ಮಾಲ್ಗುಡಿ ಟೈಮ್‌ಲ್ಲೂ ಶಂಕರ್‌ಗೆ ಅಕ್ಸಿಡೆಂಟ್ ಆಗಿತ್ತು

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 115

(ಮಾಲ್ಗುಡಿ ಡೇಸ್‌ ಆಡಿಟರ್‌ ವೆಂಕಟೇಶ್ ನೆನಪುಗಳು)ಇಂಗ್ಲೀಷ್ ನಾವು ಮಾಡಿದ್ವಿ, ಆದ್ರೆ ನಮ್ಮ ಇಂಗ್ಲೀಷ್ ಫಾರಿನ್ ಅವ್ರಿಗೆ ಅರ್ಥ ಆಗ್ಬೇಕಲ್ವಾ? ಇಟ್ ಈಸ್ ನಾಟ್ ಸೋ ಈಸಿ. ನಾವು ಮಾತಾಡೋ ಇಂಗ್ಲೀಷ್ ಆಕ್ಸಂಟ್ ಬೇರೆಯವ್ರ ಆಕ್ಸಂಟ್ ಜೊತೆ ಮ್ಯಾಚ್ ಆಗಲ್ಲ. ಆಮೇಲೆ ದೇ ಹ್ಯಾಡ್ ಟು ಡು ಸಬ್ ಟೈಟ್ಲಿಂಗ್. ಯಾಕಂದ್ರೆ ಇಂಗ್ಲೀಷ್ ಅವ್ರ ದೇಶಕ್ಕೆ ಬೇಕಾದ ಹಾಗೆ ಅವ್ರು ಮಾಡ್ಕೊತಾರೆ. ಅದಕ್ಕಾಗಿ ನರಸಿಂಹನ್ ಗೆ ಬದ್ರಿ ಜೊತೆ ಯಾರಾದ್ರೊಬ್ರು ಸರಿಯಾಗಿ ಬೇಕಾಗಿತ್ತು, ಯಾಕಂದ್ರೆ? ಕ್ಯಾಶ್, ಫೈನಾನ್ಸ್ ಎಲ್ಲಾ ಹ್ಯಾಂಡಲ್ ಮಾಡಕ್ಕೆ.


ಒಂದ್ಸಲ ಬದ್ರಿ, ಶಂಕರ್ ನಾಗ್, ರಮೇಶ್ ಭಟ್, ಕಾಶಿ, ವಿಜಯ ಕಶ್ಯಪ್ ಎಲ್ಲರೂ ಕೆಳಗಡೆ ಮಣಿಪಾಲ್ ಗೆ ಹೋಗಿದ್ರು, ವಾಪಸ್ ಬರುವಾಗ, ಹಬ್ರಿ ಹತ್ರ ಸೀತಾ ನದಿ ಇದೆ. ಅಲ್ಲಿ ಗಾಡಿ ಟಿಲ್ಟ್ ಆಗಿ ಆಕ್ಸಿಡೆಂಟ್ ಆಗಿತ್ತು. ಅದನ್ನ ಹಾಗೇ ಎತ್ತಿ ನಿಲ್ಸಿ ಬಂದಿದ್ರು ಅವ್ರು. ನೆಕ್ಸ್ಟ್ ಡೇ ಗೊತ್ತಾಗಿದೆ ಒಬ್ರಿಗೆ ಲಿಗಮಂಟೇರ್, ಒಬ್ರಿಗೆ ಫ್ರಾಕ್ಚರ್, ರಮೇಶ್ ಭಟ್ ಗೆ ಸೊಂಟಕ್ಕೆ ಏಟಾಗ್ಬಿಟ್ಟಿತ್ತು. ಅವ್ರನ್ನೆಲ್ಲಾ ಮಣಿಪಾಲ್ ಕೆ.ಎಮ್.ಸಿ. ಗೆ ಕರ್ಕೊಂಡು ಹೋಗಿ ಟ್ರೀಟ್ಮಂಟ್ ಮಾಡ್ಸಿದ್ವಿ. ರಮೇಶ್ ಭಟ್ 2-3 ದಿನ ಅಡ್ಮಿಟ್ ಆಗಿದ್ರು. ಬಟ್ ಯಾವುದೇ ಕಾರಣಕ್ಕೂ ಶೂಟಿಂಗ್ ನಿಲ್ಲಿಲ್ಲ. ಅದ್ರ ಪಾಡಿಗೆ ಅದು ನಡಿತಾ ಇತ್ತು.


