ಮಾಲ್ಗುಡಿ ಡೇಸ್ ಬಜೆಟ್ ಎಷ್ಟು??

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 101

( ಶಂಕರ್‌ನಾಗ್‌ ಕುರಿತಂತೆ ಮಾಲ್ಗುಡಿ ಡೇಸ್‌ ನಿರ್ಮಾಪಕರ ನೆನಪುಗಳು)
ಪರಮ್: ಒಟ್ಟು ಬಜೆಟ್ ಎಷ್ಟು ಸಾರ್?


ಬದರಿನಾಥ್: ಹಿಂದಿ ಮತ್ತೆ ಇಂಗ್ಲೀಷ್ ಕಂಬೈನ್ ಮಾಡಿ, ಒಂದು ಎಪಿಸೋಡಿಗೆ ಐದು ಕಾಲು ಲಕ್ಷದಷ್ಡು ಹೋಗ್ತಾ ಇತ್ತು. ಬಿಕಾಸ್ ಒಂದು ಎಪಿಸೋಡ್ ಗೆ ಶೂಟಿಂಗ್ ಟೈಮ್ ನಾಲ್ಕು ದಿನ ಆಗ್ತಿತ್ತು. ಈಗಿನ ತರ ಆಗ್ತಿರ್ಲಿಲ್ಲ.


ಪರಮ್: ಈಗ ಜಾಸ್ತಿ ಟೈಮ್ ತಗೊತಾರೆ


ಬದರಿನಾಥ್: ಹೌದು. ನಮಿಗೆ ನಾಲ್ಕು, ಐದು ದಿನ ಬೇಕಾಗ್ತಿತ್ತು. ಸ್ವಲ್ಪ ಕಾಂಪ್ಲಿಕೇಟಡ್ ಎಪಿಸೋಡ್ಸ್ ಆದ್ರೆ ಆರು ದಿನ ಬೇಕಾಗ್ತಿತ್ತು. ನಾನು ಹೇಳಿದ್ನಲ್ಲ, ಯಾವುದ್ರಲ್ಲೂ ಕೊರತೆ ಇರ್ಲಿಲ್ಲ. ಪೇಮೆಂಟ್ ವಿಚಾರದಲ್ಲಿ ನಮ್ಮ ಅಪ್ಪಂದು ಬಹಳ ಸ್ಟ್ರಿಕ್ಟ್ ರೂಲ್ ಇರೋದು, ಈ ತಾರೀಖಿಗೆ ಇವ್ರಿಗೆ ಇಷ್ಟು ಹಣ ಕೊಟ್ಬಿಡ್ಬೇಕು ಅಂತ. ಅದು ವೆಂಕಿ ಇಂಚಾರ್ಜ್. ಚೆಕ್ಬುಕ್, ವೋಚರ್, ಡೀಟೈಲ್ ಎಲ್ಲಾ ವೆಂಕಿನೇ. ಅದಕ್ಕೇ ಹೇಳಿದ್ದು ಬಡ್ಜೆಟ್ ಬಗ್ಗೆ ಜಾಸ್ತಿ ಗುತ್ತಿರೋದೆ ವೆಂಕಿಗೆ. ಎಷ್ಟೋ ಸಲ ಶಂಕರ್ ಯಾವುದಾದ್ರೂ ಪ್ರಾಪರ್ಟಿ ಬೇಕು ಅಂದ್ರೆ, ವೆಂಕಿಗೂ ಅವ್ರಿಗೂ ಡಿಸ್ಕಶನ್ ಆಗ್ತಿತ್ತು. “ಇಲ್ಲ ಶಂಕರ್ ಬಡ್ಜೆಟ್ ಇಲ್ಲಿಗೆ ಕ್ಲೋಸ್ ಆಗಿದೆ ಇನ್ನು ಖರ್ಚು ಮಾಡಕ್ಕೆ ಹಣ ಇಲ್ಲ” ಅಂತ. ಹೀಟಡ್ ಆರ್ಗ್ಯುಮೆಂಟ್ಸ್ ಏನೂ ಆಗ್ತಿರ್ಲಿಲ್ಲ, ನೆವರ್ ಸಾಧ್ಯನೇ ಇಲ್ಲ. ಟೀಮ್ ಅಷ್ಟು ಚೆನ್ನಾಗಿತ್ತು. ‌ಮುಂದುವರೆಯುವುದು…

16 views