ಮಾಲ್ಗುಡಿ ಸಿಕ್ಕಿದ್ದೇ ವಿಚಿತ್ರ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 91

( ಶಂಕರ್‌ನಾಗ್‌ ಕುರಿತಂತೆ ಮಾಲ್ಗುಡಿ ಡೇಸ್‌ ನಿರ್ಮಾಪಕರ ನೆನಪುಗಳು)‌ಪರಮ್: ವೈ ಆಗುಂಬೆ?


ಬದರಿನಾಥ್: ಸೀ ಇಫ್ ಯು ರೀಡ್ ನಾರಾಯಣ್ ಸ್ಟೋರೀಸ್, ಮೋಸ್ಟ್ ಆಫ್ ದೆಮ್ ವಾಸ್ ಪ್ರೀ ಇಂಡಿಪೆಂಡೆಂಟ್. ಲೈಟ್ಸ್ ಇಲ್ಲ, ಪ್ಲಾಸ್ಟಿಕ್ ಬೋರ್ಡ್ಸ್ ಇಲ್ಲ, ಟ್ರಾಫಿಕ್ ಇಲ್ಲ. ಟೆಂಪಲ್ ಇದೆ, ಪಂಚಾಯ್ತಿ ಕಟ್ಟೆ ಇದೆ. ಇದಕ್ಕಿಂತ ಪರ್ಫೆಕ್ಟ್ ಊರು ಯು ಕಾಂಟ್ ಡ್ರೀಮ್.


ಪರಮ್: ಹೌ ವಾಸ್ ದ ಹಂಟಿಂಗ್ ಪ್ರೋಸೆಸ್ ಆಫ್ ಲೊಕೇಷನ್ಸ್?


ಬದರಿನಾಥ್: ಐ ಥಿಂಕ್ ಇನೀಷಿಯಲ್ಲೀ, ಮೈ ಫಾದರ್ ಆಂಡ್ ಶಂಕರ್ ವೆಂಟ್ ಟು ಕೊಪ್ಪ. ಕೊಪ್ಪದಲ್ಲೇ ಇಡೀ ಬ್ಯಾಂಕರ್ ಮಾರ್ಗಯ್ಯ ಶೂಟ್ ಮಾಡಿರೋದು. ಅಲ್ಲಿ ಹೋಗಿ ನೋಡಿದ್ರೆ ಫುಲ್ಲೀ ಕಮರ್ಷಿಯಲೈಸ್ ಆಗ್ಬಿಟ್ಟಿದೆ. ಇದು ಆಗಲ್ಲ ಅಂತ ಸಂಜೆ ಸುಮ್ನೆ ಸನ್ಸೆಟ್ ಪಾಯಿಂಟ್ ನೋಡೋಣಾಂತ ಆಗುಂಬೆಗೆ ಹೋಗಿದ್ದಾರೆ, ಅಲ್ಲೇ ಉಳ್ಕೊಂಡಿದ್ದಾರೆ. ಬೆಳಗ್ಗೆದ್ದು ಓಡಾಡಿ ನೋಡಿದ್ರೆ ಇದೇ ಮಾಲ್ಗುಡಿ ಅಂತ ಡಿಸೈಡ್ ಮಾಡ್ಬಿಟ್ರು. ದಿಸ್ ಈಸ್ ವಾಟ್ ಮೈ ಫಾದರ್ ಯೂಸ್ ಟು ಟೆಲ್ ಮಿ “ಬೆಳಗ್ಗೆದ್ದು ನೋಡಿದ್ವಿ ಕಣೋ, ಮಂಜು ಇತ್ತು. ಸ್ವಲ್ಪ ಕ್ಲಿಯರ್ ಆದ್ಮೇಲೆ ನಡ್ಕೊಂಡು ಹೋದ್ವಿ, ನಾನು ಶಂಕರ್ ಮುಖ ನೋಡ್ಕೊಂಡು, ಏನು ಹುಡುಕ್ತಿದ್ದೀವಿ ಬಂದಾಯ್ತಲ್ಲಾ ಮಾಲ್ಗುಡಿಗೆ, ಇದಕ್ಕಿಂತ ಬೇಕಾಂತ”. ಬಂದು ನಮ್ಮಪ್ಪ ಮತ್ತೆ ಶಂಕರ್ ಇನ್ಫ್ರಾಸ್ಟ್ರೆಕ್ಚರ್ ಬಗ್ಗೆ ಏನೂ ಹೇಳ್ಳಿಲ್ಲ, ಅಲ್ಲೇ ಶೂಟ್ ಮಾಡ್ತೀವಿ ಅಂತ ಹೇಳಿದ್ರು ಅಷ್ಟೇ. ನೆಕ್ಸ್ಟ್ ನಿಮ್ದೇ ಅಂದ್ರು.ಮುಂದುವರೆಯುವುದು…

23 views