“ಮಾಸ್ಟರ್ ಮಂಜುನಾಥ್ ಕಂಡ ಶಂಕರ್ ನಾಗ್”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 11

(ಸ್ವಾಮಿ ಆಂಡ್ ಫ್ರಂಡ್ಸ್ ಸ್ವಾಮಿ, ಅಥವಾ ಮಾಸ್ಟರ್ ಮಂಜುನಾಥ್ ಅವರ ನೆನಪುಗಳು)
ಪರಮ್: ಒಂದು ಜೀಪ್ ಆಕ್ಸಿಡೆಂಟ್ ಮರ್ತಿದ್ದೀರಿ


ಮಂಜುನಾಥ್; ಸರ್ ಅದೇ ಹೇಳಿದ್ನಲ್ಲ ಒಂದಲ್ಲ, ಎರಡಲ್ಲ ಜೀಪ್ ಆಕ್ಸಿಡೆಂಟ್ ಇರ್ಬೋದು, ಮೂರು ಶಾಟ್ ಗೆ 50 ಕಿಲೋಮೀಟರ್ ಹೋಗಿ ಬರ್ತಿದ್ವಿ. 50 ಕಿಲೋ‌ ಮೀಟರ್ಇವತ್ತಿನ ಕಾಲಕ್ಕೆ ದೊಡ್ಡದಲ್ಲ. ಅವತ್ತು ಒಂದುವರೆ ಹವರ್, ಒಂದು ಮುಕ್ಕಾಲು ಹವರ್. ಅಲ್ಲಿಂದ ಅರಸಾಳು ಅಂತ ಒಂದು ರೈಲ್ವೇ ಸ್ಟೇಷನ್ ಗೆ ಹೋಗ್ಬೇಕು. ಅಲ್ಲಿ ಬೆಳಗ್ಗೆ ಒಂದು ಟ್ರೇನ್ ಬರೊದು. ಅದೇ ಟ್ರೇನ್ ಸಾಯಂಕಾಲ ರಿವರ್ಸಲ್ಲಿ ಹೊರ್ಟೋಗೊದು. ಇವತ್ತಿನ ತರ ಡಿಜಿಟಲ್ ಅಲ್ಲ. ಅದೇ ಶಾಟ್ ನ ಕಾಪಿ ಮಾಡುವ ಹಾಗೆಇಲ್ಲ. ಬೇರೆ ಬೇರೆ ಶಾಟ್ ತಗೊಬೇಕು. ಬೆಳಗ್ಗೆ ಎರಡು ಶಾಟ್, ಸಾಯಂಕಾಲ ಎರಡು ಶಾಟ್. ಎಷ್ಟು ಜಿಗುಪ್ಸೆ ಆಗಿತ್ತು ಅಂದ್ರೆ, ಈ ಕಡೆಯಿಂದ ಆ ಕಡೆಗೆ ಓಡ್ಹೋಗ್ಬೇಕು, ಆ ಕಡೆಯಿಂದ ಈ ಕಡೆಗೆ ಓಡ್ಹೋಗ್ಬೇಕು. ಒಂದೇ ಟೇಕ್ ಮತ್ತೆ ಮಾಡುವಾಗೆ ಇಲ್ಲ. ಈ ತರ ಆ ಛಾಲೆಂಜಸ್ ಏನಿದೆ, ಅದನ್ನೆಲ್ಲಾ ನನಗಂತೂ ಮರಿಯೊದಕ್ಕೇ ಆಗಲ್ಲ. ನಾನು ಇನ್ನಷ್ಟು ಏನಾದ್ರೂ ಮರ್ತೋಗಿರ್ಬೋದೇನೋ, ಬಟ್ ನಮ್ಮ ನಮ್ಮದೇ ಆದ ಕತೆಗಳಿದ್ರೂನೂ ಚಾಲೆಂಜಸ್ ಗಳು ಹಾಗೂ ಸನ್ನಿವೇಷಗಳು ಇದ್ರುನೂ, ನಾವೆಲ್ಲಾ ಒಂದೇ ಕುಟುಂಬದವರ ಹಾಗೆ ಜೊತೆಗಿದ್ದು ಆ ಛಾಲೆಂಜಸ್ ಗಳನ್ನೆಲ್ಲಾ ಫೇಸ್ ಮಾಡ್ಕೊಂಡು, ಬೇಜಾರು ಮಾಡ್ಕೊಳ್ಳದೆ, ಎಂಜಾಯ್ ಮಾಡಿ ಮಾಡಿದ್ರಿಂದನೇ ಮೂವತ್ತಮೂರು ವರ್ಷಗಳಾದ್ರುನೂ ಜನ ನೋಡಿ ಖುಷಿ ಪಡ್ತಾ ಇರೋದು. ಲೈಟ್ ಹುಡುಗರಿಗೆ ಸ್ವಲ್ಪ ಟೈಮ್ ಇತ್ತಂದ್ರೆ, ಡೇ ಟೈಮ್ನಲ್ಲಿ ಯಾವ ಲೈಟ್ ಹುಡುಗನೂ ಸುಮ್ನೆ ಕೂರುವ ಹಾಗಿರ್ಲಿಲ್ಲ. ಅವ್ರಿಗೆ ಯಾವುದಾದ್ರೂ ಕಾಸ್ಟ್ಯೂಮ್ ಹಾಕ್ಸಿ ಬ್ಯಾಕ್ ಗ್ರೌಂಡ್ನಲ್ಲಿ ಓಡಾಡ್ತಿದ್ರು.


