ಪೇಂಟರ್‌ನ ಕರೆಸಿ ಆರ್ಟ್‌ ಡೈರೆಕ್ಟರ್‌ ಮಾಡಿದ ಶಂಕರ್.

Updated: Jun 4, 2021

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 31

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಜಾನ್ ದೇವರಾಜ್ ಪೇಂಟ್ ಮಾಡೋನು, ಮೋಲ್ಡ್ ಮಾಡೋನು. ತಕ್ಷಣಕ್ಕೆ ಇದು ಬೇಕೂಂತಂದ್ರೆ, ಅರ್ಥ ಆಗ್ತಾ ಇರ್ತಿರ್ಲಿಲ್ಲ. ಆ ಮೇಲೆ ಕ್ಯಾಚ್ ಮಾಡ್ಬಿಟ್ರು. ಸಿನಿಮಾ ಟೆಕ್ನಿಕ್ ಏನೂಂತ. “ನೋಡಪ್ಪ ನಮಗೆ ಗಣೇಶ ಬೇಕು” ಅಂತ ಹೇಳಿದ್ವಿ. “ಈಗ ಕೆತ್ತಕ್ಕಾಗಲ್ಲ ಅಂತ ನಮಗೆ ಗೊತ್ತು. ನಾವು ಬರೀ ಸಿದ್ದಿ ವಿನಾಯಕನ ದೇವಸ್ಥಾನ ಅಂತ ಒಂದು ಬೋರ್ಡ್ ಹಾಕೋಣ. ಒಂದು ಕಲ್ಲನ್ನ ನೀರಲ್ಲಿ ತೊಳೆದು ಹರಿಶಿನ, ಕುಂಕುಮ ಹಚ್ಚಿ, ಒಂದು ಹೂವ ಇಟ್ಬಿಟ್ರೆ, ಅದು ದೇವರಲ್ಲ ಅಂತ ನಂಬ್ದೇ ಇರೋನು ಒಬ್ಬನೂ ಇರಲ್ಲ. ನೀನು ಬೇಕಾದ್ರೆ ಒಂದು ಕಾಣಿಕೆ ಹುಂಡಿ ಇಡಲ್ಲಿ. ಹೋಗ್ಬರೋರೆಲ್ಲ ನಮಸ್ಕಾರ ಮಾಡಿ ಎಂಟಾಣಿ ಒಂದು ರೂಪಾಯಿ ಹಾಕ್ದೇ ಇದ್ರೆ ಕೇಳು. ಇದು ಸಿನಿಮಾ ನಮ್ದು, ಬೆಂಕಿ ಮುಂದೆ ಇರುತ್ತೆ ನಾನು ಹಿಂದೆ ನಿತ್ಕೊಂಡು ಕಿರ್ಚ್ತೀನಿ, ಬೆಂಕಿಯಲ್ಲಿ ಸುಟ್ಟ ಹಾಗೆ ತೋರಿಸ್ತೀವಿ ನಾವು. ಇದು ಸಿನಿಮಾ ನೀನು ನಮಗೆ ಅಡ್ಜಸ್ಟ್ ಆಗ್ಬೇಕು.” ಅಂತ ಹೇಳಿದ್ವಿ.


ನಂತರ ಅವ್ರು ತುಂಬಾ ಚೆನ್ನಾಗಿ ಅಡ್ಜಸ್ಟ್ ಆದ್ರು ನಮಗೆ. ಸೂಪರ್ ಆರ್ಟ್ ಡೈರೆಕ್ಟರ್. ಯಾಕಂದ್ರೆ ಒಂದು ಮನೆ ವಿಶ್ವನಾಥ್ ರಾವ್ ಅಂತ ಬೋರ್ಡ್ ಬರೀಬೇಕು. ಬರೆಯಕ್ಕೆ ಹಲಗೆ ಪೀಸು ಏನಿಲ್ಲ, ನಮಗೆ ಅಷ್ಟು ದೂರ ಹೋಗಿದ್ದೀವಿ. ಅವ್ನು ಒಂದು ಅಗಲದ್ದು ಎಲೆ ಕಿತ್ಕೊಂಡು, ಅದ್ರಲ್ಲಿ ಬರೆದ. “ಹೇ ಅದು ಒಣ್ಗೋಗಿ ಬಿಡುತ್ತೋ!” ಅಂದ್ರೆ, “ನಾನು ನಾಲ್ಕು ಬೋರ್ಡ್ ಮಾಡ್ಕೊಡ್ತೀನಿ, ಒಣ್ಗೋದ್ರೆ ಇನ್ನೊಂದು ಹಾಕಿ” ಅಂದ. ಅವ್ರೂ ಅಷ್ಟು ಕಲಿತುಬಿಟ್ರು. ಇದು ಸಿನಿಮಾ ಇದು ಮಾಲ್ಗುಡಿ ಡೇಸಲ್ಲಿ ಮಾಡಿದ ಕೆಲಸಗಳು.ಮುಂದುವರೆಯುವುದು…


6 views