ಮಾಲ್ಗುಡಿ ಪ್ರೊಜೆಕ್ಟ್ ಗೆ ನಾನು ಬರಲು ಕಾರಣ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 50

(ಮಾಲ್ಗುಡಿ ಡೇಸ್ ಕಾಸ್ಟ್ಯೂಮ್ ಮುಖ್ಯಸ್ಥೆ, ಸುಂದರಶ್ರೀ ಅವರ ನೆನಪುಗಳು)ಪರಮ್: ನಿಮ್ಮ ಪರಿಚಯ ನಮಗೆ ಬೇಡ. ಯಾಕಂದ್ರೆ, ನೀವು ತುಂಬಾ ಒಳ್ಳೆಯ ಕಲಾವಿದರು ಕನ್ನಡದಲ್ಲಿ. ಸೋ ಶಂಕರ್ ಸರ್ ಅವರ ಒಡನಾಟ ನಿಮಗೆ, ಮೊದಮೊದಲು ಹೇಗೆ ಪ್ರಾರಂಭ ಆಯ್ತು?


ಸುಂದರಶ್ರೀ: ನಾನು ಎನ್.ಎಸ್.ಡಿ ಇಂದ ಬಂದ ತಕ್ಷಣ, ನಾಟಕ ಮಾಡ್ಬೇಕೂಂತಿದ್ದೆ. ಶಂಕರ್ ಅವರ ‘ಅಂಜು ಮಲ್ಲಿಗೆ’ನಾಟಕ ನೋಡಿನೇ, ನಾನು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ಹೋಗಿದ್ದೆ. 1982 ರಲ್ಲಿ ವಾಪಸ್ ಬಂದಾಗ, ಶಂಕರ್ ಅವರು, “ಒಂದು ನಾಟಕ ಡೈರೆಕ್ಟ್ ಮಾಡ್ತಿದ್ದೀನಿ, ನೀನು ಆಕ್ಟ್ ಮಾಡ್ತೀಯಾ?” ಅಂತ ಕೇಳಿದ್ರು. ಅವಾಗ ಜಸ್ಟ್ ನನಗೆ ಮದುವೆ ಫಿಕ್ಸ್ ಆಗಿತ್ತು. ಆದ್ದರಿಂದ ನನಗೆ ಮಾಡಕ್ಕಾಗ್ಲಿಲ್ಲ. ಅವಾಗ್ಲಿಂದ ನಮ್ಮ ಒಡನಾಟ ಶುರುವಾಯ್ತು, ಅವ ಜೊತೆಗೆ. ಆ ಮೇಲೆ ಅವರ ‘ನೋಡಿ ಸ್ವಾಮಿ ನಾವಿರೋದೆ ಹೀಗೆ’ ಸಿನಿಮಾದಲ್ಲಿ,ನಾನು ಮತ್ತು ನಮ್ಮೆಜಮಾನ್ರು ವರ್ಕ್ ಮಾಡಿದ್ವಿ.

ಹೀಗೆ ಇರ್ಬೇಕಾದ್ರೆ ಅರು ಜೊತೆ ನಾನು ‘ಫ್ಯಾಸಿಸ್ಟ್ ಇಂಡಿಯಾ’ ದಲ್ಲಿ ವರ್ಕ್ ಮಾಡ್ತಿದ್ದೆ. ನಾನು ಕಾಸ್ಟ್ಯೂಮ್ ನೋಡ್ಕೊತಿದ್ದೆ ಅರು ಅದಕ್ಕೆಅಸಿಸ್ಟೆಂಟ್ ಡೈರೆಕ್ಟರಾಗಿದ್ರು. ಸೋ ನನ್ನ ಕೆಲ್ಸ ನೋಡಿ ಅರು ನನ್ನಮಾಲ್ಗುಡಿ ಡೇಸ್ ಗೆ ಕರೆದ್ರು.


ಪರಮ್: ಈ ’ಮಾಲ್ಗುಡಿ ಡೇಸ್ ಯಾವ ಪಿರಿಯೆಡಲ್ಲಿ, ಮಾಡಕ್ಕೆ ಸ್ಟಾರ್ಟ್ ಮಾಡಿದ್ರಿ ಮೇಡಮ್?


ಸುಂದರಶ್ರೀ: ‘ಮಾಲ್ಗುಡಿ ಡೇಸ್’ ಪ್ರೀ ಪ್ರೊಡಕ್ಷನ್ 1985 ಅಕ್ಟೋಬರಲ್ಲಿ ಶುರುವಾಯ್ತು. 1986 ಫೆಬ್ರವರಿ 20ನೇ ತಾರೀಖು, ಫಸ್ಟ್ ಶೂಟ್ ಶುರು ಮಾಡಿದ್ದು. ಬಿಮಲ್ ದೇಸಾಯಿ ಮತ್ತೆ ಅನಂತ್ ನಾಗ್ ಅವ್ರನ್ನ ಇಟ್ಕೊಂಡು ‘ಬೆಟ್ಟದಾಸಪುರ’ದಲ್ಲಿ ಶೂಟ್ ಮಾಡಿದ್ದು. ಅದು ಫಸ್ಟ್ ಎಪಿಸೋಡ್ ಆಕ್ಟುಲಿ. ಆಮೇಲೆ ‘ಆಗುಂಬೆ’ ಗೆ ಹೋಗಿ, ಅಲ್ಲಿ ಎರಡು ದಿವ್ಸ ಇದ್ದು ಶೂಟ್ ಮಾಡ್ಕೊಂಡು ಬಂದ್ವಿ. ತುಂಬಾ ಚೆನ್ನಾಗಿತ್ತು. ನಾನು ಅದಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ವರ್ಕ್ ಮಾಡ್ದೆ. ಡಿಸೈನ್ ಮಾಡಕ್ಕಾಗ್ಲಿ, ಅಥವಾ ಇನ್ನೇನೋ ಕೆಲ್ಸಗಳಿಗೂ, ಅರು ನನಗೆ ತುಂಬಾ ಹೆಲ್ಪ್ ಮಾಡಿದ್ರು.ಮುಂದುವರೆಯುವುದು…

9 views