ಮಾಲ್ಗುಡಿ ಪ್ರೊಜೆಕ್ಟ್‌ ಶಂಕರ್‌ ಗೆ ಬಂದಿದ್ದರ ಹಿಂದಿನ ಕಾರಣ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 22

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ನಮ್ಮ ನರಸಿಂಹನ್ ಅವ್ರು ನೈಸ್ ಫೆಲೋ, ಕಲಾತ್ಮಕ ಸಿನಿಮಾಗಳನ್ನ ಮಾಡಿರೋರು. ಒಂದು ಸದಭಿರುಚಿ ಸಿನಿಮಾಗಳನ್ನ ಮಾಡೋದ್ರಲ್ಲಿ ಅವ್ರಿಗೆ ಆಸಕ್ತಿ ಜಾಸ್ತಿ. ಅದಕ್ಕೆ ಮುಂಚೆ ಬ್ಯಾಂಕರ್ ಮಾರ್ಗಯ್ಯ, ಕೆಸರಿನ ಕಮಲ ಸಿನಿಮಾಗಳನ್ನ ಮಾಡಿದ್ರು. ಹೀಗೆ ಅವ್ರಿಗೆ ಕಥೆ ಲೈನ್ ಗೊತ್ತಿತ್ತು. ಮತ್ತೆ ಆರ್.ಕೆ ನಾರಾಯಣ್ ಅವ್ರು, ಹೇಗೋ ಇವರ ರಿಲೇಟಿವ್. ಸೋ “ಅವ್ರ ಕತೆಗಳನ್ನ ಆರಿಸ್ಕೊಂಡು, ಶಂಕರ್ ಹತ್ರ ಯಾಕೆ ಮಾಡಿಸ್ಬಾರ್ದು?” ಅಂತ ಯೋಚಿಸಿದ್ದಾರೆ. ಶಂಕರ್ ಕಮರ್ಷಿಯಲ್ ಸಿನಿಮಾ ಹೀರೋ ಆಗಿದ್ರೂ ಅವರ ಒಲವು ಇದ್ದದ್ದು, ಆರ್ಟಿಸ್ಟಿಕ್ ಆಗಿರುವ ಸಿನಿಮಾಗಳಲ್ಲೇ. ಕ್ಲಾಸ್ ಟಚ್ ಇರುವಂತದ್ದೇ ಇತ್ತು. ಯಾಕಂದ್ರೆ ನಮ್ಮ ನಾಟಕಗಳನ್ನೆಲ್ಲಾ ನೋಡಿದ್ರು. ಹಾಗೆ ಅವ್ರು ಅಪ್ರೋಚ್ ಮಾಡಿದ್ರು.ಮುಂದುವರೆಯುವುದು…

15 views