ಮಾಲ್ಗುಡಿ ಪ್ರೊಜೆಕ್ಟ್‌ನ ಎಲ್ಲರೂ ಪೀರಿಯಡಿಕ್‌ ಕಾಸ್ಟ್ಯೂಮ್‌ ನಲ್ಲೇ ಓಡಾಡ್ತಿದ್ವಿ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 52

(ಮಾಲ್ಗುಡಿ ಡೇಸ್ ಕಾಸ್ಟ್ಯೂಮ್ ಮುಖ್ಯಸ್ಥೆ, ಸುಂದರಶ್ರೀ ಅವರ ನೆನಪುಗಳು)ಪರಮ್: ಇನ್ನೂ ನಾವು ಶೂಟಿಂಗ್ ಪ್ರೋಸೆಸ್ ಗೆ ಬರೋಣ ಮೇಡಮ್? ಕಾಸ್ಟ್ಯೂಮ್ ಡಿಸೈನರ್ ಆಗಿ ಸೆಟ್ಟಲ್ಲಿ ಇರ್ಲೇ ಬೇಕು, ಆಕ್ಟ್ ಕೂಡ ಮಾಡಿದ್ದೀರ ತಾವು…?


ಸುಂದರಶ್ರೀ: ಹೆಂಗಂತ ಹೇಳ್ತೀನಿ ಕೇಳಿ ಪರಮೇಶ್. ಶಂಕರ್ ಅಲ್ಲಿ ಯಾವಾಗ ಯಾವ ಸೀನ್ ಮಾಡ್ತಾರೆ ಅಂತ ಹೇಳ್ತಿರ್ಲಿಲ್ಲ. ಶಡ್ಯೂಲ್ ಕೊಡ್ತಿದ್ರು. ಆದ್ರೆ ಅವರ ಮೈಂಡ್ ಎಷ್ಟು ಚೆನ್ನಾಗಿ ಓಡ್ತಿತ್ತು ಅಂದ್ರೆ, ನಾನು ಎರಡು ಸತಿ ಯಾವ್ಯಾವ ಸೀನ್ ಇದೆ ಅದಕ್ಕೆ ಕಾಸಟ್ಯೂಮ್ ರಡಿ ಮಾಡ್ಕೊಂಡು ಹೋಗಿ ಸಿಕ್ಹಾಕೊಂಡಿದ್ದೀನಿ ನಾನು. ಅದಕ್ಕೆ ಏನು ಮಾಡಕ್ಕೆ ಶುರು ಮಾಡ್ದೆ ಅಂದ್ರೆ, 21 ಟ್ರಂಕ್ ಇದ್ದದ್ದು ಕಾಸ್ಟ್ಯೂಮ್, ಅದೆಲ್ಲಾನೂ ಮಾಲ್ಗುಡಿ ಡೇಸಲ್ಲಿ ಬಸ್ ಇದ್ಯಲ್ಲಾ, ಅದರಲ್ಲಿ ಹಾಕಿಟ್ಟು ಬಿಡ್ತಿದ್ದೆ. ಶಂಕರ್ ಯಾವಾಗ ಯಾವ ಸೀನ್ ಮಾಡ್ತಾರೆ ಗೊತ್ತಿಲ್ಲ, ಸೋ ಅವಾಗ ರಡಿ ಇರ್ಬೇಕು ನಾನು. ಅದಕ್ಕೆ ತಕ್ಕಂತೆ ನಾವು ರಡಿ ಮಾಡ್ಕೊಂಡು ಹೋಗ್ತಿದ್ವಿ.


ಒಂದೆರಡು ಸಲ ಶಂಕರ್ ಶೆಡ್ಯೂಲ್ ಪ್ರಕಾರ ನನಗೆ ಕೊಟ್ರು. ನೆಕ್ಸ್ಟ್ ಡೇ ಮಾರ್ನಿಂಗ್ “ಸುಂದ್ರಿ, ಈ ಸೀನ್ ಮಾಡ್ತಿದ್ದೀನಿ ಕಾಸ್ಟ್ಯೂಮೆಲ್ಲ ರಡಿ ಮಾಡ್ಕೋ” ಅಂತ ಹೇಳಿದ್ರು. ಅದನ್ನ ನಾನು ಅಲ್ಲೆಲ್ಲೋ ಇಟ್ಟು ಬಂದಿರ್ತಿದ್ದೆ. ಅವಾಗ ಡಿಸೈಡ್ ಮಾಡಿ, ಕಾಸ್ಟ್ಯೂಮ್ ಎಲ್ಲಾನೂ 21 ಟ್ರಂಕಲ್ಲಿ ಹಾಕಿ ಬಸ್ ನಲ್ಲಿಟ್ಟು ಬಿಡ್ತಿದ್ದೆ. ಮತ್ತೆ ಇನ್ನೊಂದೇನು ಅಂದ್ರೆ, ಅಲ್ಲಿ ಲೈಟ್ ಬಾಯ್ಸ್ ಆಗ್ಲಿ, ಸೆಟ್ ಬಾಯ್ಸ್ ಆಗ್ಲಿ, ಸೋಮು ಆಗ್ಲಿ, ರಮೇಶ್ ಭಟ್ ಆಗ್ಲಿ ಎಲ್ಲ ಟೆಕ್ನೀಶಿಯನ್ಸೂ ಕೂಡ ಆಗಿನ ಪಿರಿಯೆಡ್ ಕಾಸ್ಟ್ಯೂಮಲ್ಲೇ ಓಡಾಡ್ತಿದ್ರು. ಯಾಕಂದ್ರೆ ಅವ್ರು ಓಡಾಡ್ತಿರ್ತಾರಲ್ಲ ಅವ್ರು ಎಲ್ರುನೂ ಕಾಣಿಸ್ಕೊಂಡಿದ್ದಾರೆ. ಪಾಸಿಂಗ್ ಅಲ್ಲಿ ಪ್ರತಿಯೋಬ್ರುನೂ ಈವನ್ ನಾನು ಕೂಡ ಕಾಣಿಸ್ಕೊಂಡಿದ್ದೀನಿ. ಕೆಲವು ಕಡೆ ಮುಖ ತೋರ್ಸಿದ್ದೀನಿ ಇನ್ನು ಕೆಲವು ಕಡೆ ತೋರ್ಸಿಲ್ಲ. ಕೆಲವು ಕಡೆ ಪಾತ್ರಗಳೂ ಮಾಡಿದ್ದಿನಿ ನಾನು. ಹೀಗಾಗಿ ಪ್ರತಿಯೊಬ್ಬರಿಗೂ ಕಾಸ್ಟ್ಯೂಮ್ ಕೊಟ್ಟುಬಿಡ್ತಿದ್ದೆ.ಮುಂದುವರೆಯುವುದು…

18 views