ಮಾಲ್ಗುಡಿಯ ಪ್ರತೀ ಎಪಿಸೋಡ್‌ ಅಲ್ಲೂ ನಮ್ಮ ಕಲಿಕೆಗೆ ಚಾಲೆಂಜ್‌ ಇತ್ತು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 43

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಮಾಲ್ಗುಡಿ ಡೇಸ್‌ ಅಲ್ಲಿ ನಾವು ಪ್ರತಿಯೊಂದು ಸೀಕ್ವೆನ್ಸಲ್ಲೂ ಛಾಲೆಂಜ್ ಗಳನ್ನ ಎಂಜಾಯ್ ಮಾಡ್ತಿದ್ವಿ. ಈಗ ನಾಗ ಅಂತ ಒಂದು ಎಪಿಸೋಡಲ್ಲಿ ಶಂಕರ್ ನಾಗ್ ಮತ್ತೆ ಮಂಜು ಆಕ್ಟ್ ಮಾಡಿದ್ರು. ಹಾವಾಡ್ಸೋರು. ಎಲ್ಲೋ ಹೋಗ್ತಾರೆ ಹಾವು ಕೆಲ್ಸ ಮಾಡಲ್ಲ “ಹಾವಿಗೆ ವಯಸ್ಸಾಗಿದೆ ಅದನ್ನ ಕಾಡಿಗೆ ಬಿಡೊಣಾಂತ” ತೀರ್ಮಾನ ಮಾಡಿ, ಕಾಡಿಗೆ ಬಿಡ್ತಾನೆ ಮಂಜು. ಅದು ಹೋಗುತ್ತೆ ನಿಧಾನಕ್ಕೆ. ಅವಾಗ ಒಂದು ಹದ್ದು ಬರುತ್ತೆ. ಈಗ ಹದ್ದು ಎಲ್ಲಿಂದ ತರೋದು? ಸಿಗುತ್ತೆ ಸಿಕ್ಕದೇ ಇರೋದು ಏನಿಲ್ಲ. ನಾವು ಮದ್ರಾಸ್ ಗೆ ಹೇಳ್ಬೇಕು, ಅವ್ರು ಅದನ್ನ ತೆಗೊಂಡು ಅಲ್ಲಿಗೆ ಬರ್ಬೇಕು. ಎರಡು ದಿವ್ಸ ಅಲ್ಲೇ ಇರ್ಬೇಕು. ಅದೆಲ್ಲಾ ಯಾಕೆಂತ ನಾವು ಒಂದು ಯೋಚ್ನೆ ಮಾಡಿದ್ವಿ. ಏನು ಅಂದ್ರೆ ಒಂದು ವಯರ್ ಕಟ್ಟಿ, ಹದ್ದಿನ ತರ ರೆಕ್ಕೆ ಬರ್ದು, ಅದನ್ನ ಸ್ಲೈಡ್ ಮಾಡೋದು. ಈ ಹದ್ದಿನ ನೆರಳು ಹಾವಿನ ಮೇಲೆ ಬೀಳುತ್ತೆ. ಅವಾಗ ಮಂಜು ನೋಡ್ತಾನೆ ಒಂದು ಹಾರ್ತಾ ಇರುವ ಹದ್ದಿನ ಶಾಟ್ ಹಾಕ್ತೀವಿ. ಅದನ್ನ ವಾಪಸ್ ತಗೊಂಡು ಬರ್ತಾನೆ “ಬೇಡ ಅದು ತಿಂದ್ಬಿಡುತ್ತೆ. ನೀನು ಆಟ ಆಡದಿದ್ರೂ ಪರವಾಗಿಲ್ಲ ಅಂತ” ಸೋ ನಾನು ಹೇಳೋದು ಆ ಸೀಕ್ವೆನ್ಸಿಗೆ ನಮಗೆ ಎಲ್ಲರಿಗೂ ಕೆಲ್ಸ ಇರುತ್ತೆ ಬರೀ ಆಕ್ಟರ್ಸಿಗೆ ಮಾತ್ರ ಅಲ್ಲ.


ಟಾಲೆಂಟನ್ನ ಎಕ್ಸ್ ಪೋಸ್ ಮಾಡುವ ಅವಕಾಶ ಅವ್ರಿಗೆ ಮಾತ್ರ ಅಲ್ಲ. ಅವರು ಫೀಲ್ ಮಾಡಿ ಆಕ್ಟ್ ಮಾಡ್ದಾಗ ಅವರ ಹಾವ ಭಾವ. ಅವರ ಎಲ್ಲಾ ಅಂಗಾಂಗಗಳು ಕೆಲಸ ಮಾಡುತ್ತೆ. ಅದು ಎಂತದ್ದೇ ಸೀನ್ ಆಗಿರ್ಲಿ, ರೌಧ್ರ ಸೀನ್ ಆಗಿರ್ಲಿ, ಲೈಟ್ ಸೀನ್ ಆಗಿರ್ಲಿ ಎಲ್ಲವೂ ನರ, ನಾಡಿ ಹಿಡಿತದಲ್ಲಿ ಇಟ್ಕೊಂಡು ತಾನೆ ಮಾಡ್ಬೇಕು? ಆಕ್ಟರ್ ಗೆ ಹಂಗಾದ್ರೆ ಟೆಕ್ನೀಶಿಯನ್ ಗೂ ಆ ತರ ಛಾಲೆಂಜ್ ಇತ್ತು ಅಲ್ಲಿ.


ನಾನ್ಹೇಳಿದ್ನಲ್ಲ, ಇದನ್ನೆಲ್ಲಾ ಮಾಡ್ಬೇಕು. ಹಗ್ಗ ಎಲ್ಲಿ ಹಾಕೋದು? ಮರ ಎಲ್ಲಿ ಹಾಕೋದು? ವೈರ್ ತರ್ಬೇಕಾ, ಈತರ ಎಲ್ಲಾ ಹೊಸದು. ಅವಾಗವಾಗ ಬುದ್ದಿ ಕಲ್ತು, ಅವಾಗವಾಗ ಮಾಡೋದು.ಮುಂದುವರೆಯುವುದು…

8 views