ಮಾಲ್ಗುಡಿ ಸೀರಿಯಲ್‌ ನಲಿ ಎಲ್ಲ ಸೀಸನ್‌, ಎಲ್ಲ ಹಬ್ಬ, ಎಲ್ಲ ದೇವರ ಉತ್ಸವ, ಇರ್ತಿತ್ತು

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 35

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಆ ಮೇಲೆ ಪ್ರತಿ ಎಪಿಸೋಡಲ್ಲಿ ಒಂದು ವರ್ಷದಲ್ಲಿ ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಸೀಸನ್ಗಳಿವೆ. ಆ ಸೀಸನ್ ಗಳಿಗೆ ತಕ್ಕನಾಗಿ ಹಬ್ಬಗಳಿವೆ, ಅದೆಲ್ಲವೂ ಅಲ್ಲಿದೆ. ಆ ಮೇಲೆ ದೇವರ ಉತ್ಸವ ಇದೆ, ಸ್ಮಶಾನ ಯಾತ್ರೆ ಎಲ್ಲವೂ ಇದೆ. ಅಂದ್ರೆ ಮನೆಯೊಳಗೆ ಕೂರ್ಸಿ ಈ ಕ್ಲೋಸ್, ಈ ಮಿಡ್ ಆತರ ಇಲ್ವೇ ಇಲ್ಲ. ಯಾವ ಜಾಗದಲ್ಲಿ ನಡಿತಾ ಇದೆ? ಯಾವ ಊರಲ್ಲಿ ನಡಿತಾ ಇದೆ? ಅದ್ರ ಜಿಯಾಗ್ರಫಿ ಮೊದ್ಲು ಅರ್ಥ ಆಗ್ಬೇಕು ಜನಕ್ಕೆ. ಈಗ ಮನೆಯಿಂದ ಇವ್ರೆಲ್ಲೋ ಹೊರಟ್ರು ಅಂದ್ರೆ, ಇವ್ನೊಬ್ಬನೇ ಹೊರಡಲ್ಲ. ಪಾಸಿಂಗ್ ಶಾಟ್ ಇನ್ಯಾರೋ ಹೋಗ್ತಿರ್ತಾರೆ. ಪಾಸಿಂಗಲ್ಲಿ ಕಥೆನೂ ಇದೆ.


ಅಂದರೆ ಯಾರೋ ಒಬ್ಬ “ಸೀರೆ, ಸೀರೆ” ಅಂತ ಸೀರೆ ಮಾರ್ಕೊಂಡು ಬರ್ತಾನೆ. ಎಡಗಡೆಯವರ ಹತ್ರ ಅವ್ನು ಮಾತಾಡ್ತಾನೆ. ಈ ಆಕ್ಟಿವಿಟೀಸ್ ನಡಿವಾಗ ಇವ್ನಿಗೆ ವಿಷ್ ಮಾಡಿ, ಅವ್ನು ಹೋಗೋ ತನಕ, ಹಿಂದೆ ಏನೋ ಆಕ್ಟಿವಿಟೀಸ್ ನಡಿತಾ ಇರುತ್ತೆ. ಒಬ್ಬ ಕುದುರೆ ತಗೊಂಡು ಹೋಗ್ತಾನೆ, ಇನ್ಯಾರೋ ಕತ್ತೆ ತಗೊಂಡು ಹೋಗ್ತಾನೆ. ಸೋ ಈ ತರದು ಬಹಳ ಇಂಪ್ರೆಸ್ ಆಗಿರುವಂತಹ ಒಂದು ಪಾಯಿಂಟ್ ಮಾಲ್ಗುಡಿನಲ್ಲಿ. ಆಗಿನ ಕಾಲದ ಜನಜೀವನ. ಇದನ್ನೆಲ್ಲಾ ಮಾಡಕ್ಕೆ ನಮಗೆ ತುಂಬ ಜನ ಏನೂ ಇರ್ಲಿಲ್ಲ. ಒಂದು ಇಪ್ಪತ್ತು ಇಪ್ಪತ್ತೈದು ಜನ ಏನೋ ನಮ್ಮ ಜೊತೆಯಲ್ಲಿದ್ರು.ಮುಂದುವರೆಯುವುದು…

7 views