ಪರಮ್: ಅವೆಲ್ಲಾ ಮಾಡ್ತಿದ್ರ? ಇವತ್ತು ನಮ್ಮ ಯೂನಿಟ್ನವ್ರು “ಹೋಗಿ ಸಾರ್”ಅನ್ತಾರೆ.‌


ಆಗುಂಬೆ ವರ್ಸಸ್‌ ಮಾಲ್ಗುಡಿ ಕ್ರಿಕೆಟ್‌ ಟೀಮ್

ಮಂಜುನಾಥ್: ಇರ್ಬಹುದು, ನಾನು ಅದೇ ಹೇಳಿದ್ನಲ್ಲಾ ಸರ್, ಒಂದು ಕುಟುಂಬ ಅಂದ್ರೆ ನಿಜವಾಗ್ಲೂ ಹೇಳ್ತಿರೋದು. ಸುಮ್ನೆ ಡಿಪ್ಲೊಮ್ಯಾಟಿಕ್ ಆಗಿ ಹೇಳೋದಲ್ಲ. ಜನ್ಯೂನ್ಲೀ ಒಂದು ಕುಟುಂಬ. ಇದು ನಮ್ಮ ಕೊಲೀಗ್ ಗಳು ಮಾತಾಡಿದ್ದಾರಾ ಗೊತ್ತಿಲ್ಲ. ಟೈಮಿದ್ದಾಗ ನಾವೆಲ್ಲಾ ಕ್ರಿಕೇಟ್ ಆಡ್ತಿದ್ವಿ. ಹೀಗೆ ಆಡಿ ಆಡಿ ಆಗುಂಬೆಯಲ್ಲಿ ಒಂದು ಟೀಮ್ ಇದೆ ಅಂತ ಗೊತ್ತಾಯ್ತು ನಮಿಗೆ. ಸೋ ಕೊನೆ ಚಿತ್ರೀಕರಣ ಮುಗ್ಸಿದ್ಮೇಲೆ ಆಗುಂಬೆ ವರ್ಸಸ್ ಮಾಲ್ಗುಡಿ ಅಂತ ಒಂದು ಕ್ರಿಕೇಟ್ ಟೂರ್ನಿಮೆಂಟ್ ಆಡಿದ್ವಿ. ಅದ್ರಲ್ಲಿ ನಾವು ನಾಲ್ಕು ಐದು ಜನ ಕ್ರಿಕೆಟ್ ಆಡುವವ್ರನ್ನ ಬಿಟ್ರೆ ಮಿಕ್ಕವ್ರೆಲ್ಲಾ ನಮ್ಮ ಲೈಟ್ ಬಾಯ್ಗಳು, ಸ್ಪಾಟ್ ಬಾಯ್ಗಳು, ರಿಫ್ಲೆಕ್ಟ್ ಹುಡುಗ್ರೇ. ಅವ್ರಿಗೆ ಎಲ್ಲೋ ಲಾಂಗ್ ಆನ್, ಲಾಂಗ್ ಆಫ್, ಮಿಡ್ ಆಫ್ ಅಲ್ಲಿ ನಿಲ್ಸಿಬಿಟ್ರೆ ಹೊಡೆದ್ರೆ ಕಾಣಿಸ್ತಿರ್ಲಿಲ್ಲ. ಎಡಗಡೆಂತ ಕೈ ತೋರ್ಸಿದ್ರೂ ಗೊತ್ತಾಗ್ತಿರ್ಲಿಲ್ಲ. ನಮ್ಮ ಭಾಷೆ ಇದೆ, ಸಿನಿಮಾ ಭಾಷೆ. “ಪ್ಯಾನ್ ಲೆಫ್ಟ್”ಅಂದ್ರೆ, ಅರ್ಥ ಮಾಡ್ಕೊಂಡು ಓಡ್ಹೋಗಿ ಹಿಡ್ಕೊಂಡು ಬಂದ್ಬಿಡೋರು. ಎಷ್ಟು ಎಂಜಾಯ್ ಮಾಡಿದ್ದೀವಿ ಅಂದ್ರೆ “ಟಿಲ್ಟ್ ಅಪ್ ಪ್ಯಾನ್ ಲೆಫ್ಟ್” ಅಂತೆಲ್ಲಾ ಗೈಡ್ ಮಾಡೋದು ಅವ್ರಿಗೆ. ಸೋ ಆ ತರನೂ ಒಂದು ಮ್ಯಾಚ್ ಆಡಿದ್ದೀವಿ.


