ಮಾವ, ತಮ್ಮ, ಪಕ್ಕದ ಮನೆಯವನು ಇವು ನನ್ನ ಪಾತ್ರಗಳಾದವು

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ – 18ಯಾವಾಗ ನಮ್ಮ ಕಾಂಬಿನೇಶನ್ ಸ್ಟಾರ್ಟ್ ಆಯ್ತೋ ನಂತರ ಶುರುವಾಯ್ತು ಸಾರ್. ಬೊಂಬಾಟ್ ಹುಡುಗ, ಸೂಪರ್ ನನ್ಮಗ, ಆಟ ಬೊಂಬಾಟ, ಗೆಲುವಿನ ಸರ್ದಾರ ಎಲ್ಲಾ ಶುರುವಾಯ್ತು. ಇದರ ಜೊತೆಗೆ ಏನಾಯ್ತು ಅಂದ್ರೆ ಸ್ವಲ್ಪ ನನ್ನ ಕ್ಯಾರೆಕ್ಟರ್ ಇಂಪ್ರೂವೈಸ್ ಆಯ್ತು. ವಿಷ್ಣುವರ್ದನ್, ದೇವರಾಜು, ಅನಂತ್‍ನಾಗ್, ಶಂಕರ್ ನಾಗ್, ರಾಜ್ ಕುಮಾರ್ ಎಲ್ಲರ ಜೊತೆ ಪಾತ್ರಗಳು ಜಾಸ್ತಿ ಬೆಳಿತಾ ಹೋಯ್ತು. ಅವಾಗ ಏನು ಒಂದೊಂದು ಸೀನ್ ಮಾಡ್ತಾ ಇದ್ದೆ ನಂತರ ಸ್ವಲ್ಪ ಮುಂದುವರೀತು.


ಪರಮ್: ಕಂಟಿನ್ಯುಟಿ ಆಯ್ತು?


ಬ್ಯಾಂಕ್ ಜನಾರ್ಧನ್: ಕಂಟಿನ್ಯುಟಿ ಆಗೋಯ್ತು. ಮಾವ, ತಮ್ಮ, ಪಕ್ಕದ ಮನೆಯವನು ಈ ರೀತಿ ಕ್ಯಾರೆಕ್ಟರ್ ಪ್ರಾರಂಭ ಆಯ್ತು. ಈ ಮಧ್ಯದಲ್ಲಿ ಉಪೇಂದ್ರ ಡೈರಕ್ಟರ್ ಅನಿಸ್ಕೊಂಡ. ಅದಾದ್ಮೇಲೆ ಶ್! ಅಂತ ಒಂದು ಪಿಚ್ಚರ್ ಮಾಡ್ದ. ಅದರಲ್ಲಿ ನಂಗೆ ಸಬ್ ಇನ್ಸ್ ಪೆಕ್ಟರ್ ಕ್ಯಾರೆಕ್ಟರ್ ಮಾಡಿಸ್ದ. ಅದು ಅವನ ಎರಡನೇ ಪಿಚ್ಚರ್. ಆ ಕ್ಯಾರೆಕ್ಟರ್‍ನ ಎಷ್ಟು ಇಂಪ್ರವೈಸ್ ಮಾಡ್ದ ಅಂದ್ರೆ ಆ ಸಬ್ ಇನ್ಸ ಪೆಕ್ಟರ್ ಮಾಡಿದ್ರೆ ಬೇರೆ ಯಾವ ಸಬ್ ಇನ್ಸ್ ಪೆಕ್ಟರ್ ಮಾಡುವ ಹಾಗೇ ಇಲ್ಲ ಆತರ ಮಾಡ್ದ. ಸಬ್ ಇನ್ಸ್ ಪೆಕ್ಟರ್ ಯಾವ ತರ ಬೈತಾರೆ, ಯಾವ ತರ ಹೊಡಿತಾರೆ ಅನ್ನೋದನ್ನ ಅದೊಂದೇ ಪಿಚ್ಚರಲ್ಲಿ ತೋರಿಸ್ಬಿಟ್ಟ. ನೀವು ನೋಡಿರ್ಬೋದು ನಂದು ಬರೀ ಬೈಯ್ಯೋ ಕ್ಯಾರೆಕ್ಟರ್. ಬರೀ ಬೈಕೊಂಡು ಓಡಾಡೋದು. ಈ ಮಧ್ಯದಲ್ಲಿ ನನಗೆ ಸ್ವಲ್ಪ ಇಂಪ್ರೂವ್ಮೆಂಟ್ ಆದ್ಮೇಲೆ ಸ್ವಲ್ಪ ಕಾಲ್‍ಶೀಟ್ ಬರೋದಕ್ಕೆ ಶುರುವಾಯ್ತು.ಮುಂದುವರೆಯುವುದು…

66 views