ಮಾಲ್ಗುಡಿ ನಮ್ಮಪ್ಪ ಮತ್ತೆ ಶಂಕರ್‌ ಅವರ ಕಾನ್ಫಿಡೆನ್ಸ್

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 100

( ಶಂಕರ್‌ನಾಗ್‌ ಕುರಿತಂತೆ ಮಾಲ್ಗುಡಿ ಡೇಸ್‌ ನಿರ್ಮಾಪಕರ ನೆನಪುಗಳು)ಡಬಲ್ ಗಿಂತ ಹೆಚ್ಚು ಖರ್ಚಾಯ್ತು. ಆ ಅಮೌಂಟನ್ನ ರೀಕವರ್ ಮಾಡಕ್ಕೆ ಬಹಳ ವರ್ಷಗಳೇ ಆಗ್ಹೋಯ್ತು. ಇಮೀಡಿಯಟ್ ಆಗಿ ರಿಕವರ್ ಆಗೊದು ಸಾಧ್ಯನೇ ಇಲ್ಲ. ಆಗಿನ ಕಾಲದಲ್ಲಿ, ಎಲ್ಲೋ ಬೆಂಗಳೂರಿನಲ್ಲಿ ಕೂತ್ಕೊಂಡು ಅದೂ ವಿ ಆರ್ ನಾಟ್ ಬಿಗ್ ಪ್ರೊಡಕ್ಷನ್ ಹೌಸ್. ವಿ ಹ್ಯಾಡ್ ಸಮ್ ನೇಮ್ ಅಷ್ಟೇ. ಅಪ್ಪನಿಗೆ ಗೊತ್ತಿತ್ತು, ಒಂದೊಂದೇ ಚಾನೆಲ್ಸ್ ಸರ್ಕ್ಯುಲೇಟಾಗಿ ಆಗ್ಬೇಕೂಂತ. ಅವಾಗ ಲೆಟರ್ ಬರಿತಿದ್ರು, ಈ ತರ ನಮ್ದು ಮಾಲ್ಗುಡಿ ಡೇಸ್ ಅಂತ ಪ್ರಾಜೆಕ್ಟ್ ಇದೆ. ಆರ್.ಕೆ.ನಾರಾಯಣ್ ಅವ್ರ ಕತೆ, ಸುಮಾರು ಅವಾರ್ಡ್ಗಳು ಕೂಡ ಬಂದಿದೆ. ಅಂತ ಅದನ್ನ ನೋಡಿದ್ಮೇಲೆ ಒಬ್ಬೊಬ್ರಾಗಿ ಶುರು ಮಾಡಿದ್ರು.

ಫಾರ್ ಎಕ್ಸಾಂಪಲ್ ಬಿ.ಬಿ.ಸಿ. ಚಾನೆಲ್ ಅವ್ರು. ದೇ ಆರ್ ವೆರಿ ಬಿಗ್ ಚಾನೆಲ್. ನಾರ್ಮಲ್ ಆಗಿ ಅವ್ರಿಗೆ ಯಾವುದಾದ್ರೂ ಪೈಲೆಟ್ ಕೊಟ್ರೆ, ಅದು ಅಪ್ರೂವಲ್ ಆಗಕ್ಕೆ ಕಡಿಮೆ ಅಂದ್ರೂನೂ ಮೂರು, ನಾಲ್ಕು ವರ್ಷ ಬೇಕು. ನಮ್ಮ ಅದೃಷ್ಟ, ನಾವು ಕೊಟ್ಟು ಒನ್ ಆಂಡ್ ಆಫ್ ಯಿಯರ್ಸಲ್ಲಿ ನಮಿಗೆ ಒಂದು ಲೆಟರ್ ಬಂತು. ಪ್ಲೀಸ್ ಸೆಂಡ್ ದ ಮೆಟೀರಿಯಲ್ ವಿ ಆರ್ ರೆಡಿ ಟು ಟೆಲಿಕಾಸ್ಟ್ ಅಂತ. ಹಾಗೆ ಒನ್ ಆಫ್ ದ ಫಸ್ಟ್ ಬ್ರೇಕ್ ಬಂದಿದ್ದು. ಅದಾದ್ಮೇಲೆ ಸಿಂಗಪೂರ್, ಆಸ್ಟ್ರೇಲಿಯಾ, ಇರಾನ್ ಹಾಗೆ 24ಕಂಟ್ರೀಸ್ ಗೆ ಹೋಗಿದೆ. ನಾಟ್ ದೆಟ್ ಎವ್ರಿಬಡಿ ಪೇಯ್ಡ್ ವೆಲ್. ಉದಾಹರಣೆಗೆ ಶ್ರೀಲಂಕಾದವ್ರು, ದೇ ಪೇಯ್ಡ್ 5000 ರುಪೀಸ್ ಪಾರ್ ಎಪಿಸೋಡ್.ಮುಂದುವರೆಯುವುದು...

8 views