ಅದೇ ಹೇಳೋದು ಶಂಕರ್ ನಾಗ್ ಅವ್ರ ಜೊತೆ ಬೆಂಗಳೂರಲ್ಲಾಗ್ಲಿ, ಆಗುಂಬೆಯಲ್ಲಾಗ್ಲಿ ಬೆಳಗ್ಗೆ ಮನೆ ಬಿಟ್ರೆ ಸಾಯಂಕಾಲದೊಳಗೆ ನಾವು ಏನೇನು ಮಾಡಿ ಬಂದಿರ್ತೀವಿ ಅಂತ ಯಾರೂ ಊಹಿಸಕ್ಕೆ ಸಾಧ್ಯನೇ ಇಲ್ಲ. ನಾವು ಅನ್ಕೊಂಡಿರ್ತೀವಿ, ಎರಡು ಸೀನ್ ಮುಗ್ಸಿ ಬರ್ತೀವಿ ಅಂತ. ಏನಾಗುತ್ತೆ ಅಂತ ಗೋತ್ತಾಗಲ್ಲ, ಒಂದು ದಿನ ಎಂಟು ಸೀನ್ ಮುಗ್ಸಿರ್ತೀವಿ. ಇನ್ನೊಂದು ದಿನ ಅರ್ಧ ಸೀನೂ ಮುಗ್ಸಿರಲ್ಲ. ಅವ್ರಿಗೆ ಬೇಕೂಂತಂದ್ರೆ, ಹೆಂಗಿರ್ಬೇಕು ಹಂಗೆ ಬರ್ಬೇಕು. ನೀವು ಅವ್ರ ಚಿತ್ರೀಕರಣ ನೋಡಿದ್ರೆ ‘ಮಿಂಚಿನ ಓಟ’‘ಒಂದು ಮುತ್ತಿನ ಕತೆ’‘ಆಕ್ಸಿಡೆಂಟ್’ ಸಿನಿಮಾದಲ್ಲಿ ದ ಗ್ರೇಟ್ ಫಿಲ್ಮ್ ಡೈರೆಕ್ಟರ್ ನಾಗಾಭರಣ ಅವ್ರ ಕಾರ್ ಮೇಲೆ ಹೀಗೆ ನೋಡಿ ಬಿದ್ದೋಗೊದು. ಆ ಸೀನ್ ಅಂತೂ ನನ್ನ ಮನಸ್ಸಲ್ಲಿ ಹಾಗೇ ಇದೆ. ಮಿಂಚಿನ ಓಟ ಆಗ್ಲಿ.


