ಮಾಲ್ಗುಡಿ ಡೇಸ್ ನಟಿಯ ಅನುಭವಗಳು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 74

(ಮಾಲ್ಗುಡಿ ಡೇಸ್ ನಟಿ, ಪ್ರತಿಭಾ ಬಿಡದೀಕರ್ ಅವರ ಅನುಭವಗಳು)ಪರಮ್: ನಮಸ್ತೆ ಮೇಡಮ್, ಮೊದಲಿಗೆ ತಮ್ಮದೊಂದು ಪರಿಚಯ


ಪ್ರತಿಭಾ: ಖಂಡಿತ, ನನ್ನ ಹೆಸರು ‘ಪ್ರತಿಭಾ ಬಿಡದೀಕರ್’ನಾನು ಮೂಲತ ಬಿಡದಿ ಊರಿನವಳು. ನನ್ನ ತಾಯಿ ಆನೇಕಲ್ ನವರು, ಆದ್ರೆ ನಮ್ಮ ತಂದೆ ಅವ್ರು ಪಿ.ಡಬ್ಲು.ಡಿ. ಇಂಜಿನಿಯರ್ ಆಗಿದ್ರಿಂದ, ನಾನು ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದಿದ್ದು, ಮತ್ತೆ ಸ್ಕೂಲಿಗೆ ಹೋಗಿದ್ದು. ನಾನು ಕಾಲೇಜ್ ಗೆ ಡೆಲ್ಲಿನಲ್ಲಿ ಹೋದೆ. ಅದಾದ್ಮೇಲೆ ಬೆಂಗಳೂರಿಗೆ 1985 ರಲ್ಲಿ ಬಂದೆ. ಅವಾಗ ಹತ್ತು ವರ್ಷ ಬೆಂಗಳೂರಲ್ಲಿ ಇದ್ದೆ. ಇಲ್ಲಿ ಕೆಲ್ಸ ಮಾಡ್ಕೊಂಡಿದ್ದೆ, ಮದುವೆ ಆಯ್ತು, ಮಗು ಆಯ್ತು. ಆ ಸಮಯದಲ್ಲಿ 1986 ರಲ್ಲಿ ನನಗೆ ನಮ್ಮ ಶಂಕರ್ ನಾಗ್ ಅವ್ರ ಜೊತೆ ಕೆಲ್ಸ ಮಾಡುವ ಸೌಭಾಗ್ಯ ಪ್ರಾಪ್ತಿ ಆಯ್ತು.

ಪರಮ್: ಶಂಕರ್ ನಾಗ್ ಅವ್ರು ತುಂಬಾ ಅನುಭವಿ ಆಗಿರೋದ್ರಿಂದ, ಅವ್ರ ಸ್ನೇಹಿತರು ತುಂಬಾ ಜನ ಬೇರೆ ಬೇರೆ ಕೆಲಸದ ಅನುಭವಗಳ ಮೂಲಕನೇ ಪರಿಚಯ ಆಗಿರುವವ್ರು. ನಿಮ್ಮ ಪರಿಚಯ ಶಂಕರ್ ಜೊತೆ ಹೇಗಾಯ್ತು?


ಪ್ರತಿಭಾ: ನಾನು ಡಬಲ್ ರೋಡಲ್ಲಿರುವ ಬಿ.ಪಿ.ಎಲ್. ಕಂಪೆನಿಯಲ್ಲಿ ಜಾಬ್ ಮಾಡ್ತಾ ಇದ್ದೆ. ನಾನು ಶೋರೂಮಲ್ಲಿದ್ದಾಗ ಅಲ್ಲಿಗೆ ಒಬ್ರು ಫೊಟೋಗ್ರಾಫರ್ ಏನೋ ಪರ್ಚೇಸ್ ಮಾಡಕ್ಕೆ ಬಂದಿದ್ರು. ಮಾತಾಡ್ತಾ, ಮಾತಾಡ್ತಾ, “ನಿಮ್ಮ ಫೇಸ್ ಚೆನ್ನಾಗಿದೆ, ನಾನು ನ್ಯೂಸ್ ಪೇಪರಲ್ಲಿ ಆರ್ಟಿಕಲ್ ಬರಿತೀನಿ, ನಿಮ್ದು ಒಂದು ಫೋಟೋ ತಗೋಬಹುದಾ?” ಅಂತ ಕೇಳಿದ್ರು. ತಕ್ಷಣ ಫೋಟೋ ತಗೊಂಡ್ರು. ಮಾರನೇ ದಿನನೇ ಪೇಪರಲ್ಲಿ ಪೋಟೋ ಬಂತು.


ಅವ್ರ ಹೆಸರು ಕುಲಭೂಷಣ್ ಅಂತ, ಅವ್ರ ಹತ್ರ ಮಾತಾಡ್ತಾ ಇದ್ದಾಗ, ನಾನು ಹೇಳ್ದೆ “ನನಗೆ ಎಕ್ಸ್ಟ್ರಾ ಕರಿಕ್ಯುಲರ್ ಆಕ್ಟಿವಿಟೀಸಲ್ಲಿ ತುಂಬಾ ಇಂಟ್ರಸ್ಟ್ ಇದೆ, ಸ್ಕೂಲಲ್ಲಿದ್ದಾಗ ಸಿಂಗಿಂಗ್, ಡಾನ್ಸಿಂಗ್ ಎಲ್ಲಾ ಮಾಡ್ತಿದ್ದೆ” ಅಂತ ಹೇಳ್ದಾಗ ಅವ್ರು “ಇಂಟರ್ನ್ಯಾಶನಲ್ ಚಿಲ್ಡ್ರನ್ಸ್ ಫಿಲ್ಮ್ ಫೆಸ್ಟಿವಲ್ ಇದೆ. ಇದ್ರಲ್ಲಿ ಬೇಕಾದ್ರೆ ನೀವು ವಾಲೆಂಟಿಯರ್ ಆಗಿ ವರ್ಕ್ ಮಾಡ್ಬಹುದು” ಅಂದ್ರು.


ಹಾಗೆ ನಾನು ಆ ಫಿಲ್ಮ್ ಫೆಸ್ಟಿವಲ್ಗೆ ವಾಲೆಂಟಿಯರ್ ಆಗಿ ಹೋಗಿದ್ದೆ. ಅಲ್ಲಿ ನನಗೆ ಸೆಕ್ರೇಟ್ರಿಯಾಗಿ ಕೆಲ್ಸ ಕೊಟ್ಟಿದ್ರು, ಹೋಟೆಲ್ ಅಶೋಕದಲ್ಲಿ. ಅಲ್ಲಿಗೆ ಶಂಕರ್ ನಾಗ್ ಸರ್ ಮತ್ತೆ ಅಮೂಲ್ ಪಾಲೆಕರ್ ಜೀ ಬಂದಿದ್ರು. ಹಾಗೇ ಮಾತಾಡ್ತಾ ಇದ್ದಾಗ ನನ್ನ ಹೆಸರು ಕೇಳಿ, “ಮರಾಠಿ ಬರುತ್ತಾ ನಿನಗೆ?” ಅಂತ ಕೇಳಿದ್ರು. “ಹೌದು ಬರುತ್ತೆ” ಅಂದೆ. ಮರಾಠಿನಲ್ಲಿ ಮಾತಾಡಿದ್ರು, ಅಮೂಲ್ ಪಾಲೇಕರ್ ಜೀ ಕೂಡ ಇದ್ರು. ಅವಾಗ ಮಾತುಕತೆ ಆಯ್ತು ಅಷ್ಟೆ.


ಅದಾದ್ಮೇಲೆ ನನ್ದು 9 ಟು 5 ಜಾಬ್ ಇತ್ತಲ್ವ? ನಾನು ಜಾಬ್ ಮಾಡ್ತಾ ಇದ್ದೆ, ನನ್ನ ಕಾಂಟ್ಯಾಕ್ಟ್ ಡೀಟೈಲ್ಸ್ ಇತ್ತು ಅನ್ಸುತ್ತೆ, ಒಂದು ದಿವ್ಸ ನಮ್ಮ ಶೋರೂಮ್ ಗೆ ಕಾಲ್ ಬಂತು ನನಗೆ. “ನಮ್ಮ ಪ್ರೊಡ್ಯೂಸರ್ ಅವ್ರು ನಿಮ್ಹತ್ರ ಮಾತಾಡ್ಬೇಕಂತೆ” ಅಂದ್ರು. ಅವಾಗ ನನಗೆ ಯಾರು? ಏನು? ಗೊತ್ತಿರ್ಲಿಲ್ಲ. “ವುಡ್ಲ್ಯಾಂಡ್ ಹೊಟೇಲಲ್ಲಿ ಒಂದು ಟಿ.ವಿ. ಸೀರಿಯಲ್ ಗೆ ಆಡೀಷನ್ ಇದೆ. ನೀವು ಬರ್ಬೇಕು, ಹಿಂದಿ ಚೆನ್ನಾಗಿ ಮಾತಾಡ್ತೀರ ಅಲ್ವಾ?” ಅಂದ್ರು ನಾನು “ಹೌದು” ಅಂದೆ. ಹಾಗೆ ಆಡೀಶನ್ ಗೆ ಹೋದಾಗ ಪ್ರೊಡ್ಯೂಸರ್ ಸರ್ ಅಲ್ಲೇ ಇದ್ರು, ಮಾತಾಡಿದ್ರು. ಆಡೀಶನ್ ಮುಗ್ಸಿ ಬಂದೆ. ಏನಾಗುತ್ತೆ ಅಂತ ಗೊತ್ತಿರ್ಲಿಲ್ಲ ನನಗೆ, ನಾನು ಆಡಿಶನ್ ಕೊಟ್ಟು ಬಂದ್ಬಿಟ್ಟೆ.


