ಮಾಲ್ಗುಡಿ ಡೇಸ್‌ ಮಾಡಿದ್ದು ಯಾಕೆ ಹ್ಯಾಗೆ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 94

( ಶಂಕರ್‌ನಾಗ್‌ ಕುರಿತಂತೆ ಮಾಲ್ಗುಡಿ ಡೇಸ್‌ ನಿರ್ಮಾಪಕರ ನೆನಪುಗಳು)ಸೋ ಆ ಟೈಮಲ್ಲಿ ‘ಶಾರದಾ ಪ್ರಸಾದ್’ ಅಂತ ಇನ್ಪರ್ಮೇಷನ್ ಅಡ್ವಾಯಿಸರ್ ಟು ದ ಪ್ರೈ ಮಿನಿಸ್ಟರ್, ಇಂದಿರಾ ಗಾಂಧಿ. ಅವಾಗ ಆರ್.ಕೆ.ನಾರಾಯಣ್ ರಾಜ್ಯಸಭಾ ಮೆಂಬರ್ ಆಗಿದ್ರು. ಒಂದು ದಿನ ಮೀಟ್ ಮಾಡ್ದಾಗ ಕೇಳಿದಾರೆ, “ಯಾಕೆ ನಿಮ್ಮ ನಾವೆಲ್ಸ್ ದೂರದರ್ಶನದಲ್ಲಿ ಬರ್ತಾ ಇಲ್ಲ?” ಅಂತ. ಅವಾಗ ಇದ್ದಿದ್ದು ಅದೊಂದೇ ಚಾನೆಲ್. ಸೋ ನಾರಾಯಣ್ ಹೇಳಿದ್ರು “ ನನಿಗೆ ಗೊತ್ತಿಲ್ಲ” . ಭಾಸ್ಕರ್ ಘೋಷ್ ಅಂತ ಡೈರಕ್ಟರ್ ಜನರಲ್ ಆಫ್ ದೂರದರ್ಶನ್, ಅವ್ರನ್ನ “ಹೋಗು ಆರ್.ಕೆ.ನಾರಾಯಣ್ ಮನೆಗೆ ಹೋಗಿ ರೈಟ್ಸ್ ತಗೊ, ಕತೆಗಳೆಲ್ಲಾ ದೂರದರ್ಶನಲ್ಲಿ ಮಾಡೋಣ” ಅಂತ ಕಳ್ಸಿದ್ರು. ಹಾಗೆ ದೂರದರ್ಶನ್ ಟೀಮ್ ಬಂತು ಆರ್.ಕೆ.ನಾರಾಯಣ್ ಅವ್ರ ಮನೆಗೆ. ಆಗ ಅವ್ರು ಹೇಳಿದ್ರು ಇದನ್ನ ಮಾಡೋದಾದ್ರೆ ಒಬ್ಬನೇ ವ್ಯಕ್ತಿ ಮಾಡ್ಬೇಕು ‘ನರಸಿಂಹನ್ ಅಂತ ಬೆಂಗಳೂರಿನವ್ರು ನೀವು ಹೋಗಿ ಅವ್ರನ್ನ ಮೀಟ್ ಮಾಡಿ ಅಂತ ಕಳ್ಸಿದ್ರು.


ಹಾಗೆ ಅವ್ರು ಬಂದಾಗ ಅಪ್ಪ ಹೇಳಿದ್ರು, “ಅದನ್ನ ಮಾಡೊದಾದ್ರೆ ನಾನೇ ಮಾಡ್ತೀನಿ, ನಿಮ್ಮ ಚಾನೆಲಲ್ಲಿ ಟೆಲಿಕಾಸ್ಟ್ ಮಾಡಿ” ಅಂತ ಹೇಳಿದ್ರು. “ಅಲ್ಲ ನೀವು ಕರ್ನಾಟಕದಲ್ಲಿದ್ದು ಹಿಂದಿಯಲ್ಲಿ ಹೇಗೆ ಮಾಡ್ತೀರ?” ಅಂತ ಕೇಳಿದ್ರು. ಫಸ್ಟ್ ಕ್ವಶ್ಚನ್ ಎಲ್ಲರೂ ಕೇಳುವಂತದ್ದು. ನಾವು ಕರ್ನಾಟಕದವ್ರು ನಮಿಗೆ ಆ ಕಾನ್ಫಿಡೆನ್ಸ್ ಇದೆ, ನಾವು ಮಾಡ್ತೀವಿ ಅಂದ್ರು. ಅದೇ ನಾನು ಹೇಳ್ತೀನಿ, ‘ಮಾಲ್ಗುಡಿ ಡೇಸ್’ ಆಗಿದ್ದು ರೈಟ್ ಟೈಮ್, ರೈಟ್ ಪ್ಲೇಸ್ ವಿತ್ ರೈಟ್ ಪೀಪಲ್. ಕೂಡ್ಬಂದಿದ್ದೇನೂ ಅಲ್ಲ. ಆತರ ಯಾವುದೂ ಕೂಡ್ಬರಲ್ಲ. ಎವ್ರಿ ಡಿಪಾರ್ಟ್ಮೆಂಟ್ ವಾಸ್ ಸೋ ಬ್ಯೂಟಿಫುಲ್ಲೀ ಡನ್. ಮತ್ತೆ ಶಂಕರ್ ಒಪ್ಕೊಂಡಿದ್ದು.


ಸೋ ಮಾಲ್ಗುಡಿ ಮಾಡ್ಬೇಕುಂತಾಯ್ತು, ಆಗ ಡೈರೆಕ್ಟರ್ ಯಾರು? ಸುಮಾರು ಜನ ಹೇಳಿದ್ರು “ಬಾಂಬೆಯಿಂದ ಕರ್ಸಿ” ಅಂತ. ಅಪ್ಪ “ಇಲ್ಲ ಆಗಲ್ಲ ನಾವೇ ಮಾಡ್ಬೇಕು ಯಾಕೆ ಮಾಡಕ್ಕಾಗಲ್ಲ ಮಾಡ್ಬಹುದು. ಇಲ್ಲೇ ಹುಡುಕೋಣ ಟ್ಯಾಲೆಂಟ್ ಇದೆ”ಮುಂದುವರೆಯುವುದು


20 views