ಮಾಲ್ಗುಡಿ ಶಂಕರ್‌ ಗೆ ಸಿಕ್ಕಿದ್ದು ಹೇಗೆ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 95

( ಶಂಕರ್‌ನಾಗ್‌ ಕುರಿತಂತೆ ಮಾಲ್ಗುಡಿ ಡೇಸ್‌ ನಿರ್ಮಾಪಕರ ನೆನಪುಗಳು)ಪರಮ್: ಅಂದ್ರೆ ಬಿಫೋರ್ ಶಂಕರ್ ನಾಗ್ ಬೇರೆ ಯಾರ ಹತ್ರ ಆದ್ರೂ ಹೋಗಿದ್ರಾ?


ಬದರಿನಾಥ್: ಇಲ್ಲ ಯಾರಿಗೂ ಮಾತಾಡಿ ನೀವೇ ಮಾಡಿ ಅಂತ ಹೇಳಿರ್ಲಿಲ್ಲ. ಆದ್ರೆ ಅಪ್ಪ ನಾನೇ ಹುಡುಕ್ತೀನಿ ಅಂತ ಹೇಳ್ತಿದ್ರು. ‘ಅನಂತ್ ನಾಗ್’ ಮತ್ತೆ ಅಪ್ಪ ಒಳ್ಳೆ ಫ್ರೆಂಡ್ಸ್. ಸುಬ್ಬರಾವ್ ಅಂತ ವೆರಿ ಫೇಮಸ್ ಫಿಲ್ಮ್ ಎಡಿಟರ್ ಇದ್ರು, ಅವ್ರ ಮೂಲಕ ಅನಂತ್ ನಾಗ್ ಫ್ರೆಂಡ್ಷೀಪ್ ಆಗಿದ್ದು. ಸೋ ಅನಂತ್ ನಾಗ್ ಹತ್ರ ನಮ್ಮಪ್ಪ ಮಾತಾಡಿದ್ರು “ನಿನ್ನ ತಮ್ಮನಿಗೆ ಒಳ್ಳೆ ಟ್ಯಾಲೆಂಟ್ ಇದ್ಯಲ್ಲಾ, ಯಾಕೆ ಅವ್ನೇ ಮಾಡ್ಬಾರ್ದು? ಕಾಲ್ ಶಂಕರ್ ಮಾತಾಡೋಣ” ಅಂತ. ಹಾಗೆ ಶಂಕರ್ ನಾಗ್ ಆಂಡ್ ಮಾಲ್ಗುಡಿ ವಾಸ್ ಸ್ಟಾರ್ಟಡ್ ವಿತ್ ಮೈ ಫಾದರ್.


ಪರಮ್: ಶಂಕರ್ ಅವ್ರನ್ನ ಅನಂತ್ ಕಡೆಯಿಂದ ಮಾತಾಡಿದ್ದಾ ಹಾಗಾದ್ರೆ?


ಬದರಿನಾಥ್: ಇಲ್ಲ ಅವ್ರು ಹೇಳಿದ್ದಾರೆ “ತುಂಬಾ ಒಳ್ಳೆ ಪ್ರಾಜೆಕ್ಟ್ ಇದು, ಇದ್ರಿಂದ ಇಂಟರ್ ನ್ಯಾಶನಲ್ ಫೇಮ್ ಬರುತ್ತೆ, ಮಾಡು” ಅಂತ. ಮತ್ತೆ ಶಂಕರ್ ಹಿಮ್ಸೆಲ್ಫ್ ವಾಸ್ ಅ ಸೂಪರ್ ಸ್ಟಾರ್. ಬಟ್ ಮೈ ಫಾದರ್ ಬಿಲೀವ್ಡ್ ಮೋರ್ ದೆನ್ ಬೀಯಿಂಗ್ ಅ ಸ್ಟಾರ್, ಹೀ ವಾಸ್ ಅ ಎಕ್ಸಲೆಂಟ್ ಟೆಕ್ನೀಷಿಯನ್. ಆಂಡ್ ಹಿ ವಾಸ್ ಆಲ್ವೇಸ್ ಅಹೆಡ್ ಆಫ್ ಟ್ವೆಂಟಿಫೈವ್ ಯಿಯರ್ಸ್. ನಮ್ಮಪ್ಪ ಯಾವಾಗ್ಲೂ ಹೇಳ್ತಿದ್ರು. “ಇಫ್ ಇಟ್ ಆಲ್ ಸಂಬಡಿ ಕುಡ್ ಡೂ ದಿಸ್ ಪ್ರಾಜೆಕ್ಟ್, ಇಟ್ಸ್ ಒನ್ಲೀ ಶಂಕರ್”. ಹೀ ವಾಸ್ ವೆರಿ ಕ್ಲಿಯರ್. ಶಂಕರ್ ಒಪ್ಕೊಂಡ್ರು. ದೆನ್ ದೇರ್ ವಾಸ್ ನೋ ಲುಕಿಂಗ್ ಬ್ಯಾಕ್.