ಮಾರನೇ ದಿವ್ಸ ಶೊರೂಮ್ ಗೆ ಕಾಲ್ ಬಂತು. “ನೀವು ಸಂಕೇತ್ ಸ್ಟುಡಿಯೋಗೆ ಬರ್ಬೇಕು, ಮಾತಾಡ್ಬೇಕು” ಅಂದ್ರು. ಅವಾಗ ಫಸ್ಟ್ ನಾನು ಸಂಕೇತ್ ಸ್ಟುಡಿಯೋಗೆ ಹೋಗಿದ್ದು. ಅಲ್ಲಿ ಶಂಕರ್ ಸರ್ ನ ಮೀಟ್ ಮಾಡಿ “ಯಾರು? ಏನು?” ಅಂತ ಪರಿಚಯ ಮಾಡ್ಕೊಂಡು, “ಶೂಟಿಂಗ್ ಆಗುಂಬೆಯಲ್ಲಿ ಇರುತ್ತೆ, ಜೊತೆಯಲ್ಲಿ ಯಾರಾದ್ರೂ ಬರ್ತಾರ?” ಅಂದ್ರು. ಫಸ್ಟ್ ನಾನು ಹೇಗೆ ಹೋದೆ, ಹೇಗೆ ಬಂದೆ ಅಂತನೇ ಗೊತ್ತಿಲ್ಲ ನನಗೆ. ಶಂಕರ್ ನಾಗ್ ಅವರನ್ನ ಮೀಟ್ ಮಾಡ್ದೆ, ಅವ್ರ ಜೊತೆ ಮಾತಾಡ್ದೆ, ಅವ್ರ ಜೊತೆ ಕೆಲ್ಸ ಮಾಡ್ತೀನಿ, ಅವ್ರು ಡೈರೆಕ್ಷನ್ ಮಾಡ್ತಾರೆ. ಅಂದ್ರೆ ನನಗೆ ಫಸ್ಟ್ ಟೈಮ್ ನಂಬಕ್ಕೇ ಆಗ್ಲಿಲ್ಲ, ತುಂಬಾ ಎಕ್ಸಾಯಿಟ್ ಮೆಂಟ್ ಬೇರೆ. ಮನೆಗೆ ಬಂದು ಅಮ್ಮನಿಗೆ ಹೇಳ್ದೆ. ಅಮ್ಮನಿಗೂ ತುಂಬಾ ಖುಷಿಯಾಯ್ತು, “ಹೋಗೋಣ”ಅಂದ್ರು. ಹಾಗೆ ಮೊದಲನೇ ಭೇಟಿಯಾಗಿದ್ದು.


ಪರಮ್: ಶಂಕರ್ ನಾಗ್ ಅವ್ರ ಪರಿಚಯನೂ ಆಗ್ಬಿಡ್ತು ಚಾನ್ಸೂ ಸಿಕ್ಬಿಡ್ತು, ಆ ನಂತರ ಹೇಗೆ?


ಪ್ರತಿಭಾ: ಆ ನಂತರ ನನಗೆ ಫೋನ್ ಮಾಡಿ “ರಾತ್ರಿ ಎಂಟು ಗಂಟೆಗೆ, ಅಮ್ಮನ ಕರ್ಕೊಂಡು ಸಂಕೇತ್ ಸ್ಟುಡಿಯೋ ಹತ್ರ ಬನ್ನಿ, ಅಲ್ಲಿ ಇನ್ನೂ ಕೆಲವು ಜನ ಇರ್ತಾರೆ, ಜೀಪ್ ಅಲ್ಲಿ ಹೊಗ್ಬೇಕು. ಒಂದು ಹತ್ತು ದಿವ್ಸಕ್ಕೆ ಆಗುವಷ್ಟು ಬಟ್ಟೆ ತಗೊಂಡು ಬನ್ನಿ” ಅಂತ ಹೇಳಿದ್ರು. ಅಮ್ಮ ಮತ್ತೆ ನಾನು ಎಲ್ಲ ಪ್ಯಾಕ್ ಮಾಡ್ಕೊಂಡು ಹೋದ್ವಿ. ಅಲ್ಲಿ ನಮ್ಮ ಎಪಿಸೋಡಲ್ಲಿ ಪೂಜಾರಿಯಾಗಿ ಮಾಡ್ದವ್ರು ಮತ್ತೆ ಇನ್ನೂ ಕೆಲವರು ಇದ್ರು. ನನಗೆ ಹೊಸದಾಗಿ ಪರಿಚಯ ಆಗಿದ್ದು ಅವರು. ರಾತ್ರಿಯೆಲ್ಲಾ ಮಾತಾಡ್ಕೊಂಡು ಟ್ರಾವಲ್ ಮಾಡಿದ್ವಿ. ಬೆಳಗ್ಗೆ ಐದುವರೆ ಅಷ್ಟೊತ್ತಿಗೆ ಆಗುಂಬೆ ರೀಚ್ ಆದ್ವಿ. ತುಂಬಾ ಬ್ಯೂಟಿಫುಲ್ ಆಗುಂಬೆ ಅವಾಗ. ನನ್ನ ಫಸ್ಟ್ ಎಕ್ಸಪೀರಿಯನ್ಸ್ ತುಂಬಾ ಚೆನ್ನಾಗಿತ್ತು. ಐದುವರೆಗೆ ಒಂದು ಗೆಸ್ಟ್ ಹೌಸ್ ಮುಂದೆ ಜೀಪ್ ನಿಲ್ತು,


ಎಲ್ಲರೂ ಟಯರ್ಡ್ ಆಗಿದ್ವಿ. ಡೋರ್ ಓಪನ್ ಆಯ್ತು. ಯಾರು ಅಂತ ನೋಡಿದ್ರೆ? ಸ್ವತಃ ಶಂಕರ್ ಅವ್ರು, ಬೆಳಗ್ಗೆ ಐದುವರೆ ಗಂಟೆಗೆ ಡೋರ್ ಓಪನ್ ಮಾಡಿ ನಿಂತಿದ್ದಾರೆ. ಅವ್ರು ನಮಗೆ ಹೇಳಿದ್ರು “ಶಂಕರ್ ಅಂತ ಕರಿಬೇಕು, ಸರ್ ಅನ್ಬಾರ್ದು” ಅಂತ. ನಾವು ಕಾವ್ಯನ ಕಾವ್ಯ ಅಂತನೇ ಕರೀತಿದ್ವಿ, ಅರುಂದತಿ ಮೇಡಮ್ ಗೂ ಅರು ಅಂತಾನೇ ಕರೀತಾ ಇದ್ದಿದ್ದು. ಎಲ್ಲರೂ ಕೂಡ ಅಷ್ಟೇ ಜಗ್ಗ, ಕಾಶಿ, ಸುಂದ್ರಿ, ಗಾಯತ್ರಿ ಹೀಗೆ ಅಷ್ಟೂ ಜನ ಅನ್ಯೋನ್ಯವಾಗಿದ್ವಿ.


