ಮಾವ ಕೊಟ್ಟ ವಾಚು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 118


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)


ಗೋವಿಂದರಾಜ್‌ ಪಾರ್ವತಮ್ಮ ಅವರ ಕಿರಿಯ ತಮ್ಮ, ಹಾಗೆ ರಾಜ್‌ಕುಮಾರ್ ಮಗಳು ಲಕ್ಷ್ಮೀ ಅವರ ಗಂಡ ಕೂಡ. ರಾಜಕುಮಾರ್‌ ಕೊಟ್ಟ ಆ ವಾಚನ್ನು ಜೋಪಾನವಾಗಿ ಇವತ್ತಿಗೂ ಗೋವಿಂದರಾಜ್‌ ಇಟ್ಟುಕೊಂಡಿದ್ದಾರೆ. ಅವರು ಅದನ್ನು ಕೈಗೆ ಕಟ್ಟುವುದಿಲ್ಲ. ಮಾವ ಕೊಟ್ಟಿರುವುದು ಎಂಬ ಖುಷಿ ಅವರಿಗೆ.ರಾಜ್‌ಕುಮಾರ್‌ ಅವರ ಕುಟುಂಬದ ಕೆಲಸವನ್ನು ಗೋವಿಂದರಾಜ್‌ ಮುಂದೆ ನಿಂತು ಮಾಡುತ್ತಾರೆ. ಪಾರ್ವತಮ್ಮ ಅವರಿಗೆ ಯಾವುದೇ ಕೆಲಸವನ್ನು ಗೋವಿಂದುಗೆ ವಹಿಸಿದರೆ ಅದು ಪೂರ್ಣಗೊಳ್ಳುತ್ತದೆ ಎಂಬ ಆತ್ಮವಿಶ್ವಾಸ ಇತ್ತು. ಪ್ರತಿಯೊಂದು ಕೆಲಸದಲ್ಲಿಯೂ ಗೋವಿಂದು ಮುಂದೆ ಇರುತ್ತಿದ್ದರು. ಲಕ್ಷ್ಮೀ ಬಗ್ಗೆ ಎಷ್ಟು ಹೊಗಳಿದರೂ, ಕಡಿಮೆಯೇ, ಅಷ್ಟು ಒಳ್ಳೆಯ ಮಗು ಅವಳು. ಶಿವಣ್ಣ, ಅಪ್ಪು ಕೂಡ ಅಪ್ಪನ ದಾರಿಯಲ್ಲಿಯೇ ಸಾಗುತ್ತಿದ್ದಾರೆ. ಅವರು ದಾನ, ಧರ್ಮ ಮಾಡುತ್ತಾರೆ. ಬಲಗೈಗೆ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವ ರೀತಿಯಲ್ಲಿಯೇ ಕೆಲಸ ಮಾಡುತ್ತಾರೆ. ಶಿವಣ್ಣ ಮತ್ತು ಅಪ್ಪು ಮನೆ ಬಾಗಿಲಿಗೆ ಹೋದವರು ಯಾರೂ ನಿರಾಶೆಯಾಗಿ ಬಂದಿಲ್ಲ. ನಡೆ, ನುಡಿಗಳಲ್ಲಿಯೂ ಅಪ್ಪನ ಹಾದಿಯಲ್ಲಿಯೇ ರಾಘಣ್ಣ, ಶಿವಣ್ಣ, ಅಪ್ಪು, ನಡೆಯುತ್ತಿದ್ದಾರೆ. ಇದೊಂದು ಅಪರೂಪದ ಕುಟುಂಬ ಎನ್ನಲು ನನಗೆ ನಿಜವಾಗಿಯೂ ಖುಷಿ ಆಗುತ್ತದೆ.


ಮುಂದುವರಿಯುವುದು...

ಸಂದರ್ಶನ: ಕೆ.ಎಸ್‌ಪರಮೇಶ್ವರ

16 views