ಪರಮ್: ಸೋ ಶಂಕರ್ ಮೊದ್ಲಿಗೇ ಒಪ್ಕೊಂಡ್ರಾ? ಅಥವಾ ಸೀರಿಯಲ್ ಅಂತ ರಿಜೆಕ್ಟ್ ಮಾಡಿದ್ರಾ? ಅಥವಾ ಆರ್.ಕೆ.ನಾರಾಯಣ್ ಹಿಂದಿ ಇಂಗ್ಲೀಷ್ ಮಾಡಕ್ಕೆ ಒಪ್ಕೊಂಡ್ರಾ, ಹೇಗಿತ್ತು?


ಬದರಿನಾಥ್: ಇಲ್ಲ ಆ ತರ ಏನೂ ಇರ್ಲಿಲ್ಲ, ಜಸ್ಟ್ ಕಾಮನ್ ಡಿಸ್ಕಷನ್ ಇತ್ತು, ಹೇಗೆ ಮಾಡ್ಬೇಕು? ಏನು? ಎಷ್ಟು ಎಪಿಸೋಡ್ ಮಾಡ್ಬೇಕು? ಹೇಗೆ ಮಾಡ್ಬೇಕು? ಯಾವ ಮಾಧ್ಯಮದಲ್ಲಿ ಹೇಗೆ ಬರ್ಬೇಕು? ಅಂತೆಲ್ಲ, ದೇ ಹ್ಯಾಡ್ ದೇರ್ ಓನ್ ಡಿಸ್ಕಷನ್ಸ್. ಸೋ ಅವಾಗ ನಾವು ಬೆಂಗಳೂರು ವುಡ್ ಲ್ಯಾಂಡ್ಸಲ್ಲಿ ರೂಮ್ ಹಾಕೊಂಡಿದ್ವಿ. ಅಲ್ಲಿ ಪ್ರೀ ಪ್ರೊಡಕ್ಷನ್ ಎಲ್ಲಾ ನಡೀತು. ಇಟ್ ವಾಸ್ ವೆರಿ ಕ್ಲಿಯರ್, ಶಂಕರ್ ನಾನು ಮಾಡ್ತೀನಿ ಅಂತ ಹೇಳಿದ್ಮೇಲೆ ಅಪ್ಪ ಹೇಳಿದ್ರು “ಇಟ್ ಈಸ್ ಯುವರ್ ಸೆಲೆಕ್ಷನ್ ಫಾರ್ ದ ಎಂಟಾಯರ್ ಟೀಮ್. ಇನ್ಕ್ಲೂಡಿಂಗ್ ಆರ್ಟಿಸ್ಟ್ ಆಂಡ್ ಟೆಕ್ನೀಷಿಯನ್ಸ್. ಐ ವಿಲ್ ನಾಟ್ ಇನ್ವಾಲ್ವ್ ಎಕ್ಸೆಪ್ಟ್ ಐ ಹ್ಯಾವ್ ಟು ರೆಕಮಂಡ್ ಎಸ್. ರಾಮಚಂದ್ರನ್ ಆಸ್ ಅ ಕ್ಯಾಮರಾ ಮನ್”. ಅಪ್ಪಂದು ಎಲ್ಲಾ ಸಿನಿಮಾಗಳಲ್ಲೂ ಎಸ್. ರಾಮಚಂದ್ರನೇ ಕ್ಯಾಮರಾ ಮ್ಯಾನ್. ಹಾಗೆ ಅವ್ರ ಹೆಸರು ಅಪ್ಪ ಹೇಳಿದ್ರು. ಆಗ ಶಂಕರ್ ಇಮೀಡಿಯಟ್ಲೀ ಹೇಳಿದ್ರು “ಬ್ರಿಲಿಯಂಟ್ ಕ್ಯಾಮರಾಮ್ಯಾನ್ ಸರ್” ಅಂತ. ಅದರ್ವೈಸ್ ಮೈ ಫಾದರ್ ನೆವರ್ ಇಂಟರಪ್ಟಡ್ ಇನ್ ಎನಿ ಸೆಲೆಕ್ಷನ್ಸ್.ಮುಂದುವರೆಯುವುದು…

27 views