ನನ್ನ ಜೀವನದಲ್ಲೇ ಮರೆಯಲಾಗದಂತಹ ಭಾಂದವ್ಯ ಸಿಕ್ತು, ನನಗೆ ಆ ಟಿ.ವಿ. ಸೀರಿಯಲ್ ಅಲ್ಲಿ. ಮತ್ತೆ ನನಗೆ ಎಲ್ಲೂ, ಎಂದೂ ಆತರ ಒಂದು ಟೀಮ್, ಒಂದು ವಾರ್ಮ್ತ್, ಒಂದು ಫ್ಯಾಮಿಲಿ ಬಾಂಡಿಂಗ್ ಅಟ್ಮಾಸ್ಫಿಯರ್ ಸಿಗ್ಲಿಲ್ಲ. ಅಷ್ಟು ಬ್ಯೂಟಿಫುಲ್ ಆಗಿತ್ತು. ಹಾಗೆ ಶಂಕರ್ ಸರ್ ಬಂದು ಎಲ್ಲರಿಗೂ ನಮಸ್ಕಾರ ಮಾಡಿ, ಜೀಪಿನ ಲಾಕ್ ಓಪನ್ ಮಾಡಿದ್ರು. ಆಗ ಅಮ್ಮ “ಇಲ್ಲ ಬಿಡಿ ನಾನೆ ತಗಿತೀನಿ” ಅಂದ್ರೂ ಕೇಳದೆ, ಡೋರ್ ಓಪನ್ ಮಾಡಿ ಅಮ್ಮನಿಗೆ “ಬನ್ನಿ ಅಮ್ಮ” ಅಂತ ಕೈ ಕೊಟ್ಟು ಕೆಳಗೆ ಇಳಿಸಿದ್ರು. ನಾನು ದಂಗಾಗಿ ನೋಡ್ತನೇ ಇದ್ದೆ. ತುಂಬಾ ದಪ್ಪ ಇದ್ರು ನಮ್ಮ ಅಮ್ಮ. ಅವ್ರನ್ನ ನಿಧಾನವಾಗಿ ಕೆಳಗೆ ಇಳ್ಸಿಬಿಟ್ಟು, ನನಗೆ “ಬಾರಮ್ಮ” ಅಂದ್ರು. ಸೀಟ್ ಫೋಲ್ಡ್ ಮಾಡಿ ಉಳಿದವ್ರೂ ಇಳಿತಿದ್ರು, ಆಗ “ಏನು ತಂದಿದ್ದೀರ ಸಾಮಾನು?” ಅಂತ ಕೇಳಿ, ಸೂಟ್ ಕೇಸ್ ನ ಅವ್ರೇ ಎತ್ಕೊಂಡು ನಾಲಕೈದು ಮೆಟ್ಲು ಹತ್ತಿ ತಗೊಂಡು ಹೋದ್ರು. ನಾನು ಅವ್ರ ಹಿಂದೆ ಓಡ್ತಾ ಇದ್ದೀನಿ “ಇಲ್ಲ ಸೂಟ್ಕೇಸ್ ಕೊಡಿ” ಅಂತ. “ಸುಮ್ನೆ ಬಾರಮ್ಮ ನೀನು” ಅಂತ ಹೇಳಿ, ಸೂಟ್ಕೇಸ್ ಹೊತ್ಕೊಂಡು, ಅಮ್ಮನ ಕೈ ಹಿಡ್ಕೊಂಡು ಒಳಗೆ ಕರ್ಕೊಂಡು ಹೋಗಿ ನಮಗೆ ನಮ್ಮ ರೂಮ್ ತೋರ್ಸಿದ್ರು. ಶಂಕರ್ ನಾಗ್ ಅಂತಹ ಸೂಪರ್ ಸ್ಟಾರ್ ಒಬ್ರು ಈ ರೀತಿ, ಕಾಂಟ್ ಬಿಲೀವ್ ದಟ್ ಪರಮೇಶ್ವರ್! ಸೋ ಟಚಿಂಗ್ ಆಂಡ್ ಸೋ ಶಾಕಿಂಗ್ ನನಗೆ.


ಆಮೇಲೆ ರೆಸ್ಟ್ ಮಾಡಿ, ಸ್ನಾನ ಆದ್ಮೇಲೆ, ತಿಂಡಿಗೆ ಹೋದಾಗ ಅಲ್ಲಿ ಟೀಮ್ನವ್ರು ಎಲ್ಲಾ ಇದ್ರು. ಹಾಗೆ ಸುಂದ್ರಿ, ಕಾಶಿ, ಗಾಯತ್ರಿ ಜಗ್ಗ ಎಲ್ಲರ ಪರಿಚಯ ಆಯ್ತು. ಜಗ್ಗ ಮೊದಲೇ ಕೊಆರ್ಡಿನೇಟ್ ಮಾಡ್ತಿದ್ರು. ನಮ್ಮ ಮನೆಯ ಎದುರುಗಡೆ ಮನೆಯವ್ರ ನಂಬರ್ ಕೊಟ್ಟಿದ್ವಿ, ಜಗ್ಗ ಹೋಗೊದು, ಬರೋದು, ಎಲ್ಲಾ ಕೊಆರ್ಡಿನೇಟ್ ಮಾಡ್ತಿದ್ರು. ಸೋ ಈತರ ಫಸ್ಟ್ ಎಂಟ್ರಿ ಆಗಿದ್ದು.

ಪರಮ್: ಶಂಕರ್ ನಾಗ್ ಅವ್ರಲ್ಲಿ ನೋಡಿದ್ದೇನು, ಅವ್ರ ಸಿಂಪ್ಲಿಸಿಟಿ?


ಪ್ರತಿಭಾ: ಅಮೇಜಿಂಗ್ ನನಗೆ ನಿಜವಾಗ್ಲೂ ನಂಬಕ್ಕಾಗಲ್ಲ, ಒಂದು ಸೂಪರ್ ಸ್ಟಾರ್ ಅಂದ್ರೆ ನಮ್ಮ ಇಮ್ಯಾಜ್ಯುನೇಷನಲ್ಲಿ ಇರುತ್ತಲ್ಲ, “ಅದು ತಗೊಂಡು ಹೋಗಿ ಇಡೋ, ಆ ಕೆಲ್ಸ ಮಾಡೋ” ಅಂತೆಲ್ಲಾ ಮಾತಾಡ್ತಾರೆ ಅಂತ. ಐ ಕಾಂಟ್ ಬಿಲೀವ್. ಅವ್ರು ಮಾತ್ರ ಅಲ್ಲ, ಈವನ್ ಅರು ಕೂಡ ಅಷ್ಟೇ, ನಮಗೆ ಬಿಂದಿ ಕೂಡ ಹಾಕಿ ಕೊಡ್ತಿದ್ರು. ಪ್ರೊಡಕ್ಷನ್ ಬುಕ್ ನೊಡಿ ಬಿಂದಿ ಕಂಟಿನ್ಯುಟಿ ನೋಟ್ಕೊಂಡು ಬರಿತಾ ಇದ್ರು. ಆಗ ಮುಬೈಲ್ ಏನೂ ಇರ್ಲಿಲ್ಲ. ಈಗ್ಲೂ ಕೆಲವರು ಫೇಸ್ ಬುಕ್ಕಲ್ಲಿ ಮೆಸೇಜ್ ಕಳಿಸ್ತನೇ ಇರ್ತಾರೆ. ಮಾಲ್ಗುಡಿ ಅಂದ್ರೆ, ಯಂಗ್ ಸ್ಟರ್ ಇಂದ ಹಿಡ್ದು ಓಲ್ಡೇಜ್ ಪೀಪಲ್ ಎಲ್ರಿಗೂ ಇಷ್ಟ. ಮಕ್ಕಳಿಗೂ ತೋರಿಸ್ತಾ ಇರ್ತಾರೆ. ಇಫ್ ಯು ವಾಂಟ್ ಟು ಸೀ ಅ ಸೀರಿಯಲ್ ಸೀ ಮಾಲ್ಗುಡಿ ಡೇಸ್ ಅಂತ.


ಬರೀ ಸೀರಿಯಲ್ ಅಂತಲ್ಲ, ಅದ್ರಲ್ಲಿ ತೋರ್ಸಿರುವಂತಹ ಲೊಕೇಶನ್ ಗಳು, ಮೇಕಿಂಗ್ ಎಲ್ಲಾ ತುಂಬಾ ಚೆನ್ನಾಗಿತ್ತು. ನಿಜವಾಗ್ಲೂ ಹೇಳ್ಬೇಕಂದ್ರೆ ಯಾವುದೋ ಸ್ವಪ್ನ ಲೋಕದಲ್ಲಿದ್ದೀವೋ ಏನೋ ಅಂತ ಹೇಳುವಷ್ಟು ಬ್ಯೂಟಿಫುಲ್ ಆಗಿತ್ತು.


ಪರಮ್: ನೀವು ಎಷ್ಟು ಎಪಿಸೊಡ್ ಮಾಡಿದ್ರಿ?


ಪ್ರತಿಭಾ: ನನಗೆ ಎರಡು ಎಪಿಸೋಡ್ ಸಿಕ್ತು. ನನಗೆ ಫಸ್ಟ್ ಎಪಿಸೋಡ್ ಗಿರೀಷ್ ಕಾರ್ನಾಡ್ ಅವ್ರ ಜೊತೆ ವಾಚ್ಮ್ಯಾನ್ ಅನ್ನೋ ಸೀರೀಸಲ್ಲಿ ಚಾನ್ಸ್ ಸಿಕ್ಕಿದ್ದು, ನನ್ನ ಅದೃಷ್ಟ. ನಾನು ಅದ್ರಲ್ಲಿ ಲೀಡ್ ರೋಲ್ ಮಾಡ್ಬೇಕಿತ್ತು. ಬಟ್ ಅನ್ಫಾರ್ಚುನೇಟ್ಲೀ ನನಗೆ ಆಫೀಸಿಂದ ರಜೆ ಸಿಗ್ಲಿಲ್ಲ. ಸೋ ಲೀಡ್ ಆಕ್ಟ್ರಸ್ ಜೊತೆ ಕೆರೆ ದಂಡೆಯಲ್ಲಿ ಯಾವಾಗ್ಲೂ, ಹರಟೆ ಹೊಡೆಯುವ ರೋಲ್. ಆಗ ವಾಚ್ ಮ್ಯಾನ್ ಬಂದು ಬೈತಾರೆ. “ಇಷ್ಟೊತ್ತು ಏನು ಮಾಡ್ತಿದ್ದೀರ? ಸೂರ್ಯ ಮುಳುಗೊ ಹೊತ್ತಾಯ್ತು, ಮನೆಗೆ ಹೋಗಿ” ಅಂತ. ಇನ್ನೊಂದೆರಡು ಫ್ರೆಂಡ್ಸ್ ಮಾತಾಡೋ ಸೀನ್. ಅವ್ರಿಗೆ ಡಾಕ್ಟರ್ ಆಗುವ ಆಸೆ ಇರುತ್ತೆ. ಮಲತಾಯಿ ಜೊತೆ ಇರೋದು. ತುಂಬಾ ಬಡವರು. ಹೀಗೆಲ್ಲಾ ಡಯ್ಲಾಗ್ ಇರುತ್ತೆ. ಹೀಗೆ ಫಸ್ಟ್ ರೋಲ್. ಅದನ್ನ ನೋಡಿ ನನಗೆ ಇನ್ನೋಂದು ‘ಸವೆಂತ್ ಹೌಸ್’ ಅನ್ನವ ಎಪಿಸೋಡಲ್ಲಿ ಲೀಡ್ ರೋಲ್ ಕೊಟ್ರು.


