ ಬೇಕು. ಹಾಗಿರುವಾಗ ಒಂದು ಹನ್ನೆರಡು ಎಪಿಸೋಡಲ್ಲಿ ನಾನು ಚಿಕ್ಕ ರೋಲಲ್ಲಿ ಆಕ್ಟ್ ಮಾಡಿದ್ದೀನಿ. ನನಿಗೆ ಗೊತ್ತಿರ್ಲಿಲ್ಲ, ವೆಂಕಿ ಹೇಳಿ ಹಾಕ್ಬಿಡ್ತಿದ್ದ. ನಾನು ವೆಂಕಿ ಕಾಲೇಜಲ್ಲಿ ನಾಟಕ ಎಲ್ಲಾ ಮಾಡ್ತಿದ್ವಿ.


ಸ್ವಾಮಿ ಆಂಡ್ ಫ್ರೆಂಡ್ಸಲ್ಲಿ ಮೂರು ಎಪಿಸೋಡಲ್ಲಿ ನಾನು ಬರ್ತೀನಿ. ಗಿರೀಶ್ ಕಾರ್ನಾಡ್ ಫ್ರೆಂಡ್ ಆಗಿ ಮಾಡಿದ್ದೆ. ಆಗ ಇಷ್ಟು ದಪ್ಪ ಇರ್ಲಿಲ್ಲ. ಮೂವತ್ತು ವರ್ಷದ ಹಿಂದೆ. ವೆಂಡರ್ ಆಫ್ ಸ್ವೀಟಲ್ಲಿ ಅನಂತ್ ನಾಗ್ ಅವ್ರ ಮಗನ ಫ್ರೆಂಡ್ ಕ್ಯಾರೆಕ್ಟರ್ ಮಾಡಿದ್ದೀನಿ. ಹೋರ್ಡ್ ಅಂತ ‘ಹರೀಷ್ ಪಟೇಲ್ ಅವ್ರು ಮಾಡಿರೋದು, ಅದ್ರಲ್ಲಿ ಅವ್ರ ಅಳಿಯನ ಕ್ಯಾರೆಕ್ಟರ್ ಮಾಡಿದ್ದೆ. ಆಮೇಲೆ ಹಾರ್ಸ್ ಆಂಡ್ ರಾಬರ್ಸಲ್ಲಿ ಬಸ್ ಕಂಡಕ್ಟರ್ ರೋಲ್ ಮಾಡಿದ್ದೀನಿ.ಮುಂದುವರೆಯುವುದು…

16 views