ಮಾಲ್ಗುಡಿ ಸ್ಪೇಷಲ್‌ ಅನ್ಸೋದು ಶಂಕರ್ ಗಿದ್ದ ಈ ಕ್ಲಿಯಾರಿಟಿ ಗಳಿಂದ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 34

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಇದೆಲ್ಲಕ್ಕಿಂತ ಹೆಚ್ಚಾಗಿ ಶಂಕರ್ ಅವ್ರ ಕಲ್ಪನೆ ಇದ್ಯಲ್ಲ, ಅಂದ್ರೆ “ಈ ಸೀರಿಯಲ್ ಸಿನಿಮಾ ತರ ಕಾಣಿಸ್ಬಾರ್ದು. ಇನ್ನೊಂದು ತುಂಬಾ ಡ್ರಮಾಟಿಕ್ ಆಗಿ ಇರ್ಬಾರ್ದು. ಇದು ಬಹಳ ಸರಳವಾಗಿ ಇರ್ಬೇಕು.” ಸೋ ಯಾವಾಗ ಪ್ರೀ ಇಂಡಿಪೆಂಡೆನ್ಸ್ ಅಂತ ಅನ್ಕೊಂಡ್ವೋ, ಪಿರಿಯೇಡ್ ಮೇಂಟೇನ್ ಮಾಡ್ಬೇಕಾಗಿ ಬಂತು. ಅಂದ್ರೆ ಲೈಟ್ ಕಂಬ ಇರ್ಬಾರ್ದು, ಟರೇಸ್ ಮನೆಗಳು ಇರ್ಬಾರ್ದು, ತುಂಬಾ ಮಾರ್ಡನ್ ಆಗಿ ಬ್ಯುಸ್ನೆಸ್ ಸೆಂಟರ್ ಇರ್ಬಾರ್ದು, ವೇಷ ಭೂಷಣ ಹಾಗಿರ್ಬೇಕು. ಪ್ಲಾಸ್ಟಿಕ್ ಬಟನ್ಸ್ ಇಲ್ದೇ ಇರೋದು, ಗಾಡಿಗಾಡಿ ಕಲರ್ ಇರುವ ಬಟ್ಟೆಗಳು ಇಲ್ಲ. ಇವೆಲ್ಲವನ್ನೂ ಜಾಗ್ರತೆ ವಹಿಸಿ ಮಾಡಿದ್ದು. ‌ಮುಂದುವರೆಯುವುದು…

8 views