ಪರಮ್: ಹಾಗೆ ಎರಡು ಎಪಿಸೋಡ್ ಮಾಡಿದ್ರಿ, ಬೇರೆ ಏನನ್ನಿಸ್ತು?


ಪ್ರತಿಭಾ: ಅರು ಅವ್ರು ಪ್ರತಿಯೊಂದು ಸೀನಲ್ಲೂ, ಗಾಯತ್ರಿ ಮತ್ತೆ ಸುಂದ್ರಿ ಅವ್ರ ಜೊತೆ ಕೊಆರ್ಡಿನೇಟ್ ಮಾಡ್ಕೊಂಡು, ಕಂಟಿನ್ಯುಟಿ ಎಲ್ಲಾ ನೋಡ್ಕೊಂಡು, ತುಂಬಾ ಚೆನ್ನಾಗಿ ನಮ್ಮ ಜೊತೆ ಇದ್ರು. ಪರ್ಸನಲ್ ಆಗಿ ನಾನು ಹೆಮ್ಮೆಯಿಂದ ಹೇಳ್ಕೊಳೋದು ಏನಂದ್ರೆ, ನನಗೆ ಅವ್ರು ತುಂಬಾ ಬ್ಯೂಟಿಫುಲ್ ಬಿಂದಿ ಡ್ರಾ ಮಾಡ್ತಿದ್ರು. ಕಾವ್ಯ ಚಿಕ್ಕವಳು ಅವಾಗ, ಅವ್ಳನ್ನೂ ನೋಡ್ಕೊಂಡು, ಅವ್ರ ಕೆಲ್ಸಗಳನ್ನೂ ಅಚ್ಚುಕಟ್ಟಾಗಿ ಮಾಡ್ಕೊಂಡು, ನಮ್ಮ ಊಟ, ತಿಂಡಿ ಎಲ್ಲಾ ನೋಡ್ಕೊತಿದ್ರು. ಅರು ಅವ್ರು ನಮ್ಮನ್ನೆಲ್ಲ ತುಂಬ ಚೆನ್ನಾಗಿ ನೋಡ್ಕೊಂಡಿದ್ದಾರೆ.


ಸ್ಟಾಟಿಂಗಲ್ಲಿ ಲಂಚ್ ಬ್ರೇಕಲ್ಲಿ, ನನಗೆ ಪಿತ್ತ ಇದ್ದಿದ್ರಿಂದ ಹಸಿವು ತಡ್ಕೊಳಕ್ಕೆ ಆಗಲ್ಲ. ಇಮೀಡಿಯಟ್ ಊಟ ಬೇಕು. ಎಲ್ಲರೂ ಬಂದು ಕೈ ತೊಳಿತಾ ಇದ್ರು, ನಾನು ಪ್ಲೇಟ್ ಎತ್ಕೊಂಡೆ, “ಏನು? ನಿನ್ಗೆ ಹಸಿವಾಗ್ತಿದೆ ಅಲ್ವಾ? ಬಾ ಊಟ ಮಾಡು” ಅಂದ್ರು. ಈ ತರ ಕೆಲವೊಂದು ನೆನಪುಗಳನ್ನ ಮರೆಯೊದಕ್ಕೇ ಆಗಲ್ಲ. ಅವ್ರದು ಅಷ್ಟು ಕೇರಿಂಗ್, ಅಷ್ಟು ಒಳ್ಳೆ ವ್ಯಕ್ತಿತ್ವ. ಮತ್ತೆ ಡೈರಕ್ಷನಲ್ಲಿ ಅವ್ರು ಕ್ಯಾಮರಾ ಹಿಂದೆ ಇದ್ರಲ್ಲಾ, ಸೋ ಮೆನಿ ಸೀನ್ಸ್, ಟೇಕ್ಸ್, ರಿ ಟೇಕ್ಸ್ ಆಗ್ತನೇ ಇರುತ್ತೆ.

ನಮ್ಮ ಸೀರಿಯಲ್ಗಳಲ್ಲಿ ಅಥವಾ ಫಿಲ್ಮಲ್ಲಿ ಟಿಪಿಕಲ್ ಸಿಚ್ಯುವೇಷನ್ ಏನಂದ್ರೆ, ಲೈಟ್ಸ್ ಹೆಚ್ಚುಕಮ್ಮಿ ಆಗುತ್ತೆ, ರಿಫ್ಲೆಕ್ಟರ್ ಪ್ರಾಬ್ಲಮ್ ಆಗುತ್ತೆ, ಆಂಗಲ್ ಸರಿ ಇರಲ್ಲ, ಅಥವಾ ಮಧ್ಯದಲ್ಲಿ ಯಾರಾದ್ರೂ ಮಾತಾಡ್ಬಿಡ್ತಾರೆ. ಡಬ್ಬಿಂಗ್ ಇದ್ದಿದ್ರಿಂದ ಸ್ವಲ್ಪ ಕಂಟ್ರೋಲ್ ಮಾಡ್ಕೊಬಹುದಾಗಿತ್ತು. ಅದೇನೇ ಆದ್ರೂ, ನಾನು ಒಂದು ಸಲ ಕೂಡ ಅವ್ರ ಟಿಂಪರ್ ಲೂಸ್ ಮಾಡಿದ್ನ, ಕೋಪ ಬಂದಿದ್ದು ಅಥವಾ ರೇಗಾಡಿದ್ದು ನೋಡೇ ಇಲ್ಲ. ಬೇರೆಯವರದ್ದು ಗೊತ್ತಿಲ್ಲ ಐ ಡೋಂಟ್ ರಿಮೆಂಬರ್. ಸೋ ದಟ್ ಈಸ್ ಸಮ್ಥಿಂಗ್ ಐ ರಿಮೆಂಬರ್ ವೆರಿ ಕ್ಲಿಯರ್ಲೀ.


ಎರಡು ಎಪಿಸೋಡ್, ಹತ್ತು ಹದಿನೈದು ದಿವ್ಸ ಶೂಟ್ ಮಾಡ್ದೆ. ಬೆಂಗಳೂರಲ್ಲಿ ಕಾಲೇಜಲ್ಲೂ ಶೂಟ್ ಮಾಡಿದ್ವಿ. ನನ್ನ ಸಕೆಂಡ್ ಎಪಿಸೋಡ್, ಶೂಟಿಂಗ್ ಟೈಮಲ್ಲಿ ಮಾತ್ರ ಅಲ್ಲ ಬೇರೇನಾದ್ರೂ ಡಿಸ್ಕಸ್ ಮಾಡುವಾಗ, ಯಾರಾದ್ರೂ ಬಂದಿಲ್ಲ ಅಂದ್ರೂ, ಇನ್ನೇನೋ ಸಾಮಾನು ಸಿಗ್ಲಿಲ್ಲ ಅಂದ್ರೂ, ಶಂಕರ್ ಗಂತೂ ಕೋಪ ಬರ್ತನೇ ಇರ್ಲಿಲ್ಲ. ಎಂಟಾಯ್ರ್ ಟೀಮಲ್ಲಿ ಒಂದು ಫ್ಯಾಮಿಲಿ ಬಾಂಡಿಂಗ್ ಇರೋದ್ರಿಂದ ಅನ್ಸುತ್ತೆ. ಬೇರೆ ಯಾರಿಗೂ ಇನ್ನೊಬ್ಬರ ಮೇಲೆ ಕೋಪ ಬರ್ತಿರ್ಲಿಲ್ಲ. ಏನಾದ್ರೂ ಹೆಚ್ಚು ಕಮ್ಮಿ ಆಗಿದ್ರೂ, ಒಬ್ಬರಿಗೊಬ್ಬರು ಸಪೋರ್ಟ್ ಮಾಡ್ತಿದ್ದದನ್ನ ನಾನು ಬಹಳ ಸಲ ನೋಡಿದ್ದೀನಿ.