ಶಂಕರ್ ನಾಗ್ ಪರ್ಸನ್ ಹೇಗೆ ಅಂದ್ರೆ, ಅವ್ರು ಟಾರ್ಗೆಟ್ ಇಟ್ಕೊಂಡ್ರೆ ರಾತ್ರಿ ಒಂದು ಗಂಟೆ, ಎರಡು ಗಂಟೆ ಆದ್ರುನೂ ಮುಗಿಸ್ಲೇ ಬೇಕು. ಮುಗಿಸ್ತಾ ಇದ್ರು, ಮತ್ತೆ ಬೆಳಗ್ಗೆ ಏಳು ಗಂಟೆಗೆ ಫಸ್ಟ್ ಶಾಟ್ ಅನ್ನೋರು. ಫಸ್ಟ್ ಶಾಟ್ ಅಂದ್ರೆ ಅವ್ರಿಗೆ ಕ್ಯಾಮರಾ ಆನ್ ಆಗಿ ಫಸ್ಟ್ ಶಾಟ್ ತಗೊಬೇಕು. ಊಟ ಎಲ್ಲಾ ಬ್ರೇಕಲ್ಲಿ ಆಗ್ತಾ ಇತ್ತು. ಬೆಳಗ್ಗೆ ಐದು ಮುಕ್ಕಾಲು, ಆರು ಗಂಟೆಗೆ ಕೆಳಗೆ ಬಂದು “ಏನಪ್ಪಾ ಎಲ್ಲಾ ರೆಡಿನಾ? ರೆಡಿನಾ? ಅಂತ ರೆಡಿ ಮಾಡ್ಸಿ, ಫಸ್ಟ್ ಶಾಟ್ ತಗೊಂಡು ತಿಂಡಿ ಮಾಡ್ತಿದ್ದಿದ್ದು. ಯಾಕಂದ್ರೆ ತಿಂಡಿ ರೆಡಿ ಇರ್ತಿರ್ಲಿಲ್ಲ. ಸೋ 9 ಗಂಟೆಗೆ ಬ್ರೇಕ್ ಕೊಟ್ಬಿಟ್ಟು ತಿಂಡಿ. ಆ ರೀತಿ ವರ್ಕೋಹಾಲಿಕ್ ಅವ್ರು. ಮತ್ತೆ ಮಕ್ಕಳ ಜೊತೆ ತುಂಬಾ ಚೆನ್ನಾಗಿ ಬಿಹೇವ್ ಮಾಡ್ತಿದ್ರು . ಹೀ ಯೂಸ್ ಟು ಟ್ರೀಟ್ ದೆಮ್ ಆಸ್ ಒನ್ ಫ್ಯಾಮಿಲಿ. ಆ ಒಂದು ಕಾರಣದಿಂದನೇ ಅಂತಹ ಔಟ್ ಪುಟ್ ಬಂದಿದ್ದು. ಸೆಟ್ ಬಾಯ್ಸ್, ಸ್ಪಾಟ್ ಬಾಯ್ಸ್, ಲೈಟ್ ಬಾಯ್, ಪ್ರೊಡಕ್ಷನ್ ಎಲ್ಲರೂ ಸೇರ್ಕೊಂಡು ಎಲ್ಲಾ ಕೆಲ್ಸನೂ ಮಾಡ್ತಿದ್ರು.

ಆಗುಂಬೆಯಲ್ಲಿ ಪ್ರತಿಯೊಂದು ಮನೆಯಲ್ಲೂ ಎಲ್ಲರಿಗೂ ನಾವು ಯಾರೂಂತ ಗೊತ್ತಿತ್ತು. ಆಮೇಲೆ ಯಾರೋ ಹೇಳಿದಾರೆ ಸ್ವಲ್ಪ ಪ್ರಾಬ್ಲಮ್ ಆಯ್ತು ಅಂತ, ಅದು ನಮಿಗೆ ಗೊತ್ತಿಲ್ಲ. ನಾವು ಮಾಲ್ಗುಡಿಯಲ್ಲಿದ್ದಾಗ, ನಾವು ಯಾವ ಮನೆಯಲ್ಲಿ ಹೋಗಿ ಏನು ಬೇಕಾದ್ರೂ ತಗೊಂಡು ಬರಬಹುದಾಗಿತ್ತು. ಯಾಕಂದ್ರೆ ಅಷ್ಟೇ ಜಾಗ್ರತೆಯಾಗಿ ತಗೊಂಡು ಹೋಗಿ ವಾಪಸ್ ಕೊಡ್ತಿದ್ವಿ. ಅವ್ರಿಗೆ ಆ ಒಂದು ನಂಬಿಕೆ ಇತ್ತು. ಅಷ್ಟೊಂದು ಫ್ರೀಡಮ್ ಇತ್ತು.ಮುಂದುವರೆಯುವುದು…

16 views