ಮಾಲ್ಗುಡಿಲಿ ಡಿಸಾಲ್ವ್‌ ಶಾಟ್ಸ್‌ ಮಾಡೋ ವಿಧಾನ ವೇರಿ ಟಫ್‌ ಇತ್ತು

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 117

(ಮಾಲ್ಗುಡಿ ಡೇಸ್‌ ಕ್ಯಾಮರಾ ಅಸಿಸ್ಟೆಂಟ್‌ ನಾಗರಾಜ ಆದವಾನಿ ಅವರ ನೆನಪುಗಳು)ಮಾಲ್ಗುಡಿಯಲ್ಲಿ ಎರಡು ಕ್ಯಾಮರಾ ಯೂಸ್ ಮಾಡ್ತಾ ಇದ್ರು, ಮಿಚ್ಚಲ್ ಮತ್ತೆ ಟು.ಸಿ ಕ್ಯಾಮರಾ. ಈಗ ಡಿಸಾಲ್ವ್ ಎಲ್ಲಾ ಪೋಸ್ಟ್ ಪ್ರೊಡಕ್ಷನಲ್ಲಿ ಈಸಿಯಾಗಿ ಮಾಡ್ಬಹುದು, ಅವಾಗ ಹಾಗೆ ಮಾಡಕ್ಕೆ ಆಗ್ತಾ ಇರ್ಲಿಲ್ಲ, ಏನಿದ್ರೂ ಫಿಲ್ಮಲ್ಲೇ ಡಿಸಾಲ್ವ್ ಮಾಡ್ಬೇಕಾಗಿತ್ತು. ಹತ್ತು ಫ್ರೇಮ್ ಹಿಂದೆ ಹೋಗ್ಬೇಕು ಅಂದ್ರೆ , ಹತ್ತು ಫ್ರೇಮ್ ಹಿಂದೆ ಹೋಗಿ ಅದನ್ನ ವೈಟ್ ಮಾಡ್ಕೊಂಡು, ಸೇಮ್ ಲೈಟೇ ಇರ್ಬೇಕು. ಅದು ಸ್ವಲ್ಪ ಟಫ್ ವರ್ಕ್. ಹಿಂದಿನ ಸೀನ್, ಮುಂದಿನ ಸೀನ್ ಒಂದೇ ತರ ಇರ್ಬೇಕಾಗುತ್ತೆ, ಒಂದೇ ಟೇಕಲ್ಲಿ ಒ.ಕೆ ಆಗ್ಬೇಕು. ಡಿಸಾಲ್ವ್ ಆಗುವ ಶಾಟ್ ಏನಾದ್ರೂ ತಪ್ಪಾದ್ರೆ, ಹಿಂದಿನ ಶಾಟನ್ನೂ ಮತ್ತೆ ಮಾಡ್ಬೇಕಾಗಿತ್ತು. ಆಕ್ಟರ್, ಡೈರೆಕ್ಟರ್ ಪ್ರತಿಯೊಂದನ್ನೂ ಅರ್ಥ ಮಾಡ್ಕೊಂಡು ಮಾಡ್ಬೇಕಾಗಿತ್ತು. ಹಾಗೆ ಕ್ಯಾಮರಾದಲ್ಲಿ ಮಾಡೊದು ಟಫ್ ಆಗ್ತಿತ್ತು. ಅನಂತ್ ನಾಗ್ ಎಪಿಸೋಡಲ್ಲಿ, ಜಿವಿ.ಅಯ್ಯರ್ ಕೂಡ ಆಕ್ಟ್ ಮಾಡಿದ್ರು. ಅದ್ರಲ್ಲಿ ಒಂದು ಸ್ಟಾಚ್ಯು ನದಿಯ ಒಳಗಡೆ ಹೂತೋಗಿರುತ್ತೆ. ಅದನ್ನ ಆಚೆಗೆ ತೆಗಿಬೇಕು. ಈಗಿನ ತರ ಅಂಡರ್ ವಾಟರ್ ಶೂಟ್ ಇರ್ಲಿಲ್ಲ ಆಗ. ಅದಕ್ಕೆ ಕಬ್ಬಿಣದ ಒಂದು ತೊಟ್ಟಿ ಮಾಡಿ, ಅದಕ್ಕೆ ಗ್ಲಾಸ್ ಹಾಕಿ ಅನಂತ್ ನಾಗ್ ಅವ್ರು ಈಜುವ ದೃಶ್ಯ ಶೂಟ್ ಮಾಡ್ಬೇಕಾಗಿತ್ತು. ತೊಟ್ಟಿ ನೀರೊಳಗೆ ಹಾಕಿದ್ರೆ, ತೊಟ್ಟಿ ಮುಳುಗ್ತನೇ ಇಲ್ಲ. ನೀರಿನ ಮೇಲೆ ತೇಲ್ತನೇ ಇತ್ತು. ಮತ್ತೆ ಆ ತೊಟ್ಟಿ ಮೇಲೆ ನಾಲಕೈದು ಜನ ಕೂತು, ಶೂಟ್ ಮಾಡಿರೋದು ಅದನ್ನ.