ಸೋ ನಿಜವಾಗ್ಲೂ ಹೇಳ್ಬೇಕು ಅಂದ್ರೆ, ಟೋಟಲ್ ಅಮೇಜಿಂಗ್ ಎಕ್ಸ್ಪೀರಿಯನ್ಸ್. ನನ್ನ ಸವೆಂತ್ ಹೌಸ್ ಎಪಿಸೋಡಲ್ಲಿ ಕೊಆರ್ಟಿಸ್ಟ್ ಪ್ರಮಿಳಾ, ಹೌಸ್ ಮೇಟ್ ಆಗಿ ಆಕ್ಟ್ ಮಾಡಿದ್ರು. ರವಿ ಅಂತ ಟಾಲ್ ಆಗಿ, ಶಾರ್ಟ್ ನೋಸ್ ನವರು ಒಬ್ರು ಇದ್ದಾರೆ ಅವ್ರು ಡಾಕ್ಟರ್ ಕ್ಯಾರೆಕ್ಟರ್ ಮಾಡಿದ್ರು. ಇನ್ನೊಬ್ರು ಟಾಮಿ ಅಂತ ಅವ್ರದ್ದು ಮಶ್ರೂಮ್ ಬ್ಯುಸ್ನೆಸ್ ಎಲ್ಲಾ ಇತ್ತು. ಅವ್ರು ನನ್ನ ಹಸ್ಬೆಂಡ್ ಕ್ಯಾರೆಕ್ಟರ್ ಮಾಡಿದ್ರು. ಸೋ ಅವಾಗ ಏನಾಗಿತ್ತು ಅಂದ್ರೆ, ನನಗೆ ಹುಷಾರಿರಲ್ಲ ಅವ್ರು ನನಗೆ ಐಸ್ ಹಾಕಿ ಹಣೆ ಮೇಲೆ ಇಡ್ತಾ ಇದ್ರು. ನಾನು ಕೇಳ್ತಾ ಇರ್ತೀನಿ ಟೆಂಪರೇಚರ್ ಎಷ್ಟಿದೆ? ಅಂತ. ಅವ್ರು ಕಡಿಮೆಯಾಗಿದೆ ಅಂತ ಹೇಳಿ ನನ್ನ ತಲೆ ಸವರ್ತಾರೆ. ದಟ್ ಮೂವ್ಮೆಂಟ್ ವಾಸ್ ಸೋ ಟಚಿಂಗ್ ನನಗೆ ಅಲ್ಲೇ ಕಣ್ಣಲ್ಲಿ ನೀರು ಬರಕ್ಕೆ ಶುರುವಾಯ್ತು. ಎವ್ರಿಬಡಿ ವಾಸ್ ಸರ್ಪ್ರೈಸ್ಡ್. ಬಿಕಾಸ್ ದಟ್ ವಾಸ್ ನಾಟ್ ಪಾರ್ಟ್ ಆಫ್ ದ ಪ್ಲಾನ್. ಅಂದ್ರೆ ಎವ್ರಿಬಡಿ ವಾಸ್ ಸೋ ನ್ಯಾಚುರಲ್ಲಿ ಆಕ್ಟ್ ಮಾಡ್ತಿದ್ರು.


ಇನ್ನೊಂದು ಟಾಂಗಾ ಗಾಡಿಯಲ್ಲಿ ನನ್ನ ಹಸ್ಬೆಂಡ್ ಹೋಗ್ತಾರೆ. ನಾನು ಬೇಗ ಸರಿ ಹೋಗ್ಬೇಕು ಅಂತ ಯಾರೋ ಅವ್ರಿಗೆ ಸ್ವೀಟ್ ಲೇಡಿ ಹತ್ರ ಹೋಗಕ್ಕೆ ಹೇಳಿರ್ತಾರೆ. ಅವ್ರು ಹೋದಾಗ ಅವ್ರಿಬ್ಬರ ಮಧ್ಯೆ ಡೈಲಾಗ್ ಇದೆ. ಹೇಗೆ ಅವರ ಮನಸ್ಸು ಬದಲಾವಣೆ ಆಗುತ್ತೆ ಅಂತ. ಅದು ಬಹಳ ಟಚಿಂಗ್ ಸೀನ್. “ನೀನು ಮಾಡ್ತಿರೋದು ತಪ್ಪು. ಆಕ್ಚುಲಿ ನಿನ್ನ ಹೆಂಡ್ತಿನ ನೀನು ಸರಿಯಾಗಿ ನೋಡ್ಕೊಂಡ್ರೆ ಅವಳು ಸರಿ ಹೋಗ್ತಾಳೆ.” ಅಂತ ಹೇಳುವಾಗ ಅವ್ರ ಮನಸ್ಸು ಪರಿವರ್ತನೆ ಆಗೋದು, ದಟ್ ಇಂಟರಾಕ್ಷನ್ ವಾಸ್ ವೆರಿ ಟಚಿಂಗ್.


ಆಮೇಲಂತೂ ಡಬ್ಬಿಂಗ್, ಡಬ್ಬಿಂಗ್ ಅಂದ್ರೆ ನನಗೆ ಹುಚ್ಚು ಹಿಡ್ದೂಗಿತ್ತು, ನನ್ನ ಫ್ರೆಂಡ್ಸ್ ಎಲ್ಲಾ ಕೇಳ್ತಿದ್ರು “ನೀನು ಏನೇ ಕಾಣೊದೇ ಇಲ್ಲ?” ಅಂತ. ನಮ್ಮಮ್ಮ ಬಯ್ತಾ ಇದ್ರು. ನನಗೆ ಗೊತ್ತೇ ಇರ್ಲಿಲ್ಲ ಡಬ್ಬಿಂಗ್ ಏನೂಂತ. ಶಂಕರ್ ಕರ್ದು “ನಿನಗೆ ಗೊತ್ತಾ ಡಬ್ಬಿಂಗ್ ಏನೂಂತ?” “ಇಲ್ಲ ಗೊತ್ತಿಲ್ಲ” ಅಂದೆ. “ಸರಿ ನೀನು ಅವಾಗ ಡೈಲಾಗ್ ಹೇಳಿದ್ದೆ ಅಲ್ವಾ, ಅದನ್ನ ಈಗ ಪ್ಲೇ ಮಾಡ್ತೀವಿ, ನೀನು ಮತ್ತೆ ಆ ಡೈಲಾಗನ್ನ ಹೇಳ್ಬೇಕು”ಅಂತ ಹೇಳ್ಕೊಟ್ರು. ಒಂದೆರಡು ಲೈನ್ ಹೇಳ್ದೆ ಕರೆಕ್ಟಾಗಿ ಬಂತು. “ನೀನು ಬಿಡು ಡಬ್ಬಿಂಗ್ ಆರ್ಟಿಸ್ಟೆ”ಅಂದ್ರು. ನನಗೆ ಫುಲ್ ಖುಷಿಯಾಗೋಯ್ತು. ಅದ್ರಲ್ಲಿ ಆಕ್ಟ್ ಮಾಡಿದ್ದ ಕೆಲವು, ಲೋಕಲ್ ಕನ್ನಡದ ಲೇಡೀಸ್ ಗೆ ಹಿಂದಿ ಅಷ್ಟಾಗಿ ಗ್ರಿಪ್ ಇರ್ಲಿಲ್ಲ. ಶಂಕರ್ ನನಗೆ ಹೇಳಿದ್ರು “ನೀನು ವಾಯ್ಸ್ ಚೇಂಜ್ ಮಾಡಿ ಮಾತಾಡ್ತೀಯ”? ಅಂತ. “ಆಯ್ತು ಏನ್ಮಾಡ್ಬೇಕು? ಹೇಳಿ ಶಂಕರ್” ಅಂದೆ. ಒಂದು ಓಲ್ಡ್ ಲೇಡಿ ತರ ಮಾತಾಡ್ತೀಯಾ? ಅಂದ್ರು. “ಹೂ ಸರ್ ಮಾತಾಡ್ತೀನಿ” ಅಂದೆ. ಅದನ್ನೂ ಮಾಡ್ದೆ. ಹಾಗಾಗಿ ಸಾಕಷ್ಟು ಬೇರೆ ಕ್ಯಾರೆಕ್ಟರ್ ಗಳಿಗೂ ಡಬ್ ಮಾಡ್ದೆ.


