ಮಾಲ್ಗುಡಿ ಡೇಸ್‌ ಗೆ ಆನೆ ಬಂದ ಕತೆ ಕೇಳಿ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 102

( ಶಂಕರ್‌ನಾಗ್‌ ಕುರಿತಂತೆ ಮಾಲ್ಗುಡಿ ಡೇಸ್‌ ನಿರ್ಮಾಪಕರ ನೆನಪುಗಳು)
ಪರಮ್: ಕೆಲವು ಮರೆಯಲಾಗದ ಘಟನೆಗಳನ್ನ ಹೇಳ್ಬಹುದಾ?


ಬದರಿನಾಥ್: ಪ್ರೊಡಕ್ಷನಲ್ಲಿ ಈಗ ಶಂಕರ್ ಆನೆ ಬೇಕೂಂತ ಹೇಳ್ದ ಅಂದ್ರೆ ಬೇಕೇ ಬೇಕು ಹುಡುಕಿ. ಸೋ ನಾವು ಶಿವಮುಗ್ಗಕ್ಕೆ ಹೋಗಿ ಡೆಪ್ಯೂಟಿ ಕನ್ಸರ್ವೇಟಿವ್ ಆಫ್ ಫಾರೆಸ್ಟ್ ಅವ್ರನ್ನ ಕೇಳ್ಕೊಂಡ್ವಿ, ಅವ್ರು ʼಹೆಂಗೆ ಕೊಡೋದು ನಿಮ್ಗೆ? ಯಾವ ಬೇಸಿಸ್ ಅಲ್ಲಿ ಕೊಡ್ಬೇಕು? ಅಂದ್ರು. ಆಗ ನಾವು “ಇಲ್ಲ ಸಾರ್ ಇದು ಆರ್.ಕೆ.ನಾರಾಯಣ್ ಅವ್ರ ಕತೆ, ಇದರ ಕ್ರಿಯೇಟಿವ್ ಸ್ಟೋರಿ ಎಲ್ಲಾ ಹೇಳಿ, ಬಹಳ ಒತ್ತಾಯ ಮಾಡಿ ಆದ್ಮೇಲೆ ಪರ್ಮಿನ್ ಕೊಟ್ರು. “ಆದ್ರೆ ನಾನು ಬಂದು ನೋಡ್ತೀನಿ” ಅಂತ ಕಂಡಿಷನ್ ಹಾಕಿದ್ರು. ಹಾಗೆ ಅವ್ರು ಬಂದಿದ್ರು, ಅವ್ರ ಹೆಸರು ಮರ್ತೋಯ್ತು, ಎಂತದೋ ‘ಸಿಂಗ್’ ಅವ್ರು. ಇವಾಗ ಟು ಯಿಯರ್ ಬ್ಯಾಕ್ ರಿಟಾಯರ್ಡ್ ಆದ್ರು.


ಶಂಕರ್ ಏನಾದ್ರೂ ಪ್ರಾಪರ್ಟಿ ಹೇಳ್ತಿದ್ರು, ಫಾರ್ ದ ಬೆಟರ್ಮೆಂಟ್ ಆಫ್ ಪ್ರಾಜೆಕ್ಟ್, ಅವ್ರ ಸ್ವಾರ್ಥಕ್ಕೇನೂ ಅಲ್ಲ. ಎಲ್ಲಿ ಹುಡುಕ್ತೀರಾ ಹುಡುಕಿ, ಅದ್ಹೆಂಗಾದ್ರೂ ಮಾಡಿ ತಗೊಂಡ್ಬನ್ನಿ. ಮತ್ತೆ ಪ್ರೊಡಕ್ಷನಲ್ಲಿ ದಿನಾಲೂ ತರತರದ ವೇರಿಯಂಟ್ ಆಗ್ತಾ ಇರುತ್ತೆ. ಈಗ ಯಾರೋ ಆರ್ಟಿಸ್ಟ್ ಬರ್ಬೇಕಾಗಿತ್ತು, ಬಂದಿಲ್ಲ ಅಥವಾ ಯಾವುದೋ ಆರ್ಟಿಸ್ಟ್ ಹೋಗ್ಬೇಕಾಗಿದೆ ಅವತ್ತು, ಬಟ್ ಶೂಟಿಂಗ್ ಮುಗಿಲಿಲ್ಲ, ಏನ್ಮಾಡೋದು? ಹೀಗೆ ಎವ್ರಿಟೈಮ್ ನಡಿತಾ ಇತ್ತು. ಪ್ಲಸ್ ಆಗುಂಬೆಯಲ್ಲಿ ಅಕ್ಕಿ, ಬೇಳೆ, ಪೆಟ್ರೋಲ್ ಏನೂ ಇಲ್ಲ. ತೀರ್ಥಳ್ಳಿಗೆ ಹೋಗಿ ತರ್ಬೇಕು, ಮಾಡ್ತಿದ್ವಿ ನಾವು. ಯಾವಾಗ್ಲೂ ಒಬ್ಬರ ಮೇಲೆ ಒಬ್ಬರು ತಮಾಷೆ ಮಾಡ್ಕೊಂಡು ಕೆಲ್ಸ ಮಾಡ್ತನೇ ಇದ್ವಿ.ಮುಂದುವರೆಯುವುದು…

20 views