ಮಾಲ್ಗುಡಿ ಡೇಸ್ ಅಲ್ಲಿ ರಮೇಶ್‌ ಭಟ್‌ಗಿದ್ದ ಜವಾಬ್ದಾರಿಗಳು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 38

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಪರಮ್: “ಅದರಲ್ಲಿ ನಿಮ್ದು ಮತ್ತೆ ಕಾಶಿ ಯವರದ್ದು ಹೆಚ್ಚಿನ ಪಾತ್ರ ಇದೆ” ಅಂತ ಕೇಳ್ಪಟ್ಟಿದ್ದೀನಿ..?


ರಮೇಶ್ ಭಟ್: ನನಗೆ ಕೆಲವು ಜವಾಬ್ದಾರಿಗಳಿತ್ತು. ಒಂದು ಈಗ ಬಾಂಬೆಯಿಂದ ಹರೀಶ್ ಪಟೇಲ್ ಅಂತ ಆರ್ಟಿಸ್ಟ್ ಬರ್ತಾರೆ. ಅವ್ರು ಜಿಪುಣ ‘ಕಂಜೂಸಿ’ ಅಂತ ಒಂದು ಕಥೆ. ಆ ಕಥೆಗೆ ಕಂಜೂಸಿ ಹೇಗಿರ್ತಾರೆ? ಬಡ್ಡಿ ವ್ಯಾಪಾರ ಮಾಡ್ತಾರೆ, ಅವ್ರಿಗೆ ಒಬ್ಬ ಮೊಮ್ಮಗ ಇರ್ತಾನೆ. ಅವ್ರಿಗೆ ಯಾವ ತರ ಕಾಸ್ಟ್ಯೂಮ್ ಹಾಕಿಸ ಬಹುದು. ಇದನ್ನೆಲ್ಲ ಮೊದಲೇ ಡಿಸೈಡ್ ಮಾಡಿ, ಆ ಕಾಸ್ಟ್ಯೂಮ್ ತೆಗೆದಿಟ್ಟು ಕೊಡೋದಕ್ಕೆ, ಸುಂದರಶ್ರೀ, ಸಾವಂತ್ ಎಲ್ಲಾ ಇರೋರು. “ಏಯ್ ನಾಳೆ ಹರೀಶ್ ಪಟೇಲ್ ಬರ್ತಾರೆ, ಅವರ ಚೆಸ್ಟ್ 46 ಇದೆ ಅವರಿಗೆ ಎಷ್ಟು ಕಾಸ್ಟ್ಯೂಮ್ ಬೇಕು ನೋಡ್ಕೊಂಡು ತೆಗ್ದಿಡೋದು. ಎಷ್ಟು ಸೀನಲ್ಲಿ ಬರ್ತಾರೆ ಅವ್ರು? ಒಂದು ಎಪಿಸೋಡಲ್ಲಿ ಹನ್ನೆರಡು ಸೀನ್ ಇರುತ್ತೆ. ಐದು ಸೀನಲ್ಲಿರ್ತಾರೆ, ಎಲ್ಲವೂ ಮುಂಚೆನೇ ಗೊತ್ತಾಗ್ಬಿಡೋದು.” ಇವಾಗ ಒಂದು ಕಥೆ ಮಾಡ್ತೀವಿ ಅಂದ್ರೆ, ಒಂದು ನೋಟ್ ಬುಕ್ ಅಲ್ಲಿ ಕಲರ್ ಕಾಂಬಿನೇಶನ್ ಕೂಡ ವರ್ಕೌಟ್ ಮಾಡಿ ಕೊಟ್ಬಿಡೋದು. ಸೋ ಶೂಟಿಂಗ್ ದಿವಸ, ಅವರು ಎಷ್ಟೊತ್ತಿಗೆ ಮೇಕಪ್ ಗೆ ಕೂತ್ಕೊ ಬೇಕು, ಎಷ್ಟೊತ್ತಿಗೆ ಸೆಟ್ ಗೆ ಬರ್ಬೇಕು, ಅವ್ರನ್ನ ಕರ್ಕೊಂಡು ಹೋಗಿ ಸೆಟ್ಗೆ ಬಿಡ್ಬೇಕು. ಮತ್ತೆ ಸೆಟ್ಟಲ್ಲಿ ಹಿಂದ್ಗಡೆ ಏನೆಲ್ಲಾ ಆಕ್ಟಿವಿಟೀಸ್ ಆಗ್ಬೇಕೋ, ಅದನ್ನೆಲ್ಲಾ ನೋಡ್ಕೊತಿದ್ದೆ. ಯಾಕಂದ್ರೆ ನನಗೆ ಹಿಂದಿ ಫ್ಲೂಯನ್ಸಿ ಇಲ್ಲ, ಕಮ್ಯೂನಿಕೇಟ್ ಮಾಡ್ಬಹುದು. ಆದ್ರೆ ಎಲ್ಲಿ ಪಾಸ್ ಕೊಡ್ಬೇಕು, ಇನ್ನೂ ಸ್ವಲ್ಪ ಸ್ಪೀಡ್ ಆಗ್ಬೇಕು ಅಂತೆಲ್ಲ, ಅಲ್ಲಿರುವ ಭಾಷೆನ ತಿದ್ದಿ ಮಾಡುವಷ್ಟು ಆಗ್ತಿರ್ಲಿಲ್ಲ. ಸೋ ಹಂಗಾಗಿ ನಾನು ಆನ್ ಸೆಟ್ ಇರ್ತಿರಲಿಲ್ಲ. ಬ್ಯಾಕ್ ಗ್ರೌಂಡಲ್ಲಿ ಏನೆಲ್ಲಾ ಆಕ್ಟಿವಿಟೀಸ್ ಆಗ್ಬೇಕು ಅದನ್ನೆಲ್ಲಾ ನೋಡ್ಕೊತಿದ್ದೆ.