ಆಗ ನಾನು ಸಂಕೇತ್ ಸ್ಟುಡಿಯೋಗೆ ಫುಲ್ ಖುಷಿಯಿಂದ ಓಡಾಡ್ತಿದ್ದೆ. ಆಫೀಸಿಗೆ ಚಕ್ಕರ್ ಹಾಕಿ ಇಲ್ಲಾ ಹಾಫ್ ಡೇ ತಗೊಂಡು ಹೋಗ್ತಿದ್ದೆ. ಪಿಂಟಿ ಯವ್ರು ಡಬ್ಬಿಂಗ್ ಇಂಚಾರ್ಜ್ ಇದ್ರು. ಸೋ ಇಟ್ವಾಸ್ ಅಮೇಜಿಂಗ್. ಅವಾಗ ನಮ್ಮ ಫ್ರೆಂಡ್ ಒಬ್ರು, “ಒಂದು ಹಿಂದಿ ಸೀರಿಯಲ್ನ ಮರಾಠಿಗೆ ಡಬ್ ಮಾಡಿಕೊಡ್ತೀಯಾ?” ಅಂತ ಕೇಳಿದ್ರು. ಒಂದು ಎಪಿಸೋಡ್ ಸೆವೆನ್ ಪೇಜಸ್ ಕೊಟ್ರು. ಸಂಕೇತ್ ಸ್ಟುಡಿಯೋದಲ್ಲಿ ಇನ್ಬಿಟ್ವಿನ್ ಟೈಮ್ ಇದ್ದಾಗ ಕೂತ್ಕೊಂಡು, ನಾನು ಬರಿತಾ ಇದ್ದೆ. ಆಗ ಸಡನ್ನಾಗಿ ನೋಡ್ದೆ, ಅನಂತ್ ಸರ್ ಬಂದ್ರು. ನಾನು ಅವ್ರನ್ನೇ ನೋಡ್ತಾ ಇದ್ದೆ. “ಯಾರು ನೀವು? ಏನು ಹೆಸರು ನಿಮ್ದು?” ಅಂದ್ರು. ನಾನು “ಪ್ರತಿಭಾ” ಅಂದೆ. “ಆಕ್ಟಿಂಗ್ ಮಾಡಿದ್ರಾ? ಏನು ರೋಲ್?” ಅಂತೆಲ್ಲಾ ಕೇಳಿ, “ಏನು ಬರಿತಾ ಇದ್ದೀರ?” ಅಂತ ನೋಡಿದ್ರು. “ಮರಾಠಿ! ತುಮ್ಹಾರ ಮರಾಠಿ ಅತ್ತ” ಅಂತ ಕೇಳಿದ್ರು. “ನಾನು ಮರಾಠಿ ಮಾತಾಡೊದು” ಅಂದೆ. “ವೆರಿಗುಡ್, ವೆರಿಗುಡ್” ಅಂದು ಹೋದ್ರು. ಹಾಗೆ ಅನಂತ್ ನಾಗ್ ಸರ್ ಪರಿಚಯ ಆಯ್ತು. ತುಂಬಾ ಜನ ಬೇರೆ ಡಬ್ಬಿಂಗ್ ಆರ್ಟಿಸ್ಟ್ ಗಳ ಪರಿಚಯ ಕೂಡ ಆಯ್ತು. ಸಂಕೇತಲ್ಲೇ ಬೇರೆ ಕೆಲವು ಡಬ್ಬಿಂಗ್ ಆಪರ್ಚುನಿಟೀಸ್ ಕೂಡ ಸಿಕ್ತು ಶಂಕರ್ ಅವ್ರಿಂದ.


ಸೋ ಮಾಲ್ಗುಡಿ ಡೇಸ್ ಅಂದ್ರೆ ಮೈ ಲೈಫ್. ಇನ್ನು ನಮ್ಮ ಜಯಶ್ರೀ ಮೇಡಮ್ ಅವ್ರು. ಒಂದು ದಿನ ನಮ್ಮ ಮನೆಯಲ್ಲಿ ಊಟ ತಿಂಡಿ ಚಿಕ್ಕದಾಗಿ ಮಾಡ್ಕೊಂಡಿದ್ವಿ. “ಲಿಂಗಾಯ್ತ್ರು ನೀವು ಖಾರ ಖಾರವಾಗಿ ಮಾಡ್ಹಾಕ್ತೀರ, ರೊಟ್ಟಿ ಮಾಡ್ತೀಯೇನು?” ಅಂತ ಕೇಳ್ತಿದ್ರು.


ಪರಮ್: ಅದು ಟಿ.ವಿ.ಯಲ್ಲಿ ಬಂದಾಗ ಜನ ನಿಮ್ಮನ್ನ ಗುರ್ತಿಸ್ತಿದ್ರಾ ಹೇಗೆ?


ಪ್ರತಿಭಾ: ಅಯ್ಯೋ, ಟಿ.ವಿ.ನಲ್ಲಿ ಬಂದಾಗಂತೂ, ನಾನು ಎರಡು ಬಸ್ ಚೇಂಜ್ ಮಾಡ್ಕೊಂಡು ಹೋಗ್ತಿದ್ದೆ. ಆಮೇಲೆ ಲೂನ ತಗೊಂಡಿದ್ದು. ಆಗ ನಾನು ರಾಜಾಜಿನಗರ, ಫಿಫ್ತ್ ಬ್ಲಾಕಲ್ಲಿದ್ದಿದ್ದು. ಹೋಗ್ತಿದ್ರೆ ಎಲ್ಲರೂ, “ಅಯ್ಯೋ! ನೀನು ಮಾಲ್ಗುಡಿ ಡೇಸಲ್ಲಿ ಆಕ್ಟ್ ಮಾಡಿದ್ಯ? ಅವ್ರು ನೀವೇ ಅಲ್ವ, ನೋಡಿದ್ವಿ ತುಂಬಾ ಚೆನ್ನಾಗಿತ್ತು” ಅಂತ ಹೇಳ್ತಿದ್ರು. ಬರೀ ನಮ್ಮ ಏರಿಯಾ ಮಾತ್ರ ಅಲ್ಲ, ಬಸ್ ಸ್ಟಾಪ್, ಫಸ್ಟ್ ಬ್ಲಾಕಲ್ಲಿ ಶಾಪಿಂಗ್ ಹೋಗುವ ಏರಿಯಾದಲ್ಲೆಲ್ಲ ಕೇಳ್ತಿದ್ರು.


ಸವೆಂತ್ ಹೌಸ್ ಎಪಿಸೋಡಲ್ಲಿ ನನ್ನ ಮದುವೆ ಬಗ್ಗೆ ಒಂದು ಸೀನ್ ಇರುತ್ತೆ. ನಾನು ಕಾಲೇಜಿಗೆ ಹೋಗುವಾಗ ನನಗೂ ಇನ್ನೊಬ್ರಿಗೂ ಪ್ರೀತಿ ಹುಟ್ಟುತ್ತೆ. ನನ್ನ ತಂದೆಗೆ ವಿಷಯ ಗೊತ್ತಾಗುತ್ತೆ. ಅವ್ರಿಗೆ ತುಂಬಾ ಕೋಪ ಬರುತ್ತೆ. ಒಂದೆರಡು ಸೀನಲ್ಲಿ ನಮ್ಮ ತಾಯಿ ಇರ್ಬೇಕು ಅಂತ ಇತ್ತು. ನಮಗೆ ಏನೂ ಗೊತ್ತಿರ್ಲಿಲ್ಲ ಆಗ. ಅವ್ರು ಏನೋ ಡಿಸ್ಕಸ್ ಮಾಡ್ತಿದ್ರು, ಅವಾಗ ಸಡನ್ನಾಗಿ “ಪ್ರತಿಭಾ, ಅಮ್ಮ ಎಲ್ಲಿ?“ ಅಂದ್ರು. “ಅವ್ರು ರೂಮಲ್ಲಿದ್ದಾರೆ” ಅಂದೆ. “ನೋಡು ನಿನ್ನ ಅಮ್ಮನ ರೋಲ್ ಅವ್ರೇ ಯಾಕೆ ಮಾಡ್ಬಾರ್ದು?” ಅಂದ್ರು. “ಇಲ್ಲ ಅವ್ರಿಗೆ ಏನೂ ಬರಲ್ಲ” ಅಂದ್ರೆ, “ಏನೂ ಇಲ್ಲ ಸುಮ್ನೆ ನೋಡ್ಕೊಂಡು ಹೋಗ್ಬೇಕು ಅಷ್ಟೇನೆ, ಮಾಡ್ತಾರಾ?” ಅಂದ್ರು.


ಆಗ ನಾನು “ಕೇಳ್ನೋಡೊಣ” ಅಂದೆ. ಆ ಮೇಲೆ ಅಮ್ಮನ ಕರೆದ್ರು. ಆಗ ಅಮ್ಮ ಏನಾಗ್ಹೋಯ್ತೋ? ಅಂತ ಬಂದ್ರು. “ಏನಿಲ್ಲಮ್ಮಾ, ಅವಳ ಅಮ್ಮನ ಪಾತ್ರ ನೀವು ಮಾಡ್ಬೇಕು, ಏನಿಲ್ಲ ಒಂದು ಫ್ರೇಮಲ್ಲಿ ಸುಮ್ಮನೆ ಹೋಗ್ಬೇಕು. ಯಾವಾಗ್ಲೂ ಎಡಗಡೆ ಹೆಗಲಿಗೆ ಸೀರೆ ಉಟ್ಕೊಂಡಿರೋರು, ಯಥಾ ಪ್ರಕಾರ ಕುಂಕುಮ, ಕೂದ್ಲು ಒಂದು ಗಂಟು ಹಾಕ್ಕೊಂಡು, ಮಾಡ್ತೀರಾ?” ಅಂದ್ರು. ಅಮ್ಮ “ಮಾಡ್ತೀನಿ” ಅಂದ್ರು. ನನಗೆ ಆಷ್ಚರ್ಯ! “ಏನು ಮಮ್ಮಿ ಮಾಡ್ತೀಯ?” ಅಂದೆ. ಹೇಳ್ದಂಗೆ ಕರೆಕ್ಟಾಗಿ ಮಾಡಿದ್ರು ನಮ್ಮಮ್ಮ.

