ಮಾಲ್ಗುಡಿ ಡೇಸ್‌ ಅಲ್ಲಿ ಇದ್ದ ಸ್ಪೆಷಲಿ ಚಾಲೆಂಜ್ಡ್‌ ಕ್ಯಾಮರಾ ಮಾನ್‌

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 124

(ಮಾಲ್ಗುಡಿ ಡೇಸ್‌ ಕ್ಯಾಮರಾ ಅಸಿಸ್ಟೆಂಟ್‌ ನಾಗರಾಜ ಆದವಾನಿ ಅವರ ನೆನಪುಗಳು)ಪರಮ್: ಸ್ಟೋನ್ ಬಾಯ್ ಬಗ್ಗೆ ಮಂಜುನೂ ಹೇಳಿದ್ರು. ನನಿಗೆ ಅದ್ರಲ್ಲಿ ನೀವು ಕ್ಯಾಮರಾ ಮ್ಯಾನ್ ಅಂತ ಗೊತ್ತಿರ್ಲಿಲ್ಲ.


ನಾಗರಾಜ್: ಕ್ಯಾಮರಾ ಮ್ಯಾನ್ ನಾನಲ್ಲ ಎಸ್ ರಾಮಚಂದ್ರ ಅವ್ರು. ನಾನು ಅವ್ರ ಅಸಿಸ್ಟೆಂಟ್ ಆಗಿದ್ದೆ. ಮಂಜುನೂ ಅಲ್ಲೇ ಇದ್ರು. ಮಂಜುನೂ ನೋಡಕ್ಕೆ ಆಗ್ಲಿಲ್ಲ.

ಪರಮ್” ನಮ್ಮ ಬಾಸ್ ಅವ್ರ ಕಾಲು ಸ್ವಲ್ಪ ಊನಾಯ್ತು ಅಂತ ಕೇಳಿದ್ದೀನಿ.


ನಾಗರಾಜ್: ಅವ್ರಿಗೆ ಮೊದ್ಲೇ ಪೋಲಿಯೋ ಇತ್ತು. ಆಕ್ಚುಲಿ ಕ್ಯಾಮರಾ ಇಟ್ಕೊಂಡು ವಾಕ್ ಮಾಡ್ತಿದ್ರು ಅವ್ರು ಅಷ್ಟು ಮಟ್ಟಿಗೆ ಮಾಡ್ತಿದ್ರು ಅವ್ರು.


ಪರಮ್: ಇವತ್ತು ನಮ್ಮಲ್ಲಿ ಕೆಲವರು ಅಂಗವಿಕಲತೆ ಯನ್ನ ರಿಫ್ಲೆಕ್ಟ್ ಮಾಡ್ತಾರೆ,


ನಾಗರಾಜ್: ಅಂಗವಿಕಲತೆ ಇದೆ ಅಂತನೇ ಅವ್ರು ತೋರಿಸ್ಕೊಳ್ಳಿಲ್ಲ. ಅವ್ರು ನಾರ್ಮಲ್ ಆಗಿ ಇದ್ದಿನಿ ಅಂತನೇ ಇರ್ತಿದ್ರು. ಅವ್ರು ಒಂದು ಲೈಟಿಂಗ್ ಮಾಡ್ಸ ಬೇಕಾದ್ರೆ ಜನರೇಟರೆಲ್ಲಾ ಆಫ್ ಮಾಡ್ಸಿ , ಲೈಟೆಲ್ಲಾ ಸೆಂಟರ್ ಮಾಡ್ಕೊಂಡು ಎಲ್ಲಾ ರೆಡಿ ಮಾಡಿ ಜನರೇಟರ್ ಆನ್, ಲೈಟ್ಸ್ ಆನ್,ಶೂಟ್ ಅಷ್ಟೇ. ಲೈಟಿಂಗ್ ಎಲ್ಲಾ ಪರ್ಫೆಕ್ಟಾಗಿ ಇರ್ತಾ ಇತ್ತು. ಲೈಟ್ಸೆಲ್ಲಾ ಆಫ್ ಇರುವಾಗ್ಲೇ ಎಲ್ಲಾ ಸೆಟ್ ಮಾಡ್ತಾ ಇದ್ರು.ಲೈಟ್ ಆನ್ ಆಯ್ತು ಅಂದ್ರೆ, ರೆಡಿ ಶೂಟ್ ಅಂತನೇ.. ಏನಾದ್ರೂ ಚೇಂಜಸ್ ಇದ್ರೆ ಸಣ್ಣ ಪುಟ್ಟ ಮೈನರ್ ಚೇಂಜಸ್ ಅಷ್ಟೇ. ಅಷ್ಟು ಪರ್ಫೆಕ್ಷನಲ್ಲಿ ಲೈಟಿಂಗ್ ಮಾಡ್ತಿದ್ರು. ಅವ್ರು ಲೈಟಿಂಗ್ ಮಾಡ್ತಿದ್ರೆ ಹಾಗೆ ತುಂಬಾ ನ್ಯಾಚುರಲ್. ಅದ್ರಲ್ಲಿ 10 ಪರ್ಸೆಂಟ್ ನಾವು ಮಾಡ್ತೀವಿ ಅಷ್ಟೇ.ಮುಂದುವರೆಯುವುದು…

7 views