ಹೀಗೆ ಸೆಟ್ ಅಲ್ಲಿ ಅರುಂಧತಿ ಮತ್ತೆ ಅವ್ರ ಸಿಸ್ಟರ್ ಅಕ್ಷತಾ ರಾವ್ ಎಲ್ಲಾ ಮ್ಯಾನೇಜ್ ಮಾಡ್ತಿದ್ರು. ಇಂಗ್ಲೀಷ್ ಆಗ್ಲಿ, ಅಥವಾ ಹಿಂದಿ ಆಗ್ಲಿ ಅವರಿಗೆ ತುಂಬಾ ಸುಲಭ ಆಗೋದು. ಯಾವುದಾದ್ರೂ ಡೈಲಾಗ್ ಅವ್ರಿಗೆ ಹೇಳಕ್ಕೆ ಕಷ್ಟ ಆದ್ರೆ, ಬೇರೆ ಬರ್ಕೊಡಕ್ಕೆ ಸಾಧ್ಯ ಆಗ್ತಿತ್ತು. ಸೋ ಆಕಡೆ ನಮಗೆ ಕೆಲ್ಸ ಇರ್ಲಿಲ್ಲ, ಅದೆಲ್ಲಾ ಅವ್ರು ಮಾಡೋರು. ಆದ್ರೆ ಕಮ್ಯೂನಿಕೇಶನ್ ತುಂಬಾ ಇರೋದು,

ಕ್ಯಾಮರಾಮ್ಯಾನ್ ಗೆ ಕಮ್ಯೂನಿಕೇಟ್ ಮಾಡ್ಬೇಕು, ಆರ್ಟ್ ಡೈರೆಕ್ಟರ್ ಗೆ ಏನು ಬೇಕು ಅಂತ ತಕ್ಷಣ ಹೇಳ್ಬೇಕು. “ಬೋಟ್ ಮಾಡ್ಕೊಡು” ಅಂದ್ರೆ “ಪೇಪರ್ ಇಲ್ಲ” ಅಂತಾನೆ. “20 ಬೋಟ್ ಯಾಕೆ?” ಅಂತಾನೆ, ಅವ್ನಿಗೆ ಹೇಳ್ಬೇಕು ಇಪ್ಪತ್ತು ಬೋಟ್ ಯಾಕೆ ಬೇಕೂಂತ. ಸ್ವಾಮಿ ನಡ್ಕೊಂಡು ಬರ್ತಾ ಬೇಜಾರಾಗಿರುತ್ತೆ ಒಂದು ಗೊದ್ದ ಇರುತ್ತೆ ಅದನ್ನ ಬೋಟಲ್ಲಿ ಇಡ್ಬೇಕು, ಬೋಟ್ ಹೋಗೋದನ್ನ ನೋಡಿ ಆನಂದ ಪಡ್ತಾನೆ. ಪೇಪರ್ ಬೋಟ್ ನೀರಲ್ಲಿ ಹಾಕಿದ ತಕ್ಷಣ ಎಷ್ಟು ಹೊತ್ತಿರುತ್ತೆ? ಸೊ ನನಗೆ ಇಪ್ಪತ್ತು ಬೇಕೂಂತ, ಅವ್ನು “ಇಪ್ಪತ್ತು ಯಾಕೆ” ಅಂತ ಈ ತರದ್ದೆಲ್ಲಾ ಕೆಲ್ಸಗಳು ತುಂಬಾ ಇರೋದು ನನಗೆ. ಇವಾಗ ಮಕ್ಕಳ ಶಾಲೆ ಬಿಡ್ತಾರೆ, ಎಲ್ಲಾ ಬಂದು ಪುಸ್ತಕ ಹರಿತಾರೆ ಅಂದ್ರೆ ನಾನು ಇನ್ನೂರು ಮುನ್ನೂರು ಬುಕ್ಸ್ ರಡಿ ಮಾಡ್ಬೇಕು. ರಜ ಬಂತು ಅಂದ ತಕ್ಷಣ ಅವ್ರೆಲ್ಲಾ ಬುಕ್ಸ್ನ ಹರಿತಾರೆ. ವೈಡ್ ಶಾಟ್ ಇಟ್ರೆ, ಕ್ಲೋಸ್ ಶಾಟ್ ಇಟ್ರೆ, ಎಷ್ಟು ಸಾರಿ ಎಸಿಬೇಕೂಂತ ಗೊತ್ತಿಲ್ಲ, ಅದಕ್ಕೆ “ನೂರಿನ್ನೂರು ಪುಸ್ತಕ ತಗೊಂಡು ಬಾ” ಅಂತ. “ಇನ್ನೂರು ಪುಸ್ತಕ ಎಲ್ಲಾ ಇಲ್ಲಿ ಸಿಗಲ್ಲ” ಅಂತಿದ್ದ. “ಬೇಕಪ್ಪಾ, ನಿನಗೆ ಅರ್ಥ ಆಗಲ್ಲ, ನಿನಗೆ ಕಾಸು ಕೊಡಲ್ವಾ? ಹೋಗಿ ತಗೊಂಡು ಬಾ” ಅಂತ ಹೇಳ್ಬೇಕು. ಈ ತರದ್ದು ಎಲ್ಲಾ ಕೆಲ್ಸಗಳು ನನಗೆ ತುಂಬಾ ಇರೋದು.ಮುಂದುವರೆಯುವುದು…

13 views