ಆಮೇಲೆ ಇನ್ನೊಂದು ಸೀನಲ್ಲೂ ಬರುತ್ತೆ. ನಮಗೆ ಜಾತಕ ಕೂಡ್ಬರಲ್ಲ, ಮದುವೆ ಆಗಲ್ಲ, ಅಂತ ಹೇಳಿರ್ತಾನೆ ಪೂಜಾರಿ. ಆಗ ನಾನು ಬೇಜಾರಾಗಿ ರೂಮಿಗೆ ಹೋಗಿ ಬೆಡ್ ಮೇಲೆ ಬಿದ್ಕೊಂಡು ಅಳ್ತೀನಿ. ಆಗ ನನ್ಹೆಸ್ರು ಕೂಗ್ಬಿಟ್ಟು ಬಾಗ್ಲು ತಟ್ತಾರೆ ನಮ್ಮಮ್ಮ. ಅದೊಂದು ಸೀನ್ ಇತ್ತು. “ಅದೊಂದು ಸೀನ್ ಗೆ ಬೆಂಗಳೂರಿಂದ ಯಾರ್ನಾದ್ರೂ ಕರೆಸಬೇಕು, ನೀವು ಮಾಡ್ತೀರಾ?” ಅಂದ್ರೆ “ಮಾಡ್ತೀನಿ” ಅಂತ ಮಾಡಿದ್ರು. ಶಿ ವಾಸ್ ವೆರಿ ಕಮ್ಫರ್ಟೆಬಲ್ ಗೊತ್ತಾ? ನಮ್ಮ ತಂದೆ ಫ್ಯಾಮಿಲಿ ತುಂಬಾ ಟ್ರೆಡಿಷ್ನಲ್. ನಮ್ಮ ತಾಯಿ ಫ್ಯಾಮಿಲಿ ಪರ್ವಾಗಿಲ್ಲ. ನಮ್ಮ ತಾತ ಕಲೆಕ್ಟರ್ ಆಗಿದ್ರಿಂದ, ತುಂಬಾ ಮಾರ್ಡನ್ ಆಗಿದ್ರು. ಅದಾದ್ಮೇಲೆ “ಏನು ಜಯ? ನೀನು ಬೇರೆ ಕಾಣ್ಸಿದ್ಯಂತೆ ಟಿ.ವಿ.ನಲ್ಲಿ?” ಅಂತಿದ್ರು. ನಮ್ಮಮ್ಮ ಯಾಕೆ ಒಪ್ಕೊಂಡ್ರು ಅಂದ್ರೆ, ಅಲ್ಲಿನ ವಾತಾವರಣ ನೋಡಿ. ಅವ್ರು ಯಾವತ್ತೂ ಕೇಳುವವ್ರು “ಏನಾಯ್ತು? ಹೇಗಿತ್ತು? ಹೊರಟ್ಯ ನೀನು? ಬೇರೇನು ಪಚ್ರಪಂಚನೇ ಗೊತ್ತಿಲ್ಲ ನಿನ್ಗೆ. ಮಾಲ್ಗುಡಿ ಡೇಸ್ ಆದ್ಮೇಲೆ ಯಾವಾಗ್ಲೂ ಸಂಕೇತ್ ಅಲ್ಲೇ ಇರ್ತೀಯ” ಅಂತಿದ್ರು.


ಆ ಮೇಲೆ ದೇವರಾಜ್ ಅಂತ ಒಬ್ರು ಇದ್ರು, ಅವ್ರು ಸ್ಕಲ್ಪಚರ್ ಮಾಡ್ತಿದ್ರು, ನನಗೆ ಇನ್ನೂ ಜ್ಞಾಪಕ ಇದೆ, ಎತ್ತರಕ್ಕೆ ಒಳ್ಳೆ ಪರ್ಸನಾಲಿಟಿ. ಅವ್ರೂ ಅದ್ರಲ್ಲಿ ಎರಡು ಚಿಕ್ಕ ರೋಲ್ ಮಾಡಿದ್ರೇನೋ ಗೊತ್ತಿಲ್ಲ. ಅಂದ್ರೆ ಇವೆಲ್ಲಾ ತುಂಬಾ ಒಳ್ಳೆ ನೆನಪುಗಳು. ಮಾಸ್ಟರ್ ಮಂಜುನಾಥ್ ಮತ್ತೆ ನಾನು ತುಂಬಾ ಒಳ್ಳೆ ಫ್ರೆಂಡ್ಸ್ ಆಗಿದ್ವಿ.


ಮಾಲ್ಗುಡಿ ಡೇಸ್ ಆದ್ಮೇಲೆ, ನನಗೆ ಇನ್ನೊಂದು ಸೀರಿಯಲ್ ಸಿಕ್ಕಿತ್ತು. ಅದ್ರಲ್ಲಿ ನಾನು ಜರ್ನಲಿಸ್ಟ್. ನನ್ನದೊಂದು ಲೂನ ಓಡಿಸ್ತಾ ಇರ್ತೀನಿ. ‘ಮೆಕ್ಯಾನಿಕ್ ಮುದ್ದ’ ಅಂತ ಹೆಸ್ರು. ಮಂಜು ಚೈಲ್ಡ್ ಲೇಬರ್ ಮೆಕ್ಯಾನಿಕ್ ಆಗಿರ್ತಾನೆ. ಸೋ ನಾನು ಲೂನದಲ್ಲಿ ಹೋಗ್ತಾ ಸಡನ್ನಾಗಿ ಬಿದ್ದೋಗ್ಬಿಡ್ತೀನಿ. ಅವಾಗ ಅವ್ನು ಗ್ಯಾರೇಜಲ್ಲಿ ಇರ್ತಾನೆ. ನಾನು ಮಾರನೇ ದಿವ್ಸ ಹೋದಾಗ ಕೇಳ್ತೀನಿ, “ಏನೋ ಇಷ್ಟು ಚಿಕ್ಕ ಹುಡುಗ ಯಾಕೋ ನೀನು ಸ್ಕೂಲಿಗೆ ಹೋಗಲ್ಲ?” ಅಂತ. “ಏನ್ಮಾಡೋದು ಮೇಡಮ್ ಹಾಗೆ, ಹೀಗೆ” ಅಂತೆಲ್ಲಾ ಹೇಳ್ತಾನೆ.


ನಾನು ಜರ್ನಲಿಸ್ಟ್ ಆಗಿದ್ರಿಂದ ಒಂದು ಆರ್ಟಿಕಲ್ ಬರಿತೀನಿ. ಅದ್ರಿಂದ ಅವ್ನನ್ನ ಕೆಲ್ಸದಿಂದ ಬಿಡ್ಸಿ, ಬುದ್ದಿ ಹೇಳಿ ಸ್ಕೂಲಿಗೆ ಸೇರಿಸುವ ಒಂದು ಸೀನ್. ದಟ್ ವಾಸ್ ಮೈ ಎಕ್ಸ್ಪೀರಿಯನ್ಸ್ ವಿಥ್ ಮಾಸ್ಟರ್ ಮಂಜುನಾಥ್. ಅಲ್ಲಿ ಅವನ ಜೊತೆ ಇದ್ದ ಹುಡುಗ್ರನ್ನೆಲ್ಲಾ ಶೂಟಿಂಗ್ ಮುಗಿದ ಮೇಲೆ ನಮ್ಮ ಮನೆಗೆ ಕರ್ಕೊಂಡು ಹೋಗಿದ್ದೆ, ನಾವು ಒಳ್ಳೆ ಫ್ರೆಂಡ್ಸ್ ಆಗಿದ್ವಿ. ದಟ್ ವಾಸ್ ಆಲ್ಸೋ ನೈಸ್ ಎಕ್ಸ್ಪೀರಿಯನ್ಸ್. ಮಾಲ್ಗುಡಿ ಡೇಸ್ ನಂತರ ನನಗೆ ಒಳ್ಳೆಯ ಅನುಭವಗಳು ಸಿಕ್ತು. ಡಬ್ಬಿಂಗ್ ಎಕ್ಸ್ಪೀರಿಯನ್ಸ್ ಸಿಕ್ತು. ಆಮೇಲೆ ನಾನು 1995 ರಲ್ಲಿ ನನ್ನ ಮಗನಿಗೆ ಎರಡು ವರ್ಷ ಇದ್ದಾಗ, ನಾನು ಫಾರಿನ್ ಗೆ ಹೋದೆ. ಆಮೇಲೆ 2010 ರ ವರಗೂ ನಾನು ಅಲ್ಲೇ ಇದ್ದೆ. ಫಸ್ಟ್ ಮೂರು ವರ್ಷ ಒಮಾನ್ ನಲ್ಲಿದ್ದೆ, ಆಮೇಲೆ ಹತ್ತು ವರ್ಷ ದುಬಾಯಿನಲ್ಲಿದ್ದೆ.


