ಮಾಲ್ಗುಡಿ ಪ್ರಾಜೆಕ್ಟ್‌ ಬಂದಾಗ ಶಂಕರ್ ಮೊದಲು ತಿರಸ್ಕರಿಸಿದ್ರಂತೆ


ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 23

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)


ಮಾಲ್ಗುಡಿ ಪ್ರೊಜೆಕ್ಟ್‌ ಬಂದಾಗ ಮೊದಲು “ಇಲ್ಲ ನಾನು ಬೇರೆ ಪ್ರಾಜೆಕ್ಟ್ ಮಾಡ್ತಿದ್ದೀನಿ” ಅಂತ ಹೇಳಿ ಆಗಿತ್ತು. ಆದ್ರೆ ಅನಂತ್ ನಾಗ್ ಅವ್ರ ಕಿವಿಗೆ ಬಿತ್ತು. ಅವ್ರು ಶಂಕರ್ ನ ಕರ್ದು ಕೇಳಿದ್ರು “ನೀನು ಏನು ಮಾಡ್ತಿದ್ದೀಯ? ಈ ಸಿನಿಮಾಗಳನ್ನ ಯಾವಾಗ ಬೇಕಾದ್ರೂ ಮಾಡ್ಬಹುದು, ಆದ್ರೆ ಇದನ್ನ ಯಾವಾಗ ಬೇಕಾದ್ರೂ ಮಾಡಕ್ಕಾಗಲ್ಲ. ಅವ್ರಿಗೆ ಸ್ಲಾಟ್ ಸಿಕ್ಕಿದೆ, ಆರ್.ಕೆ.ನಾರಾಯಣ್ ಅಂಥ ರೈಟರ್ ಅವ್ರ ಕಥೆಗಳನ್ನ ಕೊಟ್ಟಿದ್ದಾರೆ. ಹಿಗಿರುವಾಗ ಯಾಕೆ ಮಾಡಲ್ಲಾಂತ ಅನ್ತೀಯ? ನ್ಯಾಶನಲ್ ಲೆವೆಲಲ್ಲಿ ರೆಕಗ್ನಿಶನ್ ಸಿಗುತ್ತೆ, ಬ್ರಾಡ್ ಆಗಿ ಯೋಚ್ನೆ ಮಾಡು.” ಅಂತೆಲ್ಲ ಅವ್ರು ಹೇಳಿದ್ರು. ಆಮೇಲೆ ಇವ್ರು ಮಾಡ್ಬೋದಾ ಏನೂಂತ ಯೋಚ್ನೆ ಮಾಡಿದ್ರು.ಹಿಂದಿ ಪ್ರಾಬ್ಲಮ್ ಇರ್ಲಿಲ್ಲ, ಬಾಂಬೆನಲ್ಲೇ ಇದ್ದವ್ರು. ಅವ್ರು ಗುಜರಾತಿ, ಮರಾಠಿ, ಕೊಂಕಣಿ ಹೀಗೆ ಸುಮಾರು ಭಾಷೆಗಳನ್ನ ಮಾತಾಡ್ತಿದ್ರು. ಇನ್ನು ಅರುಂಧತಿ ಸಪೋರ್ಟ್ ತುಂಬನೇ ಇತ್ತು ಅವ್ರಿಗೆ. ಅವ್ಳೇನು ಹೌಸ್ ವೈಫ್ ಅಲ್ಲ, ಗಟ್ಟಿಗಾತಿ ಅವ್ಳು. ಒಳ್ಳೆ ಆಕ್ಟ್ರೆಸ್, ನೋಲೆಡ್ಜೆಬಲ್ ಲೇಡಿ. ಕೊನೆಗೆ ಮಾಡೊಣಾಂತ ಡಿಸೈಡ್ ಮಾಡಿದ್ವಿ. ಆದ್ರೆ ಆರ್.ಕೆ ಅವ್ರಿಗೆ ಹೇಗೆ ಮಾಡ್ತಾರೂ ಏನೂಂತ ಅನುಮಾನ ಒಂದಿತ್ತು. ಒಂದು ಪೈಲೆಟ್ ಮಾಡಿ ಪ್ರೊಡ್ಯೂಸರ್ ಗೆ ತೋರಿಸ್ಬೇಕುಂತ ಆಯ್ತು. ಪೈಲೆಟ್ ಒಕೆ ಆದ್ರೆ ನಿಮಗೆ ಕೊಡ್ತೀವಿ, ಅಂತ ಕಂಡೀಷನ್ ಏನಲ್ಲ. ಸರಿ ಒಂದು ಪೈಲೆಟ್ ಮಾಡಿದ್ವಿ ‘ಮಂದಿರ್ ಕ ಬುಡ್ಡ’ ಅಂತ ಬನ್ನೀರ್ಘಟ್ಟ ದಲ್ಲಿ ಮಾಡಿದ್ವಿ. ಅದನ್ನ ನೋಡಿದ್ಮೇಲೆ ಅವ್ರಿಗೆ ತುಂಬಾ ಸಂತೋಷ ಆಗ್ಹೋಯ್ತು. “ತುಂಬಾ ಚೆನ್ನಾಗಿ ಕ್ರಿಯೇಟ್ ಮಾಡಿದ್ದೀರ ಗೊ ಎಹೆಡ್” ಅಂದ್ರು.ಮುಂದುವರೆಯುವುದು…

14 views