ಡಾಕ್ಟರ್ ರಾಜ್ ಕುಮಾರ್ ಅವ್ರ ಒಂದು ಮುತ್ತಿನ ಕತೆಯಲ್ಲಿ, ಅಂಡರ್ವಾಟರ್ ಡೈವ್ ಮಾಡ್ಸಿ ಅಂಡರ್ ವಾಟರ್ ಶೂಟ್ ಮಾಡಿದ್ವಿ ಆ ಕಾಲದಲ್ಲಿ. ವಿದೌಟ್ ಅಂಡರ್ ವಾಟರ್ ಕ್ಯಾಮರಾ. ಇದು ಶಂಕರ್ ನಾಗ್ ಅವ್ರದೇ ಇನೋವೇಶನ್. ನೀಟಾಗಿ ಒಂದು ಸ್ಟೀಲ್ ಡ್ರಮ್ ನ ವೆಲ್ಟ್ ಮಾಡ್ಸಿ ಅದ್ರಲ್ಲಿ ಕೆಳಗಡೆ ಗ್ಲಾಸ್ ಓಪನಿಂಗ್ ಕೊಟ್ಟು, ಕ್ಯಾಮರಾ ಫಿಕ್ಸ್ ಆಗುವ ತರ, ಒಳಗೆ ಆಕ್ಸಿಜನ್ ಕಳ್ಸೊದಕ್ಕೆ ಆಯಿಲ್ ಡ್ರಮ್ಮಲ್ಲಿ ಪೈಪ್ಸ್ ಎಲ್ಲಾ ಒಳಗೆ ಹಾಕಿ ಪ್ರಿಪೇರ್ ಮಾಡಿದ್ವಿ. ಅವ್ರ ಮನ್ಸಲ್ಲಿ “ಇದು ಆಗಲ್ಲ” ಅನ್ನೋ ಪದನೇ ಬರ್ತಿರ್ಲಿಲ್ಲ. “ಅದು ಬೇಕೋ ಬೇಡ್ವೋ” ಅಷ್ಟೆ.


ನೀವು ಅಬ್ಸರ್ವ್ ಮಾಡಿದ್ದೀರೋ ಇಲ್ವೋ ಮುಂಚೆ ಎಲ್ಲಾ ಹೈಕೋರ್ಟ್, ವಿಧಾನ ಸೌದಾ ಮುಂದೆ ಎಲ್ಲಾ ಈಸಿಯಾಗಿ ಶೂಟ್ ಮಾಡಕ್ಕೆ ಬಿಡ್ತಾ ಇದ್ರು. ಬಟ್ ಅರ್ಲಿ 80 ಸಲ್ಲೇನೆ ರಿಸ್ಟ್ರಿಕ್ಷನ್ ಎಲ್ಲಾ ಶರುವಾಯ್ತು. ಆದ್ರೆ ಶಂಕರ್ ನಾಗ್ ಗೆ ಹೇಗೋ ಮಾಡಿ ಕನ್ವಿನ್ಸ್ ಮಾಡೋ ಕೆಪಾಸಿಟಿ ಇದೆ. ಒಂದು ಸಾಂಗ್ ಇದೆ, ಯಾವುದೂಂತ ನನಗೆ ನೆನಪಿಗೆ ಬರ್ತಿಲ್ಲ. ಅದು ಕಂಪ್ಲೀಟಾಗಿ ವಿಧಾನ ಸೌಧ ಮತ್ತೆ ಹೈಕೋರ್ಟ್ ಆವರಣದಲ್ಲೇ, ಫೋರ್ ಗ್ರೌಂಡಲ್ಲಿ ಕ್ಯಾಂಪಸ್ ಒಳಗಡೆ ಶೂಟ್ ಮಾಡಿರೋದು. ಅವ್ರು ಎಕ್ಸಪ್ಲೇನ್ ಮಾಡ್ತಿದ್ರು, “ಅದು ಏನಕ್ಕೆ ಬೇಕು ಅದ್ನ ನೋಡಿದ್ರೆ ನಮ್ಮ ಪ್ರೈಡ್ ಜಾಸ್ತಿ ಆಗುತ್ತೆ” ಅಂತೆಲ್ಲ ಎಕ್ಸಪ್ಲೇನ್ ಮಾಡೋರು. ಅವ್ರಿಗೆ ಇದು ಆಗಲ್ಲಾಂತಿಲ್ಲ. ಯಾಕಾಗಲ್ಲ, ಅಂಡರ್ವಾಟರ್ ಅಂದ್ರೆ ಮಾಡೋರು, ಮರದ ಮೇಲೆ ಕ್ಯಾಮರಾಮ್ಯಾನ್ನ ಹತ್ತಿಸ್ಬಿಡೋರು.