ಆಮೇಲೆ ನನ್ನ ಮಗನಿಗೆ ಟುವೆಲ್ಥ್ ಅಲ್ಲಿ ಬೋರ್ಡ್ ಎಕ್ಸಾಮ್ ಇದ್ದಿದ್ರಿಂದ, ನಾನು ಕೆರಿಯರಲ್ಲಿ ಬ್ರೇಕ್ ತಗೊಂಡು ನಾಲ್ಕು ವರ್ಷ ಬೆಂಗ್ಳೂರಲ್ಲೇ ಇದ್ದೆ. ಆ ಟೈಮಲ್ಲಿ, ಒಂದೆರಡು ಟಿ.ವಿ.ಸೀರಿಯಲ್, ಒಂದೆರಡು ಫಿಲ್ಮ್ಸ್ ಗೂ ಆಫರ್ ಬಂತು. ಬಟ್ ನಿಜ ಹೇಳ್ಬೇಕು ಅಂದ್ರೆ, ಒಂದೆರಡು ಟಿ.ವಿ.ಸೀರಿಯಲಲ್ಲಿ ಮಾಡ್ದೆ ನಾನು. ಬಟ್ ಇಟ್ವಾಸ್ ಮೋಸ್ಟ್ ಡಿಸಪಾಯಿಂಟಿಂಗ್ ಎಕ್ಸ್ಪೀರಿಯನ್ಸ್. ಯಾಕಂದ್ರೆ, ಮಾಲ್ಗುಡಿ ಡೇಸ್, ಮತ್ತೆ ಆಗಿನ ಟಿ.ವಿ.ಸೀರಿಯಲಲ್ಲಿ ಆಕ್ಟ್ ಮಾಡ್ತಿದ್ದಾಗ, ಫೀಮೇಲ್ ಆರ್ಟಿಸ್ಟ್ ಗೆ ಎಷ್ಟು ಮರ್ಯಾದಿ ಕೊಡ್ತಿದ್ರು? ಎಸ್ಪಷಲ್ಲಿ ಮಾಲ್ಗುಡಿ ಡೇಸಲ್ಲಿ. ನಾನು ಒಂದು ಸಣ್ಣ ರೋಲ್, ಮತ್ತೆ ಒಂದು ಲೀಡ್ ರೋಲ್ ಮಾಡಿದ್ದೆ, ಅದು ಮೋಸ್ಟ್ ಅಫೆಕ್ಷನ್, ಅಂತಹ ಟೀಮ್ ನೋಡಿ ಐ ಅಸ್ಯೂಮ್ಡ್ ದಟ್, “ಇಟ್ ವಾಸ್ ಅ ಬ್ಯೂಟಿಫುಲ್ ಇಂಡಸ್ಟ್ರೀ” ಅಂತ. ಸೋ ಒಂದೆರಡು ಎಕ್ಸಟ್ರೀಮ್ಲೀ ಡಿಸಪಾಯಿಂಟಿಂಗ್ ಎಕ್ಸ್ಪೀರಿಯನ್ಸ್ ಆಯ್ತು ನನಗೆ. ಇನ್ ಟರ್ಮ್ಸ್ ಆಫ್ ಫೀಸ್ ಆಗ್ಲೀ, ಇನ್ ಟರ್ಮ್ಸ್ ಆಫ್ ಟ್ರೀಟ್ಮೆಂಟ್ ಆಗ್ಲೀ. ಬಿಕಾಸ್ ಆಫ್ ದಿಸ್ ನಾನು ಹಿಂದೇಟು ಹಾಕ್ದೆ.


ನಾನು ಟಿ.ವಿ. ಸೀರಿಯಲ್, ಅಥವಾ ಫಿಲ್ಮ್ಸ್ ಅದೇನೇ ಮಾಡಿದ್ರೂ ಕೂಡ ಅದಕ್ಕೆ ಕಾರಣ ‘ಮಾಲ್ಗುಡಿ ಡೇಸ್ ಆಂಡ್ ಶಂಕರ್ ನಾಗ್.’ಅವರ ತರ ಆ ಸೀರಿಯಲ್, ಆ ಡೈರೆಕ್ಷನ್, ಆ ಪ್ರೊಡಕ್ಷನ್ ಟೀಮ್, ಕೋ ಆಕ್ಟರ್ಸ್, ಆ ಲೊಕೇಶನ್ಸ್, ಈಚ್ ಆಂಡ್ ಎವ್ರಿ ಥಿಂಗ್. ಅವೆಲ್ಲಾ ಮರೆಯಲಾಗದ ಅನುಭವಗಳು. ಮತ್ತೆ ಎಂದಿಗೂ ನನ್ನ ಜೀವನದಲ್ಲಿ ಸಿಗದೇ ಇರುವಂತಹ ಆಪರ್ಚುನಿಟೀಸ್ ಸಿಕ್ತು. ನಿಜ ಹೇಳ್ಬೇಕಂದ್ರೆ ನನಗೆ ಗೊತ್ತಾದಾಗ “ಶಂಕರ್ ಅವ್ರ ಆಕ್ಸಿಡೆಂಟ್ ಆಯ್ತು” ಅಂದಾಗ, ದಟ್ ವಾಸ್ ಅನ್ ಬಿಲೀವೆಬಲ್. ನಮ್ಮ ಕರ್ನಾಟಕದಲ್ಲಿ ಎಲ್ಲಾ ಆಕ್ಟರ್ ಗಳು ಆಕ್ಟ್ರೆಸ್ ಗಳು ಎಲ್ರೂ ಚೆನ್ನಾಗಿದ್ದಾರೆ. ಬಟ್ ಶಂಕರ್ ವಾಸ್ ಸಮ್ಥಿಂಗ್ ಎಲ್ಸ್. ಹೀ ವಾಸ್ ಔಟ್ಸ್ಟಾಂಡಿಂಗ್ ಆಂಡ್ ಕಂಪ್ಲೀಟ್ಲೀ ಡಿಫ್ರೆಂಟ್. ಮೋಲ್ಡಲ್ಲಿ ಇರುವಂತಹ ಮನುಷ್ಯ.


ಶಂಕರ್ ಅವ್ರು ಒಂದ್ಕಡೆ ಸೂಪರ್ ಸ್ಟಾರ್, ಒಂದ್ಕಡೆ ಆಕ್ಟರ್, ಒಂದ್ಕಡೆ ಡೈರೆಕ್ಟರ್. ಹೀ ಹ್ಯಾಸ್ ಡಿಫ್ರೆಂಟ್ ಪರ್ಸನಾಲಿಟೀಸ್. ಬಟ್ ಅವ್ರಂತಹ ಹ್ಯೂಮನ್ ಬೀಯಿಂಗ್ ಎಲ್ಲೂ ಇಲ್ಲ.

ನೋಡಿ ನಾವು ಮೆಟ್ರೋದಲ್ಲಿ ಓಡಾಡ್ತೀವಿ. ಒರಿಜಿನಲ್ ಐಡಿಯಾ ಟು ಬ್ರಿಂಗ್ ಮೆಟ್ರೋ ಟು ಕರ್ನಾಟಕ ವಾಸ್ ಶಂಕರ್ ನಾಗ್. ಅಂತಹ ವ್ಯಕ್ತಿನ ಅಷ್ಟು ಬೇಗ ಕಳ್ಕೊಂಡ್ವಿ. ಅವ್ರು ಇನ್ನಷ್ಟು ವರ್ಷಗಳಿದ್ದು, ಇನ್ನಷ್ಟು ಕೆಲ್ಸಗಳು ಮಾಡ್ಬೇಕಿತ್ತು. ನಮ್ಗೆ ಇನ್ನಷ್ಟು ಫಿಲ್ಮ್ ಆಂಡ್ ಸೀರಿಯಲ್ಸ್ ಕೊಡ್ಬೇಕಿತ್ತು. ಬಟ್ “ದೇವರು ತುಂಬಾ ಇಷ್ಟವಾದವ್ರನ್ನೇ ಬಹಳ ಬೇಗ ಕರ್ಕೊತಾರೆ.” ಅಂತ ಹೇಳ್ತಾರಲ್ಲ? ಹಾಗೆ ದಟ್ ವಾಸ್ ವೆರಿ ಅನ್ಫಾರ್ಟ್ಯುನೇಟ್. ಆದ್ರೆ ಅವ್ರ ನೆನಪು, ಸ್ಮೈಲ್, ಸಿನಿಮಾಗಳಲ್ಲಿ ಅವರ ವಾಯ್ಸ್ ಎಲ್ಲಾದ್ರು ಕೇಳ್ಸಿದ್ರೆ ನಮ್ಮ ಕಿವಿ ತಕ್ಷಣ ಚುರುಕಾಗಿ ಬಿಡುತ್ತೆ. ಶಂಕರ್ ಅಂತಹ ಒಬ್ಬ ವ್ಯಕ್ತಿ.ಸಂದರ್ಶನ-ಕೆ.ಎಸ್ ಪರಮೇಶ್ವರ

(ಮಾಲ್ಗುಡಿ ಡೇಸ್ ನಟಿ, ಪ್ರತಿಭಾ ಬಿಡದೀಕರ್ ಅವರ ಅನುಭವಗಳು ಇಲ್ಲಿಗೆ ಮುಕ್ತಾಯವಾಯಿತು. ಶಂಕರ್ ನಾಗ್ ಅವರ ಆತ್ಮೀಯ ಶಿಶ್ಯ ಹಾಗೂ ಹೆಸರಾಂತ ನಟ ಅವಿನಾಶ್ ಅವರ ನೆನಪುಗಳು ಮುಂದಿನ ಸಂಚಿಕೆಯಲ್ಲಿ.)

23 views