ಪರಮ್: ಸೋ ಅಂಡರ್ ವಾಟರ್ ಕೂಡ ಮಾಡಿದ್ದೀರ ಮಾಲ್ಗುಡಿಯಲ್ಲಿ?


ನಾಗರಾಜ್: ಹೌದು ಅಂಡರ್ ವಾಟರ್ ಕೂಡ ಮಾಡಿದೀವಿ. ಅನಂತ್ ನಾಗ್ ನೀರಲ್ಲಿ ಮುಳುಗಿ, ಈಜ್ಕೊಂಡು ಹೋಗಿ ಆ ಸ್ಟಾಚ್ಯುನ ತಗೊಂಡು ಬರೋದೇ ಸೀನ್. ಆ ತರ ಸಾಕಷ್ಟು ಸನ್ನಿವೇಷಗಳು ಬರುತ್ತೆ. ಶಂಕರ್ ನಾಗ್ ತುಂಬಾ ಆಕ್ಟೀವ್ ಆಗಿರ್ತಿದ್ರು, ಮತ್ತೆ ಎಲ್ರನ್ನೂ ತುಂಬಾ ಹುರಿದುಂಬಿಸ್ತಾ ಇದ್ರು. ಕೆಲವು ಸಲ ನಾವು ಲೈಟಿಂಗ್ ಮಾಡ್ತಿದ್ರೆ, ಅವ್ರು ಹೋಗಿ ಟ್ರಾಲಿ ಹಾಕ್ಬಿಡ್ತಾ ಇದ್ರು. ಯಾರನ್ನೂ ಕಾಯ್ತಾ ಇರ್ಲಿಲ್ಲ. ಗುಡ್ಡದ ಮೇಲೆ ಎಂಟು ಅಡಿ ಹೈಟಲ್ಲೂ ಟ್ರಾಲಿ ಹಾಕ್ತಿದ್ರು. ಲೈಟ್ ಸ್ಟಾಂಡ್ ಒಂದ್ಕಡೆ ಹಿಡ್ಕೊಂಡು ಒಬ್ರು ಕೂತ್ಕೊಬೇಕು. ಅದ್ರ ಮೇಲೆ ಟ್ರಾಲಿ ತಗೊಂಡು ಹೋಗೊದು. ಈಗಿನ ತರ ಡ್ರೋನ್, ಏನೂ ಇರ್ಲಿಲ್ಲ. ಸ್ವಾಮಿ ಆಂಡ್ ಫ್ರೆಂಡ್ಸ್ ಅಲ್ಲಿ ಒಂದು ಶಾಟ್ ಇದೆ. ಸ್ಕೂಲಲ್ಲಿ ಬೋರ್ಡ್ ಮೇಲೆ ಬರತಾ ಇರ್ತಾರೆ, ಅಲ್ಲಿಂದ ಮಕ್ಕಳನ್ನ ಫಾಲೋ ಮಾಡ್ತಾ, ಕ್ಲಾಸಿಂದ ಹೊರಗೆ ಬಂದು ಎತ್ತಿನ ಗಾಡಿ ಮೇಲೆ ಕೂತು ಅದು ಮೇಲೆ ಹೋದಾಗ ಸ್ಕೂಲಿಂದ ಎಕ್ಸಾಮ್ ಮುಗ್ಸಿ ಮಕ್ಳು ಹೊರಗೆ ಬರೊದು ಎಸ್ಟಾಬ್ಲಿಷ್ ಆಗುತ್ತೆ. ಆತರ ರಿಸ್ಕಿ ಶಾಟ್ ಎಲ್ಲಾ ತುಂಬಾ ಕಷ್ಟಪಟ್ಟು ಮಾಡಿದ್ವಿ. ಮಾಲ್ಗುಡಿ ಡೇಸಲ್ಲಿ ವರ್ಕ್ ಮಾಡಿದ್ರಿಂದ, ನನಿಗೆ ಮುಂದೆ ಕ್ಯಾಮರಾ ಮ್ಯಾನ್ ಆಗೋದಕ್ಕೆ ತುಂಬಾ ಅನುಕೂಲ ಆಯ್ತು. ನನಿಗೆ ಯಾವುದಾದ್ರೂ ಅವಾರ್ಡ್ ಬಂದ್ರೂ, ಮಾಲ್ಗುಡಿ ಡೇಸಲ್ಲಿ ವರ್ಕ್ ಮಾಡಿದ್ರಿಂದ ಬಂತು ಅನ್ಸುತ್ತೆ.ಮುಂದುವರೆಯುವುದು…

12 views