ಯಾವದೋ ಮಧ್ಯ ಕಾಡಲ್ಲಿ ಸ್ವಾಮಿ ಮೂರು ಫ್ಲೋರ್ ಹತ್ಬಿಟ್ಟು ಅಜ್ಜಿ ಹತ್ರ ಹೋಗಿ ಮಾತಾಡ್ಬೇಕು, ಅವ್ರಿಗೆ ಕ್ರೇನ್ ಬೇಕು, ಕ್ರೇನ್ ಎಲ್ಲಿಂದ ತರೋಣ? ಇದು ನಾವು ಹೇಳ್ತಿರೋದು ಆಗುಂಬೆಯಲ್ಲಿ ಯಾವುದೋ ಕಾಡಲ್ಲಿರುವ ಮನೆ, ಅದ್ನ ಸ್ವಾಮಿ ಮನೆ ಅಂತ ಶೂಟ್ ಮಾಡಿರೋದು. ಕೊನೆಗೆ ಹೇಳಿ ಎರಡು ಅಡಿಕೆ ಮರಕ್ಕೆ ರಾಟೆ ಕಟ್ಟಿ, ಯಾವುದೋ ಮನೆಗೆ ಹೋಗಿ ವುಡನ್ ತೊಟ್ಲು ತೆಗೊಂಡ್ಬಂದು ಆ ತೊಟ್ಲಲ್ಲಿ ಕ್ಯಾಮರಾ ಮ್ಯಾನ್ ನ ಕೂರಿಸಿ, ಇಬ್ರು ಕರೆಕ್ಟ್ ಟೈಮಿಗೆ ಶೇಕ್ ಮಾಡದೆ, ಹಾಗೇ ತಗೊಂಡು ನಡ್ಕೊಂಡು ಹೋಗ್ಬೇಕು. ನಡ್ಕೊಂಡು ಹೋಗಕ್ಕೂ ಜಾಗ ಇಲ್ಲ ಅಲ್ಲಿ. ಅದಕ್ಕೆ ಏನೋ ಒಂದು ಪುಲ್ಲಿ ಸಿಸ್ಟಮ್ ಮಾಡಿ ಹದಿನೆಂಟು ಜನ ಎಳ್ಕೊಂಡು ಹೋದ್ರು. ಅದು ಕ್ರೇನ್. ಅದು ಒಂದೇ ಶಾಟ್. ನನಿಗೊಂದು ಡೂಪ್ ಬೇರೆ. ಒಳಗೆ ಹೋಗೊದು ನಾನು, ಇನ್ನೊಬ್ಬ ಹುಡುಗನ ಕಿಟಕಿ ಹತ್ರ ಹೋಗುವ ಹಾಗೆ ಮಾಡಿ, ಮೇಲೆ ಹೋಗಿ ನಾನು ಅಲ್ಲಿ ಎಂಟ್ರಿ ಆಗಿ ಅಲ್ಲಿ ಡೈಲಾಗ್ ಹೇಳಿ ಆ ಶಾಟ್ ಮುಗಿಬೇಕು. ಇದಿಷ್ಟು ಕಷ್ಟ ಸಾಲ್ದುಂತ, ಅಲ್ಲಿ ಒಂದು ಡೈಲಾಗ್ ಬೇರೆ ಇಟ್ಟಿರೋದು. ಅವ್ರದ್ದು ಕಾಮನ್ ಡೈಲಾಗ್ ಅದು. “ಇದಾಗಲ್ಲ ಅನ್ನೋದಕ್ಕೆ ನಾನು ನಿನ್ಹತ್ರ ಯಾಕೆ ಮಾತಾಡ್ತಿದ್ದೆ”. ಹಾಗಂದಾಗ ಯಾರಿಗೇ ಆಗ್ಲಿ ಒಂಥರಾ ಆಗ್ಬಿಡುತ್ತಲ್ವಾ, ಏನೋ ಒಂದು ಯೋಚ್ನೆ ಮಾಡಿ ಏನೋ ಒಂದು ಮಾಡ್ಬಿಡ್ತಾರೆ.
ಮುಂದುವರೆಯುವುದು…

57 views